ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಬಾಲ್ಯದ ಮುಗ್ಧತೆ ಕಸಿಯುವ ಯತ್ನ: ಬಾಲಕಿಯ ಮೀತಿ ಮೀರಿದ ಡ್ಯಾನ್ಸ್ ಸ್ಟೆಪ್ ಕಂಡು ಆತಂಕ ಹೊರಹಾಕಿದ ನೆಟ್ಟಿಗರು

Viral Video: ಇಲ್ಲೊಬ್ಬ ಬಾಲಕಿಯೂ ತನ್ನ ವಯಸ್ಸಿಗೂ ಮೀರಿ ನೃತ್ಯ ಮಾಡಿದ್ದು ಸೋಷಿಯಲ್ ಮೀಡಿಯಾದಲ್ಲಿ ಪರ- ವಿರೋಧದ ಚರ್ಚೆ ಉಂಟಾಗಿದೆ."ಮಿನಿ ಮಾಧುರಿ" ಎಂದು ಕರೆಯಲ್ಪಡುವ ಅತ್ಯಂತ ಜನಪ್ರಿಯ ಬಾಲ ನರ್ತಕಿ ಬರ್ಕತ್ ಅರೋರಾ ಅವರ ವೀಡಿಯೊವೊಂದು ವೈರಲ್ ಆಗಿದ್ದು ಇಷ್ಟು ಸಣ್ಣ ವಯಸ್ಸಿಗೆ ಇಂತಹ ನೃತ್ಯ ಬೇಕಾ ಎಂದು ಹಲವರು ಪ್ರಶ್ನೆ ಮಾಡಿದ್ದಾರೆ...

ಸಣ್ಣ ಮಕ್ಕಳ ಮೀತಿ ಮೀರಿದ ಡ್ಯಾನ್ಸ್ ಸ್ಟೆಪ್ ಕಂಡು ಆತಂಕ ಹೊರಹಾಕಿದ ನೆಟ್ಟಿಗರು

ಹೊಸ ದೆಹಲಿ,ಮೇ 23: ಇತ್ತೀಚೆಗೆ ಮಕ್ಕಳು ಆ್ಯಕ್ಟೀವ್ ಆಗಿ ಇರಬೇಕೆಂದು ಪೋಷಕರು ನಾನಾ ರೀತಿಯ ಹರಸಾಹಸ ಮಾಡುತ್ತಲೇ ಇರುತ್ತಾರೆ. ಟ್ಯೂಷನ್, ಡ್ಯಾನ್ಸ್ ಕ್ಲಾಸ್, ಕರಾಟೆ ಎಂದು ವಿವಿಧ ತರಬೇತಿ ಕ್ಲಾಸ್ ಗಳಿಗೂ ಸೇರಿಸುತ್ತಾರೆ. ಆದರೆ ಮಕ್ಕಳು ಬೆಳೆಯುವ ಸಮಯದಲ್ಲಿ ಅವರ ವಯಸ್ಸಿಗೆ ತಕ್ಕಂತೆ ಅವರನ್ನು ಬೆಳೆಸಿ ಎಂದು ಹಲವಾರು ಹೇಳುತ್ತಾರೆ‌‌. ಅದೇ ರೀತಿ ಇಲ್ಲೊಬ್ಬ ಬಾಲಕಿಯೂ ತನ್ನ ವಯಸ್ಸಿಗೂ ಮೀರಿ ನೃತ್ಯ ಮಾಡಿದ್ದು ಸೋಶಿಯಲ್ ಮೀಡಿಯಾದಲ್ಲಿ (Viral Video) ಪರ- ವಿರೋಧದ ಚರ್ಚೆ ಉಂಟಾಗಿದೆ."ಮಿನಿ ಮಾಧುರಿ" ಎಂದು ಕರೆಯಲ್ಪಡುವ ಅತ್ಯಂತ ಜನಪ್ರಿಯ ಬಾಲ ನರ್ತಕಿ ಬರ್ಕತ್ ಅರೋರಾ ಅವರ ವೀಡಿಯೊವೊಂದು ವೈರಲ್ ಆಗಿದ್ದು ಇಷ್ಟು ಸಣ್ಣ ವಯಸ್ಸಿಗೆ ಇಂತಹ ನೃತ್ಯ ಬೇಕಾ ಎಂದು ಹಲವರು ಪ್ರಶ್ನೆ ಮಾಡಿದ್ದಾರೆ.

ಇಂದು ತಮ್ಮ ಮಕ್ಕಳು ಜನಪ್ರಿಯತೆ ಪಡೆಯಬೇಕೆಂದು ಪೋಷಕರು ಒತ್ತಡವನ್ನು ಹೇರುತ್ತಿದ್ದಾರೆ‌. ಅಪ್ರಾಪ್ತ ಮಕ್ಕಳನ್ನು ವಯಸ್ಸಿಗೇ ಮೀರಿದ ಹಾವ ಭಾವದೊಂದಿಗೆ ಬಿಂಬಿಸಲು ಪ್ರೇರೆಪಿಸುವುದು ಸರಿಯಲ್ಲ ಎಂದು ಕೆಲವರು ಚರ್ಚಿಸುತ್ತಿದ್ದಾರೆ. ಅದೇ ರೀತಿ ಬಾಲಿವುಡ್ ನ ಮಾಧುರಿ ದೀಕ್ಷಿತ್ ಅವರ ನೃತ್ಯದ ಶೈಲಿ ಹಾಗೂ ಕಣ್ಣಿನ ಹಾವ-ಭಾವ ನಟನೆಯನ್ನು ಮಾಡುವ ಬಾಲಕಿ ಬರ್ಕತ್ ಅರೋರಾ (Barkat Arora) ಅವರ ನೃತ್ಯದ ವಿಡಿಯೋ ಇದೀಗ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ವಿಡಿಯೋ ನೋಡಿ:



ಸಣ್ಣ ವಯಸ್ಸಿನಲ್ಕೇ ನೂರಾರು ಜನರ ಎದುರು ಬಾಲಕಿ ನೃತ್ಯ ಮಾಡಿದ್ದು ಇದಕ್ಕಿಂತ ಉತ್ತಮ ನೃತ್ಯ ತೋರಿಸಿ ಎಂಬ ಶೀರ್ಷಿಕೆಯೊಂದಿಗೆ ವಿಡಿಯೊವೊಂದನ್ನು ಶೇರ್ ಮಾಡಲಾಗಿದೆ. ಬರ್ಕತ್ ಅವರ ಪ್ರತಿಭೆಯನ್ನು ಲಕ್ಷಾಂತರ ಜನರು ಮೆಚ್ಚಿಕೊಂಡಿದ್ದು ಕೆಲವರು ಆಧುನಿಕ ನೃತ್ಯ ಕ್ಲಬ್‌ ಗಳಲ್ಲಿ ಮಕ್ಕಳಿಗೆ ಕಲಿಸುವ ನೃತ್ಯಗಳು ಅವರ ವಯಸ್ಸನ್ನು ಮೀರಿ ಹೋಗಿವೆ‌ ಎಂದು ಕಿಡಿಕಾರಿದ್ದಾರೆ.

IPL Viral Video ಕೃಣಾಲ್‌ ಪಾಂಡ್ಯ ಬೌನ್ಸರ್‌ ಕಂಡು ರೊಚ್ಚಿಗೆದ್ದ ಸನ್‌ರೈಸರ್ಸ್‌ ಮಾಲಕಿ ಕಾವ್ಯ ಮಾರನ್‌

ಮಕ್ಕಳನ್ನು ಚಿಕ್ಕ ವಯಸ್ಸಿನಲ್ಲೇ ದೊಡ್ಡವರಂತೆ ಬಿಂಬಿಸುವುದಕ್ಕೆ ತರಾಟೆಗೆ ತೆಗೆದುಕೊಂಡಿದ್ದಾರೆ. ವಯಸ್ಕರನ್ನು ಅನುಕರಿಸುವ ರೀತಿಯಲ್ಲಿ ನೃತ್ಯ ಮಾಡುವ ಮಗು ಅದರ ವಯಸ್ಸಿಗೆ ಸೂಕ್ತ ವಲ್ಲದಂತೆ ಕಾಣುತ್ತದೆ. ಬಾಲ್ಯವು ಗುಣ ಮೌಲ್ಯಗಳನ್ನು ಕಲಿಯುವ ಮತ್ತು ಮುಗ್ಧತೆಯನ್ನು ಆನಂದಿಸುವ ಸಮಯ ವಯಸ್ಸಿಗೆ ಮೀರಿದ ಪ್ರೌಢ ಹಾವಭಾವಗಳು ಮಿತಿ ಮೀರುತ್ತಿವೆ ಎಂದು ಹಲವರು ಕಳವಳ ವ್ಯಕ್ತಪಡಿಸಿದ್ದಾರೆ.

ಬಳಕೆದಾರರೊಬ್ಬರು ನನ್ನನ್ನು ಹಳೇ ಕಾಲದವನು ಎಂದರೂ ಪರವಾಗಿಲ್ಲ. ಆದರೆ ಇದು ಮಕ್ಕಳಿಗೆ ಸೂಕ್ತವಲ್ಲ ಎಂದು ನನಗೆ ಅನಿಸುತ್ತದೆ. ಮಗುವೊಂದು ಹಿರಿಯರನ್ನು ಅನುಕರಿಸುವ ರೀತಿ ವರ್ತಿಸುವುದು ಸರಿ ಅನಿಸಿಲ್ಲ ಎಂದರು. ಮತ್ತೊಬ್ಬರು ಇತ್ತೀಚಿನ ದಿನಗಳಲ್ಲಿ ಚಿಕ್ಕ ಮಕ್ಕಳು ನೃತ್ಯ ಮಾಡುವಾಗ ವಿಚಿತ್ರ ಅಭಿವ್ಯಕ್ತಿಗಳನ್ನು ನೀಡುತ್ತಾರೆ, ಅದು ನನಗೆ ಪ್ರಾಮಾಣಿಕವಾಗಿ ಆಶ್ಚರ್ಯವನ್ನುಂಟು ಮಾಡುತ್ತದೆ ಎಂದರು.