ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಪಂದ್ಯ ಶ್ರೇಷ್ಠ ಆಟಗಾರರಿಗೆ ಕಪ್ ಬದಲು‌ ಜೀವಂತ ನಾಟಿ‌ಕೋಳಿ ಬಹುಮಾನ! ವಿಡಿಯೋ ನೋಡಿ

Viral Video: ಉತ್ತರ ಪ್ರದೇಶದ ದೇವರಿವಾ ಜಿಲ್ಲೆಯಲ್ಲಿ ನಡೆದ ಸ್ಥಳೀಯ ಕ್ರಿಕೆಟ್ ಟೂರ್ನಿಯೊಂದು ವಿಭಿನ್ನ ಕಾರಣಕ್ಕಾಗಿ ಸುದ್ದಿಯಾಗುತ್ತಿದೆ. ಗೆದ್ದವರಿಗೆ ಟ್ರೋಫಿ ಅಥವಾ ನಗದು ಬಹುಮಾನಗಳ ಬದಲಿಗೆ ಸಾರ್ವ ಜನಿಕರನ್ನು ಗಮನ ಸೆಳೆಯುವ ಬಹುಮಾನವನ್ನು ಆಯ್ಕೆ ಮಾಡಿದ್ದಾರೆ. ಪ್ರತಿ ಪಂದ್ಯದ ನಂತರ ವಿಜೇತ ತಂಡಕ್ಕೆ ನಾಟಿ ಕೋಳಿಯನ್ನು ವಿತರಣೆ ಮಾಡಲಾಗಿದ್ದು ಇದರ ವಿಡಿಯೊ ಸದ್ಯ ಭಾರೀ ವೈರಲ್ ಆಗಿದೆ.

ಕ್ರಿಕೆಟ್ ಗೆದ್ದ ತಂಡಕ್ಕೆ ನಾಟಿ ಕೋಳಿ ಪ್ರಶಸ್ತಿ ನೀಡಿದ ಆಯೋಜಕರು

ದೇವರಿವಾ,ಫೆ.12: ಸಾಮಾನ್ಯವಾಗಿ ಕ್ರಿಕೆಟ್ ಅಂತ ಬಂದಾಗ ಕಪ್ ನಮ್ದೆ ಎಂದು ಹೇಳಿರುವುದನ್ನು ಕಂಡಿದ್ದೇವೆ. ಅದರಲ್ಲೂ ಕ್ರಿಕೆಟ್ ಪಂದ್ಯಾವಳಿಗಳಲ್ಲಿ ಪಂದ್ಯ ಗೆದ್ದಾಗ ನಮ್ಮ ಕಣ್ಣೇದುರು ಬರುವುದೇ ಸ್ಟೆಜ್ ಮೇಲಿಟ್ಟ ಟ್ರೋಫಿ. ಆದರೆ ಉತ್ತರ ಪ್ರದೇಶದ ದೇವರಿವಾ ಜಿಲ್ಲೆಯಲ್ಲಿ ನಡೆದ ಸ್ಥಳೀಯ ಕ್ರಿಕೆಟ್ ಟೂರ್ನಿಯೊಂದು ವಿಭಿನ್ನ ಕಾರಣಕ್ಕಾಗಿ ಸುದ್ದಿಯಾಗುತ್ತಿದೆ. ಗೆದ್ದವರಿಗೆ ಟ್ರೋಫಿ ಅಥವಾ ನಗದು ಬಹುಮಾನಗಳ ಬದಲಿಗೆ ಸಾರ್ವಜನಿಕರನ್ನು ಗಮನ ಸೆಳೆಯುವ ಬಹುಮಾನವನ್ನು ಆಯ್ಕೆ ಮಾಡಿದ್ದಾರೆ. ಪ್ರತಿ ಪಂದ್ಯದ ನಂತರ ವಿಜೇತ ತಂಡಕ್ಕೆ ನಾಟಿ ಕೋಳಿಯನ್ನು ವಿತರಣೆ ಮಾಡಲಾಗಿದ್ದು ಇದರ ವಿಡಿಯೊ ಸದ್ಯ ಭಾರೀ ವೈರಲ್ (Viral Video) ಆಗಿದೆ.

ಮಹುವಾರಿ ಪ್ರೀಮಿಯರ್ ಲೀಗ್ (MPL) ಎಂದು ಹೆಸರಿಸಲಾದ ಪಂದ್ಯಾವಳಿಯು ಫೆಬ್ರವರಿ 1 ರಿಂದ ಫೆಬ್ರವರಿ 8, 2026 ರವರೆಗೆ ಪಠಾರ್ದೇವ ವಿಧಾನಸಭಾ ಕ್ಷೇತ್ರದ ಅಡಿಯಲ್ಲಿ ಮಹುವಾರಿ ಗ್ರಾಮದಲ್ಲಿ ನಡೆಯಿತು. 16 ಸ್ಥಳೀಯ ತಂಡಗಳನ್ನು ಒಳಗೊಂಡ ಸ್ಪರ್ಧೆಯು ಸ್ಥಳೀಯ‌ ಹಳ್ಳಿಗಳಿಂದ ಹೆಚ್ಚಿನ ಜನಸಮೂಹವನ್ನು ಆಕರ್ಷಿಸಿದೆ. ಕ್ರಿಕೆಟ್ ಪಂದ್ಯಾವಳಿಯನ್ನು ನೋಡಲು ಸುತ್ತಮುತ್ತಲಿನ ಹಳ್ಳಿಗಳಿಂದ ಸಾವಿರಾರು ಜನರು ಭಾಗವಹಿಸಿದ್ದರು.

ವಿಡಿಯೋ ನೋಡಿ:



ಆದರೆ ಇಲ್ಲಿನ ಕ್ರೀಡೆಯನ್ನು ಸಾಂಸ್ಕೃತಿಕ ಆಚರಣೆಯೊಂದಿಗೆ ಮಾಡಲು ತಯಾರಿ ನಡೆಸಿದ್ದಾರೆ. ಸಾಮಾನ್ಯವಾಗಿ ಬಹುಮಾನ ವಿತರಣಾ ಸಮಾರಂಭದಲ್ಲಿ ಟ್ರೊಫಿಗಳು ಇರುತ್ತವೆ. ಆದರೆ ಇಲ್ಲಿ ಸಂಘಟಕರು ಕೈಯಲ್ಲಿ ಜೀವಂತ ಕೋಳಿಗಳನ್ನು ಹಿಡಿದು ನಿಂತಿದ್ದು ಪ್ರೇಕ್ಷಕರು ಮೊದಲು ಗೊಂದಲಕ್ಕೀಡಾಗಿದ್ದಾರೆ. ಪ್ರತಿ ಪಂದ್ಯದ ನಂತರ ವಿಜೇತ ತಂಡಕ್ಕೆ ನಾಟಿ ಕೋಳಿಯನ್ನು ನೀಡಲಾಗಿದೆ‌.

Viral Video: ಸಿಎಂ ಯೋಗಿ- ಬಾಲಕನ ಮಧ್ಯೆ ನಡೆದ 'ಚಿಪ್ಸ್ ಡೀಲ್' ಸಕ್ಸಸ್; ವೈರಲ್‌ ಆಗ್ತಿರೋ ವಿಡಿಯೋ ನೋಡಿ

ಸಂಘಟಕರು ಕೋಳಿಯನ್ನು ಹಿಡಿದುಕೊಂಡು ನಿಂತಾಗ ಮೈದಾನದಾದ್ಯಂತ ನಗು, ಚಪ್ಪಾಳೆ ಮತ್ತು ಮನೋರಂಜನೆಯಾಗಿ ಮಾರ್ಪಟ್ಟಿತು. ಅನೇಕ ಬಳಕೆದಾರರು ಬಹುಮಾನ ವ್ಯವಸ್ಥೆಯ ಸೃಜನಶೀಲತೆ, ಸರಳತೆ ಮತ್ತು ಸಾಂಸ್ಕೃತಿಕ ಆಚರಣೆಯನ್ನು ಶ್ಲಾಘಿಸಿದರು.‌ ಗ್ರಾಮೀಣ ಪ್ರದೇಶ ಗಳಲ್ಲಿ, ಕೋಳಿ, ಧಾನ್ಯಗಳು ಅಥವಾ ಕೃಷಿ ಪರಿಕರಗಳು‌ ಅಲಂಕಾರಿಕ ಟ್ರೋಫಿಗಳಿಗಿಂತ ಹೆಚ್ಚಿನ ಮೌಲ್ಯವನ್ನು ಹೊಂದಿವೆ ಎಂದು ಹಲವಾರು ನೆಟಿಜನ್‌ಗಳು ಕಾಮೆಂಟ್ ಮಾಡಿದ್ದಾರೆ. ಬಳಕೆದಾರ ರೊಬ್ಬರು ಇಂತಹ ಆಚರಣೆ ಭಾರತದಲ್ಲಿ ಮಾತ್ರ ಸಾಧ್ಯ ಎಂದು ಬರೆದಿದ್ದಾರೆ.