ಸೋಶಿಯಲ್ ಮೀಡಿಯಾ ತೆರೆದರೆ ಸಾಕಷ್ಟು ರೀಲ್‌ಗಳು ಕಣ್ಮುಂದೆ ಬರುತ್ತವೆ. ಅಪ್ಪ-ಮಗಳ ರೀಲ್, ಅಜ್ಜಿ-ಮೊಮ್ಮಗನ ರೀಲ್ ಹೀಗೆ ಸಾಕಷ್ಟು ವಿಡಿಯೊಗಳು ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿರುತ್ತವೆ. ಇದೀಗ ಸೋಶಿಯಲ್ ಮೀಡಿಯಾದಲ್ಲಿ ತಾಯಿ-ಮಗನ ವಿಡಿಯೊವೊಂದು ವೈರಲ್ (Viral Video) ಆಗಿದೆ. ಈ ವಿಡಿಯೊ ನೋಡಿ ನೆಟ್ಟಿಗರು ಕಿಡಿಕಾರಿದ್ದಾರೆ. ಅದರಲ್ಲಿದ್ದ ತಾಯಿ-ಮಗನ ಸಂಬಂಧದ ಬಗ್ಗೆ ಹಲವರು ಪ್ರಶ್ನಿಸಿದ್ದಾರೆ. ಕೆಲವರು ಆ ಹುಡುಗ ಆಕೆಯ ಮಲಮಗನಿರಬೇಕು ಎಂದು ವ್ಯಂಗ್ಯವಾಡಿದ್ದಾರೆ.
ವೈರಲ್ ಆದ ವಿಡಿಯೊದಲ್ಲಿ, ತಾಯಿ ತನ್ನ ಮಗನೊಂದಿಗೆ ಡ್ಯಾನ್ಸ್ ಮಾಡಿದ್ದಾಳೆ. ಈ ವಿಡಿಯೊ ನೋಡಿ ನೆಟ್ಟಿಗರು ಕಳವಳ ವ್ಯಕ್ತಪಡಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಈ ಪೋಸ್ಟ್ 12.3 ಮಿಲಿಯನ್ ವ್ಯೂವ್ಸ್ ಮತ್ತು 150,000 ಹೆಚ್ಚು ಲೈಕ್‌ಗಳು ಮತ್ತು 1,900ಕ್ಕೂ ಹೆಚ್ಚು ಕಾಮೆಂಟ್‌ಗಳನ್ನು ಪಡೆದುಕೊಂಡಿದೆ. ನೆಟ್ಟಿಗರೊಬ್ಬರು ಇದರ ವಿರುದ್ಧ ಕಿಡಿಕಾರಿದ್ದು ತಾಯಿಯ ಬಟ್ಟೆಯ ಆಯ್ಕೆಯನ್ನು ಟೀಕಿಸಿದ್ದಾರೆ. ಮತ್ತೊಬ್ಬರು ಕಾಮೆಂಟ್ ಮಾಡಿ “ಇಂತಹ ವಿಡಿಯೊಗಳು ತಾಯ್ತನದ ಪ್ರಜ್ಞೆಯನ್ನು ಕುಗ್ಗಿಸುತ್ತವೆ” ಎಂದು ಹೇಳಿದ್ದಾರೆ.
ವಿಡಿಯೊ ಇಲ್ಲಿದೆ ನೋಡಿ...
ಈ ಸುದ್ದಿಯನ್ನೂ ಓದಿ:Viral Video: ಇವ್ನೇ ನಿಜವಾದ ಹೀರೋ! ನೀರಿಗೆ ಬಿದ್ದ ಮಗಳ ಜೀವ ಉಳಿಸಲು ತಂದೆ ಮಾಡಿದ್ದೇನು ಗೊತ್ತಾ?
ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರಲ್ಲಿ ಆಕ್ರೋಶವನ್ನು ಹುಟ್ಟುಹಾಕುವ ವಿಡಿಯೊ ವೈರಲ್ ಆಗಿದ್ದು ಇದೇ ಮೊದಲಲ್ಲ. ಈ ಹಿಂದೆ ಇದು ತಾಯಿ ಮತ್ತು ಮಗನ ವಿಡಿಯೊವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ನೆಟ್ಟಿಗರು ಕೋಪಗೊಳ್ಳುವಂತೆ ಮಾಡಿತ್ತು. ಇದರಲ್ಲಿ ತಾಯಿ ಮಗನ ಜತೆ ಅಸಭ್ಯವಾಗಿ ವರ್ತಿಸುತ್ತಾ ಡ್ಯಾನ್ ಮಾಡಿದ್ದಳು.