ಹರಿದ್ವಾರ: ಭಾರಿ ಮಳೆಯಲ್ಲಿ ಮೂವರು ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದ ವೇಳೆ ಬೆಟ್ಟ ಕುಸಿದು ಬಿದ್ದು, ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರಾದ ಘಟನೆ ನಡೆದಿದೆ. ಹರಿದ್ವಾರದ ಮಾನಸಾ ದೇವಿ ಬೆಟ್ಟ ಒಮ್ಮೆಲೇ ಕುಸಿದು ಬಿದ್ದಿದೆ. ಈ ವೇಳೆ ಮೋಟಾರ್ ಸೈಕಲ್ ಸವಾರಿ ಮಾಡುತ್ತಿದ್ದ ಮೂವರು ವ್ಯಕ್ತಿಗಳು ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಘಟನೆಯ ಸಿಸಿಟಿವಿ ದೃಶ್ಯಾವಳಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್(Viral Video) ಆಗಿವೆ.
ಮಳೆಯ ನಡುವೆ ರಸ್ತೆಯಲ್ಲಿ ಕೆಲವರು ನಡೆದುಕೊಂಡು ಹೋಗುತ್ತಿದ್ದರು. ವಾಹನ ಸಂಚಾರ ಎಂದಿನಂತೆ ಸಾಗುತ್ತಿತ್ತು. ಈ ವೇಳೆ ಹಠಾತ್ತನೆ ಭೂಕುಸಿತ ಉಂಟಾಗಿದೆ. ಸ್ಥಳದಲ್ಲೇ ಸವಾರಿ ಮಾಡುತ್ತಿದ್ದ ದ್ವಿಚಕ್ರ ವಾಹನದ ಮೇಲೆಯೇ ಬೆಟ್ಟದ ಭಾಗ ಕುಸಿದು ಬಿದ್ದಿದೆ. ಕಲ್ಲು ಮತ್ತು ಭಗ್ನಾವಶೇಷಗಳು ರಸ್ತೆಗೆ ಅಪ್ಪಳಿಸಿವೆ. ಪರಿಣಾಮ ಸವಾರರು ರಸ್ತೆಯಲ್ಲಿ ಬಿದ್ದಿದ್ದಾರೆ. ಸ್ಥಳದಲ್ಲಿದ್ದವರು ಕೂಡಲೇ ಸಹಾಯಕ್ಕೆ ಧಾವಿಸಿದ್ದಾರೆ. ಅದೃಷ್ಟವಶಾತ್ ಮೂವರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ವಿಡಿಯೊ ವೀಕ್ಷಿಸಿ:
तश्वीर हरिद्वार भीमगोड़े के समीप की हैं। जहाँ एक बाइक में तीन लोग सवार होकर जा रहे थे, तभी पहाड़ी का हिस्सा सड़क पर गिर गया। गनीमत है कि बाइक सवार सुरक्षित हैं।#हरिद्वार pic.twitter.com/wAfX0A7Vbs
— Rohit lakhera (@Rohitlakhera23r) August 5, 2025
ಇನ್ನು ಬೈಕ್ ಸವಾರಿ ವೇಳೆ ಮೂವರೂ ಹೆಲ್ಮೆಟ್ ಧರಿಸಿರಲಿಲ್ಲ. ಹಾಗೆಯೇ ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ. ಪಾದಚಾರಿಗಳು ಸಹ ಅಪಾಯದಿಂದ ಪಾರಾಗಿದ್ದಾರೆ. ಈ ಪ್ರದೇಶದಲ್ಲಿ ದಿನಗಟ್ಟಲೆ ಸುರಿಯುತ್ತಿರುವ ನಿರಂತರ ಮಳೆಯೇ ಭೂಕುಸಿತಕ್ಕೆ ಕಾರಣ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: International Yoga Day: ಸಿಕ್ಕಾಪಟ್ಟೆ ವೈರಲ್ ಆಯ್ತು ಶ್ವಾನದ ಈ ಯೋಗಾಸನ; ವಿಡಿಯೊ ವೈರಲ್!
ಅಂದಹಾಗೆ, ಉತ್ತರಾಖಂಡದಲ್ಲಿ ರಣಭೀಕರ ಮಳೆಯಾಗುತ್ತಿದೆ. ಕೆಲವೆಡೆ ಮೇಘಸ್ಫೋಟ ಸಂಭವಿಸಿದ್ದು, ಜನರು ಸಹಾಯಕ್ಕಾಗಿ ಅಂಗಲಾಚುತ್ತಿದ್ದಾರೆ. ಉತ್ತರಕಾಶಿಯಲ್ಲಿ, ಮೇಘಸ್ಫೋಟದಿಂದ ಉಂಟಾದ ಹಠಾತ್ ಪ್ರವಾಹದಲ್ಲಿ ಕನಿಷ್ಠ ನಾಲ್ವರು ಸಾವನ್ನಪ್ಪಿದ್ದಾರೆ ಮತ್ತು ಸುಮಾರು 50 ಮಂದಿ ನಾಪತ್ತೆಯಾಗಿದ್ದಾರೆ. ಭಾರತೀಯ ಸೇನೆ, ಐಟಿಬಿಪಿ, ಎಸ್‌ಡಿಆರ್‌ಎಫ್ ಮತ್ತು ಎನ್‌ಡಿಆರ್‌ಎಫ್ ನೇತೃತ್ವದಲ್ಲಿ ರಕ್ಷಣಾ ಕಾರ್ಯಾಚರಣೆಗಳು ನಡೆಯುತ್ತಿವೆ.