ಬೆಂಗಳೂರಿನ ಮಾಲ್‌ನಲ್ಲಿ ಗರ್ಭಿಣಿಯರಿಗೆ 'ಪಿಂಕ್ ಪಾರ್ಕಿಂಗ್'' ಸೌಲಭ್ಯ; ಸಾರ್ವಜನಿಕರಿಂದ ಭಾರೀ ಮೆಚ್ಚುಗೆ
Viral Video: ಅತಿ ಹೆಚ್ಚು ವಾಹನ ದಟ್ಟನೆಯ ನಗರಗಳ ಪಟ್ಟಿಯಲ್ಲಿ ಬೆಂಗಳೂರು ಕೂಡ ಮುಂದಿದ್ದು ನಗರದ ಜನನಿಬಿಡ ಮಾಲ್‌ಗಳಲ್ಲಿ ಪಾರ್ಕಿಂಗ್ ಜಾಗ ಪತ್ತೆಹಚ್ಚುವುದು ಸವಾಲಿನ ಕೆಲಸ ಎಂದೇ ಹೇಳಬಹುದು. ಅದರಲ್ಲೂ ಹಿರಿಯ ವ್ಯಕ್ತಿಗಳಿಗೆ ಗರ್ಭಿಣಿಯರಿಗೆ ಇದು ಮತ್ತಷ್ಟು ಒತ್ತಡ ಉಂಟು ಮಾಡುತ್ತದೆ. ಈ ಸಮಸ್ಯೆಯನ್ನು ಮನಗಂಡ ಬೆಂಗಳೂರಿನ ಮಾಲ್ ವೊಂದು ಗರ್ಭಿಣಿಯರಿಗಾಗಿ ವಿಶೇಷ ಪಾರ್ಕಿಂಗ್ ವ್ಯವಸ್ಥೆಯನ್ನು ಜಾರಿ ಮಾಡುವ ಗಮನ ಸೆಳೆಯುತ್ತಿದೆ. ಸದ್ಯ ಇದರ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ..
ಮಾಲ್ ನಲ್ಲಿ ತಾಯಂದಿರಿಗಾಗಿ ಪಿಂಕ್ ಪಾರ್ಕಿಂಗ್ ವ್ಯವಸ್ಥೆ -
ಬೆಂಗಳೂರು,ಡಿ. 31: ಭಾರತದಲ್ಲಿ ವೇಗವಾಗಿ ಬೆಳೆಯುತ್ತಿರುವ ಮಹಾನಗರಗಳಲ್ಲಿ ಬೆಂಗಳೂರು ಕೂಡ ಒಂದಾಗಿದೆ. ಇಲ್ಲಿನ ಬನ್ನೇರುಘಟ್ಟ ಉದ್ಯಾನವನದಿಂದ ಹಿಡಿದು ನಂದಿ ಹಿಲ್ಸ್, ಕಬ್ಬನ್ ಪಾರ್ಕ್, ವಿಧಾನಸೌಧ, ಸ್ನೋ ಸಿಟಿ, ಇಸ್ಕಾನ್ ದೇವಸ್ಥಾನ, ಬೆಂಗಳೂರು ಕೋಟೆ, ಕಮರ್ಷಿ ಯಲ್ ಸ್ಟ್ರೀಟ್ ಸೇರಿದಂತೆ ನೋಡಲು ಎರಡು ಕಣ್ಣು ಸಾಲದಿರುವಂತ ಸಾಕಷ್ಟು ಪ್ರೇಕ್ಷಣೀಯ ಸ್ಥಳಗಳಿವೆ. ಅದರಲ್ಲೂ ಅತಿ ಹೆಚ್ಚು ವಾಹನ ದಟ್ಟನೆಯ ನಗರಗಳ ಪಟ್ಟಿಯಲ್ಲಿ ಬೆಂಗಳೂರು ಕೂಡ ಮುಂದಿದ್ದು ನಗರದ ಜನನಿಬಿಡ ಮಾಲ್‌ಗಳಲ್ಲಿ ಪಾರ್ಕಿಂಗ್ ಜಾಗ ಪತ್ತೆಹಚ್ಚುವುದು ಸವಾಲಿನ ಕೆಲಸ ಎಂದೇ ಹೇಳಬಹುದು. ಅದರಲ್ಲೂ ಹಿರಿಯ ವ್ಯಕ್ತಿಗಳಿಗೆ, ಗರ್ಭಿಣಿಯರಿಗೆ ಇದು ಮತ್ತಷ್ಟು ಒತ್ತಡ ಉಂಟುಮಾಡುತ್ತದೆ. ಈ ಸಮಸ್ಯೆಯನ್ನು ಮನಗಂಡ ಬೆಂಗಳೂರಿನ ಮಾಲ್ವೊಂದು ಗರ್ಭಿಣಿಯರಿಗಾಗಿ ವಿಶೇಷ ಪಾರ್ಕಿಂಗ್ ವ್ಯವಸ್ಥೆಯನ್ನು ಜಾರಿ ಮಾಡುವ ಗಮನ ಸೆಳೆಯುತ್ತಿದೆ. ಸದ್ಯ ಇದರ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗುತ್ತಿದೆ.
ಬೆಂಗಳೂರಿನ ನೆಕ್ಸಸ್ ಮಾಲ್ ನ ಬೇಸ್‌ಮೆಂಟ್ ಪಾರ್ಕಿಂಗ್‌ನಲ್ಲಿ ಗರ್ಭಿಣಿಯರಿಗಾಗಿಯೇ ಈ ವ್ಯವಸ್ಥೆ ಕಾಯ್ದಿರಿಸಲಾಗಿದೆ."ಈ ಗುಲಾಬಿ ಬಣ್ಣದ ಥೀಮ್ ತಾಯಂದಿರಿಗಾಗಿ ಕಾಯ್ದಿರಿಸಲಾಗಿದೆ" ಎಂದು ಬರೆಯಲಾದ ಫಲಕವನ್ನು ಕೂಡ ಇಲ್ಲಿ ಅಳವಡಿಸಲಾಗಿದೆ. ಈ ಜಾಗವು ಲಿಫ್ಟ್ ಮತ್ತು ಪ್ರವೇಶ ದ್ವಾರಗಳಿಗೆ ಅತ್ಯಂತ ಸಮೀಪದಲ್ಲಿರುವುದರಿಂದ, ಗರ್ಭಿಣಿಯರು ಹೆಚ್ಚು ದೂರ ನಡೆಯುವ ಅವಶ್ಯಕತೆ ಕೂಡ ಇರುವುದಿಲ್ಲ.
ವಿಡಿಯೋ ನೋಡಿ:
ಮಾಲ್‌ನ ಪಾರ್ಕಿಂಗ್ ಸ್ಥಳದಲ್ಲಿ ಸಂಚರಿಸುವಾಗ ಬೆಂಗಳೂರು ಮೂಲದ ಗ್ರಾಹಕರೊಬ್ಬರು ಈ ವಿಶಿಷ್ಟ ಪಾರ್ಕಿಂಗ್ ವ್ಯವ ಸ್ಥೆಯನ್ನು ವಿಡಿಯೋ ಮಾಡಿ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. "ನಗರ ಪ್ರದೇಶದಲ್ಲಿ ಅತ್ಯುನ್ನತ ಸೌಲಭ್ಯಗಳಿಗಿಂತಲೂ ಮೀರಿದ ಆಲೋಚನೆ ಇದಾಗಿದೆ. ದೇಶದ ಎಲ್ಲಾ ಮಾಲ್‌ಗಳು ಇಂತಹ ಬಹು ಅಗತ್ಯವುಳ್ಳ ಸೌಲಭ್ಯಗಳನ್ನು ಅಳವಡಿಸಿಕೊಳ್ಳಬೇಕು" ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ವಿಡಿಯೋ ಸದ್ಯ ಸಾವಿರಾರು ಲೈಕ್,ವಿವ್ಸ್ ಪಡೆದುಕೊಂಡಿದ್ದು ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
Viral Video: ಗಾಂಜಾ ಬಗ್ಗೆ ದೂರು ನೀಡಿದ್ದಕ್ಕೆ ಮಕ್ಕಳ ಮೇಲೆ ಹಲ್ಲೆ ನಡೆಸಿದ ಅಪ್ರಾಪ್ತ ಬಾಲಕರು
ಇದು ಸಣ್ಣ ವಿಚಾರದಂತೆ ಕಂಡರೂ, ಗರ್ಭಿಣಿಯರಿಗೆ ದೊಡ್ಡ ಮಟ್ಟದ ನೆರವು ನೀಡುತ್ತದೆ ಎಂದು ಅನೇಕ ಮಹಿಳೆಯರು ಶ್ಲಾಘನೆ ವ್ಯಕ್ತ ಪಡಿಸಿದ್ದಾರೆ. ನೆಟ್ಟಿಗರೊಬ್ಬರು ಬೆಂಗಳೂರಿನಲ್ಲಿ ಮಹಿಳೆಯರಿಗೆ, ವಿಶೇಷವಾಗಿ ತಾಯಂದಿರಿಗೆ ಪ್ರತ್ಯೇಕ ಸ್ಥಳಾವಕಾಶ ಕಲ್ಪಿಸಿರುವ ನೆಕ್ಸಸ್ ಮಾಲ್‌ಗೆ ಹ್ಯಾಟ್ಸ್ ಆಫ್ ಭಾರತದ ಇತರ ಎಲ್ಲಾ ಮಾಲ್‌ಗಳು ಇದನ್ನು ಕಾರ್ಯಗತ ಗೊಳಿಸಿದರೆ ಉತ್ತಮ ಎಂದು ಬರೆದುಕೊಂಡಿದ್ದಾರೆ. ಒಬ್ಬ ಬಳಕೆದಾರರು ಇದು ತುಂಬಾ ವಿಶೇಷವಾಗಿದೆ. ವಿಕಲಚೇತನರು ಮತ್ತು ಹಿರಿಯ ನಾಗರಿಕರಿಗೆ ಪಾರ್ಕಿಂಗ್ ವ್ಯವಸ್ಥೆ ಮೀಸಲಿಟ್ಟಿರುವುದು ಸಾಮಾನ್ಯ ಆದರೆ ಗರ್ಭಿಣಿಯರ ಬಗ್ಗೆ ಕಾಳಜಿ ವಹಿಸಿರುವುದು ಮಾಲ್ ಆಡಳಿತ ಮಂಡಳಿಯ ಉತ್ತಮ ಆಲೋಚನೆಯನ್ನು ತೋರಿಸುತ್ತದೆ ಎಂದು ಕೊಂಡಾಡಿದ್ದಾರೆ.