ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

"ಮಾನವೀಯತೆ ಇನ್ನೂ ಇದೆ" ; ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದ ರೋಗಿಗೆ ವಿಮಾನದಲ್ಲಿ ತುರ್ತು ವೈದ್ಯಕೀಯ ನೆರವು

Viral News: ದೆಹಲಿಯಿಂದ ಐಜಾವಾಲ್‌ಗೆ ತೆರಳುತ್ತಿದ್ದ ವಿಮಾನದಲ್ಲಿ‌ ಪ್ರಯಾಣಿಕರೊಬ್ಬರು ಗಂಭೀರ ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದರು. ಆಗ ಅದೇ ವಿಮಾನದಲ್ಲಿದ್ದ ಜನರಲ್ ಸರ್ಜನ್ ಡಾ. ವಿಲ್ಲಿ ಲಾಲ್ಹ್ರುಯಿಟ್ಲುಂಗಾ, ಮಕ್ಕಳ ತಜ್ಞ ಡಾ. ಎಫ್. ರೆಮ್ತಾಂಗ್‌ಪುಯಿ ಮತ್ತು ಗ್ಯಾಸ್ಟ್ರೋಎಂಟರಾಲಜಿಸ್ಟ್ ಡಾ. ಬೆಂಜಮಿನ್ ಖಿಯಾಂಗ್ಟೆ ಅವರು ಪ್ರಯಾಣಿಕನಿಗೆ ತುರ್ತು ಚಿಕಿತ್ಸೆ ನೀಡಿದ್ದಾರೆ.

ಅಸ್ವಸ್ಥ ಪ್ರಯಾಣಿಕನಿಗೆ ವಿಮಾನದಲ್ಲೇ ನೆರವಾದ ವೈದ್ಯರ ತಂಡ

ನವದೆಹಲಿ,ಅ. 5: ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ವೈದ್ಯರ ತಂಡವೊಂದು ಮಾನವೀಯತೆ ಮೆರೆದ ಘಟನೆಯೊಂದು (Viral News) ನಡೆದಿದೆ. ದೆಹಲಿಯಿಂದ ಐಜಾವಾಲ್‌ಗೆ ತೆರಳುತ್ತಿದ್ದ ವಿಮಾನದಲ್ಲಿ‌ ಪ್ರಯಾಣಿಕರೊಬ್ಬರು ಗಂಭೀರ ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದರು. ಆಗ ಅದೇ ವಿಮಾನ ದಲ್ಲಿದ್ದ ಜನರಲ್ ಸರ್ಜನ್ ಡಾ. ವಿಲ್ಲಿ ಲಾಲ್ಹ್ರುಯಿಟ್ಲುಂಗಾ, ಮಕ್ಕಳ ತಜ್ಞ ಡಾ. ಎಫ್. ರೆಮ್ತಾಂಗ್‌ಪುಯಿ ಮತ್ತು ಗ್ಯಾಸ್ಟ್ರೋಎಂಟರಾಲಜಿಸ್ಟ್ ಡಾ. ಬೆಂಜಮಿನ್ ಖಿಯಾಂಗ್ಟೆ ಅವರು ಪ್ರಯಾಣಿಕನಿಗೆ ತುರ್ತು ಚಿಕಿತ್ಸೆ ನೀಡಿದ್ದಾರೆ.

ದೀರ್ಘಕಾಲದ ಮೂತ್ರಪಿಂಡ ಕಾಯಿಲೆಯಿಂದ ಬಳಲುತ್ತಿದ್ದ   ಪ್ರಯಾಣಿಕರೊಬ್ಬರು ಪ್ರಯಾಣದ ಸಮಯದಲ್ಲಿ ತೀವ್ರ ಅಸ್ವಸ್ಥ ತೆಯಿಂದ ಬಳಲುತ್ತಿದ್ದರು. ಇದರಿಂದಾಗಿ ವಿಮಾನದಲ್ಲಿದ್ದ ವೈದ್ಯರು ಮಧ್ಯಪ್ರವೇಶಿಸಿ ತುರ್ತು ಆರೈಕೆಯನ್ನು ಒದಗಿಸಬೇಕಾಯಿತು.

​ದೆಹಲಿಯಿಂದ ಮಿಜೋರಾಂನ ಐಜಾವಾಲ್‌ಗೆ ತೆರಳುತ್ತಿದ್ದ ವಿಮಾನದಲ್ಲಿ ಈ ಘಟನೆ ನಡೆದಿದೆ. ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಗಂಭೀರ ಸ್ಥಿತಿಯಲ್ಲಿದ್ದ ಪ್ರಯಾಣಿಕರೊಬ್ಬರನ್ನು, ಅದೇ ವಿಮಾನದಲ್ಲಿದ್ದ ವೈದ್ಯರ ತಂಡ ಸಮಯ ಪ್ರಜ್ಞೆ ಮೆರೆದು ಚಿಕಿತ್ಸೆ ನೀಡಿ ರಕ್ಷಿಸಿದೆ. ದೀರ್ಘಕಾಲದ ಮೂತ್ರ ಪಿಂಡ ಕಾಯಿಲೆಯಿಂದ ಹಾಗೂ ಡಯಾಲಿಸಿಸ್‌ಗಾಗಿ ಪ್ರಯಾಣಿಸುತ್ತಿದ್ದ ಅವರ ಆಮ್ಲಜನಕದ ಮಟ್ಟ ದಿಢೀರನೆ ಶೇ. 40ಕ್ಕೆ ಕುಸಿಯಿತು.

ಆಗ ವಿಮಾನದ ಸಿಬ್ಬಂದಿ ತುರ್ತು ಸಹಾಯಕ್ಕಾಗಿ ವೈದ್ಯರ ಬಳಿ ಮನವಿ ಮಾಡಿದಾಗ ಡಾ. ವಿಲ್ಲಿ ಲಾಲ್ರುಯಿಟ್ಲುವಂಗ ಡಾ. ಎಫ್ ರೇಮ್ಥಂಗ್ಪುಯಿ ಮತ್ತು ಡಾ. ಬೆಂಜಮಿನ್ ಖಿಯಾಂಗ್ಟೆ ತಕ್ಷಣವೇ ರೋಗಿಯ ನೆರವಿಗೆ ಧಾವಿಸಿದರು. ಆರಂಭದಲ್ಲಿ ಆಮ್ಲಜನಕದ ಮಾಸ್ಕ್ ಹಾಕಿದರೂ ಆಮ್ಲಜನಕ ಮಟ್ಟ ಶೇ. 60ಕ್ಕಿಂತ ಹೆಚ್ಚಾಗಿಲ್ಲ. ಬಳಿಕ ವೈದ್ಯರು ಸ್ಟೀರಾಯ್ಡ್‌ಗಳನ್ನು ನೀಡಿದಾಗ, ಮಟ್ಟವು ಶೇ. 90ಕ್ಕೆ ಏರಿ ಸ್ಥಿರವಾಯಿತು.

Viral Video: ಕತ್ತಿನಲ್ಲಿ ಟ್ರ್ಯಾಕ್ಟರ್ ಟೈರ್ ಸಿಲುಕಿ ಒದ್ದಾಡಿದ ಕಾಡಾನೆ; ಜೀವದ ಹಂಗು ತೊರೆದು ಕಾಪಾಡಿದ ಅರಣ್ಯಾಧಿಕಾರಿಗಳು

ಐಜಾವಾಲ್‌ನ ಲೆಂಗ್‌ಪುಯಿ ವಿಮಾನ ನಿಲ್ದಾಣ ತಲುಪುವ ವೇಳೆಗೆ ರೋಗಿಯ ಸ್ಥಿತಿ ಮತ್ತೆ ಹದಗೆಟ್ಟಿದೆ. ವೈದ್ಯರು ಕೂಡಲೇ ಸಿಬ್ಬಂದಿಗೆ ಮಾಹಿತಿ ನೀಡಿ ಆಂಬ್ಯುಲೆನ್ಸ್ ಸಿದ್ಧಪಡಿಸಿದ್ದರು. ಬಳಿಕ ವೈದ್ಯರು ತಮ್ಮ ಸ್ವಂತ ಲಗೇಜ್‌ಗಳನ್ನು ವಿಮಾನ ನಿಲ್ದಾಣದಲ್ಲೇ ಬಿಟ್ಟು ರೋಗಿಯೊಂದಿಗೆ ಆಸ್ಪತ್ರೆಗೆ ತೆರಳಿದ್ದು ಡಯಾಲಿಸಿಸ್ ಮಾಡಿದ್ದಾರೆ. ಪ್ರಸ್ತುತ ರೋಗಿಯ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎನ್ನಲಾಗಿದೆ.