ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಒಂದು ಪೀಸ್ ಬ್ರೆಡ್‌ಗಾಗಿ ದೂರಾದ ಅಕ್ಕ- ತಮ್ಮ: ಒಂದೇ ಒಂದು ಬಾಲ್ಯದ ಫೋಟೊದಿಂದ ಬರೋಬ್ಬರಿ 33 ವರ್ಷಗಳ ನಂತರ ಒಂದಾದ ಒಡಹುಟ್ಟಿದವರು

Viral News: ಒಂದು ತುಂಡು ಬ್ರೆಡ್‌ಗಾಗಿ ದೂರಾದ ಅಕ್ಕ- ತಮ್ಮ 33ವರ್ಷಗಳ ನಂತರ ಒಂದಾದ ಘಟನೆ ನಡೆದಿದೆ. ಕೇವಲ ಒಂದು ಫೋಟೋ ಇಟ್ಟುಕೊಂಡು ತಮ್ಮನನ್ನು ಅಕ್ಕ ಪತ್ತೆ ಹಚ್ಚಿದ್ದಾಳೆ. ಸದ್ಯ ಈ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ.

ಸಾಂಧರ್ಬಿಕ ಚಿತ್ರ

ನವದೆಹಲಿ, ಏ. 3: ಒಡಹುಟ್ಟಿದವರ ಬಂಧ ಎಂಬುವುದು ಪ್ರೀತಿ, ಕಾಳಜಿ ಮತ್ತು ಸೌಹಾರ್ದ ಸ್ನೇಹವನ್ನು ಒಳಗೊಂಡಿರುವಂತಹದ್ದು. ಸಣ್ಣ ಪುಟ್ಟ ವಿಚಾರಗಳಿಗೆ ಕೋಪ, ಜಗಳ ಉಂಟಾದರೂ ಇಬ್ಬರ ಅಪಾರವಾದ ಪ್ರೀತಿ ಇದ್ದೇ ಇರುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಒಂದು ತುಂಡು ಬ್ರೆಡ್‌ಗಾಗಿ ದೂರಾದ ಅಕ್ಕ- ತಮ್ಮ 33 ವರ್ಷಗಳ ನಂತರ ಒಂದಾದ ಘಟನೆಯೊಂದು ಚೀನಾದಲ್ಲಿ ನಡೆದಿದೆ. ಕೇವಲ ಒಂದು ಬಾಲ್ಯದ ಫೋಟೊ ಇಟ್ಟುಕೊಂಡು ತಮ್ಮನನ್ನು ಅಕ್ಕ ಪತ್ತೆ ಹಚ್ಚಿದ್ದಾಳೆ. ಸದ್ಯ ಈ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ (Viral News) ಆಗುತ್ತಿದೆ.

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಸುದ್ದಿ ಸಾಕಷ್ಟು ಗಮನ ಸೆಳೆದಿದೆ. ಬರೋಬ್ಬರಿ 33 ವರ್ಷಗಳ ನಂತರ ತನ್ನ ಸಹೋದರನನ್ನು ಅಕ್ಕ ಲಿ ಲಿನ್ ಪತ್ತೆ ಹಚ್ಚುವಲ್ಲಿ ಯಸಸ್ವಿಯಾಗಿದ್ದಾಳೆ. ಸುಮಾರು ವರ್ಷಗಳ ಕಾಲ ನಡೆಸಿದ ನಿರಂತ ಹುಡುಕಾಟಕ್ಕೆ, ಪ್ರಯತ್ನಕ್ಕೆ ಇದೀಗ ಫಲ ದೊರೆತಿದೆ. ಅಪಹರಣಕ್ಕೆ ಒಳಗಾದ ತಮ್ಮನನ್ನು ಲಿ ಲಿನ್ ಪತ್ತೆಹಚ್ಚಿದ್ದಾಳೆ.

ಅತ್ತೆಯನ್ನು ನೋಡಿಕೊಳ್ಳಲು ಕೆಲಸ ಬಿಡಲು ನಿರಾಕರಿಸಿದ ಪತ್ನಿಗೆ ವಿಚ್ಛೇದನ ನೀಡಿದ ಪತಿ

ಈ ಕಥೆ ಚೀನಾದಲ್ಲಿ ನಡೆದಿದೆ. ಈಗ 44 ವರ್ಷದ ಲಿ ಲಿನ್ ಮತ್ತು ಆಕೆಯ ಸಹೋದರ ಲಿ ಕ್ಸಿನ್ ಸಣ್ಣ ವಯಸ್ಸಿನಲ್ಲಿ ಅನಾಥರಾದರು. ಅವರ ತಾಯಿ ಕ್ಯಾನ್ಸರ್ ನಿಂದ ನಿಧನರಾದ ನಂತರ ಅವರ ತಂದೆ ಮಾನಸಿಕವಾಗಿ ಕುಗ್ಗಿ ಹೋಗಿದ್ದರು. ತಿನ್ನಲು ಆಹಾರ ಇಲ್ಲದೆ ಅಲೆಯುತ್ತಿದ್ದ ಈ ಮಕ್ಕಳು ಒಂದು ದಿನ ಆಶ್ರಯ ಪಡೆಯಲು ಲಾರಿಯೊಂದನ್ನು ಹತ್ತಿದ್ದರು. ಆದರೆ ಆ ಲಾರಿ ಅವರನ್ನು ಎಲ್ಲೋ ಕೊಂಡೊಯ್ದಿದೆ. ವರದಿಯ ಪ್ರಕಾರ, ಒಬ್ಬ ಅಪರಿಚಿತ ಮಹಿಳೆ ಹಸಿದ ಮಕ್ಕಳಿಗೆ ಆಹಾರ ನೀಡುತ್ತೇನೆ ಎಂದು ಹೇಳಿದ್ದಳು. ಅದನ್ನು ನಂಬಿದ ಅಕ್ಕ ಲಿ ಲಿನ್, ತನ್ನ ತಮ್ಮನನ್ನು ಆಕೆಯ ಜತೆ ಕಳುಹಿಸಿ ಕೊಟ್ಟಳು. ಆದರೆ ಆಕೆಯ ತಮ್ಮ ಮತ್ತೆ ಎಂದಿಗೂ ವಾಪಸ್‌ ಬರಲಿಲ್ಲ.

ತಮ್ಮನನ್ನು ಹುಡುಕಲು ಹಣ ಹೊಂದಿಸಲು ಲಿ ಲಿನ್ ಇಟ್ಟಿಗೆ ಹೊರುತ್ತ, ಕಟ್ಟಡ ಕಾರ್ಮಿಕಳಾಗಿ ಕೆಲಸ ಮಾಡುತ್ತ ಮತ್ತು ಹೋಟೆಲ್‌ಗಳಲ್ಲಿ ಪಾತ್ರೆ ತೊಳೆಯುವ ಕೆಲಸ ಮಾಡತೊಡಗಿದಳು. ಆಕೆಯ ಬಳಿ ಸಹೋದರ ಬಾಲ್ಯದ ಪೋಟೊ ಬಿಟ್ಟರೆ ಬೇರೆ ಯಾವದೇ ಸಾಕ್ಷಿಯೂ ಇರಲಿಲ್ಲ. ಆದರೂ ಛಲ ಬಿಡದೆ ಆಕೆ ದೇಶಾದ್ಯಂತ ಸಾವಿರಾರು ಕರಪತ್ರ ವಿತರಿಸಿದಳು. ಪೋಷಕರ ಡಿಎನ್‌ಎ ಲಭ್ಯವಿಲ್ಲದ ಕಾರಣ, ಆಕೆಯ ಏಕೈಕ ಆಧಾರ ಬಾಲ್ಯದ ಫೋಟೊ ಆಗಿತ್ತು.

ಪೊಲೀಸ್ ಅಧಿಕಾರಿಯೊಬ್ಬರು ತಂತ್ರಜ್ಞಾನದ ಸಹಾಯದಿಂದ ಆ ಹಳೆಯ ಫೋಟೊ ಬಳಸಿ ಹುಡುಕಾಟ ನಡೆಸಿದರು. ಬಳಿಕ ಗುವಾಂಗ್‌ಡಾಂಗ್‌ನಲ್ಲಿ ಇದ್ದ ಒಬ್ಬ ವ್ಯಕ್ತಿಯ ಮುಖಚಹರೆ ಈ ಫೋಟೊ ಜತೆ ಹೊಂದಿಕೆಯಾಯ್ತು. ನಂತರ ಡಿಎನ್‌ಎ ಪರೀಕ್ಷೆ ನಡೆಸಿದಾಗ ಆತನೇ ಲಿ ಕ್ಸಿನ್ ಎಂದು ತಿಳಿದು ಬಂದಿದೆ. ಮಾರ್ಚ್ 23ರಂದು ಒಡಹುಟ್ಟಿದವರು ಮತ್ತೆ ಒಂದಾದರು. ಈ ಸಂದರ್ಭದಲ್ಲಿ ಲಿ ಲಿನ್ ಪೊಲೀಸ್ ಠಾಣೆಗೆ ಬ್ರೆಡ್ ತುಂಬಿದ ಬ್ಯಾಗ್‌ಗಳ ಸಮೇತ ಬಂದಿದ್ದರು. ಬರೋಬ್ಬರಿ 33 ವರ್ಷಗಳ ಬಳಿಕ ಒಡಹುಟ್ಟಿದವರು ಒಂದಾಗಿರುವ ಈ ಸುದ್ದಿ ಹಲವರಿಗೆ ಅಚ್ಚರಿ ತಂದಿದೆ.