ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ವಂದೇ ಭಾರತ್‌ ರೈಲಿನ ಟಿಸಿ ಮೇಲೆ ಬಿತ್ತು ನೆಟ್ಟಿಗರ ಕಣ್ಣು; ಈತನನ್ನು ಕಂಡಿರಾ ಎಂದು ಪೋಸ್ಟ್‌, ಕಾರಣವೇನು?

Social Media Is Hunting: ರೈಲು ಟಿಕೆಟ್ ಕಲೆಕ್ಟರ್ (ಟಿಸಿ) ನ ವಿಡಿಯೊವೊಂದು ಇನ್‌ಸ್ಟಾಗ್ರಾಮ್‍ನಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ. ಆತನ ಸೌಂದರ್ಯಕ್ಕೆ ಹಲವರು ಮನಸೋತಿದ್ದಾರೆ. ಟಿಕೆಟ್ ಕಲೆಕ್ಟರ್ ಇಂಥವನೇ ಇದ್ದರೆ, ನಾನು ಪ್ರತಿದಿನ ರೈಲಿನಲ್ಲಿ ಪ್ರಯಾಣ ಮಾಡುತ್ತೇನೆ ಎಂದು ವಿಡಿಯೊದಲ್ಲಿ ಬರೆಯಲಾಗಿದೆ. ಸದ್ಯ, ನೆಟ್ಟಿಗರು ಈ ಬಗ್ಗೆ ಹಾಸ್ಯ ಚಟಾಕಿ ಹಾರಿಸಿದ್ದಾರೆ.

ಟಿಸಿ ಮೇಲೆ ಬಿತ್ತು ನೆಟ್ಟಿಗರ ಕಣ್ಣು; ಆಗಿದ್ದೇನು?

-

Priyanka P Priyanka P Sep 5, 2025 7:31 PM

ದೆಹಲಿ: ಸಾಮಾಜಿಕ ಮಾಧ್ಯಮದಲ್ಲಿ ಅನೇಕ ವಿಡಿಯೊಗಳು ವೈರಲ್ ಆಗುತ್ತಿರುತ್ತವೆ. ಇದೀಗ ಟಿಸಿಯ ವಿಡಿಯೊವೊಂದು ವೈರಲ್ (Viral Video) ಆಗುತ್ತಿದೆ. ಗಡ್ಡದಾರಿ ಟಿಕೆಟ್ ಕಲೆಕ್ಟರ್ (TC) ನ ವಿಡಿಯೊವೊಂದು ಇನ್‌ಸ್ಟಾಗ್ರಾಮ್‍ನಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ. ಆತನ ಸ್ನಿಗ್ಧ ಸೌಂದರ್ಯಕ್ಕೆ ಹಲವರು ಮನಸೋತಿದ್ದಾರೆ. ನೆಟ್ಟಿಗರು ಆತನ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಹುಡುಕಲು ಪ್ರಾರಂಭಿಸಿದ್ದಾರೆ.

ವಿಡಿಯೊದಲ್ಲಿ ಟಿಸಿಯು ರೈಲಿನ ಕೋಚ್ ಒಳಗೆ ನಡೆದುಕೊಂಡು ಹೋಗುತ್ತಿರುವುದನ್ನು ತೋರಿಸಲಾಗಿದೆ. ಯಾರೋ ತನ್ನನ್ನು ವಿಡಿಯೊ ಚಿತ್ರೀಕರಿಸುತ್ತಿದ್ದಾರೆ ಎಂದು ಅರಿಯದ ಟಿಸಿಯು ಟಿಕೆಟ್‌ಗಳನ್ನು ಪರಿಶೀಲಿಸುತ್ತಿರುವುದನ್ನು ತೋರಿಸುತ್ತದೆ. ಆದರೆ, ಒಬ್ಬ ಮಹಿಳೆ ಅವನ ಎದುರು ಕುಳಿತಿದ್ದಾಳೆ. ಟಿಸಿಯ ಸೌಂದರ್ಯವು ಅನೇಕರ ಮನಗೆದ್ದಿದೆ. ಟಿಕೆಟ್ ಕಲೆಕ್ಟರ್ ಇಂಥವನೇ ಇದ್ದರೆ, ನಾನು ಪ್ರತಿದಿನ ರೈಲಿನಲ್ಲಿ ಪ್ರಯಾಣ ಮಾಡುತ್ತೇನೆ ಎಂದು ವಿಡಿಯೊದಲ್ಲಿ ಬರೆಯಲಾಗಿದೆ.

ಈ ರೀಲ್ ಹಾಸ್ಯ, ಮೆಚ್ಚುಗೆ ಮತ್ತು ಕುತೂಹಲದಿಂದ ಕೂಡಿದ್ದು, ಕಾಮೆಂಟ್‌ಗಳ ಸುರಿಮಳೆಯನ್ನು ಹುಟ್ಟುಹಾಕಿದೆ. ಟಿಕೆಟ್ ಅನ್ನು ಕಿಟಕಿಯಿಂದ ಹೊರಗೆ ಎಸೆಯಿರಿ, ನಂತರ ಅವನು ನಿಮ್ಮನ್ನು ಹಿಡಿಯುತ್ತಾನೆ ಎಂದು ಬಳಕೆದಾರರೊಬ್ಬರು ತಮಾಷೆ ಮಾಡಿದ್ದಾರೆ. ಅವನು ಸರ್ಕಾರಿ ಉದ್ಯೋಗಿ, ಅವನಿಗೆ ತುಂಬಾ ಸುಂದರವಾದ ಹೆಂಡತಿ ಸಿಗುತ್ತಾಳೆ, ಅವನ ಬಗ್ಗೆ ಕನಸು ಕಾಣಬೇಡಿ ಎಂದು ಮತ್ತೊಬ್ಬರು ಹಾಸ್ಯ ಚಟಾಕಿ ಹಾರಿಸಿದ್ದಾರೆ.

ವಿಡಿಯೊ ವೀಕ್ಷಿಸಿ:

ಬೇರೊಬ್ಬರ ಸಹೋದರ, ಮಗ ಅಥವಾ ಬಾಯ್‌ಫ್ರೆಂಡ್ ಅನ್ನು ನೋಡಲು ನಿಮಗೆ ನಾಚಿಕೆಯಾಗುವುದಿಲ್ಲವೇ? ಅಂದಹಾಗೆ, ಈ ರೈಲು ಯಾವ ಮಾರ್ಗದಲ್ಲಿದೆ? ಎಂದು ಕೆಲವು ಬಳಕೆದಾರರು ಪ್ರಶ್ನಿಸಿದ್ದಾರೆ. ನನ್ನ ಬಳಿ ಟಿಕೆಟ್ ಇಲ್ಲ, ದಯವಿಟ್ಟು ನನ್ನನ್ನು ಹಿಡಿಯಿರಿ ಎಂದು ಮತ್ತೊಬ್ಬ ಬಳಕೆದಾರ ತಮಾಷೆ ಮಾಡಿದ್ದಾರೆ. ನನಗೆ ಟಿಸಿಯ ಬಗ್ಗೆ ಗೊತ್ತಿಗೆ. ಅವನಿಗೆ ಈಗಾಗಲೇ ಮದುವೆಯಾಗಿದ್ದಾನೆ ಎಂದು ಬಳಕೆದಾರರೊಬ್ಬರು ಸ್ಪಷ್ಟಪಡಿಸಿದ್ದಾರೆ.

ಆ ವ್ಯಕ್ತಿ ವೈರಲ್ ಆಗಿದ್ದಾನೆ, ಬಹುಶಃ ಅವನು ಪ್ರಸಿದ್ಧನಾಗಿದ್ದಾನೆಂದು ಅವನಿಗೆ ತಿಳಿದಿರಲಿಕ್ಕಿಲ್ಲ ಎಂದು ವ್ಯಕ್ತಿಯೊಬ್ಬರು ಕಾಮೆಂಟ್ ಮಾಡಿದರು. ಇದು ತುಂಬಾ ತಪ್ಪು, ರೈಲು ಸಂಖ್ಯೆ ಮತ್ತು ಮಾರ್ಗದ ವಿವರಗಳಿಲ್ಲದೆ ಈ ರೀಲ್ ಅನ್ನು ಪೋಸ್ಟ್ ಮಾಡುವುದು ಸರಿಯಲ್ಲ ಎಂದು ಕೆಲವರು ಲೇವಡಿ ಮಾಡಿದ್ದಾರೆ. ಇನ್ನೂ ಕೆಲವರು ಆತ ಯಾವ ರೈಲಿನಲ್ಲಿ ಟಿಸಿ ಆಗಿದ್ದಾನೆ ಎಂದು ಪರಿಶೀಲಿಸಬೇಕು. ಆ ರೈಲಿನಲ್ಲಿ ತಾವು ಪ್ರಯಾಣಿಸಬೇಕು ಎಂದು ಹಂಬಲ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Viral News: ಅಬ್ಬಾ... ಮಾನವ ಗಾತ್ರದ ಬಾವಲಿ! ವೈರಲಾಗ್ತಿರುವ ಈ ಫೋಟೋದ ಅಸಲಿಯತ್ತೇನು?

ಶತಾಬ್ದಿಯಿಂದ ವಂದೇ ಭಾರತ್‌ವರೆಗೆ, ಈ ಟಿಸಿಯು ಸಾಮಾಜಿಕ ಮಾಧ್ಯಮದಲ್ಲಿ ಹಲವರ ಮನಗೆದ್ದಿದ್ದಾರೆ. ಕೆಲವೊಮ್ಮೆ ಟಿಕೆಟ್ ಪರಿಶೀಲಿಸುವಂತಹ ಅಥವಾ ಇತರೆ ಯಾವುದೇ ಕೆಲಸ ಮಾಡುತ್ತಿರುವವರು ಯಾರಾದರೂ ರಾತ್ರೋರಾತ್ರಿ ಇಂಟರ್ನೆಟ್ ಸೆನ್ಸೇಷನ್ ಆಗಬಹುದು ಎಂದು ಸಾಬೀತುಪಡಿಸುತ್ತದೆ.