ಭೋಜ್‌ಪುರಿ,ಮಾ.17: ಇತ್ತೀಚೆಗೆ ಯಾವುದೇ ಸಮಾರಂಭದಲ್ಲಿ ಸಂಗೀತ, ನೃತ್ಯ ಹೀಗೆ ಮನ ರಂಜನೆಯ ಕಾರ್ಯಕ್ರಮವನ್ನು ಆಯೋಜಿಸುವುದು ಸಾಮಾನ್ಯವಾಗಿದೆ. ಆದರೆ ಇದೀಗ ಭೋಜ್ ಪುರಿ ಲೈವ್ ಶೋ ಒಂದರಲ್ಲಿ ಆಘಾತಕಾರಿ ಘಟನೆಯೊಂದು ಕಂಡು ಬಂದಿದೆ. ಭೋಜ್‌ಪುರಿ ಗಾಯಕ ಧನಂಜಯ್ ಶರ್ಮಾ ಎನ್ನುವವರು ಪ್ರದರ್ಶನದ ಸಂದರ್ಭದಲ್ಲಿ ಮಹಿಳಾ ನರ್ತಕಿಯ ನ್ನು ಎತ್ತಿ ಜನಸಮೂಹದತ್ತ ಎಸೆದಿರುವ ವಿಡಿಯೋವೊಂದು (Viral Video) ವೈರಲ್ ಆಗಿದೆ. ಸದ್ಯ ಈ ದೃಶ್ಯ ಕಂಡ ನೆಟ್ಟಿಗರು ಗಾಯಕನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗಾಯಕ ಧನಂಜಯ್ ಶರ್ಮಾ ಲೈವ್ ಪ್ರದರ್ಶನದ ವೇಳೆ ವೇದಿಕೆಯಲ್ಲಿದ್ದ ಮಹಿಳಾ ನರ್ತಕಿ ಯನ್ನು ಎತ್ತಿ ಜನಸಮೂಹದತ್ತ ಎಸೆದಿರುವ ಘಟನೆ ಭಾರೀ ಚರ್ಚೆ ಗೀಡಾಗುವಂತೆ ಮಾಡಿದೆ. ಭೋಜ್‌ಪುರಿ ಮನರಂಜನಾ ಉದ್ಯಮದಲ್ಲಿ ಈ ವಿವಾದ ಇದೀಗ ಭುಗಿಲೆದ್ದಿದೆ. ವೇದಿಕೆಯಲ್ಲಿ ಹಾಡುತ್ತಿದ್ದ ಧನಂಜಯ್ ಶರ್ಮಾ ಮೊದಲು ನೃತ್ಯಮಾಡುವ ಮಹಿಳೆಯನ್ನು ಎಳೆಯುತ್ತಿರುವ ದೃಶ್ಯ ಕಂಡು ಬಂದಿದೆ. ಆಕೆ ತಪ್ಪಿಸಿಕೊಳ್ಳಲು ಪ್ರಯತ್ನಿಸಿದರೂ ಗಾಯಕ ಆಕೆಯನ್ನು ಬಿಡದೇ ಎತ್ತಿಕೊಂಡು ಪ್ರೇಕ್ಷಕರು ಸೇರಿರುವ ಸ್ಥಳಕ್ಕೆ ಎಸೆದಿದ್ದಾರೆ.
ವಿಡಿಯೋ ನೋಡಿ:
ವೈರಲ್ ಆದ ವಿಡಿಯೊದಲ್ಲಿ ಶರ್ಮಾ ವೇದಿಕೆಯಲ್ಲಿದ್ದ ನರ್ತಕಿಯನ್ನು ಪ್ರೇಕ್ಷಕರ ಕಡೆಗೆ ಎಳೆದೊಯ್ಯುತ್ತಿರುವುದು ಕಾಣಬಹುದು. ನಂತರ ಆಕೆಯನ್ನು ಹಿಂದಿನಿಂದ ಎತ್ತಿಕೊಂಡು, ಜನ ಸಮೂಹದತ್ತ ಎಸೆದಿದ್ದಾನೆ. ನಂತರ ಸ್ಥಳದಲ್ಲಿದ್ದ ಜನರು ನರ್ತಕಿಯನ್ನು ಎತ್ತಿ ಕೆಳಗೆ ಇಳಿಸುತ್ತಾರೆ. ಈ ಕಾರ್ಯಕ್ರಮವನ್ನು ಆಯೋಜಿಸಿದ ನಿರೂಪಕಿ ಈ ಕೃತ್ಯವನ್ನು ಖಂಡಿಸಿದ್ದು ಈ ನಡವಳಿಕೆ ತಪ್ಪು ಎಂದು ಹೇಳಿದರು, ಇದರಲ್ಲಿ ಭಾಗಿಯಾಗಿರುವ ಹಲವಾರು ಮಹಿಳೆಯನ್ನು ಆ ರೀತಿ ನಡೆಸಿಕೊಳ್ಳಬಾರದಿತ್ತು ಎಂದು ಹೇಳಿದ್ದಾರೆ.
Viral Video: ಹಿಂದೂ ದೇವಾಲಯದಲ್ಲಿ ಮುಸ್ಲಿಂ ಯುವಕನ ರೀಲ್ಸ್; ಕಲ್ಯಾಣಿಗೆ ನೀರು ಉಗಿದ ಯೂಟ್ಯೂಬರ್!
ಶರ್ಮಾ ಕೂಡ ಈ ವಿವಾದಕ್ಕೆ ಪ್ರತಿಕ್ರಿಯೆ ನೀಡಿದ್ದು ನರ್ತಕಿ ತಮ್ಮೊಂದಿಗೆ ಕೆಟ್ಟದಾಗಿ ವರ್ತಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ ವೀಡಿಯೊದಲ್ಲಿ, ವೇದಿಕೆಯಲ್ಲಿ ಏನಾಯಿತು ಎಂಬುದರ ಬಗ್ಗೆ ಜನರಿಗೆ ಸಂಪೂರ್ಣ ಸತ್ಯ ತಿಳಿದಿಲ್ಲ. ಹಾಡಿನ ಸಮಯದಲ್ಲಿ ನೃತ್ಯ ಮಾಡುತ್ತಿದ್ದ ಮಹಿಳೆಯರು ನನ್ನನ್ನು ವೇದಿಕೆಯಿಂದ ಕೆಳಕ್ಕೆ ತಳ್ಳಲು ಪ್ರಯತ್ನಿಸಿದರು ಎಂದು ಆರೋಪ ಮಾಡಿದ್ದಾರೆ. ಸದ್ಯ ಬಿಹಾರ ಪೊಲೀಸರು ಈ ವಿಚಾರವನ್ನು ಅರಿತುಕೊಂಡು ಘಟನೆಯ ಬಗ್ಗೆ ತನಿಖೆ ನಡೆಸುವಂತೆ ಮುಜಫರ್‌ಪುರ ಪೊಲೀಸರಿಗೆ ನಿರ್ದೇಶನ ನೀಡಿದ್ದಾರೆ.