ನವದೆಹಲಿ,ಮಾ.13: ಭಾರತವು ವಿವಿಧ ಸಂಸ್ಕೃತಿ ಹಾಗೂ ಪರಂಪರೆಯನ್ನು ಹೊಂದಿರುವ ದೇಶ. ಇಲ್ಲಿನ ಐತಿಹಾಸಿಕ ಕಥೆಗಳು, ನಿಗೂಢತೆಗಳು ದೇಶದ ವೈವಿಧ್ಯತೆಯನ್ನು ಹೆಚ್ಚಿಸಿದೆ. ಈ ನಡುವೆ ಹಳೇಬೀಡಿನ ಹೊಯ್ಸಳೇಶ್ವರ ದೇವಾಲಯದಲ್ಲಿನ ಕೆತ್ತನೆಯ ದೃಶ್ಯಗಳು ಮತ್ತೆ ಸುದ್ದಿಯಲ್ಲಿವೆ. ಆಸ್ಟ್ರೇಲಿಯಾದ ಪ್ರಯಾಣಿಕರೊಬ್ಬರು ದೂರದರ್ಶಕವನ್ನು (ಟೆಲಿಸ್ಕೋಪ್) ಭಾರತದಲ್ಲಿ ಕಂಡುಹಿಡಿಯಲಾಗಿತ್ತು ಎಂದು ಹೇಳಿಕೊಂಡಿದ್ದು ಇದಕ್ಕೆ ಸಾಕ್ಷಿಯನ್ನೂ ನೀಡಿದ್ದಾರೆ. ವೈರಲ್ ಆದ ವಿಡಿಯೊದಲ್ಲಿ (Viral Video) ಅವರು ಕರ್ನಾಟಕದ ಹೊಯ್ಸಳೇಶ್ವರ ದೇವಾಲಯದಲ್ಲಿನ ಶಿಲ್ಪವನ್ನು ತೋರಿಸುತ್ತಿರುವುದು ಕಂಡುಬಂದಿದೆ.
ನಮ್ಮ ಇತಿಹಾಸ ಪುಸ್ತಕಗಳು ನಮಗೆ ಸುಳ್ಳು ಹೇಳಿವೆ ಎಂದು ವಿಡಿಯೊದಲ್ಲಿ ತಿಳಿಸಿದ ಪ್ರಯಾಣಿಕ ದೂರದರ್ಶಕವನ್ನು ಮೊದಲು ನೆದರ್‌ಲ್ಯಾಂಡ್ಸ್‌ನಲ್ಲಿ ಕಂಡುಹಿಡಿಯಲಾಯಿತು ಎಂದು ಹೇಳುತ್ತಾರೆ. ಆದರ ಆವಿಷ್ಕಾರಕ್ಕೆ 600 ವರ್ಷಕ್ಕೂ ಮೊದಲು ಭಾರತದಲ್ಲಿ ದೂರದರ್ಶಕ ಬಳಕೆ ಇತ್ತು. ಟೆಲಿಸ್ಕೋಪ್ ಚಿತ್ರಣವನ್ನು ಕಲ್ಲಿನಲ್ಲಿ ಕೆತ್ತಲಾಗಿದೆ ಎಂದು ಹೇಳಿದ್ದಾರೆ.
ವಿಡಿಯೊ ನೋಡಿ:
ಹಳೇಬೀಡಿನ ಹೊಯ್ಸಳ ದೇವಾಲಯವನ್ನು 12ನೇ ಶತಮಾನದಲ್ಲಿ ನಿರ್ಮಿಸಲಾಯಿತು. ಈ ದೇವಾಲಯವು ವಿಶಿಷ್ಟವಾದ ಕೆತ್ತನೆಗಳು, ವಿಶಿಷ್ಟ ಶಿಲ್ಪಗಳು ಮತ್ತು ಶ್ರೀಮಂತ ವಾಸ್ತುಶಿಲ್ಪಕ್ಕೆ ಹೆಸರುವಾಸಿ. ಲಿಯಾಮ್ ರಿಚರ್ಡ್ಸ್ ಶೇರ್ ಮಾಡಿರುವ ವಿಡಿಯೊದಲ್ಲಿ 12ನೇ ಶತಮಾನದ ಹೊಯ್ಸಳ ದೇವಾಲಯದ ಕೆತ್ತನೆಯೊಂದರಲ್ಲಿ ಇರುವ ವಸ್ತುವು ದೂರದರ್ಶಕ ಎಂದು ಉಲ್ಲೇಖಿಸಿದ್ದಾರೆ.
ಏಕಾಏಕಿ ಮಹಿಳೆ ಮೇಲೆ ದಾಳಿ ಮಾಡಿದ ಸಾಕು ನಾಯಿ; ಸಂತ್ರಸ್ತೆಗೇ ಕಪಾಳ ಮೋಕ್ಷ ಮಾಡಿದ ಮಾಲಕಿ
ಲಿಯಾಮ್ ರಿಚರ್ಡ್ಸ್ ತೋರಿಸಿದ ವಿಡಿಯೊದಲ್ಲಿ, ಕೆತ್ತನೆಯಲ್ಲಿ ಒಂದು ಸಣ್ಣ ಮಾನವ ಆಕೃತಿಯು ಕೈಯಲ್ಲಿ ಉದ್ದವಾದ ಕೊಳವೆಯಂತಹ ವಸ್ತುವನ್ನು ಹಿಡಿದು ಆಕಾಶವನ್ನು ನೋಡುತ್ತಿರುವುದು ಕಂಡು ಬಂದಿದೆ. ಆಸ್ಟ್ರೇಲಿಯಾದ ಲಿಯಾಮ್ ರಿಚರ್ಡ್ಸ್ ಪ್ರಕಾರ, ವಸ್ತುವು ದೂರದರ್ಶಕ. 500-600 ವರ್ಷಗಳ ಮೊದಲೇ ಭಾರತದ ಈ ದೇವಾಲಯದಲ್ಲಿ ಅದರ ಕೆತ್ತನೆ ಇದೆ ಎಂದು ಬಣ್ಣಿಸಿದ್ದಾರೆ.
ದೂರದರ್ಶಕಕ್ಕೆ ಗಾಜಿನ ಮಸೂರಗಳ ಅಗತ್ಯ ಬಹಳಷ್ಟಿದೆ. ಹಾಗಾಗಿ 12ನೇ ಶತಮಾನದ ಸಂದರ್ಭದಲ್ಲಿ ಅಂತಹ ಮಸೂರಗಳನ್ನು ತಯಾರಿಸಿದ ಯಾವುದೇ ಸಾಕ್ಷ್ಯಗಳು ಇಲ್ಲ ಎಂಬುದು ಕೆಲವು ತಜ್ಞರ ವಾದ.