ರಾಮನಗರ,ಆ.18: ಇತ್ತೀಚೆಗೆ ಕಾಡು ಪ್ರಾಣಿಗಳ ಹಾವಳಿ ಹೆಚ್ಚಾಗಿದೆ. ಜನವಸತಿ ಪ್ರದೇಶಕ್ಕೆ ನುಗ್ಗಿ ಮನುಷ್ಯರ ಮೇಲೆ ದಾಳಿ ನಡೆಸಿದ ಅನೇಕ ಪ್ರಕರಣಗಳು ನಡೆದಿವೆ. ಇದೀಗ ಉತ್ತರಾ ಖಂಡದ ನೈನಿತಾಲ್ ಜಿಲ್ಲೆಯಲ್ಲಿ ಅಘಾತಕಾರಿ ಘಟನೆಯೊಂದು ನಡೆದಿದೆ. ಹುಲಿಯೊಂದು ಹಗಲಿನಲ್ಲೇ ಜನವಸತಿ ಪ್ರದೇಶಕ್ಕೆ ನುಗಿದ್ದು ಕುದುರೆಯ ಮೇಲೆ ದಾಳಿ ಮಾಡಿಕೊಂದಿದೆ. ಸಾರ್ವಜನಿಕರು ಹಾಗೂ ಪ್ರವಾಸಿಗರು ಈ ದಾರಿಯಲ್ಲೇ ಹೆಚ್ಚಾಗಿ ಸಂಚಾರ ಮಾಡುತ್ತಾರೆ. ಈ ಆತಂಕಕಾರಿ ಘಟನೆಯ ವೀಡಿಯೊ (Viral Video) ಸೋಷಿಯಲ್ ಮೀಡಿಯಾದಲ್ಲಿ ಕಾಣಿಸಿಕೊಂಡಿದ್ದು, ಹುಲಿಯೂ ಕುದುರೆಯ ಮೇಲೆ ದಾಳಿ ಮಾಡಿ ನಂತರ ಅದರ ಶವವನ್ನು ಕಾಡಿನ ಕಡೆಗೆ ಎಳೆದುಕೊಂಡು ಹೋಗುವುದನ್ನು ತೋರಿಸುತ್ತದೆ.
ಮಾನವ ವಾಸಸ್ಥಳದ ಹತ್ತಿರ ಬಂದೇ ಕುದುರೆಯನ್ನು ಕೊಂದಿರುವುದು ಇಲ್ಲಿನ ಜನರನ್ನು ಆತಂಕಗೀಡುಮಾಡಿದೆ. ಉತ್ತರಾಖಂಡದ ನೈನಿತಾಲ್ ಜಿಲ್ಲೆಯ ರಾಮನಗರ ಸಮೀಪದ ಗಾರ್ಜಿಯಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಹುಲಿಯೂ ಕುದುರೆಯನ್ನು ಕೊಂದು ಅದರ ಕಳೇಬರವನ್ನು ಕಾಡಿನತ್ತ ಎಳೆದೊಯ್ಯುತ್ತಿದೆ.
ವಿಡಿಯೋ ನೋಡಿ:
ಈ ಘಟನೆಯೂ ಮಧ್ಯಾಹ್ನ 1:30 ರ ಸುಮಾರಿಗೆ ರಾಷ್ಟ್ರೀಯ ಹೆದ್ದಾರಿ 309 ಬಳಿ, ಜೂಲಾ ಪುಲ್ ಛೇದಕ ಮತ್ತು ಹಿಂದೆ ಸ್ಥಾಪಿಸಲಾದ ಗಾರ್ಜಿಯಾ ಪ್ರವಾಸೋದ್ಯಮ ವಲಯದ ಗೇಟ್ ಬಳಿ ನಡೆದಿದೆ. ಜನನಿಬಿಡ ಪ್ರದೇಶಕ್ಕೆ ಹುಲಿಯ ಎಂಟ್ರಿ ಇಲ್ಲಿನ ಜನರಲ್ಲಿ ಕಳವಳವನ್ನು ಹುಟ್ಟುಹಾಕಿದೆ. ವೈರಲ್ ವೀಡಿಯೊದಲ್ಲಿ ಕಾಣಿಸಿಕೊಂಡಂತೆ ಹುಲಿಯೂ ರಸ್ತೆಯ ಬಳಿ ಬಂದು ಸುತ್ತ ಮುತ್ತಲಿನ ಜನರು ಇರುವಾಗಲೇ ಕುದುರೆಯ ಮೇಲೆ ದಾಳಿ ಮಾಡಿದೆ.
ನಂತರ ಹುಲಿಯೂ ಕುದುರೆಯ ಶವವನ್ನು ಕಾಡಿನ ಕಡೆಗೆ ಎಳೆದುಕೊಂಡು ಹೋಗುತ್ತಿರುವುದು ಕಂಡುಬಂದಿದೆ. ಘಟನೆಯ ನಂತರ, ಅರಣ್ಯ ಇಲಾಖೆ ಈ ಪ್ರದೇಶದಲ್ಲಿ ಕಣ್ಗಾವಲು ಇರಿಸಿದೆ. ರಾಮನಗರ ಅರಣ್ಯ ವಿಭಾಗದ ತಂಡಗಳು ಸುತ್ತಮುತ್ತಲಿನ ಪ್ರದೇಶಗಳನ್ನು ಕಾರ್ಯಾಚರಣೆ ಮಾಡುತ್ತಿದ್ದು, ಹುಲಿಯ ಚಲನವಲನಗಳನ್ನು ಪತ್ತೆಹಚ್ಚಲು ಪ್ರಯತ್ನಿಸುತ್ತಿದೆ. ಸ್ಥಳೀಯರು ಮತ್ತು ಪ್ರವಾಸಿಗರು ಎಚ್ಚರಿಕೆಯಿಂದಿರಬೇಕು. ವಿಶೇಷವಾಗಿ ತೂಗು ಸೇತುವೆ ಮತ್ತು ಪಕ್ಕದ ಪ್ರದೇಶಗಳಿಗೆ ಹೋಗುವುದನ್ನು ತಪ್ಪಿಸಬೇಕು ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.