ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral News: ಸರ್ಕಾರಿ ಅಧಿಕಾರಿಗಳನ್ನು ನೋಡಿ ನಾಯಿಯಂತೆ ಬೊಗಳಿದ ವ್ಯಕ್ತಿ; ಆತನ ಹತಾಶೆಯ ಕಾರಣ ಕೇಳಿದ್ರೆ ಶಾಕ್‌ ಆಗ್ತೀರಿ

ಪಶ್ಚಿಮ ಬಂಗಾಳದ ಬಂಕುರಾ ಜಿಲ್ಲೆಯ ಶ್ರೀಕಾಂತಿ ದತ್ತ ಎಂಬಾತನ ಹೆಸರು ಪಡಿತರ ಚೀಟಿಯಲ್ಲಿ 'ದತ್ತ' ಬದಲು 'ಕುತ್ತ' ಎಂದು ಮುದ್ರಿಸಲಾಗಿತ್ತು. ಅದನ್ನು ಸರಿಪಡಿಸಲು ಮೂರು ಬಾರಿ ಅರ್ಜಿ ಸಲ್ಲಿಸಿದರೂ ಅದು ಸರಿಯಾಗಲಿಲ್ಲ. ಹೀಗಾಗಿ ಅವನು ಅಧಿಕಾರಿಗಳ ಮುಂದೆ ನಾಯಿಯಂತೆ ಬೊಗಳುತ್ತಾ ಪ್ರತಿಭಟಿಸಿದ್ದಾನೆ. ಈ ವಿಡಿಯೊ ಈಗ ಸೋಶಿಯಲ್ ಮೀಡಿಯಾಗಳಲ್ಲಿ ಕಾಣಿಸಿಕೊಂಡು ವೈರಲ್ ಆಗಿದೆ.

ಸರ್‌ನೇಮ್‌ನಲ್ಲಿ ʼದತ್ತʼನ ಬದಲಿಗೆ ʼಕುತ್ತʼ; ಈ ವ್ಯಕ್ತಿ ಮಾಡಿದ್ದೇನು?

Profile pavithra Jul 5, 2025 3:51 PM

ಕೋಲ್ಕತ್ತಾ: ಸರ್ಕಾರಿ ನೌಕರರಲ್ಲಿ ಕೆಲವರು ಸಾರ್ವಜನಿಕರ ಕೆಲಸಗಳನ್ನು ಸರಿಯಾಗಿ ಮಾಡಿಕೊಡದೆ ನಾಯಿಗಳಂತೆ ಅವರನ್ನು ಕಚೇರಿಗೂ ಮನೆಗೂ ಅಲೆದಾಡಿಸುತ್ತಿರುತ್ತಾರೆ. ಅಂತಹ ಸರ್ಕಾರಿ ಅಧಿಕಾರಿಗಳಿಗೆ ವ್ಯಕ್ತಿಯೊಬ್ಬ ಸರಿಯಾಗಿ ಪಾಠ ಕಲಿಸಿದ್ದಾನೆ. ಪಶ್ಚಿಮ ಬಂಗಾಳದ ಬಂಕುರಾ ಜಿಲ್ಲೆಯ ವ್ಯಕ್ತಿಯೊಬ್ಬ ತನ್ನ ಪಡಿತರ ಚೀಟಿಯಲ್ಲಿ ಹೆಸರನ್ನು ಸರಿಪಡಿಸುವಂತೆ ಒತ್ತಾಯಿಸಿ ಸರ್ಕಾರಿ ಅಧಿಕಾರಿಯ ಮುಂದೆ ನಾಯಿಯಂತೆ ಬೊಗಳುತ್ತಾ ಪ್ರತಿಭಟನೆ ನಡೆಸಿದ್ದಾನೆ. ಯಾಕೆಂದರೆ ಪಡಿತರ ಚೀಟಿಯಲ್ಲಿ ಆತನ ಸರ್‌ನೇಮ್‌ 'ದತ್ತ' ಅನ್ನು 'ಕುತ್ತ' ಎಂದು ಮುದ್ರಿಸಲಾಗಿತ್ತು. ಹೀಗಾಗಿ ತನ್ನ ಹೆಸರನ್ನು ಬದಲಾಯಿಸಲು ಮೂರು ಬಾರಿ ಅರ್ಜಿ ಸಲ್ಲಿಸಿದ್ದಾನೆ. ಆದರೆ ಅದನ್ನು ಅಧಿಕಾರಿಳು ಸರಿಪಡಿಸಲಿಲ್ಲ. ಹಾಗಾಗಿ ಅವನು ನಾಯಿಯ ರೀತಿ ಬೊಗಳಿ ವಿಶಿಷ್ಟ ರೀತಿಯಲ್ಲಿ ಪ್ರತಿಭಟನೆ ನಡೆಸಿದ್ದಾನೆ. 2022ರ ವೈರಲ್ ವಿಡಿಯೊ ಇದೀಗ ಮತ್ತೆ ಸೋಶಿಯಲ್ ಮೀಡಿಯಾಗಳಲ್ಲಿ ಕಾಣಿಸಿಕೊಂಡು ಎಲ್ಲರ ಗಮನಸೆಳೆದು ವೈರಲ್ (Viral Video) ಆಗಿದೆ.

ವೈರಲ್ ವಿಡಿಯೊದಲ್ಲಿ, ಸರ್ಕಾರಿ ಅಧಿಕಾರಿಯೊಬ್ಬರು ತಮ್ಮ ಕಾರಿನಲ್ಲಿ ಹೊರಟು ಹೋಗುತ್ತಿರುವಾಗ, ವ್ಯಕ್ತಿ ತನ್ನ ಪಡಿತರ ಚೀಟಿಯಲ್ಲಿ "ಕುತ್ತ" ಎಂಬ ಉಪನಾಮವನ್ನು "ದತ್ತ" ಎಂದು ಬದಲಾಯಿಸುವಂತೆ ಒತ್ತಾಯಿಸುತ್ತಾ ದಾಖಲೆಗಳನ್ನು ತೋರಿಸುತ್ತಾ ಬೊಗಳುತ್ತಾ ಮತ್ತು ಕಿರುಚುತ್ತಿರುವುದು ಸೆರೆಯಾಗಿದೆ.

ವಿಡಿಯೊ ಇಲ್ಲಿದೆ ನೋಡಿ...



ವರದಿ ಪ್ರಕಾರ, ಈ ರೀತಿ ಪ್ರತಿಭಟಿಸಿದ ವ್ಯಕ್ತಿಯನ್ನು ಶ್ರೀಕಾಂತಿ ದತ್ತ ಎಂದು ಗುರುತಿಸಲಾಗಿದೆ. ಪಡಿತರ ಚೀಟಿಯಲ್ಲಿ ಅವನ ಸರ್‌ನೇಮ್‌ 'ದತ್ತ' ಅನ್ನು 'ಕುತ್ತ' ಎಂದು ಮುದ್ರಿಸಲಾಗಿತ್ತು. ಆತ ಪಡಿತರ ಚೀಟಿಯಲ್ಲಿ ಹೆಸರು ತಿದ್ದುಪಡಿಗಾಗಿ ಮೂರು ಬಾರಿ ಅರ್ಜಿ ಸಲ್ಲಿಸಿದ್ದನು. ಆದರೆ ಮೂರನೇ ಬಾರಿ ಸಹ ಅಧಿಕಾರಿಗಳು ಆತನ ಹೆಸರನ್ನು ಶ್ರೀಕಾಂತಿ ದತ್ತ ಬದಲಿಗೆ ಶ್ರೀಕಾಂತಿ ಕುತ್ತ ಎಂದು ಬರೆದಿದ್ದಾರೆ. ಇದರಿಂದ ಬೇಸರಗೊಂಡ ಅವನು ಮತ್ತೆ ತಿದ್ದುಪಡಿಗಾಗಿ ಅರ್ಜಿ ಸಲ್ಲಿಸಲು ಹೋಗಿದ್ದಾಗ ಅಲ್ಲಿ ಜಂಟಿ ಬಿಡಿಒ ಅವರನ್ನು ನೋಡಿ ಅವರ ಮುಂದೆ ನಾಯಿಯಂತೆ ವರ್ತಿಸಲು ಶುರು ಮಾಡಿದ್ದಾನೆ. ಆದರೆ ಅವರು ಸಹ ಅವನ ಸಮಸ್ಯೆಗೆ ಪರಿಹಾರ ನೀಡಲಿಲ್ಲ ಎನ್ನಲಾಗಿದೆ.

ಈ ಸುದ್ದಿಯನ್ನೂ ಓದಿ:Viral Video: ಅಳಿವಿನಂಚಿನಲ್ಲಿರುವ ಒರಾಂಗುಟಾನ್‌ಗೆ ವೇಪ್ ನೀಡಿದ ಬಾಕ್ಸರ್; ಮುಂದೇನಾಯ್ತು ವಿಡಿಯೊ ನೋಡಿ!

ನಾಯಿಯಂತೆ ಬೊಗಳುತ್ತಿದ್ದ ಥಾಯ್ಲೆಂಡ್‌ ಎಂಟು ವರ್ಷದ ಬಾಲಕ

ಥಾಯ್ಲೆಂಡ್‌ನಲ್ಲಿ ಎಂಟು ವರ್ಷದ ಬಾಲಕನೊಬ್ಬ ಮನುಷ್ಯರಂತೆ ಮಾತನಾಡುವ ಬದಲು ನಾಯಿಗಳಂತೆ ಬೊಗಳುತ್ತಾ ಸಂವಹನ ನಡೆಸುತ್ತಿದ್ದಾನೆ. ಆತನ ನಡವಳಿಕೆಯ ಬಗ್ಗೆ ಸ್ಥಳೀಯ ಶಾಲೆಯ ಪ್ರಾಂಶುಪಾಲರು ಮಕ್ಕಳ ಕಾರ್ಯಕರ್ತರು ಮತ್ತು ಅಧಿಕಾರಿಗಳಿಗೆ ವರದಿ ಮಾಡಿದ್ದರಿಂದ ಅವರು ಅವನ ಮನೆಗೆ ಬಂದು ಪರಿಶೀಲನೆ ಮಾಡಿದ್ದರು. ಆದರೆ ಅಲ್ಲಿ ಬಾಲಕನ ತಾಯಿ ಮತ್ತು ಸಹೋದರ ಮಾದಕ ದ್ರವ್ಯ ಸೇವಿಸುವುದು ತಿಳಿದುಬಂದಿದೆ. ಹೀಗಾಗಿ ಕುಟುಂಬದವರ ಈ ಕೆಟ್ಟ ನಡವಳಿಕೆಯಿಂದ ತೊಂದರೆಗೀಡಾದ ನೆರೆಹೊರೆಯವರು ತಮ್ಮ ಮಕ್ಕಳು ಆ ಬಾಲಕನೊಂದಿಗೆ ಆಟವಾಡುವುದನ್ನು ತಡೆದಿದ್ದಾರೆ. ಜನರ ಸಂಪರ್ಕವಿಲ್ಲದ ಬಾಲಕ ಬೀದಿ ನಾಯಿಗಳೊಂದಿಗೆ ಬೆರೆತು ಅವುಗಳ ನಡವಳಿಕೆಯನ್ನು ಅನುಕರಿಸಲು ಶುರು ಮಾಡಿದನು. ಇದರಿಂದಾಗಿ ಆತ ಯಾರ ಜೊತೆಯಾದರೂ ಮಾತನಾಡಲು ನಾಯಿಯಂತೆ ಬೊಗಳುತ್ತಾನೆ.