ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಶೂ ಒಳಗೆ ಬಿಯರ್ ಸುರಿದು ಕುಡಿದ ಸಂಸದ; ಏನಿದು 'ಶೂಯಿ' ಸಂಪ್ರದಾಯ?

ಸಂಸತ್ತಿನಲ್ಲಿ ಪಶ್ಚಿಮ ಆಸ್ಟ್ರೇಲಿಯಾದ ಸಂಸದ ಕೈಲ್ ಮೆಕ್‌ಗಿನ್‍ಗೆ ತಮ್ಮ ವಿದಾಯ ಭಾಷಣವನ್ನು ಮುಕ್ತಾಯಗೊಳಿಸಿದ ನಂತರ ಅವರು ಶೂ ಒಳಗೆ ಬಿಯರ್ ತುಂಬಿಸಿ ಅದನ್ನು ಕುಡಿದಿದ್ದಾರೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಇದೀಗ ವೈರಲ್ ಆಗಿದೆ.

ಶೂ ಒಳಗೆ ಬಿಯರ್‌ ಸುರಿದು ಕುಡಿದ ಸಂಸದ

Profile pavithra May 24, 2025 10:26 PM

ಕ್ಯಾನ್‌ಬೆರಾ: ಪ್ರಪಂಚದಾದ್ಯಂತ ಹಲವು ಭಾಷೆ, ಸಂಸ್ಕೃತಿ ಸಂಪ್ರದಾಯಗಳಿವೆ. ಒಂದೊಂದು ದೇಶದಲ್ಲಿ ಒಂದೊಂದು ರೀತಿಯ ವಿಭಿನ್ನ ಸಂಪ್ರದಾಯ, ಆಚರಣೆಗಳು ಜಾರಿಯಲ್ಲಿವೆ. ಉದಾಹರಣೆಗೆ ಇಥಿಯೋಪಿಯಾದಲ್ಲಿ ಕಾಫಿ ಸಮಾರಂಭವು ಜೆಬೆನಾ ಎಂಬ ಪಾತ್ರೆಯಲ್ಲಿ ಕಾಫಿಯನ್ನು ಕುದಿಸುವ ಒಂದು ಧಾರ್ಮಿಕ ಆಚರಣೆ. ಅದೇ ರೀತಿ, ಆಸ್ಟ್ರೇಲಿಯಾದಲ್ಲಿ 'ಶೂಯಿ' ('shoe' tradition) ಎಂಬ ಪದ್ಧತಿ ಇದೆ. ಇದು ಶೂನಿಂದ ಮದ್ಯಪಾನ ಮಾಡುವುದು. ಅಂದರೆ ಶೂ ಒಳಗೆ ಬಿಯರ್ ತುಂಬಿಸಿ ಅದನ್ನು ಕುಡಿಯುವುದು. ಇದೀಗ ಆಸ್ಟ್ರೇಲಿಯಾದ ಸಂಸದರೊಬ್ಬರು ಸಂಸತ್‍ನಲ್ಲಿ ಮದ್ಯಪಾನ ಮಾಡುತ್ತಿರುವ ವಿಡಿಯೊವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದ್ದು, ಇದರ ಹಿಂದಿನ ಕಾರಣವೇನೆಂದು ಹಲವರು ಆಶ್ಚರ್ಯ ಪಡುತ್ತಿದ್ದಾರೆ.

ಸಂಸತ್ತಿನಲ್ಲಿ ಪಶ್ಚಿಮ ಆಸ್ಟ್ರೇಲಿಯಾದ ಸಂಸದ ಕೈಲ್ ಮೆಕ್‌ಗಿನ್ ತಮ್ಮ ವಿದಾಯ ಭಾಷಣವನ್ನು ಮುಕ್ತಾಯಗೊಳಿಸಿದ ನಂತರ ಅವರು ಈ ‘ಶೂಯಿ’ ಸಂಪ್ರದಾಯವನ್ನು ಆಚರಣೆ ಮಾಡಿದ್ದಾರೆ. ಈ ಪದ್ಧತಿಯ ಪ್ರಕಾರ ಶೂ ತೆಗೆದು, ಅದರಲ್ಲಿ ಬಿಯರ್ ತುಂಬಿಸಿ, ಕುಡಿಯುವ ಸಂಪ್ರದಾಯವಾಗಿದೆಯಂತೆ.

ವಿಡಿಯೊ ಇಲ್ಲಿದೆ ನೋಡಿ...



ಕೈಲ್ ಮೆಕ್‌ಗಿನ್ ಬಿಯರ್ ಕ್ಯಾನ್ ಅನ್ನು ಒಡೆದು, ಭಾಷಣವನ್ನು ಪ್ರಾರಂಭಿಸುವ ಮೊದಲು ಮೇಜಿನ ಮೇಲೆ ಇಟ್ಟಿದ್ದ ಶೂ ತೆಗೆದುಕೊಂಡು, ಪಾನೀಯವನ್ನು ಶೂ ಒಳಗೆ ಸುರಿದು ಚಪ್ಪಾಳೆ ತಟ್ಟಿದ್ದಾರೆ. ಇತರ ಹಲವಾರು ಸಂಸದೀಯ ಸದಸ್ಯರು ಕೂಡ ಈ ಸಂದರ್ಭದಲ್ಲಿ ಚಪ್ಪಾಳೆ ತಟ್ಟಿದ್ದಾರೆ.

ಈ ವಿಚಿತ್ರ ಸಂಪ್ರದಾಯವನ್ನು ಅನುಸರಿಸಿದ್ದು, ಕೈಲ್ ಮೆಕ್‌ಗಿನ್ ಒಬ್ಬರೇ ಅಲ್ಲ. ಆಸ್ಟ್ರೇಲಿಯಾದ ಫಾರ್ಮುಲಾ ಒನ್ ಚಾಲಕ ಡೇನಿಯಲ್ ರಿಕಿಯಾರ್ಡೊ, ನಟರಾದ ಸರ್ ಪ್ಯಾಟ್ರಿಕ್ ಸ್ಟೀವರ್ಟ್, ಜಿಮ್ಮಿ ಫಾಲನ್, ಹಗ್ ಗ್ರಾಂಟ್ ಮತ್ತು ಗೆರಾರ್ಡ್ ಬಟ್ಲರ್, ಹಾಗೆಯೇ ಮೆಷಿನ್ ಗನ್ ಕೆಲ್ಲಿ ಸೇರಿದಂತೆ ಇನ್ನೂ ಅನೇಕರು "ಶೂಯಿ" ಪ್ರದರ್ಶಿಸಿದ ಪ್ರಸಿದ್ಧ ವ್ಯಕ್ತಿಗಳ ಪಟ್ಟಿಗೆ ಸೇರುತ್ತಾರೆ.

‘ಶೂಯಿ' ಸಂಪ್ರದಾಯದ ಬಗ್ಗೆ ಇನ್ನಷ್ಟು ಮಾಹಿತಿ

ಆಸ್ಟ್ರೇಲಿಯಾವು ಆಧುನಿಕ ಕಾಲದಲ್ಲಿ, ವಿಶೇಷವಾಗಿ ಮೋಟಾರ್‌ಸ್ಪೋರ್ಟ್ ಮತ್ತು ಪಾಪ್ ಸಂಸ್ಕೃತಿಯಲ್ಲಿ ಶೂಯಿ ಸಂಪ್ರದಾಯದೊಂದಿಗೆ ಹೆಚ್ಚು ನಿಕಟ ಸಂಬಂಧ ಹೊಂದಿದೆ. ಐತಿಹಾಸಿಕವಾಗಿ, 20ನೇ ಶತಮಾನದ ಆರಂಭದಲ್ಲಿ ಯುರೋಪ್‌ನಲ್ಲಿ ಶೂನಿಂದ ಕುಡಿಯುವ ಸಂಪ್ರದಾಯ ಕಾಣಿಸಿಕೊಂಡಿದೆ. ಅಲ್ಲಿ ಇದನ್ನು ಕೆಲವೊಮ್ಮೆ ಮೋಜು ಮಸ್ತಿಯ ಸಂಕೇತವಾಗಿ ನೋಡಲಾಗುತ್ತಿತ್ತು. ಜರ್ಮನ್ ಮಿಲಿಟರಿ ಜಾನಪದದಲ್ಲಿ, ಬೂಟಿನಿಂದ ಕುಡಿಯುವುದನ್ನು ಅದೃಷ್ಟವೆಂದು ಪರಿಗಣಿಸಲಾಗಿತ್ತು.

ಈ ಸುದ್ದಿಯನ್ನೂ ಓದಿ:Viral Video: ವೇದಿಕೆಯ ಮೇಲೆಯೇ ಕುರ್ಚಿಯಿಂದ ಬಿದ್ದ ವಧು; ವರ ಮಾಡಿದ್ದು ನೋಡಿ ನೆಟ್ಟಿಗರು ಫುಲ್‌ ಶಾಕ್!‌ ವಿಡಿಯೊ ಇದೆ

ಆಸ್ಟ್ರೇಲಿಯಾದಲ್ಲಿ ಫಾರ್ಮುಲಾ 1 ಚಾಲಕ ಡೇನಿಯಲ್ ರಿಕಿಯಾರ್ಡೊ, ರೇಸ್‌ಗಳ ನಂತರ ವೇದಿಕೆಯ ಮೇಲೆ ತನ್ನ ರೇಸಿಂಗ್ ಶೂನಿಂದ ಷಾಂಪೇನ್ ಕುಡಿಯುವ ಮೂಲಕ ಶೂಯಿಯನ್ನು ಜನಪ್ರಿಯಗೊಳಿಸಿದ್ದನು. ಕೆಲವರಿಗೆ ಮನರಂಜನೆ ನೀಡಿದರೆ, ಇನ್ನು ಕೆಲವರು ಈ ಸಂಪ್ರದಾಯವನ್ನು ಅನೈರ್ಮಲ್ಯವೆಂದು ಕರೆದಿದ್ದಾರೆ.