ರೆಸ್ಟೋರೆಂಟ್‌ನಲ್ಲಿ ದೆವ್ವ ಕಂಡ ಬಾಲಕ ಮಾಡಿದ್ದೇನು? ವಿಡಿಯೋ ನೋಡಿ
Viral Video: ವಾರಣಾಸಿಯ ಭಯಾನಕ ಥೀಮ್ ಹೊಂದಿರುವ ರೆಸ್ಟೋರೆಂಟ್‌ನಲ್ಲಿ ವಿಚಿತ್ರವಾದ ದೃಶ್ಯ ವೊಂದು ಕಂಡು ಬಂದಿದೆ. ಈ ರೆಸ್ಟೋರೆಂಟ್‌ನಲ್ಲಿ ಅಸ್ಥಿಪಂಜರದಂತಹ ಭಯಾನಕ ವೇಷ ಹಾಕಿ ಕೊಂಡಿದ್ದ ಕಲಾವಿದನೊಬ್ಬ ಕಂಡು ಬಂದಿದ್ದು ಕುಟುಂಬದ ಜೊತೆ ಆಗಮಿಸಿದ್ದ ಮಗುವೊಂದು ಈ ದೃಶ್ಯ ನೋಡಿ ಬೆಚ್ಚಿ ಬಿದ್ದಿದೆ. ಸದ್ಯ ಇದರ ವಿಡಿಯೊ ವೈರಲ್ ಆಗುತ್ತಿದೆ.
ವಾರಣಾಸಿಯ ಭಯಾನಕ ಥೀಮ್ ರೆಸ್ಟೋರೆಂಟ್ -
ವಾರಣಾಸಿ,ಮಾ. 11: ಇತ್ತೀಚೆಗೆ ಹೆಚ್ಚಿನ ಜನರು ದುಬಾರಿ ರೆಸ್ಟೊರೆಂಟ್ ಗಳಿಗೆ ತೆರಳುತ್ತಾರೆ. ಇಲ್ಲಿಯ ಆಹಾರ, ವಿಭಿನ್ನ ಥೀಮ್ ಗಳ ಅನುಭವಕ್ಕಾಗಿ ಭೇಟಿ ನೀಡುವವರು ಅನೇಕರು ಇದ್ದಾರೆ. ಅಂತೆಯೇ ವಾರಣಾಸಿಯ ಭಯಾನಕ ಥೀಮ್ ಹೊಂದಿರುವ ರೆಸ್ಟೋರೆಂಟ್‌ನಲ್ಲಿ ವಿಚಿತ್ರವಾದ ದೃಶ್ಯ ವೊಂದು ಕಂಡುಬಂದಿದೆ. ಈ ರೆಸ್ಟೋರೆಂಟ್‌ನಲ್ಲಿ ಅಸ್ಥಿಪಂಜರದಂತಹ ಭಯಾನಕ ವೇಷ ಹಾಕಿಕೊಂಡಿದ್ದ ಕಲಾವಿದನೊಬ್ಬ ಕಂಡು ಬಂದಿದ್ದು ಕುಟುಂಬದ ಜೊತೆ ಆಗಮಿಸಿದ್ದ ಮಗುವೊಂದು ಈ ದೃಶ್ಯ ನೋಡಿ ಬೆಚ್ಚಿ ಬಿದ್ದಿದೆ. ಸದ್ಯ ಇದರ ವಿಡಿಯೊ ವೈರಲ್ (Viral Video) ಆಗುತ್ತಿದೆ.
ಅನೇಕ ರೆಸ್ಟೋರೆಂಟ್‌ಗಳು ತಮ್ಮ ಊಟದ ಜೊತೆಗೆ ಗ್ರಾಹಕರಿಗೆ ಸ್ಮರಣೀಯ ಅನುಭವವನ್ನು ನೀಡಲು ಹೊಸ ಥೀಮ್‌ಗಳನ್ನು ಪ್ರಯತ್ನಿಸುತ್ತಿವೆ. ಸೃಜನಶೀಲ ಒಳಾಂಗಣದಿಂದ ಹಿಡಿದು ವಿವಿಧ ಆಹಾರ ಶೈಲಿಯಲ್ಲಿಯೂ ಜನಪ್ರಿಯವಾಗುತ್ತಿವೆ. ಆದರೆ ಉತ್ತರ ಪ್ರದೇಶದ ವಾರಣಾಸಿಯ ಹಾರರ್ ಥೀಮ್ ರೆಸ್ಟೋರೆಂಟ್ ನಲ್ಲಿ ಕಂಡು ಬಂದ ಘಟನೆ ನೋಡಿ ನೆಟ್ಟಿಗರು ಕಳವಳ ವ್ಯಕ್ತಪಡಿಸಿದ್ದಾರೆ.
ವೀಡಿಯೊ ನೋಡಿ:
ಈ ಹೋಟೆಲ್ ನ ಗೋಡೆಗಳನ್ನು ಕಪ್ಪು ಬಣ್ಣ ಬಳಿದು ಅಸ್ಥಿ ಪಂಜರ ರೇಖಾಚಿತ್ರಗಳನ್ನು ರಚಿಸಲಾಗಿದೆ. ಅದೇ ರೀತಿ ಪ್ರೇತ ಆಕೃತಿಗಳು ಮತ್ತು ಹೊಳೆಯುವ ದೀಪಗಳಿಂದ ಅಲಂಕರಿಸ ಲಾಗಿದೆ. ಇದೇ ಹೋಟೆಲ್ ಗೆ ದಂಪತಿಗಳು ತಮ್ಮ ಸಣ್ಣ ಮಗುವಿ ನೊಂದಿಗೆ ಇಲ್ಲಿಗೆ ಊಟಕ್ಕೆ ಬಂದಿದ್ದರು.
ಈ ಸಂದರ್ಭದಲ್ಲಿ ಭಯಾನಕ ವೇಷಭೂಷಣ ಧಾರಿಯೊಬ್ಬರು ರೆಸ್ಟೋರೆಂಟ್‌ನಲ್ಲಿ ಅತಿಥಿಗಳೊಂದಿಗೆ ಸಂವಹನ ನಡೆಸುತ್ತಿದ್ದಾರೆ. ಆ ವ್ಯಕ್ತಿಯು ಉದ್ದವಾದ ಕಪ್ಪು ನಿಲುವಂಗಿಯನ್ನು ಧರಿಸಿ ತಲೆಬುರುಡೆಯ ಆಕಾರದ ವಸ್ತುಗಳಿಂದ ಮಾಡಿದ ಹಾರವನ್ನು ಧರಿಸಿದ್ದಾರೆ. ಆತ ಮಗುವಿನ ಬಳಿ ಬಂದು ಕೈ ಕುಲುಕಲು ಪ್ರಯತ್ನಿಸಿದ್ದು ಇದರಿಂದ ಮಗು ಭಯದಿಂದ ತಾಯಿಯ ಹಿಂದೆ ಅಡಗಿಕೊಂಡಿದೆ.
Viral Video: ನವ ಜೋಡಿಗಳಿಗೆ ಶುಭ ಹಾರೈಸುತ್ತಿದ್ದಾಗಲೇ ದಿಢೀರ್ ಆಗಿ ಕುಸಿದ ವೇದಿಕೆ; ವಿಡಿಯೋ ವೈರಲ್
ವೇಷಧಾರಿಯೂ ಬಾಲಕನನ್ನು ಸ್ನೇಹಪರ ರೀತಿಯಲ್ಲಿ ಸ್ವಾಗತಿಸಲು ಪ್ರಯತ್ನಿಸುವುದನ್ನು ಮುಂದುವರಿಸುತ್ತಾನೆ. ಅದೇ ಕ್ಷಣದಲ್ಲಿ ಆತ ಇದ್ದಕ್ಕಿದ್ದಂತೆ ಭಯಾನಕವಾಗಿ ಕಿರುಚುವ ಸನ್ನೆ ಮಾಡಿದ್ದಾನೆ. ಇದರಿಂದ ಭಯಪಟ್ಟ ಮಗು ಜೋರಾಗಿ ಅಳಲು ಪ್ರಾರಂಭ ಮಾಡಿದೆ.
ಮಾರ್ಚ್ 8 ರಂದು ಹಂಚಿಕೊಳ್ಳಲಾದ ಈ ವೀಡಿಯೊ ಈಗಾಗಲೇ 20 ಮಿಲಿಯನ್ ವೀಕ್ಷಣೆಗಳನ್ನು ದಾಟಿದೆ ಮತ್ತು ಆನ್‌ಲೈನ್‌ನಲ್ಲಿ ಅನೇಕ ಪ್ರತಿಕ್ರಿಯೆಗಳನ್ನು ಹುಟ್ಟುಹಾಕಿದೆ. ಬಳಕೆದಾರರೊಬ್ಬರು ತುಂಬಾ ತಪ್ಪು, ಇದು ಮಗುವಿನ ಮಾನಸಿಕ ಸಮತೋಲನವನ್ನು ಇನ್ನಷ್ಟು ಹದಗೆಡಿಸಬಹುದು. ಅಂತಹ ಭಯಾನಕ ಸ್ಥಳ ಮಕ್ಕಳನ್ನು ಎಂದಿಗೂ ಕರೆದೊಯ್ಯಬಾರದು ಎಂದು ಕಳವಳ ವ್ಯಕ್ತಪಡಿಸಿದ್ದಾರೆ.