Viral Video: ಏಕಾಏಕಿ ಮಹಿಳೆ ಮೇಲೆ ದಾಳಿ ಮಾಡಿದ ಸಾಕು ನಾಯಿ; ಸಂತ್ರಸ್ತೆಗೇ ಕಪಾಳ ಮೋಕ್ಷ ಮಾಡಿದ ಮಾಲಕಿ! ವಿಡಿಯೋ ನೋಡಿ
ಸಾಕು ನಾಯಿಯೊಂದು ಮಹಿಳೆಯ ಮೇಲೆ ದಾಳಿ ಮಾಡಿದೆ. ದಾಳಿ ಸಂದರ್ಭದಲ್ಲಿ ನಾಯಿ ಮಾಲೀಕರು ಅದೇ ಸ್ಥಳದಲ್ಲಿಯೇ ಇದ್ದರೂ ಸಹಾಯ ಮಾಡುವ ಬದಲು ಮಹಿಳೆಗೆ ಕಪಾಳಮೋಕ್ಷ ಮಾಡಿರುವ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸಾಂಧರ್ಬಿಕ ಚಿತ್ರ -
ಗಾಂಧಿನಗರ: ಗುಜರಾತ್‌ನ ರಾಜ್‌ಕೋಟ್‌ನಿಂದ (Rajkot) ಆಘಾತಕಾರಿ ವಿಡಿಯೋವೊಂದು ವೈರಲ್ ಆಗಿದ್ದು, ಸಾಕು ನಾಯಿಯೊಂದು ಮಹಿಳೆಯ ಮೇಲೆ ದಾಳಿ ಮಾಡಿದೆ. ದಾಳಿ ಸಂದರ್ಭದಲ್ಲಿ ನಾಯಿ ಮಾಲೀಕರು ಅದೇ ಸ್ಥಳದಲ್ಲಿಯೇ ಇದ್ದರೂ ಸಹಾಯ ಮಾಡುವ ಬದಲು ಮಹಿಳೆಗೆ ಕಪಾಳಮೋಕ್ಷ ಮಾಡಿದ್ದಾರೆ. ರಾಜ್‌ಕೋಟ್‌ನ ಕೊಥಾರಿಯಾ ಪ್ರದೇಶದ (Viral Video) ರೋಲೆಕ್ಸ್ ರಸ್ತೆಯಲ್ಲಿರುವ ಸುರ್ಭಿ ಪಾಸಿಬಲ್ ಫ್ಲಾಟ್ಸ್‌ನಲ್ಲಿ ಮಂಗಳವಾರ ನಡೆದ ಈ ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಪುರುಷರ ಹಕ್ಕುಗಳು ಮತ್ತು ಸಮಸ್ಯೆಗಳ ವಕಾಲತ್ತು ಗುಂಪು NCMIndia ಕೌನ್ಸಿಲ್ ಫಾರ್ ಮೆನ್ ಅಫೇರ್ಸ್ (@NCMIndiaa) ಈ ಘಟನೆಗಳ ವಿವರಗಳನ್ನು X ನಲ್ಲಿ ಹಂಚಿಕೊಂಡಿದೆ. ಅವರು ನಗರ ಪೊಲೀಸರನ್ನು ಟ್ಯಾಗ್ ಮಾಡಿ ಕಠಿಣ ಕ್ರಮಕ್ಕೆ ಕರೆ ನೀಡಿದ್ದಾರೆ.
ಸ್ಥಳೀಯ ವರದಿಗಳ ಪ್ರಕಾರ, ಆ ನಾಯಿ ಪಾಯಲ್ ಗೋಸ್ವಾಮಿ ಎಂಬ ಮಹಿಳೆಯ ಒಡೆತನದಲ್ಲಿತ್ತು. ಕಿರಣ್ ವಘೇಲಾ ಎಂಬ ಮತ್ತೊಬ್ಬ ನಿವಾಸಿ ಲಿಫ್ಟ್‌ಗಾಗಿ ಕಾಯುತ್ತಿದ್ದಾಗ ಅದು ಅವರ ಕಡೆಗೆ ಉಗ್ರ ಸ್ವರೂಪಿಯಾಗಿ ಓಡಿ ಬಂದಿದೆ. ನಾಯಿ ನಿಜವಾಗಿಯೂ ಅವಳನ್ನು ಕಚ್ಚಿದೆಯೇ ಎಂಬುದು ಸ್ಪಷ್ಟವಾಗಿಲ್ಲ. ನಾಯಿ ಮಾಲೀಕರು ಮಹಿಳೆಗೆ ಕಪಾಳ ಮೋಕ್ಷ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ನಾಯಿ ದಾಳಿ ಮಾಡಿದ ವಿಡಿಯೋ
WATCH | Woman in Rajkot attacked by pet dog, owner slaps victim instead of helping. #Rajkot #PetDog pic.twitter.com/oD1IxktaGQ
— The Tatva (@thetatvaindia) November 27, 2025
ನೆಟ್ಟಿಗರು ವಿಡಿಯೋ ನೋಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೆಚ್ಚಿನವರು ನಾಯಿಯ ದಾಳಿಗಿಂತ ಹೆಚ್ಚಾಗಿ ಮಾಲೀಕರ ಪ್ರತಿಕ್ರಿಯೆ ತಪ್ಪು ಎಂದು ಹೇಳಿದ್ದಾರೆ. ನಾಯಿಯು ವ್ಯಕ್ತಿಯ ಮೇಲೆ ದಾಳಿ ಮಾಡುತ್ತದೆ. ಕ್ಷಮೆಯಾಚಿಸುವ ಬದಲು, ಮಾಲೀಕರು ಆ ಮಹಿಳೆಗೆ ಕಪಾಳ ಮೋಕ್ಷ ಮಾಡಿದ್ದಾರೆ. ಇದು ಯಾವ ರೀತಿಯ ಮನಸ್ಥಿತಿ? ಕೇವಲ ಪ್ರಾಣಿಯನ್ನು ಸಾಕಿದರೆ ಸಾಲದು ಮಾನವೀಯತೆಯನ್ನು ಬೆಳೆಸಿಕೊಳ್ಳಬೇಕು ಎಂದು ಹಲವರು ಕಮೆಂಟ್ ಮಾಡಿದ್ದಾರೆ. ಇದು ಸಂಪೂರ್ಣವಾಗಿ ನಾಚಿಕೆಗೇಡಿನ ಸಂಗತಿ" ಎಂದು ಒಬ್ಬ ಬಳಕೆದಾರರು ಬರೆದಿದ್ದಾರೆ. ಆಕೆ ಮಾಡಿದ್ದು ಸ್ವೀಕಾರಾರ್ಹವಲ್ಲ. ಆದಾಗ್ಯೂ, ನಾಯಿ ಆಕೆಯನ್ನು ಕಚ್ಚಿಲ್ಲ ಎಂದು ತೋರುತ್ತದೆ" ಎಂದು ಮತ್ತೊಬ್ಬ ಬಳಕೆದಾರರು ಹೇಳಿದ್ದಾರೆ.
ಆಟವಾಡುತ್ತಿದ್ದ ಬಾಲಕನ ಮೇಲೆ ಪಿಟ್ ಬುಲ್ ನಾಯಿಯ ಡೆಡ್ಲಿ ಅಟ್ಯಾಕ್! ಶಾಕಿಂಗ್ ವಿಡಿಯೊ ಇಲ್ಲಿದೆ
ನಾಯಿ ಮಾಲೀಕತ್ವವು ಜವಾಬ್ದಾರಿಯೊಂದಿಗೆ ಬರುತ್ತದೆ. ಯಾರಾದರೂ ಗಾಯಗೊಂಡರೆ, ಆದ್ಯತೆಯು ಹೊಣೆಗಾರಿಕೆಯಾಗಿರಬೇಕು, ಆಕ್ರಮಣಶೀಲತೆಯಲ್ಲ ಎಂದು ಹಲವರು ಕಮೆಂಟ್ ಮಾಡಿದ್ದಾರೆ. ಮಹಿಳೆಯ ಮೇಲೆ ಹಲ್ಲೆ ನಡೆಸಿದ್ದಕ್ಕಾಗಿ ಆಕೆಯನ್ನು ಬಂಧಿಸಬೇಕು. ಕಿರಣ್ ಮಾನಸಿಕ ಮತ್ತು ದೈಹಿಕ ಹಿಂಸೆಗೆ ಪರಿಹಾರ ಪಡೆಯಬೇಕು" ಎಂದು ಒಬ್ಬ ಬಳಕೆದಾರರು ಹೇಳಿದರು.