ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಬೈಕ್‌ನಲ್ಲಿ ಬಂದು 3 ದಿನಗಳ ಹಿಂದೆಯಷ್ಟೇ ಖರೀದಿಸಿದ ಯುವತಿಯ ಹೊಸ ಐಫೋನ್ 18 ಪ್ರೋ ಮೊಬೈಲ್‌ ಎಗರಿಸಿದ ಖದೀಮರು

Viral News: ಕೆಲಸಕ್ಕೆ ತೆರಳುತ್ತಿದ್ದ ಯುವತಿಯೊಬ್ಬರನ್ನು ತಡೆದು ಕೈಯಲ್ಲಿದ್ದ ದುಬಾರಿ ಬೆಲೆಯ ಹೊಸ ಐಫೋನ್ 18 ಪ್ರೋ ಅನ್ನು ಬೈಕ್‌ನಲ್ಲಿ ಬಂದ ಇಬ್ಬರು ಖದೀಮರು ಎಗರಿಸಿ ಪರಾರಿಯಾಗಿರುವ ಘಟನೆ ನಡೆದಿದೆ. ಶುಭಿ ಭಂಡಾರಿ ಆಟೋ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದಾಗ ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದಲ್ಲಿ ಈ  ಘಟನೆ ನಡೆದಿದೆ.

ಸಾಂದರ್ಭಿಕ ಚಿತ್ರ

ಲಖನೌ, ಸೆ. 22: ಇತ್ತೀಚೆಗೆ ರಿಲೀಸ್‌ ಆಗಿರುವ ಅ್ಯಪಲ್ ಕಂಪನಿಯ ಐಫೋನ್ 18 ಪ್ರೋ ಮಾರುಕಟ್ಟೆಯಲ್ಲಿ ಭಾರಿ ಹವಾ ಸೃಷ್ಟಿಸಿದೆ. ಗ್ರಾಹಕರು ಮಾರುಕಟ್ಟೆಯಲ್ಲಿ ಖರೀದಿಗಾಗಿ ಮುಗಿಬಿದ್ದಿದ್ದಾರೆ. ಈ ನಡುವೆ ಕೆಲಸಕ್ಕೆ ತೆರಳುತ್ತಿದ್ದ ಯುವತಿಯೊಬ್ಬರನ್ನು ತಡೆದು ಕೈಯಲ್ಲಿದ್ದ ದುಬಾರಿ ಬೆಲೆಯ ಹೊಸ ಐಫೋನ್ 18 ಪ್ರೋ ಅನ್ನು ಬೈಕ್‌ನಲ್ಲಿ ಬಂದ ಇಬ್ಬರು ಖದೀಮರು ಎಗರಿಸಿ ಪರಾರಿಯಾಗಿರುವ ಘಟನೆ (Viral News) ನಡೆದಿದೆ.

ಶುಭಿ ಭಂಡಾರಿ ಆಟೋ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದಾಗ ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದಲ್ಲಿ ಈ  ಘಟನೆ ನಡೆದಿದೆ. ಹಣ ಪಾವತಿ  ಮಾಡಲು ಅವರು ತಮ್ಮ ಫೋನ್ ಹೊರತೆಗೆದಾಗ, ಹೆಲ್ಮೆಟ್ ಧರಿಸಿದ್ದ ಇಬ್ಬರು ವ್ಯಕ್ತಿಗಳು ಬೈಕ್‌ನಲ್ಲಿ ವಾಹನದ ಹಿಂಭಾಗದಿಂದ ಬಂದು ಮೊಬೈಲ್ ಕಿತ್ತುಕೊಂಡಿದ್ದಾರೆ.

ಯುವತಿಯ ಐಫೋನ್‌ ಎಗರಿಸಿದ ಕಳ್ಳರು:



ಬೈಕ್‌ನಲ್ಲಿ ಬಂದ ಇಬ್ಬರು ಅಪರಿಚಿತರು ಮೊದಲಿಗೆ ಯುವತಿ ಜತೆ ಮಾತುಕತೆ ಆರಂಭಿಸಿ, ವಿಳಾಸ ಕೇಳಿದ್ದಾರೆ. ನಂತರ ಅವರು ಆಕೆ ಹಿಡಿದಿದ್ದ ಸ್ಮಾರ್ಟ್‌ಫೋನ್‌ನತ್ತ ಗಮನ ಹರಿಸಿದ್ದು, ಹೊಸ ಐಫೋನೇ? ಎಂದು ಕೇಳಿದ್ದಾರೆ. ಹೌದು ಎಂದು ಯುವತಿ ದೃಢಪಡಿಸಿದಾಗ, ಅವರ ಕೈಯಿಂದ ಮೊಬೈಲ್ ಕಸಿದುಕೊಂಡು ತಕ್ಷಣವೇ ತಮ್ಮ ಬೈಕ್‌ನಲ್ಲಿ ವೇಗವಾಗಿ ಹೊರಟು ಹೋಗಿದ್ದಾರೆ.

ಫ್ಲೈಓವರ್ ನಡುವೆ ಸಿಲುಕಿದ ಕಾರ್‌! ಚಾಲಕ ಪವಾಡ ಸದೃಶ ಪಾರು

ಏಕ್ ಮೂರ್ತಿ ಗೋಲ್ ಚಕ್ಕರ್ ಬಳಿ ಈ ಘಟನೆ ನಡೆದಿದ್ದು, ಕೇವಲ ಮೂರು ದಿನಗಳ ಹಿಂದೆಯಷ್ಟೇ ಖರೀದಿಸಿದ ಫೋನ್ ಇದಾಗಿತ್ತು. ಮೊಬೈಲ್ ಕಳವಿನ ಬಗ್ಗೆ ಸಂತ್ರಸ್ತೆ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಬಿಸ್‌ರಾಖ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಸಾಕ್ಷ್ಯಗಳನ್ನು ಸಂಗ್ರಹಿಸಿ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.