ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ರಾಜಸ್ಥಾನದ ರಣಥಂಬೋರ್‌ನಲ್ಲಿ ರಸ್ತೆಯಲ್ಲೇ ನಿದ್ದೆಗೆ ಜಾರಿದ ಹುಲಿ: ಅಪರೂಪದ ವಿಡಿಯೊ ಇಲ್ಲಿದೆ

Viral News: ರಾಜಸ್ಥಾನದ ಪ್ರಸಿದ್ಧ ರಣಥಂಬೋರ್‌ ರಾಷ್ಟ್ರೀಯ ಉದ್ಯಾನವನದಲ್ಲಿ ಹುಲಿಯೊಂದು ಮಧ್ಯ ರಸ್ತೆಯಲ್ಲೇ ಗಾಢವಾಗಿ ನಿದ್ರೆಗೆ ಜಾರಿದೆ. ಸಫಾರಿಗೆ ತೆರಳಿದ ಪ್ರವಾಸಿಗರು ಈ ಅಪರೂಪದ ಕ್ಷಣವನ್ನು ಸೆರೆಹಿಡಿದ್ದಾರೆ. ಪ್ರಾಣಿಯ ವಿಶ್ರಾಂತಿಯಿಂದಾಗಿ ಸುಮಾರು 30 ಸಫಾರಿ ಜೀಪ್‌ಗಳು ಸಾಲಾಗಿ ನಿಂತಿದ್ದರಿಂದ ಟ್ರಾಫಿಕ್ ಜಾಮ್‌ ಉಂಟಾಯಿತು.

ರಾಜಸ್ಥಾನದ ರಣಥಂಬೋರ್‌ ರಾಷ್ಟ್ರೀಯ ಉದ್ಯಾನವನದಲ್ಲ ರಸ್ತೆಯಲ್ಲೇ ನಿದ್ರೆಗೆ ಜಾರಿದ ಹುಲಿ

ರಾಜಸ್ಥಾನ, ಸೆ. 23: ಕೆಲವೊಮ್ಮೆ ಕಾಡು ಪ್ರಾಣಿಗಳ ಅಪರೂಪದ ವರ್ತನೆ ನಮ್ಮನ್ನು ಅಚ್ಚರಿಗೆ ತಳ್ಳುತ್ತದೆ. ಇದಕ್ಕೆ ಸಾಕ್ಷಿ ಎನ್ನುವಂತೆ ರಾಜಸ್ಥಾನದ ರಣಥಂಬೋರ್‌ ರಾಷ್ಟ್ರೀಯ ಉದ್ಯಾನವನದಲ್ಲಿ ಹುಲಿಯೊಂದು ಮಧ್ಯ ರಸ್ತೆಯಲ್ಲೇ ಗಾಢವಾಗಿ ನಿದ್ರೆಗೆ ಜಾರಿದೆ. ಸಫಾರಿಗೆಂದು ತೆರಳಿದ ಪ್ರವಾಸಿಗರು ಈ ಕ್ಷಣವನ್ನು (Viral News) ಸೆರೆಹಿಡಿದ್ದಾರೆ. ಪ್ರಾಣಿಯ ವಿಶ್ರಾಂತಿಯಿಂದಾಗಿ ಸುಮಾರು 30 ಸಫಾರಿ ಜೀಪ್‌ಗಳು ಸಾಲಾಗಿ ನಿಂತು ಟ್ರಾಫಿಕ್ ಜಾಮ್‌ ಉಂಟಾಯಿತು. ಈ ಅಪರೂಪದ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ.

​ದೈತ್ಯಕಾರದ ಹುಲಿಯೊಂದು ನೇರವಾಗಿ ಸಫಾರಿ ರಸ್ತೆಯ ಮಧ್ಯದಲ್ಲೇ ಮಲಗಿ ಆರಾಮವಾಗಿ ನಿದ್ರಿಸಿದೆ. ವಾಹನಗಳು ಸುತ್ತಲೂ ನಿಂತಿದ್ದರೂ ಹುಲಿ ಶಾಂತವಾಗಿ ಟ್ರ್ಯಾಕ್‌ನಲ್ಲಿ ಮಲಗಿರುವುದನ್ನು ವಿಡಿಯೊ ತೋರಿಸುತ್ತದೆ.

ವಿಡಿಯೊ ನೋಡಿ:



ಎಲೆನಾ ಎಂಬ ವಿದೇಶಿ ಮಹಿಳೆಯೊಬ್ಬರು ಈ ವಿಡಿಯೊವನ್ನು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿದ್ದಾರೆ. ರಸ್ತೆಯಲ್ಲಿ ವಿಶ್ರಾಂತಿ ಪಡೆಯುವ ಹುಲಿಯ ದೃಶ್ಯವು ಸಫಾರಿ ಮಾಡುವ ಸಂದರ್ಶಕರಿಗೆ ಅಪರೂಪದ ಕ್ಷಣವನ್ನಾಗಿ ಪರಿವರ್ತಿಸಿತು. ಸುಮಾರು 30 ಸಫಾರಿ ಜೀಪ್‌ಗಳಲ್ಲಿದ್ದ ಪ್ರವಾಸಿಗರು ಹುಲಿಗೆ ಎಚ್ಚರ ಮಾಡದೇ ದೂರದಿಂದಲೇ ನಿಶ್ಯಬ್ದವಾಗಿ ಈ ಅಪರೂಪದ ದೃಶ್ಯವನ್ನು ಕ್ಯಾಮೆರಾಗಳಲ್ಲಿ ಸೆರೆಹಿಡಿದಿದ್ದಾರೆ.

ಮನುಷ್ಯರಂತೆ ವಾನರ ಪಡೆಗೂ ಓಣಂ ವಿಶೇಷ ಭೋಜನ: ಇದು ಅಯ್ಯಪ್ಪ ಸ್ವಾಮಿ ದೇವಾಲಯದ ವಿಶಿಷ್ಟ ಆಚರಣೆ

ಯಾವುದಕ್ಕೂ ಕಂಗಾಲಾಗದ ಹುಲಿ, ಸ್ವಲ್ಪ ಸಮಯದ ನಂತರ ಎದ್ದು, ಸುಲಭವಾಗಿ ಅರಣ್ಯದೊಳಗೆ ನಡೆದುಕೊಂಡು ಹೋಯಿತು. ಈ ಪ್ರವಾಸದಲ್ಲಿ ನಾಲ್ಕು ಸಫಾರಿಗಳ ಪೈಕಿ ಮೂರು ಬಾರಿ ಹುಲಿಗಳ ದರ್ಶನವಾಗಿದೆ ಎಂದು ಪ್ರವಾಸಿಗರು ಸಂತಸ ವ್ಯಕ್ತಪಡಿಸಿದ್ದಾರೆ.

ಈ ಮುದ್ದಾದ ವಿಡಿಯೊ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ. ನೆಟ್ಟಿಗರು ತಮಾಷೆಯಾಗಿ ಕಾಮೆಂಟ್ ಮಾಡಿದ್ದಾರೆ.‌ ಬಳಕೆದಾರರೊಬ್ಬರು ಹುಲಿ ರಾತ್ರಿ ಪೂರ್ತಿ ಜಾಗರಣೆ ಮಾಡಿರಬೇಕು ಎಂದು ತಮಾಷೆ ಮಾಡಿದ್ದಾರೆ. ಮತ್ತೊಬ್ಬರು ''ಯಾರೇ ಬರಲಿ ತನಗೆ ನಿದ್ರೆಯೆ ಮುಖ್ಯ'' ಎಂದು ಕಾಮೆಂಟ್ ಮಾಡಿದ್ದಾರೆ.