ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಈ ತ್ರಿವಳಿಗಳ ಹೆಸರು ಎ, ಬಿ, ಸಿ; ಈ ನಾಮಕರಣದ ಹಿಂದಿದೆ ಅಚ್ಚರಿಯ ಸಂಗತಿ

A, B, and C: ಕೆನಡಾದ ಟೊರೊಂಟೊದಲ್ಲಿ ಹುಟ್ಟಿದ ತ್ರಿವಳಿ ಸಹೋದರರಿಗೆ ಪೋಷಕರು ಸರಳ ಹೆಸರನ್ನಿಟ್ಟಿದ್ದಾರೆ. ಮಕ್ಕಳನ್ನು ಪರಸ್ಪರ ಗುರುತಿಸಲು ಸುಲಭವಾಗುವಂತೆ ಹೆಸರಿನ ಮಧ್ಯೆ ಎ, ಬಿ, ಸಿ ಎಂದು ಹೆಸರನ್ನಿಟ್ಟಿದ್ದಾರೆ. ಅದೇಕೆ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ಉತ್ತರ.

ಎ, ಬಿ ಮತ್ತು ಸಿ ಎಂದು ಕರೆಯಲ್ಪಡುತ್ತಾರೆ ಈ ತ್ರಿವಳಿಗಳು

ಟೊರೊಂಟೊ, ಜ. 1: ಪೋಷಕರು ಯಾವಾಗಲೂ ತಮ್ಮ ಮಕ್ಕಳಿಗೆ ಉತ್ತಮ, ವಿಶಿಷ್ಟ ಹೆಸರು ಇಡಲು ಬಯಸುತ್ತಾರೆ. ತುಂಬಾ ವಿಭಿನ್ನವಾದ ಹೆಸರನ್ನೇ ಬಹುತೇಕರು ಹುಡುಕುತ್ತಾರೆ. ಮಕ್ಕಳು ಬೆಳೆದಂತೆ ಅವರಿಗೆ ಹೆಸರು ಇಷ್ಟವಾಗಬೇಕೆಂದು ತುಂಬಾ ಹುಡುಕಿ ಇಡುತ್ತಾರೆ. ಆದರೆ ಕೆನಡಾದಲ್ಲಿ ತ್ರಿವಳಿ ಮಕ್ಕಳ ಪೋಷಕರಿಗೆ ಒಂದು ಚಿಂತೆಯಿತ್ತು. ಹೀಗಾಗಿ ಮಕ್ಕಳಿಗೆ ಬಹಳ ಸರಳ ಹೆಸರನ್ನಿಟ್ಟಿದ್ದಾರೆ (viral news).

ಹೌದು, ಟೊರೊಂಟೊದಲ್ಲಿ ಹುಟ್ಟಿದ ತ್ರಿವಳಿ ಸಹೋದರರಾದ ಆಂಡ್ರ್ಯೂ ಎ ಮೆಲೋಫ್, ಕ್ವೆಂಟಿನ್ ಬಿ ಮೆಲೋಫ್ ಮತ್ತು ಜೋಯಲ್ ಸಿ ಮೆಲೋಫ್ ಎಂಬ ಮೂವರಿಗೆ ಹೆಸರಿಡಲಾಗಿದೆ. ಹೀಗಾಗಿ ಹೆಸರಿನ ಮಧ್ಯ ಅಕ್ಷರವನ್ನಿಡಲಾಗಿದೆ. ಅವರು ಜನಿಸಿದ ಕ್ರಮಕ್ಕೆ ಅನುಗುಣವಾಗಿ ಎ, ಬಿ ಮತ್ತು ಸಿ ಎಂದು ಹೆಸರಿಡಲಾಯಿತು. ತ್ರಿವಳಿಗಳು ಕೇವಲ 45 ಸೆಕೆಂಡುಗಳ ಅಂತರದಲ್ಲಿ ಜನಿಸಿದ್ದರು.

ನಾಪತ್ತೆಯಾದ ಬೆಕ್ಕಿಗಾಗಿ FIR; ಮಾಹಿತಿ ನೀಡಿದವರಿಗೆ 10,000 ಬಹುಮಾನ!

ಮಧ್ಯದ ಹೆಸರ ಹಿಂದಿನ ಕಥೆ

ತ್ರಿವಳಿಗಳ ಪೋಷಕರಾದ ಸುಜೇನ್ ಲಿಯಾನ್ಸ್ ಮತ್ತು ರಿಕ್ ಮೆಲೋಫ್ ಆಸ್ಪತ್ರೆಯ ದಾದಿಯರ ಸಲಹೆಯ ಮೇರೆಗೆ ಈ ಅಸಾಮಾನ್ಯ ಹೆಸರನ್ನು ಆಯ್ಕೆಯನ್ನು ಮಾಡಿದರು. ಗರ್ಭಾವಸ್ಥೆಯಲ್ಲಿ ವೈದ್ಯರು ಅಲ್ಟ್ರಾಸೌಂಡ್‌ಗಳ ಸಮಯದಲ್ಲಿ ಶಿಶುಗಳನ್ನು ABC ಎಂದು ಉಲ್ಲೇಖಿಸುತ್ತಿದ್ದರು. ಹೀಗಾಗಿ ಪೋಷಕರು ಅದಕ್ಕೆ ಒಗ್ಗಿಕೊಂಡರು. ದಾದಿಯರು A, B ಮತ್ತು C ಅನ್ನು ಮಧ್ಯದ ಹೆಸರುಗಳಾಗಿ ಬಳಸಲು ಸೂಚಿಸಿದಾಗ, ಪೋಷಕರು ಹೆಚ್ಚು ಯೋಚಿಸದೆ ಒಪ್ಪಿಕೊಂಡರು.

ನಮ್ಮ ಪೋಷಕರು ಒಂದೇ ಬಾರಿಗೆ ಮೂರು ಮಕ್ಕಳನ್ನು ಹೊಂದುವ ಬಗ್ಗೆ ಒತ್ತಡಕ್ಕೊಳಗಾಗಿದ್ದರು. ಆದ್ದರಿಂದ ಅವರು ಹೆಸರಿಡುವ ನಿರ್ಧಾರವನ್ನು ಬೇರೆಯವರಿಗೆ ನೀಡಲು ನಿರ್ಧರಿಸಿದರು. ದಾದಿಯರು ಈ ಹೆಸರಿನ ಕಲ್ಪನೆಯನ್ನು ನೀಡಿದರು. ನಮ್ಮ ಪೋಷಕರು ಅದನ್ನು ಅನುಸರಿಸಿದರು ಎಂದು ಕ್ವೆಂಟಿನ್ ನೆನಪಿಸಿಕೊಂಡಿದ್ದಾರೆ.

ಸಹೋದರರು ಎಷ್ಟು ಹೋಲುತ್ತಿದ್ದರು ಎಂದರೆ, ಕ್ವೆಂಟಿನ್ ಕೂಡ 12 ವರ್ಷದವರೆಗೂ ಹಳೆಯ ಫೋಟೊಗಳಲ್ಲಿ ತನ್ನನ್ನು ಗುರುತಿಸಿಕೊಳ್ಳಲು ಕಷ್ಟಪಟ್ಟರು. ಅವರ ಹೆತ್ತವರಿಗೂ ಇದು ಸವಾಲಿನ ಕೆಲಸವಾಗಿತ್ತು. ಹೀಗಾಗಿ ಅವರು ತ್ವರಿತವಾಗಿ ಗುರುತಿಸಲು ಪ್ರತಿ ಮಗುವಿನ ಕಾಲ್ಬೆರಳ ಉಗುರುಗಳನ್ನು ಬೇರೆ ಬೇರೆ ಬಣ್ಣಗಳಲ್ಲಿ ಚಿತ್ರಿಸಿದರು. ಅವರು ಬೆಳೆದಂತೆ, ಅವರ ಮುಖಗಳು ಮತ್ತು ವ್ಯಕ್ತಿತ್ವಗಳು ಹೆಚ್ಚು ಸ್ಪಷ್ಟವಾದವು. ಆದರೆ 12 ವರ್ಷಕ್ಕಿಂತ ಚಿಕ್ಕವರಿದ್ದಾಗ ಆಂಡ್ರ್ಯೂ, ಕ್ವೆಂಟಿನ್ ಮತ್ತು ಜೋಯಲ್ ನೋಡಲು ಒಂದೇ ರೀತಿ ಕಾಣುತ್ತಿದ್ದರು.

ಬೆಂಗಳೂರಿನ ಮಾಲ್‌ನಲ್ಲಿ ಗರ್ಭಿಣಿಯರಿಗೆ 'ಪಿಂಕ್ ಪಾರ್ಕಿಂಗ್' ಸೌಲಭ್ಯ

ಕ್ವೆಂಟಿನ್ ಅವರ ಮಧ್ಯದ ಹೆಸರು ಅನೇಕರಿಗೆ ಅಚ್ಚರಿ ತಂದಿದೆ. ಅವರನ್ನು ಮೊದಲ ಬಾರಿಗೆ ಅವರನ್ನು ಭೇಟಿಯಾದವರಿಗೆ ಮಧ್ಯದ ಹೆಸರಿನ ಬಗ್ಗೆ ಕುತೂಹಲ ಮೂಡುವುದು ಸಾಮಾನ್ಯವಾಗಿದೆಯಂತೆ. ಅವರ ಪೂರ್ಣ ಹೆಸರನ್ನು ಕೇಳಿದಾಗ ಅಚ್ಚರಿಗೊಳಗಾಗುತ್ತಾರಂತೆ.

ನ್ಯೂಯಾರ್ಕ್ ಪ್ರವಾಸದ ಸಮಯದಲ್ಲಿ ಅವರು ಹಲವು ಪ್ರಶ್ನೆಗಳನ್ನು ಎದುರಿಸಬೇಕಾಯ್ತಂತೆ. ನಂತರ ಅವರ ಪಾಸ್‌ಪೋರ್ಟ್‌ನಿಂದ ಮಧ್ಯದ ಅಕ್ಷರ ತೆಗೆದುಹಾಕಲಾಯಿತು. ಆದರೂ ಕಾನೂನುಬದ್ಧವಾಗಿ ಅವರ ಮಧ್ಯದ ಹೆಸರು ಬಿ ಆಗಿಯೇ ಉಳಿದಿದೆ.