ಕಠ್ಮಂಡು, ಸೆ. 3: ನೇಪಾಳ ಪ್ರವಾಹದ (Nepal Flood) ಭೀಕರತೆಗೆ ಜಗತ್ತೇ ಬೆಚ್ಚಿ ಬಿದ್ದಿದೆ. ಹಿಮನದಿ ಕುಸಿತ ಮತ್ತು ಭಾರಿ ಮಳೆಯಿಂದಾಗಿ ಉಂಟಾದ ದಿಢೀರ್ ಪ್ರವಾಹವು ಜನರ ಬದುಕನ್ನೇ ನುಂಗಿ ಹಾಕಿದೆ. ಈ ದುರಂತವನ್ನು ಬಿಚ್ಚಿಡುವ ಅಘಾತಕಾರಿ ವಿಡಿಯೊವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಕಂಟೆಂಟ್ ಕ್ರಿಯೇಟರ್ ಒಬ್ಬರು ಪ್ರವಾಹ ಪೀಡಿತ ಪ್ರದೇಶದ ಸ್ಥಿತಿಯನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ. ಜೆಸಿಬಿ ಮತ್ತು ಟ್ರಕ್‌ನಂಹ ಬೃಹತ್ ವಾಹನಗಳು ಮಣ್ಣು ಮತ್ತು ಶಿಲಾಖಂಡರಾಶಿಗಳ ಅಡಿಯಲ್ಲಿ ಆಳವಾಗಿ ಹೂತುಹೋಗಿರುವುದನ್ನು ವಿಡಿಯೊ (Viral News) ತೋರಿಸುತ್ತದೆ.
ಈವರೆಗೆ ನೇಪಾಳದ ಪ್ರಳಯಕ್ಕೆ 1,127ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದು, 4,800ಕ್ಕೂ ಅಧಿಕ ಮಂದಿ ನಾಪತ್ತೆಯಾಗಿದ್ದಾರೆ. ರಸ್ತೆಗಳು, ಸೇತುವೆಗಳು,ಕಟ್ಟಡಗಳು, ಮನೆಗಳು ನೀರಿನಲ್ಲಿ ಕೊಚ್ಚಿ ಹೋಗಿವೆ. ಇದೀಗ ಸತ್ಯಂ ಪಾಂಡೆ ಎಂಬ ಯುಟ್ಯೂಬರ್ ಪ್ರವಾಹ ಪೀಡಿತ ಪ್ರದೇಶವೊಂದಕ್ಕೆ ಭೇಟಿ ನೀಡಿ, ಅಲ್ಲಿನ ಭೀಕರತೆಯನ್ನು ಸೆರೆ ಹಿಡಿದಿದ್ದಾರೆ. ಜೆಸಿಬಿ ಯಂತ್ರಗಳು, ಟ್ರಕ್‌ಗಳು ಮಣ್ಣಿನ ಅಡಿಯಲ್ಲಿ ಹೂತುಹೋಗಿವೆ. ಕೆಸರಿನಿಂದ ಆವೃತವಾಗಿದ್ದ ಟ್ರಕ್ ಒಳಗೆ ಸತ್ಯಂ ಪಾಂಡೆ ತೆರಳಿದ್ದು, ಚಾಲಕನ ಸೀಟ್ ಮತ್ತು ಸ್ಟೀರಿಂಗ್ ಕೆಸರಿನಲ್ಲಿ ಮುಳುಗಿದೆ.
ವಿಡಿಯೊ ನೋಡಿ:
ಸತ್ಯಂ ಧ್ವಂಸಗೊಂಡ ಪ್ರದೇಶವನ್ನು ಪ್ರವೇಶಿಸುವಾಗ ದುರಂತದ ಭೀಕರತೆ ನಮ್ಮ ಕಣ್ಣಿಗೆ ಕಟ್ಟುವಂತಿದೆ. "ನೇಪಾಳದ ಹಠಾತ್ ಪ್ರವಾಹದ ನಂತರದ ಪರಿಣಾಮವನ್ನು ನಿಮ್ಮೆಲ್ಲರಿಗೂ ತೋರಿಸಲು ನಾನು ಇಲ್ಲಿಗೆ ಬಂದು ಈ ವಿಡಿಯೊವನ್ನು ಚಿತ್ರೀಕರಿಸುತ್ತಿದ್ದೇನೆ. ನಾನು ನಿಂತ ಪ್ರದೇಶದ ಕೊಳೆತು ಹೋದ ಶವವ ದುರ್ವಾಸನೆಗಳು ಕೂಡಿದೆʼʼ ಎಂದು ವಿವರಿಸಿದ್ದಾರೆ.
ಸಿಬ್ಬಂದಿಯನ್ನು ಬ್ಯಾಂಕ್‌ನಲ್ಲೇ ಲಾಕ್ ಮಾಡಿದ ಮ್ಯಾನೇಜರ್!
ಟ್ರಕ್‌ನ ಹಿಂಭಾಗಕ್ಕೆ ಏರಿ ನಿಂತು ಮಾತನಾಡಿದ ಅವರು, ʼʼಇಷ್ಟು ದೊಡ್ಡ ವಾಹನವೇ ನೆಲಸಮವಾಗಿ ಹೂತುಹೋಗಬೇಕಾದರೆ ನೀರಿನ ರಭಸ ಹೇಗಿತ್ತು ಎಂಬುದನ್ನು ಊಹಿಸಿʼʼ ಎಂದು ಹೇಳಿದ್ದಾರೆ. ಅನೇಕರು ಪ್ರವಾಹ ಪೀಡಿತ ಪ್ರದೇಶಕ್ಕೆ ಭೀಕರತೆಯನನು ನೋಡಿ ಬೆಚ್ಚಿ ಬಿದ್ದಿದ್ದಾರೆ.