ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ತಾಜ್ ಮಹಲ್ ಎದುರು ಶಿವ ಸ್ತೋತ್ರ ಪಠಿಸಿದ ಯುವತಿ; ವಿಡಿಯೋ ನೋಡಿ

Viral Video: ಆಗ್ರಾದ ತಾಜ್ ಮಹಲ್ ನೋಡಲು ಯುವ ಕಥೆಗಾರ್ತಿ ಲಕ್ಷ್ಮೀ ಅವರು ಇತ್ತೀಚೆಗಷ್ಟೇ ಭೇಟಿ ನೀಡಿದ್ದಾರೆ. ಅಲ್ಲಿ ತಾಜ್ ಮಹಲ್ ಸೌಂದರ್ಯದ ಬಗ್ಗೆ ಅವರು ಮಾತನಾಡಿದ್ದು ಶಿವ ತಾಂಡವ ಸ್ತೋತ್ರ ಕೂಡ ಪಠಿಸಿದ್ದಾರೆ. ಈ ವಿಡಿಯೋವನ್ನು ಅವರು ತಮ್ಮ ಟ್ವಿಟ್ಟರ್ ಎಕ್ಸ್ ನಲ್ಲಿ ಶೇರ್ ಮಾಡಿ ಕೊಂಡಿ ದ್ದಾರೆ. ಅಮೃತಶಿಲೆಯ ಸ್ಮಾರಕದ ಎದುರು ಶಿವನ ಶ್ಲೋಕಗಳನ್ನು ಪಠಿಸುತ್ತಿರುವ ವಿಡಿಯೋ ನೆಟ್ಟಿಗರ ಗಮನ ಸೆಳೆಯುತ್ತಿದೆ.

ತಾಜ್ ಮಹಲ್ ಎದುರು ಶಿವ ಸ್ತೋತ್ರ ಪಠಿಸಿದ್ದ ಮಹಿಳೆ

ನವದೆಹಲಿ: ಪ್ರಪಂಚದ 7ಅದ್ಭುತಗಳಲ್ಲಿ ಆಗ್ರದ ತಾಜ್ ಮಹಲ್ (Taj Mahal) ಕೂಡ ಒಂದು. ಮೊಘಲ್ ಚಕ್ರವರ್ತಿ ಷಹಜಹಾನ್ ತನ್ನ ಹೆಂಡತಿ ಮುಮ್ತಾಜ್‌ಗೆ (Mumtaz) ಪ್ರೀತಿಯ ಸಂಕೇತವಾಗಿ ಅಮೃತಶಿಲೆಯಿಂದ ಇದನ್ನು ನಿರ್ಮಿಸಿದ್ದಾನೆ. ಇಸ್ಲಾಮಿಕ್, ಪರ್ಷಿಯನ್ ಮತ್ತು ಭಾರತೀಯ ವಾಸ್ತು ಶಿಲ್ಪದ ಸೌಂದರ್ಯಕ್ಕೆ ಸಾಕ್ಷಿಯಾದ ತಾಜ್ ಅನ್ನು ನೋಡಲು ವಿಶ್ವಾದ್ಯಂತ ಪ್ರವಾಸಿಗರು ಭೇಟಿ ನೀಡುತ್ತಿರುತ್ತಾರೆ. ಅಂತೆಯೇ ಆಗ್ರಾದ ತಾಜ್ ಮಹಲ್ ನೋಡಲು ಯುವ ಕಥೆಗಾರ್ತಿ ಲಕ್ಷ್ಮೀ ಅವರು ಇತ್ತೀಚೆಗಷ್ಟೇ ಭೇಟಿ ನೀಡಿದ್ದಾರೆ. ಅಲ್ಲಿ ತಾಜ್ ಮಹಲ್ ಸೌಂದರ್ಯದ ಬಗ್ಗೆ ಅವರು ಮಾತನಾಡಿದ್ದು ಶಿವ ತಾಂಡವ ಸ್ತೋತ್ರ ಕೂಡ ಪಠಿಸಿದ್ದಾರೆ. ಈ ವಿಡಿಯೋವನ್ನು ಅವರು ತಮ್ಮ ಟ್ವಿಟ್ಟರ್ ಎಕ್ಸ್ ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಅಮೃತಶಿಲೆಯ ಸ್ಮಾರಕದ ಎದುರು ಶಿವನ ಶ್ಲೋಕಗಳನ್ನು ಪಠಿಸುತ್ತಿರುವ ವಿಡಿಯೋ ನೆಟ್ಟಿಗರ ಗಮನ ಸೆಳೆಯುತ್ತಿದೆ.

ವೈರಲ್ ಆದ ವಿಡಿಯೋದಲ್ಲಿ (Viral Video) ಲಕ್ಷ್ಮೀ ಅವರು ತಾಜ್ ಮಹಲ್ ಬಗ್ಗೆ ಮಾತನಾಡಿ, ಇದು ಯಾವ ರೀತಿಯ ಸಮಾಧಿ ಎಂದು ನನಗೆ ಅರ್ಥವಾಗುತ್ತಿಲ್ಲ. ಒಳಗಡೆ ಕಮಲದ ಹೂವು ಗಳನ್ನು ಕೆತ್ತಲಾಗಿದೆ, ಅದರ ಹತ್ತಿರದಲ್ಲಿ ಒಂದು ನದಿ ಇದೆ ಎಂದು ಹೇಳುವುದನ್ನು ವಿಡಿಯೋದಲ್ಲಿ ಕಾಣಬಹುದು. ಬಳಿಕ ಅದೇ ತಾಜ್ ಮಹಲ್ ಅನ್ನು ಅವರು ತೇಜೋ ಮಹಾಲಯ (Tejomahalaya) ಎಂದು ಉಲ್ಲೇಖಿಸಿದ್ದಾರೆ. ಈ ಮೂಲಕ ಇದು ಶಿವನ ದೇವಾಲಯ ಎಂದು ಅವರು ಬಹಿರಂಗವಾಗಿ ಹೇಳಿಕೊಂಡಿದ್ದಾರೆ‌. ಅವರ ಮಾತುಗಳ ಈ ವಿಡಿಯೋ ಸದ್ಯ ಸೋಶಿಯಲ್ ಮಿಡಿಯಾದಲ್ಲಿ ಸಂಚಲನ ಉಂಟು ಮಾಡಿದೆ.

ವೈರಲ್ ವಿಡಿಯೋ ಇಲ್ಲಿದೆ:



ಅಕ್ಟೋಬರ್ 31 ಬಿಡುಗಡೆಯಾದ 'ದಿ ತಾಜ್ ಸ್ಟೋರಿ' ಸಿನಿಮಾ ಬಗ್ಗೆ ಲಕ್ಷ್ಮೀ ಅವರು ಮಾತ ನಾಡಿದ್ದಾರೆ. ಅನಂತರ ಚಿತ್ರ ವೀಕ್ಷಿಸಿದ್ದ ಬಳಿಕ ಇದಕ್ಕೂ ಹಿಂದೆಯೇ ತಾನು ಭೇಟಿ ಮಾಡಿದ್ದಾಗ ಕಂಡ ಕೆಲವು ಸಂಗತಿಗಳು, ತಮ್ಮ ಅನುಭವಕ್ಕೆ ಬಂದ ವಿಚಾರದ ಬಗ್ಗೆಯೂ ಅವರು ಮಾತ ನಾಡಿದ್ದಾರೆ. ನೀವೆಲ್ಲರೂ ಸಾಧ್ಯವಾದಷ್ಟು ಹೆಚ್ಚಾಗಿ ದಿ ತಾಜ್ ಸ್ಟೋರಿ ನೋಡಬೇಕು. ಇದರ ಇತಿಹಾಸವನ್ನು ನೀವು ತಿಳಿಯಬೇಕು ಎಂದು ಅವರು ಹೇಳಿದ್ದಾರೆ.

ಇಂದು ನಾವು ನೋಡುತ್ತಿರುವ ತಾಜ್ ಮಹಲ್ ಒಂದು ಕಾಲದಲ್ಲಿ ತೇಜೋಮಹಾಲಯವಾಗಿತ್ತು. ಈ ಸತ್ಯವು ಒಂದು ದಿನ ಖಂಡಿತವಾಗಿಯೂ ಬಹಿರಂಗಗೊಳ್ಳುತ್ತದೆ. ನನ್ನ ಜನ್ಮದಿನದಂದು ತೇಜೋ ಮಹಾಲಯಕ್ಕೆ ನಾನು ಭೇಟಿ ನೀಡಿರುವೆ. ನಾನು ನನ್ನ ಜೀವನದಲ್ಲಿ ಮೊದಲ ಬಾರಿಗೆ ಇಲ್ಲಿಗೆ ಭೇಟಿ ನೀಡಿದ್ದು ಭೋಲೆನಾಥ್ (ಶಿವ) ನನ್ನನ್ನು ಆಶೀರ್ವದಿಸಿದ್ದಾರೆ ಎಂಬಂತೆ ಫೀಲ್ ಆಯಿತು ಎಂದು ಹೇಳಿದ್ದ ಪೋಸ್ಟ್ ಅನ್ನು ಟ್ವಿಟ್ಟರ್ ಎಕ್ಸ್ ನಲ್ಲಿ ಹಂಚಿಕೊಂಡಿದ್ದಾರೆ. ಈ ಮೂಲಕ ತಾಜ್ ಮಹಲ್ ಅನ್ನು 'ತೇಜೋ ಮಹಾಲಯ' ಎಂದು ಅವರು ಪ್ರತಿಪಾದಿಸಿದ್ದಾರೆ.

ಇದನ್ನು ಓದಿ:Viral Video: ನಡುರಸ್ತೆಯಲ್ಲಿ ಆಟೋ ಚಾಲಕನ ಜೊತೆ ಯೂಟ್ಯೂಬರ್‌ ಸಹೋದರಿಯರ ಬಿಗ್‌ ಫೈಟಿಂಗ್‌!

ಬಳಿಕ ಶಿವನ ಸ್ತೋತ್ರ ಪಠಿಸಿದ್ದು ಹರ್ ಹರ್ ಮಹಾದೇವ್ ಎಂದು ಹೇಳುವ ಮೂಲಕ ಈ ವಿಡಿಯೋ ಕೊನೆಗೊಂಡಿದೆ. ಈ ವಿಡಿಯೋವನ್ನು ಕಳೆದ ತಿಂಗಳು ರೆಕಾರ್ಡ್ ಮಾಡಿದ್ದೆ, ಆದರೆ ಆರೋಗ್ಯ ಸಮಸ್ಯೆಗಳಿಂದಾಗಿ ಅದನ್ನು ಹಂಚಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಲಕ್ಷ್ಮೀ ಹೇಳಿ ದ್ದಾರೆ. ತಾಜ್ ಮಹಲ್ ಕುರಿತಾದ ಪರ ವಿರೋಧ ಚರ್ಚೆಗಳು ನಡೆಯುತ್ತಿರುವುದು ಇದೇ ಮೊದ ಲೇನಲ್ಲ. ಈ ಹಿಂದೆಯೇ ತಾಜ್ ಎನ್ನುವುದು ಶಿವನಿಗೆ ಅರ್ಪಿತವಾದ ಹಿಂದೂ ದೇವಾಲಯ ವಾಗಿದ್ದು, 4 ನೇ ಶತಮಾನದಲ್ಲಿ ರಾಜ ಪರಮರ್ದಿ ದೇವ್ ನಿರ್ಮಿಸಿದ್ದಾನೆ. ಬಳಿಕ ಅದನ್ನು ಷಹಜಹಾನ್ ತನ್ನ ವಶಕ್ಕೆ ತೆಗೆದುಕೊಂಡು ಸಮಾಧಿಯನ್ನಾಗಿ ಪರಿವರ್ತಿಸಿದನು ಎಂದು ಇತಿಹಾಸ ಕಾರ ಪಿ.ಎನ್. ಓಕ್ ಅವರು ತಿಳಿಸಿದ್ದ ಉಲ್ಲೇಖಿಸಿದ್ದಾರೆ. ಓಕ್ ಅವರು 2000 ರಲ್ಲಿ ತಾಜ್ ಮಹಲ್ ನ ಸಾಂಸ್ಕೃತಿಕ ಪರಂಪರೆಯನ್ನು ಪುನಃ ಸ್ಥಾಪಿಸುವ ಬಗ್ಗೆ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದರು, ಆದರೆ ಅವರ ಅರ್ಜಿಯನ್ನು ಯಾವುದೆ ಪುರಾವೆ ಇಲ್ಲ ಎಂಬರ್ಥದಲ್ಲಿ ವಜಾಗೊಳಿಸಲಾಯಿತು. ಬಳಿಕ 2024ರಲ್ಲಿ ಕೂಡ ಯೋಗಿ ಯುವ ಬ್ರಿಗೇಡ್ ರಾಜ್ಯ ಅಧ್ಯಕ್ಷ ಕುನ್ವರ್ ಅಜಯ್ ತೋಮರ್ ಆಗ್ರಾ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದು ಈಗಲೂ ಈ ವಿಚಾರಣೆ ನಡೆಯುತ್ತಲೇ ಇದೆ. ಈ ಪ್ರಕರಣದ ಮುಂದಿನ ವಿಚಾರಣೆಯನ್ನು ನವೆಂಬರ್ 27 ಕ್ಕೆ ನಿಗದಿಪಡಿಸಲಾಗಿದೆ.