ನವದೆಹಲಿ: ನಿಮಗೆ ಬೆಳಿಗ್ಗೆ ಬೇಗನೇ ಎದ್ದು ಫ್ಲೈಟ್ ಹಿಡಿಬೇಕಾದ ಅನಿವಾರ್ಯತೆ ಇದೆ, ಏರ್ ಪೋರ್ಟ್ ರೀಚ್ ಆದ್ಮೇಲೆ ಒಂದು ಸಣ್ಣ ಪವರ್ ನ್ಯಾಪ್ ತೆಗೆದುಕೊಳ್ಳೋಣ ಅನ್ನಿಸ್ತಿದೆ, ಆದ್ರೆ ಆ ಜನಜಂಗುಳಿಯಲ್ಲಿ ಎಲ್ಲಿ ಕಣ್ಣಡ್ಡ ಮಾಡೋದು ಅಂದ್ಕೊಳ್ತಿದ್ರೆ, ಇದೀಗ ನಿಮ್ಗೊಂದು ಗುಡ್ ನ್ಯೂಸ್ ಬಂದಿದೆ! ಈ ಸ್ಲೀಪಿಂಗ್ ಕ್ಯಾಪ್ಸೂಲ್(Sleeping Capsules) ಗಳು ನಿಮ್ಮ ಕೋಳಿ ನಿದ್ದೆಗೆ ಅವಕಾಶ ಮಾಡಿಕೊಡುವಂತಿದೆ. ಆದ್ರೆ ಸದ್ಯಕ್ಕೆ ಇದು ಸದ್ದು ಮಾಡ್ತಿರೋದು ನಮ್ಮ ನೆರೆಯ ದೇಶವಾಗಿರೋ ಚೀನಾದ ಕುನ್ಮಿಂಗ್ ಏರ್ ಪೋರ್ಟ್ನಲ್ಲಿ(Kunming Airport). ಈ ಸಣ್ಣ ಸ್ಲೀಪಿಂಗ್ ಕ್ಯಾಪ್ಸೂಲ್ ಗಳಲ್ಲಿ ನೀವು ವಿಶ್ರಾಂತಿ ತಗೊಂಡು ಶಾಂತಿಯುತವಾಗಿ ರಿಲ್ಯಾಕ್ಸ್ ಮಾಡ್ಕೊಬೋದು.
ಇದಕ್ಕೆ ಸಂಬಂಧಿಸಿದ ವಿಡಿಯೋ ಒಂದು ಇದೀಗ ರೆಡ್ ಇಟ್ ನಲ್ಲಿ ವೈರಲ್ ಆಗ್ತಿದೆ. ‘ಚೀನಾದ ಕುನ್ಮಿಂಗ್ ಏರ್ ಪೋರ್ಟ್ ನಲ್ಲಿರೋ ಸ್ಲೀಪಿಂಗ್ ಕ್ಯಾಪ್ಸೂಲ್ಸ್’ ಎಂಬ ಶೀರ್ಷಿಕೆಯಲ್ಲಿ ವೈರಲ್ ಆಗ್ತಿರೋ ಈ ವಿಡಿಯೋದಲ್ಲಿ ವಿದೇಶಿ ಟ್ರಾವೆಲರ್ ಒಬ್ರು ಈ ಸ್ಲೀಪಿಂಗ್ ಟ್ಯಾಬ್ಲೆಟ್ ಗಳನ್ನು ರಿಮೋಟ್ ಮೂಲಕ ಅನ್ ಲಾಕ್ ಮಾಡ್ತಿರೋ ದೃಶ್ಯಗಳಿವೆ. ಈ ಸ್ಲೀಪಿಂಗ್ ಕ್ಯಾಪ್ಸೂಲ್ ಗಳ ಡೋರ್ ತೆರೆದುಕೊಳ್ತಿದ್ದಂತೆ ಸಣ್ಣದಾದ ಒಳಭಾಗದಲ್ಲಿ ಒಂದು ಸಾಫ್ಟ್ ಬೆಡ್, ಡಿಮ್ ಲೈಟ್ ಗಳು, ವಾಟರ್ ಬಾಟಲ್ ಮತ್ತು ಅಗತ್ಯವಿರುವ ಸೌಲಭ್ಯಗಳಿವೆ. ಇದು ನಿಮ್ಮ ಲಾಂಗ್ ಫ್ಲೈಟ್ ಪ್ರಯಾಣದಲ್ಲಿ ಆಗಿರೋ ಆಯಾಸಕ್ಕೆ ಕ್ಷಣಿಕ ಪರಿಹಾರವನ್ನು ಒದಗಿಸಲು ನೆರವಾಗುತ್ತದೆ.
ಈ ಸ್ಲೀಪಿಂಗ್ ಟ್ಯಾಬ್ಲೆಟ್ ನೊಳಗೆ ಏನೇನಿದೆ?
ಈ ಕ್ಯಾಪ್ಸೂಲ್ ನೊಳಗೆ ಏನೇನಿದೆ ಎಂದು ನೋಡೋದಾದ್ರೆ, ಒಂದು ಸಣ್ಣ ಫ್ಯಾನ್, ಲೈಟ್ ಹಾಗೂ ವೆಂಟಿಲೇಷನ್ ನಿರ್ವಹಣೆಗಾಗಿ ಒಂದು ಕಂಟ್ರೋಲ್ ಪ್ಯಾನಲ್ ಇದ್ದು, ಈ ಸ್ಲೀಪಿಂಗ್ ಟ್ಯಾಬ್ಲೆಟ್ ಗಳು ಕುನ್ಮಿಂಗ್ ಏರ್ಪೋರ್ಟ್ ನ 4ನೇ ಮಹಡಿಯಲ್ಲಿರುವ ನಿರ್ಗಮನ ಹಾಲ್ ನಲ್ಲಿದೆ. ಇದು ಏಕಾಂಗಿ ಪ್ರಯಾಣಿಕರಿಗಾಗಿ ಹಾಗೂ ತಮ್ಮ ವಿಮಾನವನ್ನು ಕಾಯುತ್ತಿರುವವರಿಗಾಗಿ ರೆಸ್ಟ್ ಮಾಡುವುದಕ್ಕೆಂದೇ ವಿನ್ಯಾಸ ಮಾಡಲಾಗಿದೆ.
ಈ ಸುದ್ದಿಯನ್ನು ಓದಿ: Viral Video: ಗೃಹ ಪ್ರವೇಶ ಆಚರಣೆಯಲ್ಲಿ ಗೋಮಾತೆ ಬದಲಿಗೆ ಆಟಿಕೆ ಹಸು: ಇದೇ ಮಾಡರ್ನ್ ಇಂಡಿಯಾ ಎಂದ ನೆಟ್ಟಿಗರು
ಇಲ್ಲಿರುವ ಪ್ರತೀ ಕ್ಯಾಪ್ಸೂಲ್ ಗಳೂ ನಿಮ್ಮ ಶಾರ್ಟ್ ಸ್ಟೇಯನ್ನು ಸ್ಮರಣೀಯವಾಗಿ ಮಾಡುವಂತಿದೆ. ಇಲ್ಲಿ ಪ್ರಯಾಣಿಕರಿಗೆ ಉತ್ತಮವಾದ ಬೆಡ್, ನೀರಿನ ಬಾಟಲ್ ಮತ್ತು ಸ್ಲಿಪ್ಪರ್ ನಂತಹ ಅಗತ್ಯ ವಸ್ತುಗಳನ್ನು ಇರಿಸಲಾಗಿದೆ. ಮಾತ್ರವಲ್ಲದೇ ಇಲ್ಲಿ ಕಣ್ಪಟ್ಟಿ ಮತ್ತು ಇಯರ್ ಪ್ಲಗ್ ಗಳೂ ಇದೆ. ಕೆಲವು ಅಪ್ ಗ್ರೇಡೆಡೆ ಪಾಡ್ ಗಳಲ್ಲಿ ಪ್ಯೂರಿಫೈಯರ್ ಮತ್ತು ವೆಂಟಿಲೇಷನ್ ವ್ಯವಸ್ಥೆಗಳೂ ಇವೆ. ಪ್ರಯಾಣಿಕರ ಅನುಕೂಲಕ್ಕೆ ತಕ್ಕಂತೆ ಇವುಗಳನ್ನು ವಿನ್ಯಾಸಗೊಳಿಸಲಾಗಿದ್ದು, ಸ್ವಚ್ಛ ಮತ್ತು ಬೆಚ್ಚನೆಯ ವಾತಾವರಣನ್ನು ನೀಡುತ್ತದೆ. ಒಮ್ಮೆ ಇದರ ಒಳ ಹೊಕ್ಕ ಮೇಲೆ ನೀವಿದರ ಬಾಗಿಲನ್ನು ಮುಚ್ಚಬಹುದು, ಆಮೇಲೆ ಬೆಡ್ ಮೇಲೆ ಆರಾಮವಾಗಿ ಮಲಗಿಕೊಂಡು ಒಂದಷ್ಟು ಹೊತು ಹೊರ ಜಗತ್ತಿನ ಜಂಜಾಟದಿಂದ ದೂರವಾಗಿ ನೆಮ್ಮದಿಯ ಕೋಳಿ ನಿದ್ದೆಗೆ ಜಾರಬಹುದು.
ಚೀನೀಯರ ಈ ನೂತನ ಆವಿಷ್ಕಾರಕ್ಕೆ ರೆಡ್ ಇಟ್ ಬಳಕೆದಾರರು ಫುಲ್ ಫಿದಾ ಆಗಿದ್ದು, ಈ ಐಡಿಯಾವನ್ನು ಬೆಂಬಲಿಸಿದ್ದಾರೆ. ‘ಹೆಚ್ಚಿನ ಎಲ್ಲಾ ವಿಮಾನ ನಿಲ್ದಾಣಗಳಲ್ಲಿ ಈ ಸೌಲಭ್ಯ ಇರಬೇಕೆಂದು ನಾನು ಬಯಸುತ್ತೇನೆ. ಕಲವು ಸ್ಥಳಗಳಲ್ಲಿ ಹೊಟೇಲ್ ರೂಂಗಳು ಸಿಕ್ಕಾಪಟ್ಟೆ ದುಬಾರಿಯಾಗಿರುತ್ತದೆ ಮತ್ತು ಒಂದಷ್ಟು ಹೊತ್ತು ಬಿದ್ದುಕೊಳ್ಳಬೇಕೆಂದು ಬಯಸುವವರಿಗೆ ಅವುಗಳು ಆರಾಮದಾಯಕವಾಗಿರುವುದಿಲ್ಲ.’ ಎಂದು ಕಮೆಂಟ್ ಮಾಡಿದ್ದಾರೆ.
ಇನ್ನೊಬ್ಬರು ಈ ಸ್ಲೀಪಿಂಗ್ ಕ್ಯಾಪ್ಸೂಲ್ ನ ದರದ ಬಗ್ಗೆ ಕಮೆಂಟ್ ನಲ್ಲಿ ವಿಚಾರಿಸಿದ್ದು, ಇದಕ್ಕೆ ಸಿಕ್ಕ ಪ್ರತಿಕ್ರಿಯೆಯಂತೆ, 8 ಗಂಟೆಗಳಿಗೆ 299 ರೂಪಾಯಿಳಾಗಿವೆ (ಸರಿ ಸುಮಾರು 3700 ರೂಪಾಯಿಗಳು)’ ಎಂದು ಪ್ರತಿಕ್ರಿಯಿಸಲಾಗಿದೆ. ಒಟ್ಟಿನಲ್ಲಿ, ವರ್ಷದಲ್ಲಿ ಹಲವು ಬಾರಿ ವಿಮಾನದಲ್ಲಿ ಪ್ರಯಾಣಿಸುವವರಿಗೆ ಮತ್ತು ಸುದೀರ್ಘ ವಿಮಾನ ಯಾನ ಮಾಡುವವರಿಗಾಗಿ ಇಂತಹ ಸ್ಲೀಪಿಂಗ್ ಟ್ಯಾಬ್ಲೆಟ್ ಗಳು ಭವಿಷ್ಯದಲ್ಲಿ ಉತ್ತಮ ಆಯ್ಕೆಯಾಗುವುದರಲ್ಲಿ ಸಂಶಯವಿಲ್ಲ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.