ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ನಡುರಸ್ತೆಯಲ್ಲಿ ಆಟೋ ಚಾಲಕನ ಜೊತೆ ಯೂಟ್ಯೂಬರ್‌ ಸಹೋದರಿಯರ ಬಿಗ್‌ ಫೈಟಿಂಗ್‌!

YouTubers Fighting With Auto: ಯೂಟ್ಯೂಬ್‌ ಬ್ಲಾಗರ್ಸ್ ಗಳಾದ ಮೆಹಕ್ ಮತ್ತು ಪಾರಿ ಅವರು ಆಟೋರಿಕ್ಷಾ ಚಾಲಕ ನೊಂದಿಗೆ ಜಗಳವಾಡಿದ್ದ ಘಟನೆ ದೆಹಲಿ ಮೊರಾದಾಬಾದ್‌ ನಲ್ಲಿ ನಡೆದಿದೆ. ಇಬ್ಬರು ಸೇರಿಕೊಂಡು ಆಟೋ ಚಾಲಕನಿಗೆ ಬೈಯುತ್ತಿದ್ದುಆತನು ಕೂಡ ಇಬ್ಬರ ಬಳಿ ವಾಗ್ವಾದ ಮಾಡಿದ್ದ ದೃಶ್ಯಗಳು ಸದ್ಯ ಸೋಶಿಯಲ್ ‌ಮಿಡಿಯಾದಲ್ಲಿ ವೈರಲ್ ಆಗುತ್ತಿದೆ. ಇವರಿಬ್ಬರು ಮತ್ತು ಆಟೋ ಚಾಲಕನ ನಡುವೆ ಮೊದಲು ಮಾತಿನ ಚಕಮಕಿ ಏರ್ಪಟ್ಟಿತ್ತು. ಬಳಿಕ ಇದ್ದಕ್ಕಿದ್ದಂತೆ ದೈಹಿಕ ಹಲ್ಲೆ ಮಾಡುವ ಜೊತೆಗೆ ಪರಸ್ಪರ ನಿಂದಿಸಲು ಆರಂಭಮಾಡಿದ್ದಾರೆ.

ನಡುರಸ್ತೆಯಲ್ಲಿ ಯೂಟ್ಯೂಬರ್ಸ್‌ ರಂಪಾಟ! ವಿಡಿಯೊ ನೋಡಿ

ಆಟೋ ಚಾಲಕನ ಜೊತೆ ಯೂಟ್ಯೂಬರ್‌ ಸಹೋದರಿಯರ ಗಲಾಟೆ -

Profile Pushpa Kumari Nov 6, 2025 1:37 PM

ನವದೆಹಲಿ: ಇತ್ತೀಚಿನ ದಿನದಲ್ಲಿ ಸೋಶಿಯಲ್ ಮಿಡಿಯಾದಲ್ಲಿ ಫೇಮಸ್ ಆಗಬೇಕು ಎಂಬ ಕಾರಣಕ್ಕೆ ಅನೇಕರು ಯೂಟ್ಯೂಬ್ ಛಾನೆಲ್ ಮಾಡಿ ವಿಡಿಯೊ ಹಂಚಿಕೊಳ್ಳುತ್ತಾರೆ. ಇದರಲ್ಲಿ ಕೆಲವರು ವಿಡಿಯೊ ಮೂಲಕ ತಮ್ಮ ಟ್ಯಾಲೆಂಟ್‌ ಅನ್ನು ತೋರ್ಪಡಿಸಿದರೆ ಇನ್ನು ಕೆಲವೊಂದು ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ರೂಪಿಸಲಾಗುತ್ತದೆ. ಅದೇ ರೀತಿ ಜಗಳ , ಮನಸ್ಥಾಪ , ಸ್ಪಷ್ಟನೆ ನೀಡುವ , ಟ್ರೋಲ್ ಮಾಡುವ ವಿಡಿಯೋಗಳು ಕೂಡ ಆಗಾಗ ಹೈಲೈಟ್ ಆಗುತ್ತಿರುತ್ತದೆ‌‌. ಅಂತೆಯೇ ಈ ಬಾರಿ ಯೂಟ್ಯೂಬ್‌ ಬ್ಲಾಗರ್‌ಗಳಾದ ಮೆಹಕ್ ಮತ್ತು ಪಾರಿ ಅವರು ಆಟೋರಿಕ್ಷಾ ಚಾಲಕನೊಂದಿಗೆ ಜಗಳವಾಡಿದ್ದ ಘಟನೆ ದೆಹಲಿ ಮೊರಾದಾಬಾದ್‌ (Delhi Road in Moradabad)ನಲ್ಲಿ ನಡೆದಿದೆ. ಇಬ್ಬರು ಸೇರಿಕೊಂಡು ಆಟೋ ಚಾಲಕನಿಗೆ ಬೈಯುತ್ತಿದ್ದು ಆತನು ಕೂಡ ಇಬ್ಬರ ಬಳಿ ವಾಗ್ವಾದ ಮಾಡಿದ್ದ ದೃಶ್ಯಗಳು ಸದ್ಯ ಸೋಶಿಯಲ್ ‌ಮಿಡಿಯಾದಲ್ಲಿ ವೈರಲ್ (Viral Video) ಆಗುತ್ತಿದೆ.

ವೈರಲ್ ಆದ ವಿಡಿಯೋದಲ್ಲಿ ಯೂಟ್ಯೂಬರ್ ಗಳಾದ ಮೆಹಕ್ ಮತ್ತು ಪಾರಿ ಆಟೋರಿಕ್ಷಾ ಚಾಲಕನೊಂದಿಗೆ ಜಗಳವಾಡಿದ್ದ ದೃಶ್ಯಗಳು ಮೊಬೈಲ್ ನಲ್ಲಿ ರೆಕಾರ್ಡ್ ಮಾಡಲಾಗಿದೆ‌. 36 ಸೆಕೆಂಡು ಗಳ ಈ ವಿಡಿಯೋ ಕ್ಲಿಪ್‌ನಲ್ಲಿ ಇವರಿಬ್ಬರು ಮತ್ತು ಚಾಲಕ ಪರಸ್ಪರ ಹೊಡೆದಾಡಿ ಕೊಂಡು ನಿಂದಿಸುತ್ತಿರುವುದನ್ನು ಕಾಣಬಹುದು. ಇದನ್ನು ನೋಡುತ್ತಿದ್ದ ಅಪರಿಚಿತ ವ್ಯಕ್ತಿ ಯೊಬ್ಬರು ಈ ಘಟನೆಯನ್ನು ರೆಕಾರ್ಡ್ ಮಾಡಿದ್ದು ಸದ್ಯ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.

ವೈರಲ್ ಆದ ವಿಡಿಯೊ ಇಲ್ಲಿದೆ:



ಇವರಿಬ್ಬರು ಮತ್ತು ಆಟೋ ಚಾಲಕನ ನಡುವೆ ಮೊದಲು ಮಾತಿನ ಚಕಮಕಿ ಏರ್ಪಟ್ಟಿತ್ತು. ಬಳಿಕ ಇದ್ದಕ್ಕಿದ್ದಂತೆ ದೈಹಿಕ ಹಲ್ಲೆ ಮಾಡುವ ಜೊತೆಗೆ ಪರಸ್ಪರ ನಿಂದಿಸಲು ಆರಂಭ ಮಾಡಿದ್ದಾರೆ. ರಸ್ತೆ ಮಧ್ಯ ಈ ಜಗಳವಾದ ಕಾರಣ ಸಂಚಾರದಟ್ಟಣೆ ಉಂಟಾಗು ವಂತಾಯಿತು. ಈ ದೃಶ್ಯಗಳನ್ನು ಅನೇಕರು ಮೊಬೈಲ್ ನಲ್ಲಿ ವಿಡಿಯೋ ಮಾಡುತ್ತಿದ್ದರೆ ಇನ್ನು ಕೆಲವರು ಜಗಳವನ್ನು ನೋಡಿ ತಮ್ಮಷ್ಟಕ್ಕೆ ಸುಮ್ಮನಾಗಿದ್ದಾರೆ. ಅನಂತರ ಕೆಲವು ಜನರು ಅವರ ಜಗಳದ ನಡುವೆ ಮಧ್ಯಪ್ರವೇಶಿಸಿ ಸಮಾಧಾನ ಪಡಿಸಿ ಅಲ್ಲಿಂದ ಕಳಿಸಿದ್ದಾರೆ. ಆದರೆ ಈ ವಾಗ್ವಾದಕ್ಕೆ ಕಾರಣವೇನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ವೈರಲ್ ಆಗಿರುವ ಘಟನೆಯ ಬಗ್ಗೆ ಪೊಲೀಸರು ಕೂಡ ಇದುವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಇದನ್ನೂ ಓದಿ:Viral Video: "ನೀವು ಶ್ರೇಷ್ಠರಂತೆ ನಟಿಸುವುದು ಬೇಡ"; ಭಾರತೀಯ ವ್ಯಕ್ತಿ ಮೇಲೆ ಜನಾಂಗೀಯ ದಾಳಿ, ವಿಡಿಯೋ ವೈರಲ್‌

ಮೆಹಕ್ ಮತ್ತು ಪಾರಿ ಹೆಸರಿನ ಯೂಟ್ಯೂಬರ್ ಸಹೋದರಿ ಯರು ಸುದ್ದಿಯಾಗುತ್ತಿರುವುದು ಇದೇ ಮೊದಲೇನಲ್ಲ. 2025ರ ಆಗಸ್ಟ್‌ನಲ್ಲಿ ಸಂಭಾಲ್‌ನಲ್ಲಿ ತಮ್ಮ ಕಾರು ಬೈಕ್‌ಗೆ ಢಿಕ್ಕಿ ಹೊಡೆದ ಸಂದರ್ಭದಲ್ಲಿ ಕೂಡ ಸುದ್ದಿಯಾಗಿ ವೈರಲ್ ಆಗಿದ್ದರು. ಅದರ ಬೆನ್ನಲ್ಲೆ ವೈರಲ್ ಆಗುವ ಉದ್ದೇಶ ದಿಂದ ಬೇಕೆಂದೆ ಈ ಜೋಡಿ ಸ್ಥಳದಲ್ಲಿ ಒಂದು ದೃಶ್ಯವನ್ನು ಸೃಷ್ಟಿಸಿ ವೀಡಿಯೊವನ್ನು ಬೇರೆ ಅವರ ಮೂಲಕ ರೆಕಾರ್ಡ್ ಮಾಡಿಸಿ ವೈರಲ್ ಆಗುವಂತೆ ಮಾಡಿರಬಹುದು ಎಂದು ಸಹ ಹೇಳಲಾಗುತ್ತಿದೆ.

ಶಹಬಾಜ್‌ಪುರ್ ಕಲಾನ್ ಗ್ರಾಮದ ಇಬ್ಬರೂ ಸಹೋದರಿಯರು ಇನ್‌ಸ್ಟಾಗ್ರಾಮ್‌ನಲ್ಲಿ ಆಕ್ಷೇಪಾರ್ಹ ವೀಡಿಯೊಗಳನ್ನು ಪೋಸ್ಟ್ ಮಾಡುತ್ತಲೇ ಇರುತ್ತಾರೆ. ಟ್ರೋಲ್ , ಮೇಮ್ಸ್ ಮೂಲಕ ಈ ಜೋಡಿ ಖ್ಯಾತಿ ಗಳಿಸಿದ್ದಾರೆ. ಆಕ್ಷೇಪಾರ್ಹ ಕಂಟೆಂಟ್ ಹಾಕಿದ್ದ ಪರಿಣಾಮ ಈ ಹಿಂದೆಯೆ ಅಸ್ಮೌಲಿ ಪೊಲೀಸ್ ಠಾಣೆ (ಸಂಭಾಲ್) ವ್ಯಾಪ್ತಿಯಲ್ಲಿ ಇವರ ವಿರುದ್ಧ ಅನೇಕ ಸಲ ದೂರು ಕೂಡ ದಾಖಲಾಗಿದೆ. ವೈರಲ್ ಆದ ವಿಡಿಯೋ ಬಗ್ಗೆ ನೆಟ್ಟಿಗರು ನಾನಾತರನಾಗಿ ಕಾಮೆಂಟ್ ಹಾಕಿದ್ದಾರೆ. ಸೋಶಿಯಲ್ ಮಿಡಿಯಾದಲ್ಲಿ ಇವರ ಕಂಟೆಂಟ್ ಗಳಿಗೆ ವಿರೋಧ ವ್ಯಕ್ತವಾಗುತ್ತಿರುವುದು ಅವರಿಗೆ ತಿಳಿದಿದ್ದರೂ ಕೂಡ ಅವರು ಅಂತಹ ವಿಷಯವನ್ನೇ ಹೈಲೈಟ್ ಮಾಡಿ ಪಾಪ್ಯುಲರ್ ಆಗಲು ಮುಂದಾಗುತ್ತಿದ್ದಾರೆ ಎಂದು ವಿಡಿಯೋ ಕಂಡ ನೆಟ್ಟಿಗರೊಬ್ಬರು ಪ್ರತಿಕ್ರಿಯೆ ನೀಡಿದ್ದಾರೆ.