ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಸಿಂಹಿಣಿಯ ಅಬ್ಬರಕ್ಕೆ ಕಾಡಿನ ರಾಜನೇ ಬೆಚ್ಚಿ ಬಿದ್ದ ; ವಿಡಿಯೊ ನೋಡಿ!

Viral Video: ಗುಜರಾತ್‌ನ ಗಿರ್ ರಾಷ್ಟ್ರೀಯ ಉದ್ಯಾನವನದ ಈ ಘಟನೆಯೊಂದು ಎಲ್ಲರನ್ನು ಆಶ್ಚರ್ಯ ಗೊಳಿಸುವಂತೆ ಮಾಡಿದೆ. ಸಾಮಾನ್ಯವಾಗಿ ಸಿಂಹವನ್ನು ಕಾಡಿನ ರಾಜ ಎಂದು ಕರೆಯುತ್ತೇವೆ. ಆದರೆ ಇಲ್ಲಿ ಸಿಂಹಿಣಿಯೊಬ್ಬಳು ತನ್ನ ಬಲಶಾಲಿಯಿಂದ ಸ್ವತಃ ಗಂಡು ಸಿಂಹವನ್ನೇ ಧೃತಿಗೆಡುವಂತೆ ಮಾಡಿದ್ದು ಸಿಂಹಿಣಿ ಮತ್ತು ಗಂಡು ಸಿಂಹದ ನಡುವಿನ ತೀವ್ರವಾದ ಮುಖಾಮುಖಿಯನ್ನು ಸೆರೆ ಹಿಡಿಯಲಾಗಿದೆ.

ಗಂಡು ಸಿಂಹಕ್ಕೆ ಸವಾಲೊಡ್ಡಿದ ಸಿಂಹಿಣಿ

ಗುಜರಾತ್ ,ಫೆ.16: ಪ್ರಕೃತಿಯಲ್ಲಿ ನಾನಾ ವಿಸ್ಮಯಗಳು ಕಾಣಸಿಗುತ್ತವೆ. ಇತ್ತೀಚೆಗಷ್ಟೇ ಕರ್ನಾಟಕದ ಭದ್ರಾ ಹುಲಿ ಅಭಯಾರಣ್ಯದಲ್ಲಿ ಕಪ್ಪು ಚಿರತೆ ಮತ್ತು ಚುಕ್ಕೆ ಚಿರತೆ ಶಾಂತವಾಗಿ ಒಟ್ಟಿಗೆ ನೀರು ಕುಡಿಯುತ್ತಿರುವ ದೃಶ್ಯವೊಂದು ವೈರಲ್ (Viral Video) ಆಗಿತ್ತು. ಇದೀಗ ಗುಜರಾತ್‌ನ ಗಿರ್ ರಾಷ್ಟ್ರೀಯ ಉದ್ಯಾನವನದ ಈ ಘಟನೆಯೊಂದು ಎಲ್ಲರನ್ನು ಆಶ್ಚರ್ಯಗೊಳಿಸುವಂತೆ ಮಾಡಿದೆ. ಸಾಮಾನ್ಯವಾಗಿ ಸಿಂಹವನ್ನು ಕಾಡಿನ ರಾಜ ಎಂದು ಕರೆಯುತ್ತೇವೆ. ಆದರೆ ಇಲ್ಲಿ ಸಿಂಹಿಣಿಯೊಬ್ಬಳು ತನ್ನ ಬಲಶಾಲಿ ಯಿಂದ ಸ್ವತಃ ಗಂಡು ಸಿಂಹವನ್ನೇ ಧೃತಿಗೆಡುವಂತೆ ಮಾಡಿದ್ದು ಸಿಂಹಿಣಿ ಮತ್ತು ಗಂಡು ಸಿಂಹದ ನಡುವಿನ ತೀವ್ರವಾದ ಮುಖಾಮುಖಿಯನ್ನು ಸೆರೆಹಿಡಿಯಲಾಗಿದೆ.

ಗಿರ್ ರಾಷ್ಟ್ರೀಯ ಉದ್ಯಾನವನದಿಂದ ಬಂದ ಅಪರೂಪದ ಕ್ಷಣವೊಂದು ಸಾಮಾಜಿಕ ಮಾಧ್ಯಮ ದಲ್ಲಿ ಬಿರುಗಾಳಿ ಎಬ್ಬಿಸಿದ್ದು ಎಲ್ಲರನ್ನು ನಿಬ್ಬೆರೆಗಾಗಿಸುವಂತೆ ಮಾಡಿದೆ. ವೈಲ್ಡ್‌ಲೈಫ್ ಫೋಟೋ ಗ್ರಾಫರ್ ಉರ್ಮಿಳ್ ಝವೇರಿ ಸೆರೆಹಿಡಿದ ಈ ವಿಡಿಯೋ, ಮೊದಲಿಗೆ ಗಂಡು ಸಿಂಹ ತನ್ನ ಘರ್ಜನೆಯ ಮೂಲಕ ಹಿಮ್ಮೆಟ್ಟಲು ಪ್ರಯತ್ನಿಸುತ್ತದೆ. ಆದರೆ ಇದಕ್ಕೆ ಒಂಚೂರು ಹೆದರದ ಸಿಂಹಿಣಿ, ಕ್ಷಣಾರ್ಧದಲ್ಲಿ ಮರು ಘರ್ಜನೆ ಮಾಡಿ ಗಂಡು ಸಿಂಹವನ್ನು ಹೆದರಿಸುತ್ತದೆ.

ವಿಡಿಯೋ ನೋಡಿ:



ಸಿಂಹಿಣಿ ತನ್ನದೇ ಆದ ಘರ್ಜನೆಯನ್ನು ‌ ಮಾಡಿದ ನಂತರ ಗಂಡು ಸಿಂಹ ಇದ್ದಕ್ಕಿದ್ದಂತೆ ವಿರಾಮ ಗೊಳಿಸುತ್ತದೆ. ಗಂಡು ಸಿಂಹ, ತಕ್ಷಣ ಸುಮ್ಮನಾಗಿ ಹಿಂದೆ ಸರಿಯುವ ದೃಶ್ಯ ನೋಡುಗರನ್ನು ಮುಕವಿಸ್ಮಿತರನ್ನಾಗಿ ಮಾಡುತ್ತದೆ‌.ಇದಕ್ಕೆ ಗುಜರಾತ್ ಪ್ರವಾಸೋದ್ಯಮವು "ರಾಜನಿಗೂ" ಕೂಡ ಯಾವಾಗ ಹಿಂದೆ ಸರಿಯಬೇಕೆಂದು ತಿಳಿದಿದೆ ಎಂದು ಸೂಚಿಸುವ ಹಾಸ್ಯಮಯ ಶೀರ್ಷಿಕೆ ಯೊಂದಿಗೆ ಇದನ್ನು ಮರು ಪೋಸ್ಟ್ ಮಾಡಿದೆ.

Viral Video: ರೈಲ್ವೆ ಫ್ಲ್ಯಾಟ್‌ಫಾರ್ಮ್‌ನಲ್ಲಿ ಮಲಗಿದ ವಿಶೇಷ ಚೇತನ ವ್ಯಕ್ತಿಯ ಮೇಲೆ ಕಾನ್‌ಸ್ಟೇಬಲ್‌ನಿಂದ ಹಲ್ಲೆ; ನೆಟ್ಟಿಗರಿಂದ ಆಕ್ರೋಶ

ಕೆಲವರು ಇದನ್ನು ಮರೆಯಲಾಗದ ವನ್ಯಜೀವಿ ಕ್ಷಣ ಎಂದು ಬಣ್ಣಿಸಿದರು. ಇನ್ನು ಕೆಲವರು ಈ ದೃಶ್ಯವನ್ನು ಸಂಪೂರ್ಣವಾಗಿ ಸೆರೆಹಿಡಿದಿದ್ದಕ್ಕಾಗಿ ಛಾಯಾಗ್ರಾಹಕನನ್ನು ಹೊಗಳಿದ್ದಾರೆ. ತಜ್ಞರ ಪ್ರಕಾರ ಸಂಯೋಗದ ಸಮಯದಲ್ಲಿ ಸಿಂಹಿಣಿಯು ಗಂಡು ಸಿಂಹದ ಶಕ್ತಿ ಮತ್ತು ಸಹನೆಯನ್ನು ಪರೀಕ್ಷಿಸಲು ಹೀಗೆ ಮಾಡುತ್ತದೆ. ಇನ್ನು ಕೆಲವೊಮ್ಮೆ ಸಿಂಹಿಣಿಗಳು ಗಂಡು ಸಿಂಹವು ತನ್ನ ಭವಿಷ್ಯದ ಮರಿಗಳನ್ನು ರಕ್ಷಿಸಲು ಸಮರ್ಥವಾಗಿದೆಯೇ ಎಂದು ಖಚಿತಪಡಿಸಿಕೊಳ್ಳಲು ಹೀಗೆ ಮಾಡುತ್ತವೆ ಎಂದಿದ್ದಾರೆ. ಸದ್ಯ ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಲಾದ ಈ ವಿಡಿಯೋ ಲಕ್ಷಾಂತರ ವೀಕ್ಷಣೆಗಳನ್ನು ಪಡೆದಿದ್ದು, ಹೆಚ್ಚಿನವರು ಸಿಂಹಿಣಿಯ ಧೈರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.