ಎಸ್​ ಎಲ್​ ಭೈರಪ್ಪ ನಿಧನ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Thai Pageant Winner: ಸೆಕ್ಸ್‌ ಟಾಯ್‌, ಇ-ಸಿಗರೇಟ್‌ ಜೊತೆ ವಿಡಿಯೊ ವೈರಲ್‌; ಒಂದೇ ದಿನಕ್ಕೆ ಗೆದ್ದ ಕಪ್‌ ಕಳೆದುಕೊಂಡ ಥಾಯ್‌ ಪೆಜೆಂಟ್‌ ವಿನ್ನರ್‌

ಥಾಯ್ ಸ್ಪರ್ಧೆಯ ವಿಜೇತೆಯೊಬ್ಬರು ವಿವಾದಾತ್ಮಕ ವಿಡಿಯೊ ಹಂಚಿಕೊಂಡು ಪ್ರಶಸ್ತಿ ಕಳೆದುಕೊಂಡಿರುವ ಘಟನೆ ನಡೆದಿದೆ. ಮಿಸ್ ಗ್ರ್ಯಾಂಡ್ ಪ್ರಾಚುವಾಪ್ ಖಿರಿ ಖಾನ್ ಥಾಯ್ ಸ್ಪರ್ಧೆಯ 2026ರ ಕಿರೀಟ ಗೆದ್ದುಕೊಂಡಿದ್ದ ಸುಫನ್ನೀ ನೊಯಿನೊಂಥೋಂಗ್ ಅವರು ತಮ್ಮ ಜೀವನದ ಬಹುದೊಡ್ಡ ಗೆಲುವನ್ನು ಪಡೆದ ಬಳಿಕ ಕೇವಲ ಒಂದು ದಿನದಲ್ಲಿ ತಮ್ಮ ಪ್ರಶಸ್ತಿಯನ್ನು ಕಳೆದುಕೊಂಡಿದ್ದಾರೆ. ಅಂತದ್ದು ಏನಾಗಿದೆ ಇಲ್ಲಿದೆ ಮಾಹಿತಿ.

ಒಂದೇ ದಿನಕ್ಕೆ ಗೆದ್ದ ಕಪ್‌ ಕಳೆದುಕೊಂಡ ಥಾಯ್‌ ಪೆಜೆಂಟ್‌ ವಿನ್ನರ್‌!

-

ಥೈಲ್ಯಾಂಡ್‌: ಲೈಂಗಿಕ ಆಟಿಕೆ ಬಳಸುವುದು, ಇ- ಸಿಗರೇಟ್ ಸೇದುವುದು, ಒಳ ಉಡುಪುಗಳಲ್ಲಿ ಪ್ರದರ್ಶನ ನೀಡುವ ಹಳೆಯ ವಿಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ (Viral Video) ಆದ ಬಳಿಕ ಥಾಯ್ ಸ್ಪರ್ಧೆಯ ವಿಜೇತೆಯೊಬ್ಬರು (Thai Pageant Winner) ಪ್ರಶಸ್ತಿ ಕಳೆದುಕೊಂಡಿದ್ದಾರೆ. ಮಿಸ್ ಗ್ರ್ಯಾಂಡ್ ಪ್ರಾಚುವಾಪ್ ಖಿರಿ ಖಾನ್ 2026ರ (Miss Grand Prachuap Khiri Khan 2026) ಕಿರೀಟವನ್ನು ಪಡೆದ ಸುಫನ್ನೀ ನೊಯಿನೊಂಥೋಂಗ್ (Suphannee Noinonthong) ಅವರು ತಮ್ಮ ಗೆಲುವಿನ ಒಂದು ದಿನದ ಅನಂತರ ಪ್ರಶಸ್ತಿಯನ್ನು ಕಳೆದುಕೊಂಡರು.

ಸುಫನ್ನೀ ನೊಯಿನೊಂಥೋಂಗ್ ಅವರು ಲೈಂಗಿಕ ಆಟಿಕೆ ಬಳಸುವುದು, ಇ-ಸಿಗರೇಟ್ ಸೇದುವುದು ಮತ್ತು ಒಳ ಉಡುಪುಗಳಲ್ಲಿ ಪ್ರದರ್ಶನ ನೀಡುವುದನ್ನು ತೋರಿಸುವ ಅನೇಕ ಹಳೆಯ ವಿಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು. ಇದಾದ ಬಳಿಕ ಆಯೋಜಕರು ಅವರಿಂದ ಪ್ರಶಸ್ತಿ ಹಿಂಪಡೆಯುವ ನಿರ್ಧಾರ ಪ್ರಕಟಿಸಿದರು. ಆದರೆ ಇದು ಈಗ ಚರ್ಚೆಗೆ ಗ್ರಾಸವಾಗಿದೆ. ವೇದಿಕೆಯ ಹೊರಗೆ ಅವರ ವೈಯಕ್ತಿಕ ಆಯ್ಕೆಗಳು ವೃತ್ತಿಜೀವನದ ಮೇಲೆ ಪರಿಣಾಮ ಬೀರಬೇಕೇ ಎಂದು ಅನೇಕರು ಪ್ರಶ್ನಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಸ್ಪರ್ಧೆಯ ಸಮಿತಿಯು, 2026ರ ಮಿಸ್ ಗ್ರ್ಯಾಂಡ್ ಪ್ರಾಚುವಾಪ್ ಖಿರಿ ಖಾನ್ ಸ್ಪರ್ಧಿಗಳು ಎತ್ತಿಹಿಡಿಯಬೇಕಾದ ಮನೋಭಾವ ಮತ್ತು ತತ್ವಗಳಿಗೆ ಹೊಂದಿಕೆಯಾಗದ ಕೆಲವು ಚಟುವಟಿಕೆಗಳಲ್ಲಿ ಸುಫನ್ನೀ ನೊಯಿನೊಂಥೋಂಗ್ ತೊಡಗಿಸಿಕೊಂಡಿರುವುದು ಕಂಡುಬಂದಿದೆ. ಆದ್ದರಿಂದ ಅವರಿಂದ ಪ್ರಶಸ್ತಿಯನ್ನು ಹಿಂಪಡೆಯಲಾಗಿದೆ ಎಂದು ಹೇಳಿದೆ.



ಈ ಕುರಿತು ಫೇಸ್‌ಬುಕ್ ಪೋಸ್ಟ್‌ ಮಾಡಿರುವ ಸುಫನ್ನೀ ನೊಯಿನೊಂಥೋಂಗ್ ಅವರು ಸ್ಪರ್ಧೆಯ ಆಯೋಜಕರು ಮತ್ತು ಅವರ ಅಭಿಮಾನಿಗಳಲ್ಲಿ ಕ್ಷಮೆಯಾಚಿಸಿದ್ದಾರೆ. ಕೋವಿಡ್ ಸಾಂಕ್ರಾಮಿಕದ ಸಮಯದಲ್ಲಿ ತೀವ್ರವಾಗಿ ಆರ್ಥಿಕ ಸಮಸ್ಯೆಗಳನ್ನು ಎದುರಿಸಿರುವ ಅವರು ಇದಕ್ಕಾಗಿ ನಗ್ನ ಫೋಟೋಶೂಟ್‌ಗಳು ಮತ್ತು ವಿಡಿಯೊಗಳಲ್ಲಿ ಭಾಗವಹಿಸಿದ್ದಾಗಿ ಹೇಳಿಕೊಂಡಿದ್ದಾರೆ.

ತಾವು ಗಳಿಸಿದ್ದ ಹಣವನ್ನು ಅಕ್ರಮ ಜೂಜಾಟದ ವೆಬ್‌ಸೈಟ್‌ಗಳು ತಮ್ಮ ಅನುಮತಿಯಿಲ್ಲದೆ ಬಳಸಿಕೊಂಡಿವೆ ಎಂದು ಹೇಳಿರುವ ಆಕೆ, ಇದರ ಮೇಲೆ ಯಾವುದೇ ನಿಯಂತ್ರಣ ಹಾಕಲು ಸಾಧ್ಯವಾಗಲಿಲ್ಲ. ಆದರೆ ಈಗ ಪೊಲೀಸ್ ದೂರು ದಾಖಲಿಸಲು ಮತ್ತು ಅದರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಯೋಚಿಸುತ್ತಿರುವುದಾಗಿ ತಿಳಿಸಿದ್ದಾರೆ.

ಪ್ರಶಸ್ತಿಯನ್ನು ಕಳೆದುಕೊಂಡ ಬಳಿಕ ಸ್ಥಳೀಯ ಟಿವಿ ಕಾರ್ಯಕ್ರಮವೊಂದರಲ್ಲಿ ಕಾಣಿಸಿಕೊಂಡ ಸುಫನ್ನೀ ನೊಯಿನೊಂಥೋಂಗ್ ಅವರೊಂದಿಗೆ ಪ್ರಚುವಾಪ್ ಖಿರಿ ಖಾನ್‌ನನ ಮಿಸ್ ಗ್ರ್ಯಾಂಡ್ ಥೈಲ್ಯಾಂಡ್‌ನ ಪ್ರಾಂತೀಯ ನಿರ್ದೇಶಕಿ ಕಾಂಚಿ ಕೂಡ ಇದ್ದರು. ಈ ಕಾರ್ಯಕ್ರಮದಲ್ಲಿ ನೊಯಿನೊಂಥೊಂಗ್ ಅವರು ತಾವು ಒಪ್ಪಂದವನ್ನು ಓದಿಲ್ಲ ಮತ್ತು ನಿಯಮದ ಬಗ್ಗೆ ತಿಳಿದಿರಲಿಲ್ಲ ಎಂದು ಹೇಳಿದ್ದಾರೆ. ಇದಕ್ಕೆ ವಕೀಲರೊಬ್ಬರು ಪ್ರತಿಕ್ರಿಯಿಸಿ ಇದಕ್ಕಾಗಿ ನಿಮಗೆ ಮೂರು ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಬಹುದು ಎಂದು ಹೇಳಿದಾಗ ನೊಯಿನೊಂಥೊಂಗ್ ಚಿಂತೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿಕಾಂಚಿ ಅವರು ಮಿಸ್ ಗ್ರ್ಯಾಂಡ್ ಇಂಟರ್‌ನ್ಯಾಷನಲ್‌ನ ಅಧ್ಯಕ್ಷೆ ಮತ್ತು ಮಿಸ್ ಯೂನಿವರ್ಸ್ ಥೈಲ್ಯಾಂಡ್‌ನ ರಾಷ್ಟ್ರೀಯ ನಿರ್ದೇಶಕಿ ನವಾತ್ ಇಟ್ಸಾರಗ್ರಿಸಿಲ್ ಅವರನ್ನು ಸಂಪರ್ಕಿಸಿ ನೊಯಿನೊಂಥೊಂಗ್ ಅವರು ಕಿರೀಟವನ್ನು ಮರಳಿ ಪಡೆಯುವ ಸಾಧ್ಯತೆಯನ್ನು ಹುಡುಕುವಂತೆ ಸೂಚಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಇಟ್ಸಾರಗ್ರಿಸಿಲ್ ಇದನ್ನು ಪರಿಶೀಲಿಸುವುದಾಗಿ ಹೇಳಿದರು.

ಇದನ್ನೂ ಓದಿ: SL Bhyarappa: ಸಾಹಿತಿ ಭೈರಪ್ಪ ಅವರ ಅಂತ್ಯಕ್ರಿಯೆಗೆ ಕೇಂದ್ರದ ಪ್ರತಿನಿಧಿಯಾಗಿ ಸಚಿವ ಪ್ರಲ್ಹಾದ ಜೋಶಿ

ಈ ನಡುವೆ ಅವರ ತಂಡವು ಸ್ಪರ್ಧೆಯ ಸಮಿತಿಯೊಂದಿಗೆ ಭೇಟಿಯಾಗಲು ತಯಾರಿ ನಡೆಸುತ್ತಿದೆ. ಅಂತಿಮ ನಿರ್ಧಾರವನ್ನು ಶೀಘ್ರದಲ್ಲೇ ಘೋಷಿಸಲಾಗುವುದು ಎಂದು ಹೇಳಿದೆ.