ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಮಹಿಳಾ ಉದ್ಯೋಗಿಗಳಿಗೆ ವಿಶೇಷ ಗಿಫ್ಟ್ , ಪುರುಷರಿಗೆ ಕೇವಲ ಮೋಮೊಸ್‌: ಕೆಲಸಕ್ಕೆ ರಾಜೀನಾಮೆ ನೀಡಿದ ಯುವಕ!

Viral Video: ಇಲ್ಲೊಬ್ಬ ವ್ಯಕ್ತಿ ಪುರುಷ ಹಾಗೂ ಮಹಿಳಾ ಉದ್ಯೋಗಿಗಳಿಗೆ ಕಂಪನಿ ತಾರತಮ್ಯ ಮಾಡಿದೆ ಎನ್ನುವ ಕಾರಣಕ್ಕೆ ಕೆಲಸ ತೊರೆದಿದ್ದಾರೆ. ತನ್ನ ಕಚೇರಿಯಲ್ಲಿ ಪುರುಷರು ಮತ್ತು ಮಹಿಳೆಯರನ್ನು ವಿಭಿನ್ನವಾಗಿ ನಡೆಸಿಕೊಳ್ಳುತ್ತಿರುವುದರಿಂದ ರಾಜೀನಾಮೆ ನೀಡಲು ಬಯಸಿದ್ದೇನೆ ಎಂದು ಯುವಕ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ. ಸದ್ಯ ಈ ಸುದ್ದಿ ಭಾರಿ ಚರ್ಚೆಗೆ ಕಾರಣವಾಗಿದೆ.

ಕೆಲಸದ ಸ್ಥಳದಲ್ಲಿ ತಾರತಮ್ಯ -ರಾಜೀನಾಮೆ ನೀಡಿದ ಯುವಕ

ದೆಹಲಿ, ಮೇ 1: ಕೆಲಸದ ಒತ್ತಡ, ಕಡಿಮೆ ವೇತನ ಹೀಗೆ ನಾನಾ ಕಾರಣಗಳಿಗೆ ಕೆಲಸ ತೊರೆಯುವುದನ್ನು ನೀವು ಗಮನಿಸಿರಬಹುದು. ಆದರೆ ಇಲ್ಲೊಬ್ಬ ಯುವಕ ಪುರುಷ ಹಾಗೂ ಮಹಿಳಾ ಉದ್ಯೋಗಿಗಳಿಗೆ ಕಂಪನಿ ತಾರತಮ್ಯ ಮಾಡುತ್ತಿದೆ ಎನ್ನುವ ಕಾರಣಕ್ಕೆ ಕೆಲಸ ತೊರೆದಿದ್ದಾರೆ. ತನ್ನ ಕಚೇರಿಯಲ್ಲಿ ಪುರುಷರು ಮತ್ತು ಮಹಿಳೆಯರನ್ನು ವಿಭಿನ್ನವಾಗಿ ನಡೆಸಿಕೊಳ್ಳುತ್ತಿರುವುದರಿಂದ ರಾಜೀನಾಮೆ ನೀಡಲು ಬಯಸಿದ್ದೇನೆ ಎಂದು ವ್ಯಕ್ತಿ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ. ಸದ್ಯ ಈ ಸುದ್ದಿ (Viral News) ಭಾರಿ ಚರ್ಚೆಗೆ ಗ್ರಾಸವಾಗಿದೆ.

ಉದ್ಯೋಗಿಯು ಕೆಲಸದ ಸ್ಥಳದಲ್ಲಿ ಅಸಮಾನತೆ ತಾಂಡವವಾಡುತ್ತಿದೆ ಎಂದು ದೂರಿದ್ದಾರೆ. ದೆಹಲಿಯ ಕಂಪನಿಯೊಂದರಲ್ಲಿ ಉದ್ಯೋಗ ಮಾಡುತ್ತಿದ್ದ ಯುವಕ ಎಚ್‌ಅರ್ ತಂಡವು ಲಿಂಗ ತಾರತಮ್ಯ ಮಾಡುತ್ತಿದೆ. ಮಹಿಳಾ ದಿನದ ಅಂಗವಾಗಿ ಅವರನ್ನು ಗೌರವಯುತ ವಾಗಿ ನಡೆಸಿ ಕೊಟ್ಟಿದ್ದು ಸಿಬ್ಬಂದಿಗೆ ದುಬಾರಿ ಉಡುಗೊರೆಗಳನ್ನು ನೀಡಿದೆ. ಮಹಿಳಾ ದಿನಾಚರಣೆಗೆ ಸ್ವಲ್ಪ ದಿನಗಳ ಮೊದಲೇ ಕಚೇರಿಯನ್ನು ಅಲಂಕರಿಸಲಾಗಿತ್ತು. ಆದರೆ ಪುರುಷ ಉದ್ಯೋಗಿಗಳಿಗೆ ಗೌರವ ಸಿಗುತ್ತಿಲ್ಲ ಎಂದು ಹೇಳಿದ್ದಾರೆ.

ವಿಡಿಯೊ ನೋಡಿ:



ಅಲ್ಲದೆ ಮಹಿಳೆಯ ದಿನದಂದು ಮಹಿಳಾ ಉದ್ಯೋಗಿಗಳಿಗೆ ದುಬಾರಿ ಸ್ಕೀನ್ ಪ್ರಾಡಕ್ಟ್ ಹಾಗೂ ಕೈ ಬರಹದ ಕಾರ್ಡ್ ನೀಡಲಾಗಿತ್ತು. ಅದೇ ಪುರುಷರ ದಿನವನನು ಕೇವಲ ಲೆಕ್ಕ ಭರ್ತಿಗಾಗಿ ಆಚರಣೆ ಮಾಡಲಾಗಿದ್ದು, ಒಂದು ಕಾರ್ಡ್ ಹಾಗೂ ತಿನ್ನಲು ಸ್ನ್ಯಾಕ್ಸ್ ಆಗಿ ಮೋಮೊಸ್ ಕೊಟ್ಟು ಕೈ ತೊಳೆಯಲಾಗಿದೆ. ಇಲ್ಲಿಯೂ ತಮ್ಮನ್ನು ನಡೆಸಿಕೊಂಡ ರೀತಿ ಬಹಳನೇ ನೋವುಂಟು ಮಾಡಿದೆ ಎಂದು ಅಕ್ರೋಶ ಹೊರ ಹಾಕಿದ್ದಾರೆ. ಶೀರ್ಷಿಕೆಯಲ್ಲಿ, "ನಿಮ್ಮ ಕಂಪನಿ ಪುರುಷರನ್ನು ಕೆಟ್ಟದಾಗಿ ನಡೆಸಿಕೊಂಡರೆ ನೀವು ರಾಜೀನಾಮೆ ನೀಡುತ್ತೀರಾ?" ಎಂದು ಬರೆಯಲಾಗಿದೆ.

5 ನಿಮಿಷ ಅಪ್ಪಿಕೊಳ್ಳಿ... 600 ರೂ. ಪೇ ಮಾಡಿ! ಏನಿದು ಹೊಸ ಟ್ರೆಂಡ್‌?

ಈ ಬಗ್ಗೆ ಬಳಕೆದಾರರು ಮಿಶ್ರ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಕೆಲವರು ಉದ್ಯೋಗಿಯನ್ನು ಬೆಂಬಲಿಸಿದ್ದು, ಕಂಪನಿಗಳು ಎಲ್ಲ ಕಾರ್ಮಿಕರನ್ನು ಸರಿಯಾಗಿ ನಡೆಸಿಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ. ನೆಟ್ಟಿಗರೊಬ್ಬರು, ʼʼಭವಿಷ್ಯದಲ್ಲಿ ನಾನು ಈ ತಾರತಮ್ಯವನ್ನು ಎದುರಿಸಿದರೆ ರಾಜೀನಾಮೆ ನೀಡಲು ಹಿಂಜರಿಯುವುದಿಲ್ಲʼʼ ಎಂದು ಬರೆದಿದ್ದಾರೆ. ಮತ್ತೊಬ್ಬರು, ʼʼಕೆಲವು ಕಚೇರಿಗಳು ಮಹಿಳಾ ಉದ್ಯೋಗಿಗಳಿಗೆ ಮಾತ್ರ ವಿಶೇಷ ಪಾರ್ಕಿಂಗ್ ವ್ಯವಸ್ಥೆ ಜಾರಿಗೊಳಿಸಿದೆʼʼ ಎಂದು ಬರೆದುಕೊಂಡಿದ್ದಾರೆ. ಇನ್ನು ಕೆಲವರು ಕೇವಲ ಉಡುಗೊರೆ ವಿಚಾರವಾಗಿ ಕೆಲಸ ತೆರೆಯುವುದು ತಪ್ಪು ಎಂದು ಹೇಳಿದ್ದಾರೆ.