ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಗೃಹ ಪ್ರವೇಶ ಆಚರಣೆಯಲ್ಲಿ ಗೋಮಾತೆ ಬದಲಿಗೆ ಆಟಿಕೆ ಹಸು: ಇದೇ ಮಾಡರ್ನ್‌ ಇಂಡಿಯಾ ಎಂದ ನೆಟ್ಟಿಗರು

Desi family viral video: ಪಾರಂಪರಿಕ ಆಚರಣೆಗೆ ಹಾಸ್ಯಭರಿತ ತಿರುವು ನೀಡಿದ ಒಂದು ಕುಟುಂಬದ ವಿಡಿಯೊ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಗೃಹ ಪ್ರವೇಶ ಸಮಾರಂಭದಲ್ಲಿ ನಿಜವಾದ ಗೋಮಾತೆಯ ಬದಲು ಆಟಿಕೆ ಹಸುವನ್ನು ಬಳಸಲಾಗಿದೆ. ಇದಕ್ಕೆ ನೆಟ್ಟಿಗರಿಂದ ನಗು ಹಾಗೂ ಟೀಕೆ ವ್ಯಕ್ತವಾಗಿದೆ.

ಗೃಹ ಪ್ರವೇಶ ಆಚರಣೆಯಲ್ಲಿ ಗೋಮಾತೆ ಬದಲಿಗೆ ಆಟಿಕೆ ಹಸು

ಗೃಹ ಪ್ರವೇಶ ಆಚರಣೆಯಲ್ಲಿ ಗೋಮಾತೆ ಬದಲಿಗೆ ಆಟಿಕೆ ಹಸು (ಸಂಗ್ರಹ ಚಿತ್ರ) -

Priyanka P
Priyanka P Nov 9, 2025 5:52 PM

ದೆಹಲಿ: ಭಾರತದಲ್ಲಿ (India) ಹೊಸ ಮನೆಗೆ ಹೋಗುವಾಗ ಸಾಮಾನ್ಯವಾಗಿ ಗೃಹಪ್ರವೇಶ ಸಮಾರಂಭವನ್ನು ಆಚರಿಸಲಾಗುತ್ತದೆ. ಈ ಆಚರಣೆಯ ಮೂಲಕ ಹೊಸ ಮನೆ ಶುದ್ಧೀಕರಿಸಲ್ಪಡುತ್ತದೆ ಮತ್ತು ನಕಾರಾತ್ಮಕ ಶಕ್ತಿಗಳು ದೂರವಾಗುತ್ತವೆ ಎಂದು ನಂಬಲಾಗಿದೆ. ಅನೇಕ ಪ್ರದೇಶಗಳಲ್ಲಿ, ಸಮಾರಂಭದ ಸಮಯದಲ್ಲಿ ಮನೆಯೊಳಗೆ ಹಸುವನ್ನು ತರುವುದು ಸಾಂಪ್ರದಾಯಿಕವಾಗಿದೆ. ಏಕೆಂದರೆ, ಹಿಂದೂ (Hindu) ಧರ್ಮದಲ್ಲಿ ಹಸುವನ್ನು (Cow) ಶುದ್ಧತೆಯ ಸಂಕೇತವಾಗಿ ನೋಡಲಾಗುತ್ತದೆ.ಆದರೆ, ಅಪಾರ್ಟ್‌ಮೆಂಟ್‌ಗಳಲ್ಲಿ ವಾಸಿಸುವ ಕುಟುಂಬಗಳಿಗೆ ಮನೆಯೊಳಗೆ ನಿಜವಾದ ಹಸುವನ್ನು ತರಲು ಸಾಧ್ಯವಿಲ್ಲ. ಆದರೆ, ಒಂದು ಅಸಾಮಾನ್ಯ ಸಮಾರಂಭದಲ್ಲಿ, ಕುಟುಂಬವೊಂದು ಸೃಜನಶೀಲ ಪರಿಹಾರವನ್ನು ಹುಡುಕಿದೆ. ಅವರು ತಮ್ಮ ಗೃಹಪ್ರವೇಶ ಸಮಾರಂಭಕ್ಕೆ ಆಟಿಕೆ ಹಸುವನ್ನು ಬಳಸಿದರು. ಇದರ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ (Viral Video) ಆಗಿದೆ.

ಗೃಹ ಪ್ರವೇಶ ಸಮಾರಂಭದಲ್ಲಿ ಆಟಿಕೆ ಹಸು

ನಿಜವಾದ ಹಸುವನ್ನು ಮೇಲಿನ ಮಹಡಿಯ ಅಪಾರ್ಟ್‌ಮೆಂಟ್‌ಗೆ ಸ್ಥಳಾಂತರಿಸುವುದು ತುಂಬಾ ಕಷ್ಟಕರವಾದ ಕಾರಣ ಕುಟುಂಬವು ಆಟಿಕೆ ಹಸುವನ್ನು ತರುವ ನಿರ್ಧಾರ ತೆಗೆದುಕೊಂಡಿತು. ಆಚರಣೆಯ ಸಮಯದಲ್ಲಿ, ಪುರೋಹಿತರು ಶ್ಲೋಕಗಳನ್ನು ಪಠಿಸಿದರು. ಈ ವೇಳೆ ಪ್ಲಾಸ್ಟಿಕ್ ಹಸುವನ್ನು ಪೂಜಿಸಲಾಯಿತು ಮತ್ತು ಅದಕ್ಕೆ ಹಾರವನ್ನೂ ಹಾಕಿದರು.

ವೈರಲ್ ಆದ ವಿಡಿಯೊದಲ್ಲಿ ರಿಮೋಟ್‌ನಿಂದ ನಿಯಂತ್ರಿಸಲ್ಪಡುವ ಹಸುವಿನ ಗೊಂಬೆ ಮನೆಯೊಳಗೆ ಚಲಿಸುತ್ತಿರುವುದನ್ನು ತೋರಿಸಲಾಗಿದೆ. ಅದು ಚಾಪೆಯ ಮೇಲೆ ನಿಂತಿತು, ಪುರೋಹಿತರು ಅದನ್ನು ಎತ್ತಿಕೊಂಡು ಮುಂದೆ ಇಟ್ಟರು. ಇದರಿಂದ ಅದು ಚಲಿಸುತ್ತಲೇ ಇತ್ತು. ಮಗುವೊಂದು ಇದನ್ನು ನೋಡಿ ಆಟಿಕೆಯನ್ನು ಕೈಯಲ್ಲಿ ಹಿಡಿದುಕೊಳ್ಳಲು ಪ್ರಯತ್ನಿಸುತ್ತಿರುವುದು ವಿಡಿಯೊದಲ್ಲಿ ಕಾಣಬಹುದು.

ವಿಡಿಯೊ ವೀಕ್ಷಿಸಿ:



ಸದ್ಯ ಈ ವಿಡಿಯೋ ಅನೇಕ ಬಳಕೆದಾರರ ಗಮನ ಸೆಳೆಯಿತು. ಕೆಲವರಿಗೆ ಆಟಿಕೆ ಹಸು ನೋಡಲು ಬಹಳ ಮುದ್ದಾಗಿತ್ತು. ಆಧುನಿಕ ಸಮಸ್ಯೆಗೆ, ಆಧುನಿಕ ಪರಿಹಾರ ಎಂದು ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ. ಹಸು ತುಂಬಾ ಮುದ್ದಾಗಿದೆ. ಅದು ಸಣ್ಣ ಹೆಜ್ಜೆಗಳೊಂದಿಗೆ ಚಲಿಸುವುದನ್ನು ನೋಡುತ್ತಿದ್ದರೆ ಬಹಳ ಸಂತೋಷವೆನಿಸುತ್ತದೆ ಎಂದು ಮತ್ತೊಬ್ಬ ಬಳಕೆದಾರ ಹೇಳಿದರು. ಆದರೆ, ಇತರ ಬಳಕೆದಾರರು ಈ ವಿಚಾರವನ್ನು ಟೀಕಿಸಿದರು. ಆಟಿಕೆ ಬಳಸುವುದರಿಂದ ಆಚರಣೆಯ ಮಹತ್ವ ಕಡಿಮೆಯಾಗುತ್ತದೆ ಎಂದು ಅವರು ಭಾವಿಸಿದರು. ನೀವು ನಿಮ್ಮ ಆಚರಣೆಗಳನ್ನು ತಿರುಚಲು ಸಾಧ್ಯವಾದರೆ ಆ ಆಚರಣೆ ಅರ್ಥಹೀನ. ಬದಲಿಗೆ ಪ್ರಾರ್ಥಿಸಿ ಎಂದು ಬಳತೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ.

21 ಕೋಟಿ ರೂ. ಮೌಲ್ಯದ ಕೋಣ ಹಠಾತ್‌ ಸಾವು

ರಾಜಸ್ಥಾನದಲ್ಲಿ ಆಯೋಜಿಸಿರುವ ಪುಷ್ಕರ್ ಜಾನುವಾರು ಮೇಳದ ಪ್ರಧಾನ ಆಕರ್ಷಣೆಯಾಗಿದ್ದ 21 ಕೋಟಿ ರೂ. ಮೌಲ್ಯದ ಕೋಣ ಹಠಾತ್‌ ಆಗಿ ಇತ್ತೀಚೆಗೆ ಸಾವನ್ನಪ್ಪಿದ್ದು, ಪ್ರಾಣಿಪ್ರುಯರು ಆಘಾತ ವ್ಯಕ್ತಪಡಿಸಿದ್ದಾರೆ. ಅನಾರೋಗ್ಯದಿಂದ ಈ ದುಬಾರಿ ಕೋಣ ಅಕ್ಟೋಬರ್‌ 31ರಂದು ಅಸುನೀಗಿದೆ. ಪ್ರತಿದಿನ ಭೇಟಿ ನೀಡುವ ಸಾವಿರಾರು ಮಂದಿಗೆ ಈ ಕೋಣ ಬಹಳ ಪ್ರಿಯವಾಗಿತ್ತು. ಆಯೋಜಕರು ನಿರ್ಲಕ್ಷ್ಯ ತೋರಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.