ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

"ಪ್ರವಾಹದಲ್ಲಿ ಮನೆಗಳು ಕೊಚ್ಚಿ ಹೋಗಲಿವೆ": ನೇಪಾಳದ ಪ್ರಕೃತಿ ವಿಕೋಪದ ಭೀಕರತೆ ಬಗ್ಗೆ ಮೊದಲೇ ಮುನ್ಸೂಚನೆ ನೀಡಿದ್ದ ಪಾದ್ರಿ!

Viral Video: ನೇಪಾಳದಲ್ಲಿ ಸಂಭವಿಸಿದ ಭೀಕರ ಪ್ರವಾಹ ಇಡೀ ಜಗತ್ತೇ ಬೆಚ್ಚಿ ಬೀಳುವಂತೆ ಮಾಡಿದೆ. ರಸ್ತೆಗಳು,ದೊಡ್ಡ ದೊಡ್ಡ ಕಟ್ಟಡಗಳು,ಮನೆಗಳು ನೀರಿನಲ್ಲಿ ಕೊಚ್ಚಿ ಹೋಗಿವೆ. ಇಲ್ಲಿನ ಜನ ಜೀವನವೇ ಅಸ್ತವಸ್ತ್ಯವಾಗಿದ್ದು ಸಾವಿರಾರು ಜನರು ಕಣ್ಮರೆಯಾಗಿದ್ದಾರೆ. ಈ ನಡುವೆ ನೇಪಾಳದ ಭೀಕರ ಜಲಪ್ರಳಯದ ಬಗ್ಗೆ ಪಾದ್ರಿಯೊಬ್ಬರು ಈ ಮೊದಲೇ ಎಚ್ಚರಿಕೆ ನೀಡಿದ್ದ ಭವಿಷ್ಯವಾಣಿಯ ವಿಡಿಯೊವೊಂದು ವೈರಲ್ ಆಗುತ್ತಿದೆ.

ನೇಪಾಳ ಪ್ರಕೃತಿ ವಿಕೋಪದ ಭೀಕರತೆ

ಕಠ್ಮಂಡು, ಸೆ. 4: ನೇಪಾಳದಲ್ಲಿ (Nepal Flood) ಸಂಭವಿಸಿದ ಭೀಕರ ಪ್ರವಾಹ ಇಡೀ ಜಗತ್ತೇ ಬೆಚ್ಚಿ ಬೀಳುವಂತೆ ಮಾಡಿದೆ.ರಸ್ತೆಗಳು,ದೊಡ್ಡ ದೊಡ್ಡ ಕಟ್ಟಡಗಳು,ಮನೆಗಳು ನೀರಿನಲ್ಲಿ ಕೊಚ್ಚಿ ಹೋಗಿವೆ. ಇಲ್ಲಿನ ಜನ ಜೀವನವೇ ಅಸ್ತವಸ್ತ್ಯವಾಗಿದ್ದು ಸಾವಿರಾರು ಜನರು ಕಣ್ಮರೆಯಾಗಿದ್ದಾರೆ. ಹಠಾತ್ ಪ್ರವಾಹದಿಂದ 1,127ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದು, 4,800ಕ್ಕೂ ಅಧಿಕ ಮಂದಿ ನಾಪತ್ತೆ ಯಾಗಿದ್ದಾರೆ. ಈ ನಡುವೆ ನೇಪಾಳದ ಭೀಕರ ಜಲಪ್ರಳಯದ ಬಗ್ಗೆ ಪಾದ್ರಿಯೊಬ್ಬರು ಈ ಮೊದಲೇ ಎಚ್ಚರಿಕೆ ನೀಡಿದ್ದ ಭವಿಷ್ಯವಾಣಿಯ ವಿಡಿಯೊವೊಂದು ವೈರಲ್ (Viral News) ಆಗುತ್ತಿದೆ.

ಈ ವೀಡಿಯೊವನ್ನು ಜೂನ್ 12, 2026 ರಂದು ಯೆಶುವಾ ಗಾಸ್ಪೆಲ್ ಮಿನಿಸ್ಟ್ರೀಸ್ ಎಂಬ ಯುಟ್ಯೂಬ್ ಚಾನೆಲ್‌ನಲ್ಲಿ ಪಾದ್ರಿ ಪೆರೆಜ್ ಎನ್ಡಿ ಅವರು ಪೋಸ್ಟ್ ಮಾಡಿದ್ದರು. ನೇಪಾಳದ  ಭವಿಷ್ಯವಾಣಿಗಳು” ಎಂಬ ಶೀರ್ಷಿಕೆಯ ಮೂಲಕ ಪಾದ್ರಿ ಪೆರೆಜ್  ಹಲವಾರು ವಿಚಾರ ಹಂಚಿಕೊಂಡಿದ್ದಾರೆ.

ವಿಡಿಯೋ ನೋಡಿ:



ಜೂನ್ ತಿಂಗಳಿನಲ್ಲೇ ಈ ಬಗ್ಗೆ ಎಚ್ಚರಿಸಿದ್ದ ಪಾದ್ರಿ ಪರೆಜ್ ಎನ್ಡಿ ನೇಪಾಳದಲ್ಲಿ ದೊಡ್ಡ ಪ್ರವಾಹ ಆಗುವ ಸೂಚನೆಗಳು ಇವೆ. ಮನೆಗಳು ನೀರಿನಲ್ಲಿ ಮುಳುಗುತ್ತಿವೆ. ಜನರ ಜೀವನವೇ ಬದಲಾಗಲಿದೆ, ನೇಪಾಳಕ್ಕಾಗಿ ನೀವೆಲ್ಲರೂ ಪ್ರಾರ್ಥಿಸಿ ಎಂದು ಹೇಳಿದ್ದರು. ಇದೇ ವೀಡಿಯೊದಲ್ಲಿ ಅವರು ಜಲಪ್ರಳಯ  ಮಾತ್ರವಲ್ಲದೆ, ನೇಪಾಳದಲ್ಲಿ ಕಾಡ್ಗಿಚ್ಚು, ಭೂಕಂಪ, ರಾಜಕೀಯ ಬಿಕ್ಕಟ್ಟುಗಳು  ಬರಲಿವೆ ಎಂದೂ ಹೇಳಿಕೊಂಡಿದ್ದರು. ಸದ್ಯ ಈ ವೀಡಿಯೊ ಸೋಷಿತಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದ್ದು ಭಾರೀ ವೀಕ್ಷಣೆಗಳು ಪಡೆದಿವೆ. ನೇಪಾಳ ಪ್ರವಾಹದ ನಂತರ, ಜನರು ಪಾದ್ರಿಯ ಭವಿಷ್ಯವಾಣಿ ಬಗ್ಗೆ ಚರ್ಚಿಸಲು ಪ್ರಾರಂಭಿಸಿದ್ದಾರೆ.

Viral Video: ಪೊಲೀಸ್ ಬೈಕ್‌ನಲ್ಲಿ ರ‍್ಯಾಪಿಡೋ ಸೇವೆ? ಸರ್ಕಾರಿ ವಾಹನ ದುರುಪಯೋಗ ಪಡಿಸಿಕೊಂಡ ಸಬ್ ಇನ್ಸ್‌ಪೆಕ್ಟರ್‌ ವಿರುದ್ಧ ಕ್ರಮ

ನಿಮ್ಮ ಭವಿಷ್ಯವಾಣಿಗಳು ನಿಜ, ನೇಪಾಳದ ಘಟನೆಗಳಿಗೆ ಹೊಂದಿಕೆಯಾಗುತ್ತವೆ ಎಂದು ವೀಕ್ಷಕರು ಹೇಳಿಕೊಂಡಿದ್ದಾರೆ‌. ಬಳಕೆದಾರರೊಬ್ಬರು ದಯವಿಟ್ಟು "ನೇಪಾಳ ಮತ್ತು ಅಲ್ಲಿನ ಜನರಿಗಾಗಿ ಪ್ರಾರ್ಥಿಸುತ್ತಿರಿ" ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನು ಕೆಲವರು ಇದನ್ನು ಪವಾಡ ಎಂದು ಕರೆಯುತ್ತಿದ್ದಾರೆ.