ಭುವನೇಶ್ವರ, ಮೇ 19: ಒಡಿಶಾದ ಬೆರ್ಹಾಂಪುರದಲ್ಲಿ ಯುವ ದಂಪತಿಯ ಮೇಲೆ ಭೀಕರ ಹಲ್ಲೆ ಮಾಡಿರುವ ಘಟನೆ ವರದಿಯಾಗಿದೆ. ಸಾರ್ವಜನಿಕ ಪ್ರದೇಶದಲ್ಲೇ ಬಿದಿರಿನ ದೊಣ್ಣೆಗಳಿಂದ ಹೊಡೆದು ಭೀಕರವಾಗಿ ಥಳಿಸಲಾಗಿದೆ. ಅಚ್ಚರಿ ಎಂದರೆ ಅಲ್ಲಿ ನೆರೆದವರು ಕೈಕಟ್ಟಿ ನೋಡಿಕೊಂದ್ದರೇ ವಿನಃ ಯಾರೊಬ್ಬರೂ ಜೋಡಿಯ ರಕ್ಷಣೆಗೆ ಮುಂದಾಗಲಿಲ್ಲ. ಈ ಭೀಕರ ಹಲ್ಲೆಯ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ (Viral News) ಆಗುತ್ತಿದೆ.
ಒಡಿಶಾದ ಬೆರ್ಹಾಂಪುರದಲ್ಲಿ ಈ ಘಟನೆ ನಡೆದಿದೆ. ಸುತ್ತಲೂ ನೂರಾರು ಜನರು ಸೇರಿದ್ದರೂ ದುಷ್ಕರ್ಮಿಗಳು ದಂಪತಿಯನ್ನು ಅಟ್ಟಾಡಿಸಿ ಕ್ರೂರವಾಗಿ ಹಲ್ಲೆ ಮಾಡಿದ್ದಾರೆ. ಪೊಲೀಸರು ಆರೋಪಿಗಳನ್ನು ಗುರುತಿಸಿದ್ದು ಈ ಬಗ್ಗೆ ತನಿಖೆ ಆರಂಭಿಸಿದ್ದಾರೆ. ಆಶಿಶ್ ಸಾಹು ಮತ್ತು ಮುಖೇಶ್ ಸಾಹು ಸೇರಿ ಐದಕ್ಕೂ ಹೆಚ್ಚು ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಉಮೇಶ್ ರಾತ್ ಗೈಗೊಂಡಿದ್ದಾರೆ.
ವಿಡಿಯೋ ನೋಡಿ:
ದಾಳಿಯ ಸಮಯದಲ್ಲಿ ಉಮೇಶ್ ರಾತ್ ನೆರವಿಗೆ ಧಾವಿಸಿದ ಪತ್ನಿ ಕೂಡ ಗಾಯಗೊಂಡಿದ್ದಾರೆ. ರಸ್ತೆಯ ಮಧ್ಯದಲ್ಲಿ ಇಬ್ಬರು ಬಿದಿರಿನ ಕೋಲುಗಳಿಂದ ದಂಪತಿಯನ್ನು ಹೊಡೆಯುತ್ತಿರುವುದನ್ನು ದೃಶ್ಯಾವಳಿಗಳು ತೋರಿಸಿವೆ. ಪೊಲೀಸರ ಪ್ರಕಾರ ಸಂತ್ರಸ್ತ ಮತ್ತು ದಾಳಿಕೋರರ ನಡುವೆ ಹಿಂದಿನ ದ್ವೇಷವಿತ್ತು ಎನ್ನಲಾಗಿದೆ. "ದಾಳಿಕೋರರು ಮತ್ತು ಆ ವ್ಯಕ್ತಿ ಒಟ್ಟಿಗೆ ಕೆಲಸ ಮಾಡುತ್ತಿದ್ದರು. ಹಿಂದಿನ ದ್ವೇಷದಿಂದಾಗಿ ದಾಳಿ ಮಾಡಿದ್ದಾರೆʼʼ ಎಂದು ಪೊಲೀಸರು ತಿಳಿಸಿದ್ದಾರೆ.
ಎಲ್‌ಪಿಜಿ ಕೊರತೆ ಬಗ್ಗೆ 5 ತಿಂಗಳ ಹಿಂದೆಯೇ ಭವಿಷ್ಯ ನುಡಿದಿದ್ದ ಜ್ಯೋತಿಷಿ
ಗಾಯಗೊಂಡ ದಂಪತಿಯನ್ನು ಎಂಕೆಸಿಜಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ. ಎರಡು ಗುಂಪಿನ ಮಧ್ಯೆ ಇದ್ದ ವೈಯಕ್ತಿಕ ದ್ವೇಷ ಹಾಗೂ ಹಳೆಯ ದ್ವೇಷವೇ ಈ ದಾಳಿಗೆ ಮುಖ್ಯ ಕಾರಣ ಎನ್ನಲಾಗಿದೆ. ಈ ಘಟನೆಯ ವಿಡಿಯೊ ಇಂಟರ್‌ನೆಟ್‌ನಲ್ಲಿ ಹರಿದಾಡುತ್ತಿದ್ದಂತೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಒಬ್ಬರು, ʼʼಮಾನವೀಯತೆ ಮರೆಯಾಗಿದೆʼʼ ಎಂದು ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ʼʼಯಾವುದೇ ದ್ವೇಷ ಇರಲಿ ಈ ರೀತಿ ಕೃತ್ಯ ಎಸಗುವುದು ತಪ್ಪುʼʼ ಎಂದು ಪ್ರತಿಕ್ರಿಯೆ ನೀಡಿದ್ದಾರೆ.