Gauri Spratt: ಪಾಪರಾಜಿಗಳ ಮೇಲೆ ಆಮೀರ್ ಖಾನ್ ಗರ್ಲ್‌ಫ್ರೆಂಡ್ ಗೌರಿ ಗರಂ
ನಟ ಆಮೀರ್ ಖಾನ್ ಅವರ ಗೆಳತಿ ಗೌರಿ ಸ್ಪ್ರಾಟ್ ವಾಕಿಂಗ್ ತೆರಳಿದ್ದ ಸಂದರ್ಭದಲ್ಲಿ ಮುಂಬೈ ಪಾಪರಾಜಿಗಳು ಫೋಟೊಗಾಗಿ ಮುಗಿಬಿದ್ದಿದ್ದರು. ಈ ಸಂದರ್ಭದಲ್ಲಿ ಗೌರಿ ಕೋಪಗೊಂಡಿರುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ. ವೈರಲ್ ಆಗಿರುವ ವಿಡಿಯೊದಲ್ಲಿ, ಕ್ಯಾಶುವಲ್ ಉಡುಗೆಯಲ್ಲಿರುವ ಗೌರಿ ಸ್ಪ್ರಾಟ್ ಅವರನ್ನು ಪಾಪರಾಜಿಗಳು ಹತ್ತಿರದಿಂದ ಹಿಂಬಾಲಿಸುತ್ತಿರುವ ದೃಶ್ಯ ಕಂಡುಬಂದಿದೆ.

Aamir Khan’s Girlfriend Gauri -

ಬೆಂಗಳೂರು: ಬಾಲಿವುಡ್ ಸೂಪರ್‌ಸ್ಟಾರ್ ಆಮೀರ್ ಖಾನ್ (Aamir Khan) ವೈಯಕ್ತಿಕ ವಿಚಾರವಾಗಿಯೂ ಆಗಾಗ ಸುದ್ದಿಯಲ್ಲಿರುತ್ತಾರೆ. ಅವರು ಹುಟ್ಟುಹಬ್ಬದಂದು ಗೆಳತಿ ಗೌರಿ ಸ್ಪ್ರಾಟ್ ಅವರನ್ನು ಪರಿಚಯಿಸಿದ್ದರು. ಅಂದಿನಿಂದ, ಇವರಿಬ್ಬರ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಫ್ಯಾನ್ಸ್ ಉತ್ಸುಕರಾಗಿದ್ದಾರೆ. ಅದರಲ್ಲೂ ಇವರಿಬ್ಬರೂ ಎಲ್ಲೇ ಹೋದರು ಪಾಪಾರಾಜಿಗಳು ಸುತ್ತುವರಿಯುತ್ತಾರೆ. ಈ ನಡುವೆ ಗೌರಿ ವಾಕಿಂಗ್‌ಗೆ ಹೊರಟಿದ್ದ ವೇಳೆ ತಮ್ಮನ್ನು ಸುತ್ತುವರಿದ ಪಾಪಾರಾಜಿಗಳನ್ನು ತರಾಟೆಗೆ ತೆಗೆದುಕೊಂಡ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಗೌರಿ ವಾಕಿಂಗ್ ತೆರಳಿದ್ದ ಸಂದರ್ಭದಲ್ಲಿ ಮುಂಬೈ ಪಾಪರಾಜಿಗಳು ಫೋಟೊಗಾಗಿ ಮುಗಿಬಿದ್ದಿದ್ದರು. ಈ ಸಂದರ್ಭದಲ್ಲಿ ಗೌರಿ ಕೋಪ ಗೊಂಡಿರುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ. ವೈರಲ್ ಆಗಿರುವ ವಿಡಿಯೊದಲ್ಲಿ, ಕ್ಯಾಶುವಲ್ ಉಡುಗೆಯಲ್ಲಿರುವ ಗೌರಿ ಅವರನ್ನು ಪಾಪರಾಜಿಗಳು ಹತ್ತಿರದಿಂದ ಹಿಂಬಾಲಿಸುತ್ತಿರುವ ದೃಶ್ಯ ಕಂಡುಬಂದಿದೆ. ಈ ವೇಳೆ ಸಿಟ್ಟಿಗೆದ್ದ ಗೌರಿ, "ಅರೇ ನನ್ನನ್ನು ಬಿಟ್ಟುಬಿಡಿ. ನಾನು ವಾಕಿಂಗ್ ತೆರಳುತ್ತಿದ್ದೇನೆ" ಎಂದು ಹೇಳಿದ್ದಾರೆ. ಅವರು ಗದರಿಸಿದ ನಂತರ, ಪಾಪರಾಜಿಗಳು ಸ್ವಲ್ಪ ದೂರ ಸರಿದಿದ್ದು, ಗೌರಿ ಆ ಸ್ಥಳದಿಂದ ಬೇಗನೆ ನಿರ್ಗಮಿಸಿದ್ದಾರೆ.
ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದ್ದು ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಒಬ್ಬ ಬಳಕೆದಾರರು "ಎರಡು ವಿಚ್ಛೇದನಗಳನ್ನು ಪಡೆದ ಸೆಲೆಬ್ರಿಟಿಯನ್ನು ಡೇಟ್ ಮಾಡುವ ಮೊದಲು ಯೋಚಿಸಬೇಕಿತ್ತುʼʼ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು "ಅವರು ಸೆಲೆಬ್ರಿಟಿ ಅಲ್ಲ ಕೇವಲ ಆಮೀರ್ ಗರ್ಲ್‌ಫ್ರೆಂಡ್ ಅಷ್ಟೇ. ಪಾಪರಾಜಿಗಳು ಯಾಕೆ ಅವರನ್ನು ಹಿಂಬಾಲಿಸಬೇಕು?" ಎಂದು ಪ್ರಶ್ನಿಸಿದ್ದಾರೆ.
ಆಮೀರ್ ಖಾನ್ ಮಾರ್ಚ್ 13ರಂದು ತಮ್ಮ ಹುಟ್ಟುಹಬ್ಬದ ಸಂದರ್ಭದಲ್ಲಿ ಗೌರಿಯನ್ನು ಮಾಧ್ಯಮಕ್ಕೆ ಪರಿಚಯಿಸಿದ್ದರು. ಆಮೀರ್ ಮತ್ತು ಗೌರಿ 25 ವರ್ಷಗಳಿಂದ ಪರಿಚಿತರಾಗಿದ್ದರೂ, ಎರಡು ವರ್ಷಗಳ ಹಿಂದೆ ಮತ್ತೆ ಸಂಪರ್ಕಕ್ಕೆ ಬಂದು ಪ್ರೀತಿಸಲು ಪ್ರಾರಂಭಿಸಿದರು. ಆಮೀರ್ ಖಾನ್ ಅವರ ʼಸಿತಾರೆ ಜಮೀನ್ ಪರ್ʼ ಚಿತ್ರದ ಸ್ಕ್ರೀನಿಂಗ್ ಸಂದರ್ಭದಲ್ಲಿ ಗೌರಿ ಮತ್ತು ಆಮೀರ್ ಜತೆಯಾಗಿ ಕಾಣಿಸಿಕೊಂಡಿದ್ದರು. ಸದ್ಯ ಆಮೀರ್ ಖಾನ್ ತಮ್ಮ ಬಹುನಿರೀಕ್ಷಿತ ʼಮಹಾಭಾರತʼ ಚಿತ್ರದ ತಯಾರಿಯಲ್ಲಿ ಬ್ಯುಸಿ ಇದ್ದಾರೆ.