ನವದೆಹಲಿ, ಸೆ. 30: ಇತ್ತೀಚೆಗೆ ಸಾರ್ವಜನಿಕ ವಸ್ತುಗಳನ್ನು ಜನ ತಮ್ಮ ಆಸ್ತಿಯಂತೆ ಬಳಸಿಕೊಳ್ಳುತ್ತಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ದೆಹಲಿ-ಡೆಹ್ರಾಡೂನ್‌ನ ರಸ್ತೆಬದಿಯಲ್ಲಿದ್ದ ಗಿಡವನ್ನು ಪೊಲೀಸ್ ಸ್ಟಿಕ್ಕರ್ ಹೊಂದಿದ್ದ ಕಾರ್‌ನಲ್ಲಿ ಬಂದ ವ್ಯಕ್ತಿಯೊಬ್ಬ ಕದ್ದಿರುವ ದೃಶ್ಯ (Viral News) ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಘಟನೆ ರಸ್ತೆ ಸುರಕ್ಷತೆಯ ಬಗ್ಗೆ ಕಳವಳವನ್ನುಂಟು ಮಾಡಿವೆ. ಸಂಚಾರದ ನಡುವೆ ಎಕ್ಸ್‌ಪ್ರೆಸ್‌ವೇಯಲ್ಲಿ ಕಾರ್ ನಿಲ್ಲಿಸಿದ ಆತನ ನಡೆಯನ್ನು ನೆಟ್ಟಿಗರು ಪ್ರಶ್ನಿಸಿದ್ದಾರೆ.
ಸೆಪ್ಟೆಂಬರ್ 28ರ ಸಂಜೆ ಸುಮಾರು 5:14ರ ವೇಳೆಗೆ ಈ ಘಟನೆ ನಡೆದಿದೆ. ಸಿಎನ್‌ಜಿ ವ್ಯಾಗನ್‌ಆರ್ ಕಾರ್‌ನಲ್ಲಿ ಬಂದ ವ್ಯಕ್ತಿ ಎಕ್ಸ್‌ಪ್ರೆಸ್‌ವೇ ಮಧ್ಯದಲ್ಲಿ ಕಾರ್ ನಿಲ್ಲಿಸಿದ್ದಾನೆ. ಬಳಿಕ ರಸ್ತೆಬದಿಯಲ್ಲಿದ್ದ ಟೆಕೋಮಾ ಸ್ಟಾನ್ಸ್ ಗಿಡಗಳನ್ನು ಕಿತ್ತು ಕಾರ್‌ನೊಳಗೆ ಹಾಕಿಕೊಂಡು ತೆರಳಿರುವುದು ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದೆ. ಹೀಗೆ ತನ್ನ ಪಾಡಿಗೆ ಬಂದು ಗಿಡಗಳನ್ನು ಕದ್ದೊಯ್ಯಲು ಇದು ತಮ್ಮ ಆಸ್ತಿಯೇ ಎಂದು ನೆಟ್ಟಿಗರು ಕಿಡಿಕಾರಿದ್ದಾರೆ.
ವಿಡಿಯೊ ನೋಡಿ:
ಅದರಲ್ಲೂ ಯಾವುದೇ ತುರ್ತು ಪರಿಸ್ಥಿತಿ ಇಲ್ಲದೆ ಎಕ್ಸ್‌ಪ್ರೆಸ್‌ವೇ ಮಧ್ಯದಲ್ಲಿ ಕಾರ್ ನಿಲ್ಲಿಸಲಾಗಿದೆ. ಇದಕ್ಕಾಗಿ ಭಾರಿ ದಂಡವನ್ನು ಸಂಗ್ರಹಿಸಬೇಕು ಎಂದು ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ. ಸಾರ್ವಜನಿಕ ಸ್ಥಳಗಳಿಂದ ಗಿಡಗಳನ್ನು ಕೀಳುವಾಗ ನಾಗರಿಕ ಜವಾಬ್ದಾರಿಯ ಬಗ್ಗೆಯೂ ಅನೇಕರು ಪ್ರಶ್ನಿಸಿದ್ದಾರೆ.
ರೈಲು ಹಳಿಗೆ ಬಿದ್ದ ಮಕ್ಕಳನ್ನು ರಕ್ಷಿಸಲು ದೇಹವನ್ನೇ ರಕ್ಷಾ ಕವಚವಾಗಿಸಿದ ತಾಯಿ!
ವೈರಲ್ ವಿಡಿಯೊದಲ್ಲಿ ಪೊಲೀಸ್ ಸ್ಟಿಕ್ಕರ್ ಹೊಂದಿರುವ ವ್ಯಾಗನ್‌ಆರ್ ಕಾರ್‌ನಲ್ಲಿರುವ ವ್ಯಕ್ತಿ ದೆಹಲಿ-ಡೆಹ್ರಾಡೂನ್ ಎಕ್ಸ್‌ಪ್ರೆಸ್‌ವೇಯಿಂದ ಸಸ್ಯವನ್ನು ಕದ್ದಿರುವುದು ಕಂಡು ಬಂದಿದೆ. ಈ ವಿಡಿಯೊ ಹರಡುತ್ತಿದ್ದಂತೆ ಪ್ರತಿಕ್ರಿಯಿಸಿರುವ ಬಾಗ್ಪತ್ ಪೊಲೀಸರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಯಾವುದೇ ಅಧಿಕೃತ ದೂರು ಬಂದಿಲ್ಲ. ಘಟನೆ ಪರಿಶೀಲಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.