ಹಾವೆಂದರೆ ಸಾಕು ಎಲ್ಲರೂ ಬೆಚ್ಚಿಬಿದ್ದು ಓಡುತ್ತಾರೆ. ಅಂಥದ್ದರಲ್ಲಿ ಇತ್ತೀಚೆಗೆ ವ್ಯಕ್ತಿಯೊಬ್ಬ ಬರಿಗೈಯಿಂದ ಬೃಹತ್ ಹಸಿರು ಅನಕೊಂಡವನ್ನು ಹಿಡಿದಿದ್ದಾನೆ. ಈ ವಿಡಿಯೊ ಈಗ ಸೋಶಿಯಲ್ ಮಿಡಿಯಾದಲ್ಲಿ ವೈರಲ್(Viral Video) ಆಗಿ ನೋಡುಗರನ್ನು ಬೆಚ್ಚಿಬೀಳಿಸಿದೆ.ವೈರಲ್ ಆದ ವಿಡಿಯೊದಲ್ಲಿ ಯಾವುದೇ ಉಪಕರಣಗಳು ಅಥವಾ ರಕ್ಷಣಾತ್ಮಕ ಸಾಧನಗಳಿಲ್ಲದೆ, ಕೆಸರುಮಯ ಜೌಗು ಪ್ರದೇಶದ ಪಕ್ಕದಲ್ಲಿ ಕುಳಿತ ವ್ಯಕ್ತಿ ಕಣ್ಣು ಮಿಟುಕಿಸುವುದರೊಳಗೆ ಬೃಹತ್ ಹಾವನ್ನು ಹೊರತೆಗೆಯುವ ಕ್ಷಣವನ್ನು ಸೆರೆಹಿಡಿಯಲಾಗಿದೆ.
ಕೊಳದ ನೀರು ತುಂಬಾ ಕೆಸರುಮಯವಾಗಿದ್ದರೂ ಕೂಡ ಅವನು ಅದರಲ್ಲಿ ಹಾವನ್ನು ಕಂಡುಹಿಡಿದು ಚಾಣಾಕ್ಷತನದಲ್ಲಿ ಅದನ್ನು ಹಿಡಿದಿದ್ದಾನೆ. ಇದು ನೋಡಿ ನೆಟ್ಟಿಗರು ಶಾಕ್ ಆಗಿದ್ದಾರೆ.ಅವನು ಹಾವನ್ನು ಹೇಗೆ ಇಷ್ಟು ಸುಲಭವಾಗಿ ಹಿಡಿಯಲು ಸಾಧ್ಯವಾಯಿತು ಎಂದು ಅನೇಕರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
ವಿಡಿಯೊ ಇಲ್ಲಿದೆ ನೋಡಿ...
ಹಾಗಾಗಿ ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸಂಚಲನ ಮೂಡಿಸಿದ್ದು, ಸೋಶಿಯಲ್ ಮೀಡಿಯಾ ನೆಟ್ಟಿಗರಲ್ಲಿ ಅಚ್ಚರಿ ಮತ್ತು ಭಯವನ್ನು ಉಂಟುಮಾಡಿದೆ. ಈ ವಿಡಿಯೊ ನೋಡಿದ ನೆಟ್ಟಿಗರು ಪೋಸ್ಟ್‌ನ ಕಾಮೆಂಟ್‌ಗಳ ವಿಭಾಗದಲ್ಲಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಇದರಲ್ಲಿರುವ ವ್ಯಕ್ತಿಗೆ ರಕ್ಷಣಾತ್ಮಕ ಸಾಧನಗಳನ್ನು ಧರಿಸುವಂತೆ ಅನೇಕರು ಎಚ್ಚರಿಸಿದರೆ, ಇತರರು ಈ ಧೈರ್ಯಶಾಲಿ ಕೃತ್ಯವನ್ನು ನೋಡಿ ಹೊಗಳಿದ್ದಾರೆ. ಇಲ್ಲಿಯವರೆಗೆ, ಈ ವಿಡಿಯೊ 12.1 ಮಿಲಿಯನ್‌ಗಿಂತಲೂ ಹೆಚ್ಚು ವ್ಯೂವ್ಸ್ ಪಡೆದುಕೊಂಡಿದೆ.
"ನೀರು ಸಂಪೂರ್ಣವಾಗಿ ಕೊಳಕಾಗಿದ್ದು, ನೀರಿನಲ್ಲಿ ಅದರ ತಲೆ ಎಲ್ಲಿದೆ ಎಂದು ಹೇಗೆ ಗೊತ್ತು?" ಎಂದು ಆಶ್ಚರ್ಯಚಕಿತರಾದ ಒಬ್ಬರು ಕೇಳಿದರೆ, "ಅವರು ಏನು ಮಾಡಲು ಪ್ರಯತ್ನಿಸುತ್ತಿದ್ದಾರೆ? ಇದು ಭಯಾನಕವಾಗಿದೆ" ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.
ಈ ಸುದ್ದಿಯನ್ನೂ ಓದಿ:Viral Video: ಬಂಗಲೆಯ ಛಾವಣಿಗೆ ಫೆರಾರಿ ಕಾರನ್ನು ಹ್ಯಾಂಗ್ ಮಾಡಿದ ಭೂಪ! ವಿಡಿಯೊ ಫುಲ್ ವೈರಲ್
ಹಸಿರು ಅನಕೊಂಡಗಳು (ಯೂನೆಕ್ಟಸ್ ಮುರಿನಸ್) ವಿಶ್ವದ ಅತಿದೊಡ್ಡ ಹಾವುಗಳ ಸಾಲಿಗೆ ಸೇರಿವೆ. ಅವು ಆಲಿವ್-ಹಸಿರು ಬಣ್ಣದಲ್ಲಿರುತ್ತವೆ. ಅವುಗಳ ಬೆನ್ನಿನ ಉದ್ದಕ್ಕೂ ಕಪ್ಪು ಅಂಡಾಕಾರದ ಚುಕ್ಕೆಗಳು ಮತ್ತು ಇದೇ ರೀತಿಯ ಗುರುತುಗಳು, ಹಳದಿ ಬಣ್ಣಗಳಲ್ಲಿ ಅವುಗಳ ಬದಿಗಳಲ್ಲಿ ಇರುತ್ತವೆ. ಈ ಹಾವುಗಳು ಮಾಂಸಾಹಾರಿಯಾಗಿವೆ, ಆದರೆ ವಿಷಕಾರಿಯಲ್ಲ. ಅವು ತಮ್ಮ ಆಹಾರವನ್ನು ಶಕ್ತಿಯುತ ದವಡೆಗಳಿಂದ ಹಿಡಿದು ನಂತರ ತಮ್ಮ ದೇಹವನ್ನು ಅದರ ಸುತ್ತಲೂ ಸುತ್ತಿ, ಬೇಟೆಯು ಪ್ರಜ್ಞೆ ಕಳೆದುಕೊಳ್ಳುವವರೆಗೆ ರಕ್ತದ ಹರಿವನ್ನು ಕಡಿತಗೊಳಿಸುತ್ತವೆ. ನಂತರ ನುಗ್ಗುತ್ತವೆ.