ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ನ್ಯಾಯಾಧೀಶರ ನಿವಾಸದ ಎದುರೇ ಶ್ವಾನವನ್ನು ಗುಂಡಿಕ್ಕಿ ಕೊಂದ ಭದ್ರತಾ ಸಿಬ್ಬಂದಿ; ಆಘಾತಕಾರಿ ಕೃತ್ಯದ ವಿಡಿಯೊ ವೈರಲ್

ನ್ಯಾಯಾಧೀಶರ ನಿವಾಸದ ಎದುರೇ ನಡೆದ ಒಂದು ಆಘಾತಕಾರಿ ಘಟನೆಯ ವಿಡಿಯೊ ವೈರಲ್ ಆಗಿದ್ದು, ಸೋಶಿಯಲ್‌ ಭಾರಿ ಚರ್ಚೆಗೆ ಕಾರಣವಾಗಿದೆ. ನ್ಯಾಯಾಧೀಶರ ಮನೆಯ ಬಳಿಯ ನೆಲಕ್ಕೆ ಹೊಸದಾಗಿ ಕಾಂಕ್ರೀಟ್‌ ಹಾಕಲಾಗಿದ್ದು, ಅದರ ಮೇಲೆ ಹೆಜ್ಜೆ ಹಾಕಿದ ಶ್ವಾನಕ್ಕೆ ಭದ್ರತಾ ಸಿಬ್ಬಂದಿ ಗುಂಡು ಹಾರಿಸಿದ್ದಾನೆ. ಇದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.

ಸಾಂದರ್ಭಿಕ ಚಿತ್ರ

ಲಖನೌ, ಡಿ. 20: ನ್ಯಾಯಾಧೀಶರ ನಿವಾಸದ ಎದುರೇ ಬೀದಿ ನಾಯಿಯನ್ನು (Stray dog) ಭದ್ರತಾ ಸಿಬ್ಬಂದಿ ಗುಂಡಿಕ್ಕಿ ಕೊಂದ ಆತಂಕಕಾರಿ ಘಟನೆ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಉತ್ತರ ಪ್ರದೇಶದ (Uttar Pradesh) ಪ್ರಯಾಗ್‌ರಾಜ್‌ನ ಬೆನಿಗಂಜ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಹೊಸದಾಗಿ ಕಾಂಕ್ರೀಟ್‌ ಹಾಕಿದ ನೆಲದ ಮೇಲೆ ನಾಯಿ ಕಾಲಿಟ್ಟಿದ್ದರಿಂದ ಹಾನಿಯಾಗಿದೆ ಎಂದು ಆರೋಪಿಸಿ ಗುಂಡು ಹಾರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಈ ಘಟನೆಯ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಪ್ರಾಣಿ ಹಕ್ಕುಗಳ ಕಾರ್ಯಕರ್ತರ ತೀವ್ರ ಟೀಕೆಗೆ ಗುರಿಯಾಗಿದೆ. ಈ ದೃಶ್ಯಗಳಲ್ಲಿ, ಗೃಹರಕ್ಷಕ ದಳದ ಸಮವಸ್ತ್ರ ಧರಿಸಿರುವ ಭದ್ರತಾ ಸಿಬ್ಬಂದಿಯೊಬ್ಬ ಬೀದಿ ನಾಯಿಯನ್ನು ಬೆನ್ನಟ್ಟುತ್ತ ಅದರ ಮೇಲೆ ಬಂದೂಕನ್ನು ಗುರಿಯಿಟ್ಟು ಹೊಡೆಯುತ್ತಿರುವುದು ಕಂಡುಬಂದಿದೆ.

"ಬೀದಿ ನಾಯಿ ತಂದು ಹಾಸಿಗೆ ಮೇಲಿಡುತ್ತಾಳೆ"; ಪತ್ನಿಯ ಕಾಟಕ್ಕೆ ಬೇಸತ್ತು ವಿಚ್ಛೇದನ ಕೋರಿದ ಪತಿ!

ವಿಡಿಯೊ ರೆಕಾರ್ಡ್ ಮಾಡುತ್ತಿರುವ ವ್ಯಕ್ತಿಯೊಬ್ಬ, ಕೃತ್ಯಕ್ಕೆ ಪ್ರಚೋದನೆ ನೀಡುವುದನ್ನು ಕೇಳಬಹುದು. ಕೆಲವು ಕ್ಷಣಗಳ ನಂತರ, ಗುಂಡು ಹಾರಿಸಿದ ಶಬ್ಧ ಕೇಳಿಸಿತು. ನಂತರ ಗುಂಡು ನಾಯಿಗೆ ತಗುಲಿ ಅದು ಸಾವನ್ನಪ್ಪಿದೆ ಎಂದು ಕಾವಲುಗಾರ ದೃಢಪಡಿಸಿದ್ದಾನೆ.

ವಿಡಿಯೊ ವೀಕ್ಷಿಸಿ:



ಪ್ರಾಣಿ ರಕ್ಷಕಿ ವಿದಿತ್ ಶರ್ಮಾ ಈ ವಿಡಿಯೊವನ್ನು ಎಕ್ಸ್‌ನಲ್ಲಿ ಹಂಚಿಕೊಂಡಿದ್ದು, ಈ ಕೃತ್ಯವನ್ನು ಹೃದಯ ವಿದ್ರಾವಕ ಘಟನೆ ಎಂದು ಖಂಡಿಸಿದ್ದಾರೆ. ಇದು ಪ್ರಾಣಿಯ ಮೇಲಿನ ಹಿಂಸಾಚಾರ ಎಂದು ಹೇಳಿದ್ದಾರೆ. ನಾಯಿಯನ್ನು ಕೊಲ್ಲುವುದು ಶಿಕ್ಷಾರ್ಹ ಅಪರಾಧ. ಇದಕ್ಕೆ ಕಾರಣರಾದವರನ್ನು ತಪ್ಪಿತಸ್ಥರನ್ನಾಗಿ ಮಾಡಬೇಕು ಎಂದು ಹೇಳುವ ಮೂಲಕ ಕಠಿಣ ಕ್ರಮ ಕೈಗೊಳ್ಳಬೇಕೆಂದು ಅವರು ಆಗ್ರಹಿಸಿದರು.

ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ಮತ್ತೊಂದು ವಿಡಿಯೊದಲ್ಲಿ, ಅಲಹಾಬಾದ್ ಹೈಕೋರ್ಟ್ ನ್ಯಾಯಾಧೀಶ ಕೈಲಾಶ್ ನಾಥ್ ಸಿನ್ಹಾ ಅವರ ನಿವಾಸದಲ್ಲಿ ನಿಯೋಜಿಸಲಾಗಿದ್ದ ಗೃಹರಕ್ಷಕ ದಳದ ರಾಜೇಂದ್ರ ಪಾಂಡೆ ಎಂಬ ಗಾರ್ಡ್ ಈ ಕೃತ್ಯ ಎಸಗಿದ್ದಾನೆ. ಹೊಸದಾಗಿ ಹಾಕಿರುವ ಕಾಂಕ್ರೀಟ್‌ ನೆಲದಲ್ಲಿ ನಾಯಿ ಪ್ರವೇಶಿಸಿ ಹಾಳು ಮಾಡಿದೆ ಎಂಬ ಆರೋಪದ ಮೇಲೆ ಗುಂಡು ಹಾರಿಸಿ ಕೊಲ್ಲಲಾಗಿದೆ ಎಂದು ಪ್ರಾಣಿ ಕಾರ್ಯಕರ್ತೆಯೊಬ್ಬರು ಆರೋಪಿಸಿದ್ದಾರೆ. ಎಫ್‌ಐಆರ್ ದಾಖಲಿಸಲು ಪ್ರಯತ್ನಿಸಿದಾಗ, ಸ್ಥಳೀಯ ಎಸ್‌ಎಚ್‌ಒ ತನಗೆ ಬೆದರಿಕೆ ಹಾಕಿದ್ದಾರೆ ಎಂದು ಅವರು ಹೇಳಿದ್ದಾರೆ.

ವಿಡಿಯೊ ವೀಕ್ಷಿಸಿ:



ನಾಪತ್ತೆಯಾಗಿದ್ದ ನಾಯಿ 5 ವರ್ಷದ ಬಳಿಕ ಪತ್ತೆ

ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ 2021ರಲ್ಲಿ ಕಳೆದುಹೋಗಿದ್ದ ನಾಯಿ 2025ರಲ್ಲಿ ಇದ್ದಕ್ಕಿದ್ದಂತೆ ಪತ್ತೆಯಾದ ಘಟನೆ ಡೆಟ್ರಾಯಿಟ್‌ನಲ್ಲಿ ನಡೆದಿತ್ತು. ಈ ಸುದ್ದಿ ಭಾರಿ ವೈರಲ್ ಆಗಿತ್ತು. ಚೋಕೊ ಎಂಬ ಹೆಸರಿನ ನಾಯಿಯು ಬರೋಬ್ಬರಿ 5 ವರ್ಷದ ಬಳಿಕ ಪವಾಡ ಸದೃಶ್ಯ ಎಂಬಂತೆ ಪತ್ತೆಯಾಗಿತ್ತು. ನಾಯಿಗಾಗಿ ನಾನಾ ಕಡೆ ಹುಡುಕಾಟ ನಡೆಸಿದರೂ ಪತ್ತೆಯಾಗಿರಲಿಲ್ಲ ಮೈಕ್ರೋಚಿಪ್ ಸಹಾಯದಿಂದ ಅದರ ಇರುವಿಕೆ ಕಂಡುಬಂತು. ವಿಮಾನ ನಿಲ್ದಾಣದಲ್ಲಿ ಚೋಕೋ ತನ್ನ ಮಾಲಕಿಯ ಕೈ ಸೇರಿತ್ತು. ಈ ಹೃದಯಸ್ಪರ್ಶಿ ವಿಡಿಯೊ ವೈರಲ್ ಆಗಿತ್ತು.

ಪೆಟ್ರೀಷಿಯಾ ಎಂಬುವವರು 2016ರಲ್ಲಿ ಚೋಕೊ ಎಂಬ ಹೆಸರಿನ ಗಂಡು ನಾಯಿಯನ್ನು ದತ್ತು ಪಡೆದಿದ್ದರು‌. 2021ರ ಮೇಯಲ್ಲಿ ಚೋಕೊ ಇದ್ದಕ್ಕಿದ್ದಂತೆ ಕಣ್ಮರೆಯಾಯಿತು. ಅದಕ್ಕಾಗಿ ಎಲ್ಲ ಕಡೆ ಹುಡುಕಾಟ ನಡೆಸಿದರೂ ಪತ್ತೆಯಾಗಲೇ ಇಲ್ಲ. ಚೋಕೊದ ಬೆಲ್ಟ್‌ನಲ್ಲಿ ಮೈಕ್ರೋಚಿಪ್ ಅಳವಡಿಸಿದ್ದ ಕಾರಣ ಎಂದಾದರು ಒಂದು ದಿನ ಅದು ತನ್ನ ಕೈ ಸೇರುತ್ತದೆ ಎಂಬ ಭರವಸೆ ಪೆಟ್ರೀಷಿಯಾ ಅವರಲ್ಲಿತ್ತು. ಸುಮಾರು ಐದು ವರ್ಷಗಳಾಗಿದ್ದರೂ ಶ್ವಾನದ ಸುಳಿವೇ ಸಿಕ್ಕಿರಲಿಲ್ಲ. ಕಾಣೆಯಾದ ಸುಮಾರು 1,645 ದಿನಗಳ ನಂತರ, ಚೋಕೊ ಸುಳಿವು ಮೈಕ್ರೋಚಿಪ್‌ನಲ್ಲಿ ಪತ್ತೆಯಾಗಿದೆ. ಅದು ದೂರದ ಡೆಟ್ರಾಯಿಟ್‌ನಲ್ಲಿತ್ತು.