ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಶಾಲಾ ಅವಧಿಯಲ್ಲಿಯೇ ವಿದ್ಯಾರ್ಥಿನಿಯರಿಂದ ಮಸಾಜ್ ಮಾಡಿಸಿಕೊಂಡ ಶಿಕ್ಷಕಿ; ವೈರಲ್‌ ಆಯ್ತು ವಿಡಿಯೋ

Viral Video: ಇತ್ತೀಚೆಗಷ್ಟೇ ಶಾಲಾ ಕಟ್ಟಡ ನಿರ್ಮಾಣ ಕಾರ್ಯಕ್ಕಾಗಿ ಶಾಲಾ ವಿದ್ಯಾರ್ಥಿಗಳನ್ನು ಗಾರೆ ಕೆಲಸ ಮಾಡಲು ಶಿಕ್ಷಕರು ಒತ್ತಾಯಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.‌ ಈ ನಡುವೆ ಮುಖ್ಯೋಪಾಧ್ಯಾಯಿನಿಗೆ 5 ನೇ ತರಗತಿಯ ವಿದ್ಯಾರ್ಥಿಗಳು ಮಸಾಜ್ ಮಾಡುತ್ತಿರುವ ದೃಶ್ಯ ವೊಂದು ಸರಕಾರಿ ಶಾಲೆಯಲ್ಲಿ ಕಂಡು ಬಂದಿದ್ದು ಪೋಷಕರು ಆಕ್ರೋಶ ಹೊರಹಾಕಿದ್ದಾರೆ.

ವಿದ್ಯಾರ್ಥಿನಿಯರಿಂದ ಮಸಾಜ್ ಮಾಡಿಸಿಕೊಂಡ ಶಿಕ್ಷಕಿ

ಉತ್ತರ ಪ್ರದೇಶ, ಮಾ.8: ಇತ್ತೀಚೆಗೆ ಸರಕಾರಿ ಶಾಲೆಗಳಲ್ಲಿ ಉತ್ತಮ ಶಿಕ್ಷಣ ಸಿಕ್ಕರೂ ಪೋಷಕರು ಶಾಲೆಗೆ ಸೇರಿಸಲು ಹಿಂಜರಿಯುತ್ತಾರೆ. ಇಲ್ಲಿ ಸರಿಯಾದ ಸೌಲಭ್ಯ ಇಲ್ಲ, ಶಿಕ್ಷಕರಿಲ್ಲ ಹೀಗೆ ನಾನಾ ಕಾರಣದಿಂದ ಖಾಸಗಿ ಶಾಲೆಗೆ ದಾಖಲಿಸುತ್ತಾರೆ. ಇತ್ತೀಚೆಗಷ್ಟೇ ಶಾಲಾ ಕಟ್ಟಡ ನಿರ್ಮಾಣ ಕಾರ್ಯ ಕ್ಕಾಗಿ ಶಾಲಾ ವಿದ್ಯಾರ್ಥಿಗಳನ್ನು ಗಾರೆ ಕೆಲಸ ಮಾಡಲು ಶಿಕ್ಷಕರು ಒತ್ತಾಯಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ (Viral Video) ಆಗಿತ್ತು.‌ ಈ ನಡುವೆ ಮುಖ್ಯೋ ಪಾಧ್ಯಾಯಿನಿಗೆ 5 ನೇ ತರಗತಿಯ ವಿದ್ಯಾರ್ಥಿಗಳು ಮಸಾಜ್ ಮಾಡುತ್ತಿರುವ ದೃಶ್ಯವೊಂದು ಸರಕಾರಿ ಶಾಲೆಯಲ್ಲಿ ಕಂಡು ಬಂದಿದ್ದು ಪೋಷಕರು ಆಕ್ರೋಶ ಹೊರಹಾಕಿದ್ದಾರೆ.

ಉತ್ತರ ಪ್ರದೇಶದ ಕಾರ್ವಿ ಪ್ರದೇಶದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಈ ಘಟನೆ ನಡೆದಿದೆ. ಶಾಲಾ ಸಮಯದಲ್ಲಿ ವಿದ್ಯಾರ್ಥಿಗಳು ಸರ್ಕಾರಿ ಶಾಲೆಯ ಮುಖ್ಯೋ ಪಾಧ್ಯಾಯಿನಿಗೆ ಮಸಾಜ್ ಮಾಡಿದ್ದು, ಈ ಘಟನೆಯ ಬಗ್ಗೆ ಉತ್ತರ ಪ್ರದೇಶದ ಚಿತ್ರಕೂಟ ಜಿಲ್ಲೆಯ ಶಿಕ್ಷಣ ಇಲಾಖೆ ಕ್ರಮ ಕೈಗೊಂಡಿದೆ.

ವಿಡಿಯೋ ನೋಡಿ:



ವೈರಲ್ ಆದ ವಿಡಿಯೊದಲ್ಲಿ, ಶಾಲೆಯ ಮುಖ್ಯೋಪಾಧ್ಯಾಯಿನಿ ನೆಲದ ಮೇಲೆ ಚಾಪೆ ಹಾಸ ಲಾಗಿದ್ದು, ಹಲವಾರು ವಿದ್ಯಾರ್ಥಿಗಳು ಶಿಕ್ಷಕಿಯ ಕಾಲುಗಳು ಮತ್ತು ಬೆನ್ನಿಗೆ ಮಸಾಜ್ ಮಾಡುತ್ತಿರುವಂತೆ ಕಂಡುಬಂದಿದೆ. ಅದೇ ವೀಡಿಯೊದಲ್ಲಿ, ಒಬ್ಬ ವಿದ್ಯಾರ್ಥಿನಿ ಶಿಕ್ಷಕಿಯ ಪಾದಗಳ ಬಳಿ ನಿಂತು ತನ್ನ ಸ್ವಂತ ಪಾದಗಳಿಂದ ಅವುಗಳನ್ನು ಒತ್ತುತ್ತಿರುವಂತೆ ಕಾಣುವುದನ್ನು ಗಮನಿಸಬಹುದು. ಮತ್ತೊಬ್ಬ ವಿದ್ಯಾರ್ಥಿನಿ ಶಿಕ್ಷಕಿಯ ತಲೆಯ ಪಕ್ಕದಲ್ಲಿ ನೆಲದ ಮೇಲೆ ಕುಳಿತು ತನ್ನ ಕೈ ನಲ್ಲಿ ಮಸಾಜ್ ಮಾಡುತ್ತಿರುವುದು ಕಂಡುಬಂದಿದೆ.

ಬೆಂಗಳೂರಿನಲ್ಲಿ 4 ಲಕ್ಷ ಲಂಚ ಸ್ವೀಕರಿಸುವಾಗ ಲೋಕಾಯುಕ್ತಕ್ಕೆ ಸಿಕ್ಕಿಬಿದ್ದ ಇನ್ಸ್‌ಪೆಕ್ಟರ್; ಬಂಧನದ ವೇಳೆ ಹೈಡ್ರಾಮಾ, Video Viral

ಇನ್ನು ಕೆಲವೊಂದು ವಿದ್ಯಾರ್ಥಿಗಳು ತರಗತಿಯ ಬೆಂಚುಗಳ ಮೇಲೆ ಕುಳಿತಿದ್ದಾರೆ. ವೀಡಿಯೊದಲ್ಲಿ ವಿದ್ಯಾರ್ಥಿಗಳು ಮಸಾಜ್ ಮುಂದುವರಿಸುತ್ತಿರುವಾಗ ಮುಖ್ಯೋಪಾಧ್ಯಾಯಿನಿ ತನ್ನ ಮೊಬೈಲ್ ಫೋನ್ ಬಳಸುತ್ತಿರುವುದನ್ನು ಸಹ ಕಾಣಬಹುದು. ಈ ವಿಚಾರ ತಿಳಿದ ಜಿಲ್ಲಾ ಶಿಕ್ಷಣ ಅಧಿಕಾರಿಗಳು ಇಲಾಖೆಯ ಶಾಲೆಯನ್ನು ಪರಿಶೀಲಿಸಲು ತಂಡವನ್ನು ಕಳುಹಿಸಿದೆ ಎಂದು ಮೂಲ ಶಿಕ್ಷಾ ಅಧಿಕಾರಿ ಬಿ.ಕೆ. ಶರ್ಮಾ ಹೇಳಿದ್ದಾರೆ.

ಪರಿಶೀಲನೆಯ ಸಮಯದಲ್ಲಿ ಮುಖ್ಯೋಪಾಧ್ಯಾಯಿನಿ ಮಧು ಕುಮಾರಿ ಅವರು ವೈದ್ಯಕೀಯ ರಜೆಯಲ್ಲಿದ್ದರು ಎಂದು ತಿಳಿದು ಬಂದಿದೆ. ಆದರೆವಿದ್ಯಾರ್ಥಿಗಳ ಹೇಳಿಕೆ ಮೇರೆಗೆ ಶಿಕ್ಷಣ ಇಲಾಖೆಯು ಅವರನ್ನು ಸೇವೆಯಿಂದ ಅಮಾನತು ಮಾಡಿದೆ. ಆದರೆ ವೈರಲ್ ವೀಡಿಯೊಗೆ ಸಂಬಂಧಿಸಿದ ಆರೋಪಗಳನ್ನು ಮುಖ್ಯೋಪಾಧ್ಯಾಯಿನಿ ನಿರಾಕರಿಸಿದ್ದಾರೆ. ಈ ವಿಡಿಯೊಗೆ ಕೃತಕ ಬುದ್ಧಿಮತ್ತೆ ಪರಿಕರಗಳನ್ನು ಬಳಸಿ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.