ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಪತ್ನಿಗೆ ಐಫೋನ್‌ ಕೊಡಿಸಲು ಚಿನ್ನವನ್ನೇ ಮಾರಿದ ಪತಿ; ಬೆಳಿಗ್ಗೆಯಿಂದಲೇ ಕ್ಯೂ!

ಭಾರತದಲ್ಲಿ ಆಪಲ್‌ನ ಹೊಸ iPhone 18 Pro ಸರಣಿಯ ಸ್ಮಾರ್ಟ್‌ಫೋನ್‌ಗಳ ಮಾರಾಟ ಇಂದಿನಿಂದ ಅಧಿಕೃತವಾಗಿ ಆರಂಭಗೊಂಡಿದ್ದು, ಪ್ರಮುಖ ನಗರಗಳ ಆ್ಯಪಲ್ ಸ್ಟೋರ್‌ಗಳ ಮುಂದೆ ಗ್ರಾಹಕರು ಗಂಟೆಗಟ್ಟಲೆ ಸರದಿ ಸಾಲಿನಲ್ಲಿ ನಿಂತು ಐಫೋನ್ ಕೊಳ್ಳಲು ಕಾಯುತ್ತಿದ್ದಾರೆ. ಈ ನಡುವೆ ನೋಯ್ಡಾದಲ್ಲಿ ದೆಹಲಿ ಮೂಲದ ವ್ಯಕ್ತಿಯೊಬ್ಬರು ತಮ್ಮ ಹೆಂಡತಿಗೆ ಹೊಸ ಐಫೋನ್ ಕೊಡಿಸಲು ಚಿನ್ನವನ್ನು ಮಾರಿರುವ ಘಟನೆ ನಡೆದಿದೆ. ಲಕ್ಷ ದಾಟಿ ಭಾರಿ ಬೆಲೆಯಿದ್ದರೂ ದೇಶಾದ್ಯಂತ ಆ್ಯಪಲ್ ಫೋನ್‌ಗಳಿಗಿರುವ ಕ್ರೇಜ್ ಮಾತ್ರ ಕಮ್ಮಿಯಾಗಿಲ್ಲ.

ಸಂಗ್ರಹ ಚಿತ್ರ

ನವದೆಹಲಿ: ಭಾರತದಲ್ಲಿ ಆ್ಯಪಲ್ ಸಂಸ್ಥೆಯ ಹೊಸ iPhone 18 Pro ಮತ್ತು iPhone 18 Pro Max ಸರಣಿಯ ಸ್ಮಾರ್ಟ್‌ಫೋನ್‌ಗಳ ಮಾರಾಟ ಅಧಿಕೃತವಾಗಿ ಆರಂಭಗೊಂಡಿದೆ. ಪ್ರತಿ ವರ್ಷದಂತೆ ಈ ಬಾರಿಯೂ ನೂತನ ಐಫೋನ್ ಖರೀದಿಗಾಗಿ ಗ್ರಾಹಕರಲ್ಲಿ ಭಾರಿ ಕ್ರೇಜ್ ಕಂಡುಬಂದಿದ್ದು, ಪ್ರಮುಖ ನಗರಗಳ ಆ್ಯಪಲ್ ಸ್ಟೋರ್‌ಗಳ ಮುಂದೆ ಬೆಳಿಗ್ಗೆಯಿಂದಲೇ ನೂರಾರು ಜನರು ಸರದಿ ಸಾಲಿನಲ್ಲಿ ನಿಂತು ಕಾಯುತ್ತಿದ್ದಾರೆ. ಈ ಮಧ್ಯೆ, ನೋಯ್ಡಾದ ಆ್ಯಪಲ್ ಸ್ಟೋರ್ ಹೊರಗಡೆ ನಡೆದ ಘಟನೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ವೈರಲ್ ಆಗಿದೆ. ದೆಹಲಿ ಮೂಲದ ವ್ಯಕ್ತಿಯೊಬ್ಬರು ತಮ್ಮ ಹೆಂಡತಿಗೆ ಹೊಸ ಐಫೋನ್ 18 ಪ್ರೊ ಕೊಡಿಸಲು ತಮ್ಮ ಬಳಿಯಿದ್ದ ಚಿನ್ನವನ್ನೇ ಮಾರಿ ಫೋನ್ ಖರೀದಿಸಲು ಬಂದಿರುವುದಾಗಿ ಹೇಳಿಕೊಂಡಿದ್ದಾರೆ.

ನೋಯ್ಡಾದ 'ಡಿಎಲ್‌ಎಫ್ ಮಾಲ್ ಆಫ್ ಇಂಡಿಯಾದಲ್ಲಿರುವ ಆ್ಯಪಲ್ ಸ್ಟೋರ್ ಹೊರಗಡೆ ಮುಂಜಾನೆ 8 ಗಂಟೆಗೂ ಮೊದಲೇ ಜನರು ಕ್ಯೂನಲ್ಲಿ ನಿಂತಿದ್ದರು. ಕ್ಯೂನಲ್ಲಿ ಮೊದಲ ಸಾಲಿನಲ್ಲಿ ನಿಂತಿದ್ದ ದೆಹಲಿಯ ವ್ಯಕ್ತಿಯೊಬ್ಬರು ಮಾತನಾಡಿ, "ನನ್ನ ಹೆಂಡತಿಗೆ ಹೊಸ ಐಫೋನ್ 18 ಪ್ರೊ ಬರ್ಗುಂಡಿ (Burgundy) ಬಣ್ಣದ್ದೇ ಬೇಕು ಎಂದಿದ್ದಳು. ಆಕೆ ಇದುವರೆಗೆ ಐಫೋನ್ ಬಳಸಿರಲಿಲ್ಲ. ಈ ಬಾರಿ ಫೋನ್ ಖರೀದಿಸಲು ನನ್ನ ಬಳಿ ಸಾಲುವಷ್ಟು ಹಣವಿರಲಿಲ್ಲ, ಹಾಗಾಗಿ ಮನೆಯಲ್ಲಿದ್ದ ಚಿನ್ನ ಮಾರಾಟ ಮಾಡಿ ಈ ಫೋನ್ ಕೊಳ್ಳಲು ಬಂದಿದ್ದೇನೆ," ಎಂದು ಹೇಳಿದರು.

ವಿಡಿಯೋ ನೋಡಿ



ಭಾವಿ ಪತ್ನಿಗೆ ಐಫೋನ್ 18 ಪ್ರೊ ಕೊಡಿಸಲು ಪಂಜಾಬ್‌ನಿಂದ ಬಂದ ಯುವಕ

ಕೇವಲ ದೆಹಲಿ ವ್ಯಕ್ತಿ ಮಾತ್ರವಲ್ಲದೆ, ಪಂಜಾಬ್‌ನಿಂದ ನೋಯ್ಡಾಗೆ ಬಂದಿದ್ದ ಗುರ್ದಿತಾ ಸಿಂಗ್ ಎಂಬ ಯುವಕ, ಮದುವೆಯಾಗಲಿರುವ ತಮ್ಮ ಭಾವಿ ಪತ್ನಿಗೆ ಉಡುಗೊರೆ ನೀಡಲು ಐಫೋನ್ 18 ಪ್ರೊ ಖರೀದಿಸಿದ್ದಾರೆ. ತಮ್ಮ ಹಾಗೂ ಭಾವಿ ಪತ್ನಿಯ ಫೋನ್‌ಗಳಿಗಾಗಿ ಒಟ್ಟು ₹3.5 ಲಕ್ಷ ಕೊಟ್ಟು ಖರೀದಿಸಿದ್ದೇನೆ ಎಂದು ಅವರು ತಿಳಿಸಿದರು.

ಜಲಪಾತದ ಬಳಿ ಮಗು ಎತ್ತಿಕೊಂಡಿದ್ದ ವ್ಯಕ್ತಿಯ ಮೇಲೆ ಬಿದ್ದ ಬೃಹತ್‌ ಕಾಳಿಂಗ ಸರ್ಪ; ಮೈ ಜುಂ ಎನಿಸುವ ವಿಡಿಯೊ ವೈರಲ್‌

ಬೆಲೆ ಹೆಚ್ಚಿದ್ದರೂ ತಗ್ಗದ ಆ್ಯಪಲ್ ಕ್ರೇಜ್

ಪ್ರತಿ ವರ್ಷಕ್ಕಿಂತ ಈ ಬಾರಿ ಐಫೋನ್ ಬೆಲೆಗಳು ಗಣನೀಯವಾಗಿ ಹೆಚ್ಚಾಗಿದ್ದರೂ, ಆ್ಯಪಲ್ ಪ್ರಿಯರು ಮಾತ್ರ ಫೋನ್ ಖರೀದಿಸಲು ಹಿಂದೆಮುಂದೆ ನೋಡುತ್ತಿಲ್ಲ. ಪ್ರಿ-ಆರ್ಡರ್ ಮಾಡಿದ ಗ್ರಾಹಕರಿಗೆ ಮಾತ್ರ ಇಂದು ಸ್ಟೋರ್ ಒಳಗೆ ಪ್ರವೇಶ ನೀಡಲಾಗುತ್ತಿದ್ದು, ನೇರವಾಗಿ ಬಂದ ಜನರಿಗೆ ಫೋನ್ ಖರೀದಿಸಲು ಅವಕಾಶ ನೀಡಲಿಲ್ಲ. ಭಾರತದಲ್ಲಿ iPhone 18 Pro ಆಧಾರಿತ ಸರಣಿಯ ಆರಂಭಿಕ ಬೆಲೆ ₹1,64,900 ರಷ್ಟಿದ್ದು, ಉನ್ನತ ಮಾದರಿಯ iPhone 18 Pro Max (2TB Variant) ಬೆಲೆ ಬರೋಬ್ಬರಿ ₹3,29,900 ರಷ್ಟಿದೆ.

Vishakha Bhat Heggar

View all posts by this author