ಪ್ಯಾರಾಗ್ಲೈಡಿಂಗ್ (Paragliding), ಬಂಗೀ ಜಂಪ್ ಇವೆಲ್ಲವೂ ಸಾಹಸಮಯ ಚಟುವಟಿಕೆ ಆದ್ದರಿಂದ ಇದರಿಂದ ಸಾಕಷ್ಟು ಜನ ಪ್ರಾಣಕ್ಕೆ ಕುತ್ತು ತಂದುಕೊಂಡಂತಹ ಘಟನೆ ನಡೆದಿದೆ.ಇದೀಗ ಗುಜರಾತ್‌ನ ಪ್ರವಾಸಿಗನೊಬ್ಬ ಹಿಮಾಚಲ ಪ್ರದೇಶದ ಕಾಂಗ್ರಾ ಜಿಲ್ಲೆಯ ಧರ್ಮಶಾಲಾ ಬಳಿ ಪ್ಯಾರಾಗ್ಲೈಡಿಂಗ್ ಮಾಡುವಾಗ ಆಯತಪ್ಪಿ ಬಿದ್ದು ಸಾವನ್ನಪ್ಪಿದ ಘಟನೆಯೊಂದು ನಡೆದಿದೆ.ಈ ಘಟನೆಯ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್(Viral Video) ಆಗಿದೆ.
ಮೃತ ಸತೀಶ್ ರಾಜೇಶ್, ಇಂದ್ರು ನಾಗ್ ಪ್ಯಾರಾಗ್ಲೈಡಿಂಗ್ ಸೈಟ್‌ನ ಪೈಲಟ್ ಸೂರಜ್ ಅವರೊಂದಿಗೆ ಟಂಡೆಮ್ ಪ್ಯಾರಾಗ್ಲೈಡಿಂಗ್‌ನಲ್ಲಿ ಹಾರುತ್ತಿದ್ದಾಗ, ಅವರ ಪ್ಯಾರಾಗ್ಲೈಡರ್ ಲಿಫ್ಟ್ ಆದ ತಕ್ಷಣ ಸಮತೋಲನ ಕಳೆದುಕೊಂಡು ಕಂದಕಕ್ಕೆ ಬಿದ್ದಿತ್ತು. ಈ ಘಟನೆಯ ವೀಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ವಿಡಿಯೊ ಇಲ್ಲಿದೆ ನೋಡಿ...
ಘಟನೆಯ ವೇಳೆ ಗಂಭೀರವಾಗಿ ಗಾಯಗೊಂಡ ಸತೀಶ್ ಅನ್ನು ಮೊದಲು ಕಾಂಗ್ರಾದ ತಾಂಡಾ ವೈದ್ಯಕೀಯ ಕಾಲೇಜಿಗೆ ಕರೆದೊಯ್ಯಲಾಯಿತು.ನಂತರ ಮುಂದಿನ ಚಿಕಿತ್ಸೆಗಾಗಿ ಧರ್ಮಶಾಲಾದ ಆಸ್ಪತ್ರೆಗೆ ಸೇರಿಸಲಾಯಿತು. ಆದರೆ ಆತ ಗಂಭೀರವಾಗಿ ಗಾಯಗೊಂಡಿದ್ದರಿಂದ ಸೋಮವಾರ (ಜುಲೈ 14)ಸಾವನ್ನಪ್ಪಿದ್ದಾನೆ. ಇನ್ನು ಪೈಲಟ್ ಸೂರಜ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಸತೀಶ್ ಅವರ ಕುಟುಂಬಕ್ಕೆ ಮಾಹಿತಿ ನೀಡಲಾಗಿದ್ದು, ಮರಣೋತ್ತರ ಪರೀಕ್ಷೆ ಮುಗಿದ ನಂತರ ಅವರ ಶವವನ್ನು ಕುಟುಂಬಕ್ಕೆ ನೀಡಲಾಗುವುದು ಎಂದು ಹೆಚ್ಚುವರಿ ನಗರ ಪೊಲೀಸ್ ವರಿಷ್ಠಾಧಿಕಾರಿ (ಎಎಸ್‌ಪಿ) ಹಿತೇಶ್ ಲಖನ್‌ಪಾಲ್ ಅವರು ತಿಳಿಸಿದ್ದಾರೆ. ನಿರ್ಲಕ್ಷ್ಯ ಅಥವಾ ಸುರಕ್ಷತಾ ಮಾನದಂಡಗಳ ಉಲ್ಲಂಘನೆಯೇ ಈ ಘಟನೆಗೆ ಕಾರಣವೆಂಬುದನ್ನು ತಿಳಿಯಲು ಸ್ಥಳೀಯ ಸ್ಟೇಷನ್ ಹೌಸ್ ಆಫೀಸರ್ (ಎಸ್‌ಎಚ್‌ಒ) ತನಿಖೆ ನಡೆಸುತ್ತಿದ್ದಾರೆ.
ಈ ಸುದ್ದಿಯನ್ನೂ ಓದಿ:Viral Video: ಆನೆ ಮರಿ ಡೆಲಿವರಿಗೆ 2 ಗಂಟೆ ರೈಲು ಸಂಚಾರ ಬಂದ್; ಇಲ್ಲಿದೆ ವೈರಲ್ ವಿಡಿಯೋ!
ಇಂದ್ರು ನಾಗ್‌ನಲ್ಲಿ ಈ ಹಿಂದೆ ಕೂಡ ಇಂಥದ್ದೇ ಘಟನೆಗಳಿಗೆ ಸಾಕ್ಷಿಯಾಗಿತ್ತು. ಇತ್ತೀಚೆಗೆ ಗುಜರಾತ್‌ನ ಭಾವಸರ್ ಖುಷಿ ಎಂಬ ಪ್ರವಾಸಿಗನೊಬ್ಬನು ಅದೇ ಸ್ಥಳದಲ್ಲಿ ಟಂಡೆಮ್ ವಿಮಾನದಿಂದ ಬಿದ್ದು ಸಾವನ್ನಪ್ಪಿದ್ದನು. ಹಾಗೇ ಈ ಪ್ರದೇಶದಲ್ಲಿ ಇನ್ನೂ ಎರಡು ಪ್ಯಾರಾಗ್ಲೈಡಿಂಗ್ ಸಾವುಗಳು ಕೂಡ ಸಂಭವಿಸಿತ್ತು.ಕಳೆದ ಎರಡೂವರೆ ವರ್ಷಗಳಲ್ಲಿ, ಹಿಮಾಚಲ ಪ್ರದೇಶದಲ್ಲಿ ಪ್ಯಾರಾಗ್ಲೈಡಿಂಗ್ ಅಪಘಾತಗಳಲ್ಲಿ 12 ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ.