ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಈ ರೀತಿನೂ ಟ್ಯಾಟೂ ಹಾಕಿಸ್ಕೋಳ್ತಾರಾ..? ಭಾರೀ ವೈರಲಾಗ್ತಿದೆ ಈ ವಿಡಿಯೊ

ಇಲ್ಲೊಬ್ಬ ಯುವಕ ಜೊಂಬಿ ಹಚ್ಚೆ ವಿಭಿನ್ನವಾಗಿ ಹಾಕಿಕೊಳ್ಳುವ ಮೂಲಕ ಭಾರತದ 'ಮೊದಲ ಜೊಂಬಿ' ಎಂದು ಖ್ಯಾತಿ ಪಡೆದಿದ್ದಾರೆ. ಝಾಂಬಿ ದಿ ಪಿಯರ್ಸರ್ ಎಂದೇ ಜನಪ್ರಿಯರಾಗಿರುವ ಮಂಜುನಾಥ ಪೂಜಾರಿ ಅವರು ಭಾರತದ ಮೊದಲ ಜೊಂಬಿಯಾಗಿದ್ದಾರೆ. ತಮ್ಮ ದೇಹವನ್ನು ಜೊಂಬಿ ಯಂತೆ ಮಾರ್ಪಡಿಸುವ ಸಲುವಾಗಿ 35-40 ಲಕ್ಷ ರೂಪಾಯಿ ಖರ್ಚು ಮಾಡಿದ್ದಾರೆ.

ಜೊಂಬಿ ಹಚ್ಚೆ ಹಾಕಿಸಲು ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ದ ವ್ಯಕ್ತಿ!

ಹಚ್ಚೆ ಹಾಕಿಸಲು ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ದ ವ್ಯಕ್ತಿ -

Profile
Pushpa Kumari Nov 17, 2025 4:54 PM

ನವದೆಹಲಿ: ಇತ್ತೀಚಿನ ದಿನದಲ್ಲಿ ಬಹುತೇಕ ಯುವಕ ಯುವತಿಯರು ಟ್ಯಾಟೂ ಹಾಕಿ ಕೊಳ್ಳು ವುದನ್ನು ಇಷ್ಟ ಪಡುತ್ತಾರೆ. ಕೆಲವರು ಫ್ಯಾಷನ್ ಎಂಬ ಕಾರಣಕ್ಕೆ ಹಾಕಿಸಿಕೊಂಡರೆ ಇನ್ನು ಕೆಲವರು ಇಷ್ಟ ಪಟ್ಟು ಟ್ಯಾಟೂ ಹಾಕಿಸುವುದು ಇದೆ. ಆದರೆ ಇಲ್ಲೊಬ್ಬ ಯುವಕ ಜೊಂಬಿ ಹಚ್ಚೆ ವಿಭಿನ್ನವಾಗಿ ಹಾಕಿಕೊಳ್ಳುವ ಮೂಲಕ ಭಾರತದ 'ಮೊದಲ ಜೊಂಬಿ' (India’s first zombie) ಎಂದು ಖ್ಯಾತಿ ಪಡೆದಿದ್ದಾರೆ. ಝಾಂಬಿ ದಿ ಪಿಯರ್ಸರ್ ಎಂದೇ ಜನಪ್ರಿಯರಾಗಿರುವ ಮಂಜುನಾಥ ಪೂಜಾರಿ (Manjunath Poojari) ಅವರು ಭಾರತದ ಮೊದಲ ಜೊಂಬಿಯಾಗಿದ್ದಾರೆ. ತಮ್ಮ ದೇಹ ವನ್ನು ಝಾಂಬಿಯಂತೆ ಮಾರ್ಪಡಿಸುವ ಸಲುವಾಗಿ 35-40 ಲಕ್ಷ ರೂಪಾಯಿ ಖರ್ಚು ಮಾಡಿದ್ದಾರೆ. ಇವರು ಸ್ವತಃ ಟ್ಯಾಟೂ ಕಲಾವಿದರಾಗಿದ್ದಾರೆ. ಅಂತೆಯೇ ತಮ್ಮ ದೇಹಕ್ಕೆ ತಾವೇ ಹಚ್ಚೆ ಹಾಕಿ ಕೊಂಡಿದ್ದಾರೆ. ಅದರ ಜೊತೆಗೆ ಜೊಂಬಿಯಂತೆ ಕಾಣಲು ಬೇಕಾದ ಮಾರ್ಪಾಡು ಮಾಡಿದ್ದು ಈಗ ಅವರ ಕೆಲವು ವಿಡಿಯೋಗಳು ಸೋಶಿಯಲ್ ಮಿಡಿಯಾದಲ್ಲಿ ವೈರಲ್ (Viral Video) ಆಗುತ್ತಿದೆ.

ವೈರಲ್ ಆದ ವಿಡಿಯೋದಲ್ಲಿ ಮಂಜುನಾಥ ಪೂಜಾರಿ ಅವರು ತಮ್ಮ ಜೊಂಬಿ (Zombie) ಮಾರ್ಪಾಡಿನ ಫೋಟೊ ಶೂಟ್ ಮಾಡಿಸಿಕೊಂಡಿದ್ದನ್ನು ಕಾಣಬಹುದು‌. ಕಣ್ಣುಗಳನ್ನು ಕೆಂಪು ಬಣ್ಣಕ್ಕೆ ಬರುವಂತೆ ಮಾರ್ಪಾಡು ಮಾಡಿದ್ದಾರೆ. ಅದರ ಜೊತೆಗೆ ಝಾಂಬಿಗಳಿಗೆ ಇರುವಂತಹ ಕೊಂಬುಗಳನ್ನು ಕೂಡ ಇವರು ಅಳವಡಿಸಿಕೊಂಡಿದ್ದಾರೆ. ಕಿವಿಗಳನ್ನು ಕೂಡ ಝಾಂಬಿಯಂತೆ ಅಗಲವಾಗಿ ಹಿಗ್ಗಿಸಿಕೊಂಡಿದ್ದಾರೆ. ನಾಲಿಗೆಯನ್ನು ಹಾವಿನಂತೆ ಸೀಳಿಸಿಕೊಂಡಿದ್ದು ಮೆಟಲ್ ಗಳನ್ನು ಕೂಡ ಚುಚ್ಚಿಕೊಂಡಿದ್ದಾರೆ. ಒಟ್ಟಾರೆ ಕಂಪ್ಲೀಟ್ ದೇಹವೇ ಝಾಂಬಿಯಂತೆ ಅವರು ಮಾರ್ಪಡಿಸಿದ್ದ ಕಾರಣ ಭಾರತದ ಮೊದಲ ಝಾಂಬಿ ಎಂದು ಇವರನ್ನು ಕರೆಯಲಾಗುತ್ತಿದೆ.

ಜೊಂಬಿ ಹಚ್ಚೆ ಹಾಕಿಸಲು ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ದ ವ್ಯಕ್ತಿ:

ಅವರು ಜೊಂಬಿಯಂತೆ ಕಾಣುವ ಸಲುವಾಗಿ ಬರೋಬ್ಬರಿ 35-40 ಲಕ್ಷ ರೂಪಾಯಿ ಹಣವನ್ನು ಖರ್ಚು ಮಾಡಿದ್ದಾರೆ‌. ಈ ಮೂಲಕ ಮಾರ್ಡನ್ ಟ್ರೆಂಡ್ , ಸ್ಟೈಲ್ ಫಾಲೋ ಮಾಡೊರಿಗೆ ಝಾಂಬಿ ಮಾಡೆಲ್ ಆಗಿಯೂ ಸಹ ಇವರು ಪ್ರಸಿದ್ಧರಾಗಿದ್ದಾರೆ. ಮಂಜುನಾಥ್ ಅವರು ತಮ್ಮ ಸ್ವ ಇಚ್ಛೆ ಯಿಂದಲೇ ಈ ರೀತಿ ತಮ್ಮ ದೇಹವನ್ನು ಝಾಂಬಿಯಂತೆ ಮಾರ್ಪಡಿಸಿದ್ದಾರೆ‌.

ಟ್ಯಾಟೊ ಆರ್ಟಿಸ್ಟ್ ಮಂಜುನಾಥ್ ಅವರಿಗೆ ಬಾಲ್ಯದ ವಯಸ್ಸಿನಲ್ಲಿಯೇ ಹಚ್ಚೆ ಕಲೆಗಳ ಬಗ್ಗೆ ಬಹಳ ಆಸಕ್ತಿ ಇತ್ತು. ಇದಾದ ಬಳಿಕ ತಮ್ಮ ಈ ಕಲೆಯಿಂದಲೇ ಬೇರೆ ಅವರಿ ಟ್ಯಾಟೂ ಹಾಕಿಸಿ ಹಣ ಸಂಪಾದಿಸಿದ್ದಾರೆ. ಇದರ ಜೊತೆಗೆ ಇತರ ಸಣ್ಣ ಪುಟ್ಟ ಕೆಲಸ ಕೂಡ ಮಾಡುತ್ತಿದ್ದರು. ತಮ್ಮ ದುಡಿಮೆಯ ಹಣ ಸಂಗ್ರಹಿಸಿ ಅದೇ ಹಣದಿಂದ ಝಾಂಬಿಯಂತೆ ಕಾಣಲು ಬೇಕಾದ ಎಲ್ಲ ತರಹದ ಮಾರ್ಪಾಡು ಮಾಡಿದ್ದಾರೆ.

ಇದನ್ನು ಓದಿ:Viral Video: ಕೆಲ್ಸ ಬಿಟ್ಟು ಮೊಮೊಸ್‌ ಮಾರೋದೇ ಬೆಟರ್... ಈತನ ತಿಂಗಳ ಸಂಪಾದನೆ ಕೇಳಿದ್ರೆ ಶಾಕ್‌ ಆಗುತ್ತೆ!

ಆದರೆ ಇವರು ಸಾರ್ವಜನಿಕವಾಗಿ ಅನೇಕ ಕಡೆ ಟೀಕೆಗಳು ವ್ಯಕ್ತವಾಗುತ್ತಿದೆ. ಅದರ ಹೊರತಾಗಿಯೂ ಮಂಜುನಾಥ್ ಅವರು ತಮ್ಮ ಪ್ರೊಫೇಶನ್ ಫಾಲೋ ಮಾಡಲು ಈ ಟೀಕೆಗಳನ್ನೇ ಸವಾಲು ಎಂದು ಪರಿಗಣಿಸಿದ್ದಾರೆ. ಅವರ ಪ್ರಕಾರ ದೇಹದ ಮಾರ್ಪಾಡು ಕೇವಲ ಗಮನ ಸೆಳೆಯುವ ಸಾಹಸವಲ್ಲ, ಬದಲಾಗಿ ಒಂದು ಉತ್ಸಾಹಭರಿತ ಜೀವನಶೈಲಿಯಾಗಿದೆ ಎಂದು ಸಂದರ್ಶನ ಒಂದರಲ್ಲಿ ಹೇಳಿಕೊಂಡಿದ್ದಾರೆ. ಅಂದಹಾಗೆ ಈ ಝಾಂಬಿ ಪರಿಕಲ್ಪನೆಯೂ ಸಿನಿಮಾದಿಂದ ಪ್ರೇರಿತ ವಾಗಿದ್ದಾಗಿದೆ. ರೈಸ್ ಆಫ್ ದಿ ಜೊಂಬಿ ಅನ್ನು ಭಾರತದ ಮೊದಲ ಜೊಂಬಿ ಚಿತ್ರವಾಗಿದೆ. 2016ರಲ್ಲಿ ತೆರೆಕಂಡ ಮಿರುಥನ್ ಸಿನಿಮಾ ದಕ್ಷಿಣ ಭಾರತೀಯ ಚಿತ್ರರಂಗದ ಮೊದಲ ಜೊಂಬಿ ಚಿತ್ರವಾಗಿದೆ‌. ಇದೀಗ ಇದೇ ಜೊಂಬಿ ಪರಿಕಲ್ಪನೆಯನ್ನೇ ಮಂಜುನಾಥ್ ಅವರು ತಮ್ಮ ದೇಹದ ಮೇಲೆ ಮಾರ್ಪಾಡು ಮಾಡಿಸಿಕೊಂಡಿದ್ದು, ಸದ್ಯ ಇವರ ಕೆಲವು ವಿಡಿಯೋಗಳು ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್‌ನಲ್ಲಿ ವೈರಲ್ ಆಗುತ್ತಿದೆ.