Preserved body of monk: ಒಂದಲ್ಲ ಎರಡಲ್ಲ ಬರೋಬ್ಬರಿ 50ವರ್ಷಗಳಿಂದ ಧ್ಯಾನ ಮಾಡ್ತಿರೋ ಸಾಧು ಇವರೇ!
preserved body of monk: ಧ್ಯಾನ ಮಾಡುತ್ತಾ ನಿಧನರಾದ ಸನ್ಯಾಸಿಯೊಬ್ಬರ ದೇಹವನ್ನು ಥೈಲ್ಯಾಂಡ್‌ನ ಕೊ ಸಮುಯಿ ದ್ವೀಪದಲ್ಲಿರುವ ವಾಟ್ ಖುನಾರಾಮ್ ದೇವಾಲಯದಲ್ಲಿ ಇನ್ನೂ ಸಂರಕ್ಷಿಸಿಡಲಾಗಿದೆ. ಲುವಾಂಗ್ ಫೋ ಡೇಂಗ್ ಅವರ ದೇಹವು 1973 ರಲ್ಲಿ ಪತ್ತೆಯಾಗಿದ್ದು, ಗಾಜಿನ ಕ್ಯಾಬಿನೆಟ್‌ನಲ್ಲಿ ಇರಿಸಲಾಗಿತ್ತು. ಇಂದಿಗೂ ಅವರ ದೇಹವು ಸಂರಕ್ಷಿಸಲ್ಪಟ್ಟಿದೆ.


ಬ್ಯಾಂಕಾಕ್: ಥೈಲ್ಯಾಂಡ್‌ನ ಕೊ ಸಮುಯಿ ದ್ವೀಪದಲ್ಲಿರುವ ವಾಟ್ ಖುನಾರಾಮ್ ದೇವಾಲಯದಲ್ಲಿ ಧ್ಯಾನ ಮಾಡುತ್ತಾ ನಿಧನರಾದ ಸನ್ಯಾಸಿಯೊಬ್ಬರ (monk) ದೇಹವನ್ನು ಇನ್ನೂ ಸಂರಕ್ಷಿಸಿಡಲಾಗಿದೆ. 50 ವರ್ಷಗಳ ಹಿಂದೆ ಸನ್ಯಾಸಿ ಲುವಾಂಗ್ ಫೋ ಡೇಂಗ್ (Luang Pho Daeng) ತಮ್ಮ 79ನೇ ವಯಸ್ಸಿನಲ್ಲಿ ಧ್ಯಾನ ಮಾಡುತ್ತಿದ್ದಾಗ ನಿಧನರಾಗಿದ್ದಾರೆ. ಇವರ ದೇಹವನ್ನು ಗಾಜಿನೊಳಗೆ ಧ್ಯಾನ ಮಾಡುತ್ತಿರುವ ರೀತಿಯಲ್ಲೇ ಸಂರಕ್ಷಿಸಿಡಲಾಗಿದೆ.
ಲುವಾಂಗ್ ಫೋ ಡೇಂಗ್ ಅವರ ದೇಹವು 1973 ರಲ್ಲಿ ಪತ್ತೆಯಾಗಿದ್ದು, ಗಾಜಿನ ಕ್ಯಾಬಿನೆಟ್‌ನಲ್ಲಿ ಇರಿಸಲಾಗಿತ್ತು. ಇಂದಿಗೂ ಅವರ ದೇಹವು ಸಂರಕ್ಷಿಸಲ್ಪಟ್ಟಿದೆ. 2000ರ ದಶಕದ ಆರಂಭದಲ್ಲಿ ನಡೆಸಲಾದ ರೇಡಿಯೋಗ್ರಾಫಿಕ್ ಪರೀಕ್ಷೆಗಳು ಅವರ ಹೆಚ್ಚಿನ ಅಂಗ ವ್ಯವಸ್ಥೆಗಳು ಹಾಗೆಯೇ ಉಳಿದಿವೆ, ಆದರೆ ಕುಗ್ಗಿವೆ ಎಂದು ತೋರಿಸಿವೆ. ದಶಕಗಳ ನಂತರವೂ ಅವರ ಆಂತರಿಕ ಅಂಗಗಳು ಮತ್ತು ಮೆದುಳಿನ ಅಂಗಾಂಶಗಳು ಇನ್ನೂ ಹಾಗೆಯೇ ಉಳಿದಿವೆ ಎನ್ನಲಾಗಿದೆ.
ಹಲ್ಲಿಗಳು ಮತ್ತು ಇತರ ಸಣ್ಣ ಸರೀಸೃಪಗಳು ಸನ್ಯಾಸಿಯ ಬಾಯಿ, ತಲೆಬುರುಡೆ ಮತ್ತು ಗಂಟಲು ಸೇರಿದಂತೆ ದೇಹದ ಇತರೆ ಅಂಗಗಳಲ್ಲಿ ವಾಸಿಸುತ್ತವೆ. ಒಣಗಿದ ಚರ್ಮದ ಕೆಳಗೆ ಮೊಟ್ಟೆಗಳನ್ನು ಇಡುತ್ತವೆ. ದೇವಾಲಯಕ್ಕೆ ಭೇಟಿ ನೀಡುವವರಿಗೆ, ವಿಶೇಷವಾಗಿ ಮಕ್ಕಳಿಗೆ, ಭಯಾನಕ ವಾತಾವರಣವನ್ನು ಕಡಿಮೆ ಮಾಡಲು ಲುವಾಂಗ್ ಫೋ ಡೇಂಗ್ ಅವರ ಟೊಳ್ಳಾದ ಕಣ್ಣಿನ ಕುಳಿಗಳು ಕಾಣಿಸದಂತೆ ಸನ್ ಗ್ಲಾಸ್ ಹಾಕಲಾಗಿದೆ.
ವಿಡಿಯೊ ವೀಕ್ಷಿಸಿ:
ಲುವಾಂಗ್ ಫೋ ಡೇಂಗ್ ಯಾರು?
ಲುವಾಂಗ್ ಫೋ ಡೇಂಗ್ ತನ್ನ ಸಾವನ್ನು ಮೊದಲೇ ಕಂಡಿದ್ದರು. ಜೀವನವು ಕ್ಷಣಿಕ ಮತ್ತು ಪ್ರತಿ ಕ್ಷಣವೂ ಮುಖ್ಯವಾಗಿದೆ ಎಂಬುದನ್ನು ನೆನಪಿಸಲು ತನ್ನ ದೇಹವನ್ನು ಪ್ರದರ್ಶನಕ್ಕೆ ಇಡಬೇಕೆಂದು ವಿನಂತಿಸಿದ್ದರು. ಈ ಸನ್ಯಾಸಿಯ ಸಂರಕ್ಷಿತ ದೇಹವು ಆಳವಾದ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಮೌಲ್ಯವನ್ನು ಹೊಂದಿದೆ. ಸಾವಿನ ನಂತರವೂ ಧ್ಯಾನ ಮಾಡುವ ರೀತಿಯಲ್ಲೇ ಇರುವುದರಿಂದ ಇದು ಸಂದರ್ಶಕರಿಗೆ ಅಚ್ಚರಿ ತಂದಿದೆ.
ಕೆಲವರು ಈ ಅವಶೇಷಗಳು ಮೇಣದಿಂದ ಮಾಡಲ್ಪಟ್ಟಿರಬಹುದು ಎಂದು ಹೇಳುತ್ತಾಕೆ. ಅನೇಕರು ಧ್ಯಾನಸ್ಥ ಮೃತ ಸನ್ಯಾಸಿಯ ದೇಹವನ್ನು ಪವಿತ್ರವೆಂದು ಪರಿಗಣಿಸಿದ್ದಾರೆ. ಲುವಾಂಗ್ ಫೋ ಡೇಂಗ್ ಅದೃಷ್ಟ ತರುತ್ತಾರೆ ಎಂಬ ನಂಬಿಕೆಯಿದೆ. ಹೀಗಾಗಿ ಅಲ್ಲಿ ಲಾಟರಿ ಟಿಕೆಟ್ ಮಾರಾಟ ಮಾಡಲಾಗುತ್ತದೆ.
ಬೌದ್ಧಧರ್ಮದ ಆಚರಣೆಗಳು
ಬೌದ್ಧಧರ್ಮವು ಇತರ ಹಲವು ಧರ್ಮಗಳಿಗಿಂತ ಭಿನ್ನವಾಗಿರುವ ವಿಶೇಷ ಆಚರಣೆಗಳನ್ನು ಹೊಂದಿದೆ. ಬೌದ್ಧ ಸನ್ಯಾಸಿಗಳು ಸಾವಿರಾರು ದಿನಗಳವರೆಗೆ ಕಠಿಣ ಧ್ಯಾನ ಮಾಡುವ ಮೂಲಕ ಜೀವಂತವಾಗಿರುವಾಗಲೇ ನಿಧನ ಹೊಂದುತ್ತಾರೆ. ಅಂದರೆ, ಧ್ಯಾನಸ್ಥ ರೀತಿಯಲ್ಲೇ ನಿಧನ ಹೊಂದುವುದು. ಲುವಾಂಗ್ ಫೋ ಡೇಂಗ್ ಅವರ ಮರಣದ ಹಲವು ವರ್ಷಗಳ ನಂತರವೂ ವಾಟ್ ಖುನಾರಾಮ್‌ಗೆ ಯಾತ್ರಿಕರು, ಸಂದರ್ಶಕರು ಮತ್ತು ಸಂಶೋಧಕರು ಆಗಮಿಸುತ್ತಾರೆ.
ಇದನ್ನೂ ಓದಿ: Viral Video: ಫುಲ್ ಮೀಲ್ಸ್‌ಗೆ 50 ಪೈಸೆ, ಇಡ್ಲಿಗೆ 20 ಪೈಸೆ; ಉಡುಪಿ ವಿಹಾರ್ ರೆಸ್ಟೋರೆಂಟ್‍ನ ಮೆನು ವೈರಲ್