Viral Video: ನಿಮ್ಮ ಮನೆಯಲ್ಲಿ ದೆವ್ವ ಇದೆಯೇ ಎಂದು ತಿಳಿಯೋದು ಹೇಗೆ? ಈ ಪರೀಕ್ಷೆ ಮಾಡಿ
Creepy Water Test: ನಿಮ್ಮ ಮನೆಯಲ್ಲಿ ನಕಾರಾತ್ಮಕ ಶಕ್ತಿ ಇದೆಯೇ ಅಥವಾ ಯಾರಾದರೂ ಮಾಟ-ಮಂತ್ರ ಮಾಡಿಸಿದ್ದಾರಾ? ಇದನ್ನು ತಿಳಿದುಕೊಳ್ಳುವುದು ಹೇಗೆ? ಇದರ ಬಗ್ಗೆ ನಂಬಿಕೆ ಇರುವವರು ಕೆಲವು ತಂತ್ರಗಳನ್ನು ಮಾಡಿರಬಹುದು. ಇದೀಗ ವೈರಲ್ ಆಗಿರುವ ವಿಡಿಯೊವೊಂದರಲ್ಲಿ ದೆವ್ವದ ಇರುವಿಕೆಯನ್ನು ನೀರಿನ ಪರೀಕ್ಷೆ ಮೂಲಕ ಗುರುತಿಸಬಹುದಂತೆ.


ನಿಮ್ಮ ಮನೆಯಲ್ಲಿ ನಕಾರಾತ್ಮಕ ಶಕ್ತಿ (negative energy) ಇದೆಯೇ ಅಥವಾ ಅದಕ್ಕಿಂತಲೂ ಹೆಚ್ಚು ತೊಂದರೆ ಕೊಡುವ ಏನಾದರೂ ಶಕ್ತಿ ಇದೆಯೇ? ಮನೆಯಲ್ಲಿ ಆತ್ಮವಿದೆಯೇ ಎಂದು ಪರೀಕ್ಷಿಸಲು ಒಂದು ಮಾರ್ಗವಿದೆ ಎಂದು ಯಾರಾದರೂ ನಿಮಗೆ ಹೇಳಿದರೆ ಏನು ಮಾಡಬೇಕು? ಹಲವಾರು ಮಂದಿ ಗೋಚರಿಸದ ಶಕ್ತಿಯನ್ನು ಕಂಡುಹಿಡಿಯಲು ಕೆಲವೊಂದು ತಂತ್ರಗಳನ್ನು ಪ್ರಯತ್ನಿಸುತ್ತಾರೆ. ದೆವ್ವದ (ghost) ಇರುವಿಕೆ ನಿಜವೊ, ಸುಳ್ಳೊ ಗೊತ್ತಿಲ್ಲ. ಆದರೂ, ಜನರ ಮನಸ್ಸಲ್ಲಿ ನಕಾರಾತ್ಮಕ ಶಕ್ತಿ ಇದೆ ಎಂಬ ಕಲ್ಪನೆ ಇದೆ.
ಇದೀಗ, ಇದಕ್ಕೆ ಸಂಬಂಧಪಟ್ಟ ಹಾಗೆ ವಿಡಿಯೊವೊಂದು ವೈರಲ್ ಆಗುತ್ತಿದೆ. ನಿಮ್ಮ ಮನೆಯಲ್ಲಿ ನಕಾರಾತ್ಮಕ ಶಕ್ತಿ ಇದೆಯೇ ಅಥವಾ ಆತ್ಮವಿದೆಯೇ ಎಂದು ಪತ್ತೆಹಚ್ಚಲು ನಿಮಗೆ ಬೇಕಾಗಿರುವುದು ಒಂದು ಲೋಟ ನೀರು ಮತ್ತು ಒಂದು ಚಿಟಿಕೆ ಉಪ್ಪು. ಅದನ್ನು ಹೇಗೆ ಪರೀಕ್ಷಿಸುವುದು ಎಂದು ತಿಳಿದುಕೊಳ್ಳಲು ಬಯಸುವಿರಾದರೆ, ಮುಂದೆ ಓದಿ.
ನೀರಿನ ಪರೀಕ್ಷೆ
ಪರೀಕ್ಷೆಗಾಗಿ, ಒಂದು ಲೋಟ ನೀರು ತೆಗೆದುಕೊಂಡು ಅದನ್ನು ಅರ್ಧದಷ್ಟು ತುಂಬಿಸಿ. ಅದಕ್ಕೆ ಒಂದು ಚಿಟಿಕೆ ಉಪ್ಪು ಬೆರೆಸಿ, ಈ ಲೋಟವನ್ನು ಮನೆಯ ಮೂಲೆಯಲ್ಲಿ ಇರಿಸಿ. ಅಂದರೆ ಯಾರೂ ಮುಟ್ಟದ ಸ್ಥಳದಲ್ಲಿ ಅದನ್ನು ಏಳು ದಿನಗಳವರೆಗೆ ಹಾಗೆಯೇ ಇಡಬೇಕು. ವಿಡಿಯೊದ ಪ್ರಕಾರ, ನಿಮ್ಮ ಮನೆಯಲ್ಲಿ ಯಾವುದೇ ನಕಾರಾತ್ಮಕ ಶಕ್ತಿ ಇಲ್ಲದಿದ್ದರೆ, ನೀರು ಯಾವುದೇ ಬದಲಾವಣೆಗಳಿಲ್ಲದೆ ಸ್ಪಷ್ಟವಾಗಿರುತ್ತದೆ. ಆದರೆ, ನೀರಿನಲ್ಲಿ ಗುಳ್ಳೆಗಳು ರೂಪುಗೊಳ್ಳುವುದು, ವಿಚಿತ್ರ ಮೇಲ್ಮೈ ಮಾದರಿಗಳಿದ್ದರೆ ಏನೋ ನಕಾರಾತ್ಮಕ ಶಕ್ತಿ ಅಡಗಿದೆ ಎಂದರ್ಥ. ಇದು ಕೇವಲ ದೆವ್ವ ಎಂದಲ್ಲ, ಮಾಟ-ಮತ್ರವೂ ಆಗಿರಬಹುದು.
ವಿಡಿಯೊ ವೀಕ್ಷಿಸಿ:
ನೀರನ್ನು ಬಹಳ ಹಿಂದಿನಿಂದಲೂ ಶಕ್ತಿಯ ಪ್ರಬಲ ವಾಹಕವೆಂದು ಪರಿಗಣಿಸಲಾಗಿದೆ. ಇದು ಕಂಪನಗಳನ್ನು ಹೀರಿಕೊಳ್ಳುತ್ತದೆ. ನೀರಿನ ಲೋಟವು ಬದಲಾವಣೆಯ ಲಕ್ಷಣಗಳನ್ನು ತೋರಿಸಿದರೆ, ನಿಮ್ಮ ಮನೆಯಲ್ಲಿ ಕಣ್ಣಿಗೆ ಕಾಣುವುದಕ್ಕಿಂತ ಬೇರೆಯದ್ದು ಏನೋ ಇದೆ ಎಂದರ್ಥ. ಸದ್ಯ, ಈ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ (Viral Video) ಆಗಿದ್ದು, ನೆಟ್ಟಿಗರು ತರಹೇವಾರಿ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ.
ನೀರಿನಂತಹ ಸಾಮಾನ್ಯ ವಸ್ತುವನ್ನು ಬಳಸಿಕೊಂಡು ಆತ್ಮಗಳನ್ನು ಪರೀಕ್ಷಿಸುವ ಕಲ್ಪನೆಯನ್ನು ಸಾಮಾಜಿಕ ಮಾಧ್ಯಮ ಬಳಕೆದಾರರು ನಿರಾಕರಿಸಿದ್ದಾರೆ. ನೀರಿನಲ್ಲಿ ಧೂಳಿನ ಕಲ್ಮಶಗಳು ಇರಬಹುದು. ಯಾಕೆಂದರೆ 7 ದಿನಗಳವರೆಗೆ ಇಡುವುದರಿಂದ ನೀರು ಬೇರೆ ರೀತಿ ಪರಿವರ್ತನೆಗೊಳ್ಳಬಹುದು ಎಂದು ಬಳಕೆದಾರರೊಬ್ಬರು ಪ್ರತಿಕ್ರಿಯಿಸಿದರು. ಇನ್ನೂ ಕೆಲವರು ದೇವರಲ್ಲಿ ನಂಬಿಕೆ ಇಡಿ ಎಂದು ಹೇಳಿದ್ದಾರೆ.
ಇದನ್ನೂ ಓದಿ: Viral Video: ಫುಲ್ ಮೀಲ್ಸ್‌ಗೆ 50 ಪೈಸೆ, ಇಡ್ಲಿಗೆ 20 ಪೈಸೆ; ಉಡುಪಿ ವಿಹಾರ್ ರೆಸ್ಟೋರೆಂಟ್‍ನ ಮೆನು ವೈರಲ್