ಬೀಜಿಂಗ್: ಚೀನಾದ (China) ಸಿಚುವಾನ್ ಪ್ರಾಂತ್ಯದಲ್ಲಿ ಹೊಸದಾಗಿ ನಿರ್ಮಿಸಲಾದ ಬೃಹತ್ ಸೇತುವೆಯಾದ ಹಾಂಗ್ಕಿ ಸೇತುವೆ (Hongqi Bridge) ಮಂಗಳವಾರ (ನವೆಂಬರ್ 11) ಕುಸಿದು ಬಿದ್ದಿದೆ. ಸೇತುವೆ ಕುಸಿದು ಬೀಳುತ್ತಿರುವ ದೃಶ್ಯವು ಕ್ಯಾಮರಾದಲ್ಲಿ ಸೆರೆಯಾಗಿದ್ದು, ಇದರ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ (Viral Video) ಆಗಿದೆ. ಈ ಕುಸಿತದಿಂದಾಗಿ ಟನ್‌ಗಳಷ್ಟು ಕಾಂಕ್ರೀಟ್ ನದಿಗೆ ಬಿದ್ದಿದ್ದು, ಗಾಳಿಯಲ್ಲಿ ಧೂಳಿನ ರಾಶಿ ಎದ್ದಿರುವುದು ವಿಡಿಯೊದಲ್ಲಿ ಕಂಡು ಬಂದಿದೆ.
ಮಧ್ಯ ಚೀನಾವನ್ನು ಟಿಬೆಟ್‌ಗೆ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿಯ ಭಾಗವಾಗಿದ್ದ 758 ಮೀಟರ್ ಉದ್ದದ ಸೇತುವೆಯಲ್ಲಿ ಬಿರುಕುಗಳು ಮತ್ತು ನೆಲದಲ್ಲಿ ಕಂಡುಬಂದ ಬದಲಾವಣೆಗಳಿಂದಾಗಿ ಸೋಮವಾರ ಅದನ್ನು ಮುಚ್ಚಲಾಗಿತ್ತು. ಘಟನೆಯಲ್ಲಿ ಯಾವುದೇ ಸಾವುನೋವುಗಳ ವರದಿಯಾಗಿಲ್ಲ. ಪ್ರಾಥಮಿಕ ತನಿಖೆಗಳು, ಕಡಿದಾದ ಪರ್ವತ ಪ್ರದೇಶದಲ್ಲಿನ ಭೂವೈಜ್ಞಾನಿಕ ಅಸ್ಥಿರತೆಯು ಕುಸಿತಕ್ಕೆ ಕಾರಣವೆಂದು ಸೂಚಿಸಿವೆ.
ಇದನ್ನೂ ಓದಿ: Viral Video: RJD ಬಿಟ್ಟು ಬಿಜೆಪಿಗೆ ಮತ ಹಾಕಿದ್ದಕ್ಕೆ ಪತ್ನಿ ಮೇಲೆ ಮನಸೋ ಇಚ್ಛೆ ಹಲ್ಲೆ ನಡೆಸಿದ ಪತಿರಾಯ; ವಿಡಿಯೋ ವೈರಲ್
ಅಧಿಕಾರಿಗಳು ಸೇತುವೆಯನ್ನು ಮುಚ್ಚಿದರು. ಘಟನೆಗೆ ವಿನ್ಯಾಸ ಅಥವಾ ನಿರ್ಮಾಣ ಸಮಸ್ಯೆಗಳು ಕಾರಣವಾಗಿವೆಯೇ ಎಂದು ತಿಳಿಯಲು ಸಮಗ್ರ ತಾಂತ್ರಿಕ ತನಿಖೆ ನಡೆಯುತ್ತಿದೆ. ಸಿಚುವಾನ್ ಡೈಲಿಯ ವರದಿಯ ಪ್ರಕಾರ, ಸೋಮವಾರ ಸಂಜೆ 5:25ಕ್ಕೆ ಮೇರ್ಕಾಂಗ್ ನಗರದ ಹೆದ್ದಾರಿಯ ಹಾಂಗ್ಕಿ ಸೇತುವೆ ವಿಭಾಗದ ಬಲದಂಡೆಯಲ್ಲಿ ನಡೆದ ಸ್ಥಳೀಯ ತಪಾಸಣೆಯ ಸಮಯದಲ್ಲಿ ಸಂಭಾವ್ಯ ಅಪಾಯಗಳನ್ನು ಗುರುತಿಸಲಾಯಿತು. ಇದು ಅಧಿಕಾರಿಗಳು ತುರ್ತು ಪ್ರತಿಕ್ರಿಯೆ ಮತ್ತು ಸ್ಥಳಾಂತರಿಸುವಿಕೆಯನ್ನು ಪ್ರಾರಂಭಿಸಲು ಪ್ರೇರೇಪಿಸಿತು. ಈ ಘಟನೆಯು G317 ರಾಷ್ಟ್ರೀಯ ಹೆದ್ದಾರಿಯ ಬಳಿ ಮಧ್ಯಾಹ್ನ 3ರ ಸುಮಾರಿಗೆ ಸಂಭವಿಸಿದೆ ಎಂದು ವರದಿಯಾಗಿದೆ.
ಇಲ್ಲಿದೆ ವಿಡಿಯೊ:
ಶುವಾಂಗ್‌ಜಿಯಾಂಗ್ಕು ಜಲವಿದ್ಯುತ್ ಕೇಂದ್ರ ಮತ್ತು ಅಣೆಕಟ್ಟಿನ ಬಳಿಯಿರುವ ಈ ಸೇತುವೆಯು ನೆಲದಿಂದ ಸುಮಾರು 625 ಮೀಟರ್ ಎತ್ತರದಲ್ಲಿದೆ. ಸಿಚುವಾನ್ ಮತ್ತು ಟಿಬೆಟಿಯನ್ ಪ್ರಸ್ಥಭೂಮಿಯ ನಡುವಿನ ಸಂಪರ್ಕವನ್ನು ಸುಲಭಗೊಳಿಸಲು, ಈ ವರ್ಷದ ಆರಂಭದಲ್ಲಿ ಇದನ್ನು ಪೂರ್ಣಗೊಳಿಸಲಾಯಿತು. ಇದನ್ನು ಸೆಪ್ಟೆಂಬರ್‌ನಲ್ಲಿ ಸಾರ್ವಜನಿಕರಿಗೆ ತೆರೆಯಲಾಯಿತು.
ವಿಶ್ವದ ಅಗ್ರ ವಿಶ್ವವಿದ್ಯಾಲಯಗಳಲ್ಲಿ ಚೀನಾ ಪ್ರಥಮ
ಏಷ್ಯಾದಲ್ಲೇ ಅತಿ ಹೆಚ್ಚು ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಹೊಂದಿರುವ ಭಾರತವು ಎರಡು ವರ್ಷಗಳ ಬಳಿಕ ವಿಶ್ವವಿದ್ಯಾಲಯಗಳ 2026ರ ಶ್ರೇಯಾಂಕದಲ್ಲಿ ತನ್ನ ಮೊದಲ ಸ್ಥಾನವನ್ನು ಚೀನಾಕ್ಕೆ ಬಿಟ್ಟುಕೊಟ್ಟಿದೆ. ಭಾರತದ ಹತ್ತು ಉನ್ನತ ಶ್ರೇಯಾಂಕಿತ ಶಿಕ್ಷಣ ಸಂಸ್ಥೆಗಳ ಪೈಕಿ ಒಂಭತ್ತು ಶಿಕ್ಷಣ ಸಂಸ್ಥೆಗಳ ಶ್ರೇಯಾಂಕ ಕಳೆದ ವರ್ಷಕ್ಕಿಂತ ಕುಸಿದಿರುವುದರಿಂದ ಈ ಬಾರಿ ಏಷ್ಯಾದಲ್ಲೇ ಎರಡನೇ ಸ್ಥಾನವನ್ನು ಪಡೆದಿದೆ. ಶ್ರೇಯಾಂಕದಲ್ಲಿ ಭಾರತ ಎರಡನೇ ಸ್ಥಾನಕ್ಕೆ ಕುಸಿದರೂ ಕೂಡ ಅದು ಸಂಶೋಧನಾ ಉತ್ಪಾದಕತೆ ಮತ್ತು ಅಧ್ಯಾಪಕರ ಬಲದಲ್ಲಿ ತನ್ನ ಉನ್ನತ ಸ್ಥಾನವನ್ನು ಕಾಯ್ದುಕೊಂಡಿದೆ.
ಈ ವರ್ಷದ ಶ್ರೇಯಾಂಕದಲ್ಲಿ 137 ಭಾರತೀಯ ವಿಶ್ವವಿದ್ಯಾಲಯಗಳು ಪಟ್ಟಿಗೆ ಸೇರಿದೆ. ಈ ಮೂಲಕ ದೇಶದ ಒಟ್ಟು ವಿಶ್ವವಿದ್ಯಾಲಯಗಳ ಸಂಖ್ಯೆ 294ಕ್ಕೆ ತಲುಪಿದೆ. ಚೀನಾದ 261 ಸಂಸ್ಥೆಗಳು ಈ ಬಾರಿ ಸೇರ್ಪಡೆಗೊಂಡಿದ್ದು, ಈ ಮೂಲಕ ವಿಶ್ವವಿದ್ಯಾನಿಲಯ ಒಟ್ಟು ಸಂಖ್ಯೆ 395ಕ್ಕೆ ತಲುಪಿದೆ. ಈ ವರ್ಷದ ಶ್ರೇಯಾಂಕದಲ್ಲಿ ಒಟ್ಟು 1,529 ವಿಶ್ವವಿದ್ಯಾಲಯಗಳು ಸ್ಥಾನ ಪಡೆದಿವೆ.