ಜಲಪಾತದ ಬಳಿ ಮಗು ಎತ್ತಿಕೊಂಡಿದ್ದ ವ್ಯಕ್ತಿಯ ಮೇಲೆ ಬಿದ್ದ ಬೃಹತ್ ಕಾಳಿಂಗ ಸರ್ಪ; ಮೈ ಜುಂ ಎನಿಸುವ ವಿಡಿಯೊ ವೈರಲ್
Amboli waterfall: ಮಹಾರಾಷ್ಟ್ರದ ಪ್ರಸಿದ್ಧ ಅಂಬೋಲಿ ಜಲಪಾತಕ್ಕೆ ಪ್ರವಾಸ ಹೋಗಿದ್ದ ಕುಟುಂಬವೊಂದಕ್ಕೆ ಅಘಾತವೊಂದು ಎದುರಾಗಿದೆ. ವ್ಯಕ್ತಿಯೊಬ್ಬರು ಮಗುವನ್ನು ಕೈಯಲ್ಲಿ ಎತ್ತಿಕೊಂಡು ಜಲಪಾತದ ಸೌಂದರ್ಯ ಸವಿಯುತ್ತಿದ್ದಾಗ ಏಕಾಏಕಿ ದೈತ್ಯಾಕಾರದ ಹಾವೊಂದು ಅವರ ಹೆಗಲ ಮೇಲೆ ಬಿದ್ದಿದೆ. ಈ ಭಯಾನಕ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ.
ಅಂಬೋಲಿ ಜಲಪಾತದಲ್ಲಿ ಮಗು ಹಿಡಿದ ವ್ಯಕ್ತಿಯ ಮೇಲೆ ಬಿದ್ದ ಹಾವು -
ಮುಂಬೈ, ಸೆ. 17: ಪ್ರಕೃತಿ ಸೌಂದರ್ಯ ಸವಿಯಲು ಹೋಗುವ ಮುನ್ನ ಕೆಲವೊಂದು ಮುನ್ನೆಚ್ಚರಿಕೆಯನ್ನು ಕೈಗೊಳ್ಳುವುದು ಅಗತ್ಯ. ಇದಕ್ಕೆ ಸಾಕ್ಷಿ ಎನ್ನುವಂತೆ ಮಹಾರಾಷ್ಟ್ರದ ಪ್ರಸಿದ್ಧ ಅಂಬೋಲಿ ಜಲಪಾತಕ್ಕೆ ಪ್ರವಾಸ ಹೋಗಿದ್ದ ಕುಟುಂಬವೊಂದಕ್ಕೆ ಜೀವನದಲ್ಲೇ ಮರೆಯಲಾಗದಂತಹ ಘಟನೆ ನಡೆದಿದೆ. ವ್ಯಕ್ತಿಯೊಬ್ಬರು ಚಿಕ್ಕ ಮಗುವನ್ನು ಕೈಯಲ್ಲಿ ಎತ್ತಿಕೊಂಡು ಜಲಪಾತದ ಸೌಂದರ್ಯವನ್ನು ವೀಕ್ಷಿಸುತ್ತಿದ್ದಾಗ ಏಕಾಏಕಿ ದೈತ್ಯಾಕಾರದ ಹಾವೊಂದು ಅವರ ಹೆಗಲ ಮೇಲೆ ಬಿದ್ದಿದೆ. ಈ ಭಯಾನಕ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ (Viral News) ಆಗುತ್ತಿದೆ.
ಜಲಪಾತ ವಿಹಾರಕ್ಕೆ ಹೋದ ಸಂದರ್ಭದಲ್ಲಿ ದೊಡ್ಡ ಹಾವೊಂದು ಇದ್ದಕ್ಕಿದ್ದಂತೆ ಬಂಡೆಯ ಮೇಲಿನಿಂದ ಮಗುವನ್ನು ಹಿಡಿದಿದ್ದ ವ್ಯಕ್ತಿಯ ಹೆಗಲ ಮೇಲೆ ಬಿದ್ದಿದೆ. ಸದ್ಯ ಈ ವಿಡಿಯೊ ನೋಡಿ ಅನೇಕರು ಬೆಚ್ಚಿ ಬಿದ್ದಿದ್ದಾರೆ.
ವಿಡಿಯೊ ನೋಡಿ:
Snake Falls From Above at Amboli Waterfall, Narrowly Missing Child in Viral Video
— Digital Prime News (@DigiPrimeNews) September 14, 2026
A video from Amboli waterfall in Maharashtra has gone viral after a snake suddenly fell from above, landing very close to a man carrying a small child, sending visitors into a screaming panic.… pic.twitter.com/L2MEModOkV
ವೈರಲ್ ಆದ ವಿಡಿಯೊದಲ್ಲಿ ಕುಟುಂಬವು ಧುಮ್ಮಿಕ್ಕುವ ಜಲಪಾತದ ಬಂಡೆಗಳ ಸುತ್ತಲೂ ಒಟ್ಟುಗೂಡಿರುವುದನ್ನು ಕಾಣಬಹುದು. ಕೆಲವರು ಕುಳಿತಿದ್ದರೆ ಇನ್ನೂ ಕೆಲವರು ನಿಂತು ಜಲಪಾತದ ದೃಶ್ಯ ಆನಂದಿಸುತ್ತಿದ್ದರು. ಆದರೆ ಸ್ವಲ ಸಮಯದಲ್ಲಿ ಭಯಾನಕ ಘಟನೆ ನಡೆದಿದೆ. ಮೇಲಿನ ಬಂಡೆಗಳಿಂದ ದೊಡ್ಡ ಹಾವೊಂದು ಮಗುವನ್ನು ಹಿಡಿದಿದ್ದ ವ್ಯಕ್ತಿಯ ಮೇಲೆ ಬಿದ್ದಿದೆ.
20 ಅಡಿ ಎತ್ತರದ ಫ್ಲೈಓವರ್ ನಡುವೆ ಸಿಲುಕಿದ ಕಾರ್! ಚಾಲಕ ಪವಾಡ ಸದೃಶ ಪಾರು
ಕೂದಲೆಳೆ ಅಂತರದಲ್ಲಿ ಅವಘಡ ತಪ್ಪಿದೆ. ಹಾವು ಬೀಳುತ್ತಿದ್ದಂತೆ ಸುತ್ತಮುತ್ತಲಿದ್ದ ಪ್ರವಾಸಿಗರು ಕಿರುಚಾಡುತ್ತಾ ದೂರ ಓಡಿದ್ದಾರೆ. ಮಗು ಹಿಡಿದಿದ್ದ ವ್ಯಕ್ತಿಯೂ ಭಯಪಟ್ಟಿದ್ದರೂ ಚೇತರಿಸಿಕೊಂಡು ನಿಂತಿದ್ದಾರೆ. ವಿಡಿಯೋದ ಕೊನೆಯ ಭಾಗದಲ್ಲಿ ಜಲಪಾತದ ಹರಿವಿನ ಬಂಡೆಗಳ ನಡುವೆ ಜನರು ಹಾವನ್ನು ಹುಡುಕಲು ಯತ್ನಿಸುತ್ತಿರುವುದು ಕಂಡು ಬಂದಿದೆ. ವಿಡಿಯೊ ಮಾಡುತ್ತಿದ್ದ ವ್ಯಕ್ತಿ ಇದು ತುಂಬಾ ದೊಡ್ಡ ಕಾಳಿಂಗ ಸರ್ಪ ಎಂದು ಕಿರುಚುತ್ತಿರುವುದು ಕೇಳಿಸುತ್ತಿದೆ.