ಇತ್ತೀಚೆಗೆ ಮೃಗಾಲಯಕ್ಕೆ ಹೋಗಿದ್ದ ಪುಟ್ಟ ಬಾಲಕನ ಅಂಗಿಯನ್ನು ಹುಲಿಯೊಂದು ಹಿಡಿದುಕೊಂಡು ಎಳೆದಾಡಿದ ವಿಡಿಯೊ ಸೋಶಿಯಲ್ ಮೀಡಿಯಾಗಳಲ್ಲಿ ಹರಿದಾಡಿ ಸಿಕ್ಕಾಪಟ್ಟೆ ವೈರಲ್ (Viral Video) ಆಗಿದೆ. ಈ ಬಗ್ಗೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ವೈರಲ್ ಆದ ವಿಡಿಯೊದಲ್ಲಿ ಪಂಜರದಲ್ಲಿರುವ ಹುಲಿ ತನ್ನ ಬಳಿ ಬಂದ ಬಾಲಕನ ಮೇಲೆ ದಾಳಿ ಮಾಡಲು ಮುಂದಾಗಿ ಆತನ ಅಂಗಿಯನ್ನು ಹಲ್ಲಿನಿಂದ ಕಚ್ಚಿ ಗಟ್ಟಿಯಾಗಿ ಹಿಡಿದುಕೊಂಡು ಎಳೆದಾಡಿರುವುದು ಕಂಡು ಬಂದಿದೆ. ಬಾಲಕ ಅಂಗಿಯನ್ನು ಬಿಡುವಂತೆ ಹುಲಿಯಲ್ಲಿ ಪರಿಪರಿಯಾಗಿ ಬೇಡಿಕೊಂಡಿದ್ದಾನೆ. ತಮಾಷೆ ಎಂದರೆ ಆತ “ಅಂಗಿ ಹರಿದರೆ ತಾಯಿ ಬೈಯುತ್ತಾಳೆ ದಯವಿಟ್ಟು ಅಂಗಿಯನ್ನು ಬಿಡು” ಎಂದು ಹುಲಿಯ ಬಳಿ ವಿನಂತಿಸುತ್ತಾ ಕಿರುಚಾಡಿದ್ದಾನೆ.
ಹುಲಿಯ ಬಳಿ ಅಂಗಿ ಬಿಡು ಅಂಗಿ ಹರಿದು ಹೋದರೆ ಅಮ್ಮ ಬೈಯುತ್ತಾಳೆ ಎಂದು ಬಾಲಕ ಹೇಳಿದ್ದು ನೋಡಿ ನೆಟ್ಟಿಗರು ಶಾಕ್ ಆಗಿದ್ದಾರೆ. ಮಕ್ಕಳು ಹುಲಿಗಿಂತ ತಾಯಿಗೆ ಹೆಚ್ಚು ಹೆದರುತ್ತಾರೆ ಎಂಬುದಕ್ಕೆ ಇದೊಳ್ಳೆ ಉದಾಹರಣೆ ಎಂದು ನೆಟ್ಟಿಗರು ಹೇಳಿದ್ದಾರೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿದೆ.
ಮಗುವಿನ ಗುರುತು ಮತ್ತು ಘಟನೆಯ ಬಗ್ಗೆ ಸಂಪೂರ್ಣ ಮಾಹಿತಿ ಲಭ್ಯವಾಗಿಲ್ಲ. ಆದರೆ ಈ ವಿಡಿಯೊ ಬಗ್ಗೆ ಸೋಶಿಯಲ್ ಮೀಡಿಯಾಗಳಲ್ಲಿ ಸಿಕ್ಕಾಪಟ್ಟೆ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. "ಈ ಮಗುವಿನ ಪ್ರತಿಕ್ರಿಯೆ ನಿಜವಾಗಿಯೂ ಅಮೂಲ್ಯವಾಗಿದೆ! ಹುಲಿ ಅವನ ಅಂಗಿಯನ್ನು ಹಿಡಿದಾಗಲೂ, ಅವನ ಮೊದಲ ಆಲೋಚನೆ "ಮೇರಿ ಶರ್ಟ್ ಛೋಡ್ ದೇ, ಮಮ್ಮಿ ದಾಂಟೆಗಿ" ಎಂದು ಕೆಲವರು ಬರೆದಿದ್ದಾರೆ.
ಇನ್ನೊಬ್ಬರು "ತಾಯಿಯ ಬೈಗುಳ ಭಯಾನಕವಾದ ಹುಲಿ ದಾಳಿಗಿಂತ ಹೆಚ್ಚಿನದು" ಎಂದು ಕಾಮೆಂಟ್ ಮಾಡಿದ್ದಾರೆ. ಮಗುವಿಗೆ ಸಹಾಯ ಮಾಡುವ ಬದಲು ವಿಡಿಯೊವನ್ನು ರೆಕಾರ್ಡ್ ಮಾಡಿದ್ದ ವ್ಯಕ್ತಿಯ ವಿರುದ್ಧ ಕೆಲವು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: Viral News: ರೈತನ ದಾರಿಗೆ ಅಡ್ಡ ಬಂದ ಹುಲಿ; ಕೊನೆಗೆ ಆಗಿದ್ದೇನು?
ಉತ್ತರ ಜಿಂಬಾಬ್ವೆಯಲ್ಲಿ ಎಂಟು ವರ್ಷದ ಬಾಲಕನೊಬ್ಬ ಸಿಂಹಗಳು, ಆನೆಗಳು ಮತ್ತು ಇತರ ಅಪಾಯಕಾರಿ ವನ್ಯಜೀವಿಗಳೇ ತುಂಬಿರುವ ದಟ್ಟ ಅರಣ್ಯದಲ್ಲಿ ಕಳೆದು ಹೋಗಿ ಪವಾಡಸದೃಶ ರೀತಿಯಲ್ಲಿ ಬದುಕಿಬಂದಿರುವ ಘಟನೆ ಇತ್ತೀಚೆಗೆ ವರದಿಯಾಗಿತ್ತು. ಮಾಟುಸಡೋನಾ ರಾಷ್ಟ್ರೀಯ ಉದ್ಯಾನವನದ ಅಪಾಯಕಾರಿ ಅರಣ್ಯದಲ್ಲಿ ಬಾಲಕ ಕಳೆದುಹೋಗಿದ್ದು, ಐದು ದಿನಗಳ ನಂತರ ಜೀವಂತವಾಗಿ ಪತ್ತೆಯಾಗಿದ್ದ. ಟಿನೊಟೆಂಡಾ ಪುಂಡು ತನ್ನ ಹಳ್ಳಿಯಿಂದ ಸುಮಾರು 30 ಮೈಲಿ (50 ಕಿ.ಮೀ.) ದೂರದಲ್ಲಿ, ದುರ್ಬಲ ಮತ್ತು ನಿರ್ಜಲೀಕರಣ ಸಮಸ್ಯೆಯಿಂದ ಬಳಲುತ್ತಿದ್ದ ಸ್ಥಿತಿಯಲ್ಲಿ ಜೀವಂತವಾಗಿ ಪತ್ತೆಯಾಗಿದ್ದ.
ಬದುಕುಳಿದ ಬಾಲಕ ಕಾಡಿನಲ್ಲಿ ಜೀವಂತವಾಗಿರಲು ತನ್ನ ಬರಪೀಡಿತ ಪ್ರದೇಶದಲ್ಲಿ ಹೇಗಿರಬೇಕು ಎಂದು ಕಲಿತಿದ್ದ ಕೌಶಲ್ಯಗಳನ್ನು ಬಳಸಿದ್ದಾನೆ ಎನ್ನಲಾಗಿದೆ. ಅವನು ನದಿಯ ದಡದಲ್ಲಿ ಕೋಲುಗಳನ್ನು ಬಳಸಿ ನೀರಿಗಾಗಿ ಮಣ್ಣನ್ನು ಅಗೆದಿದ್ದಾನೆ. ತ್ಸ್ವಾಂಜ್ವಾ ಎಂಬ ಕಾಡು ಹಣ್ಣನ್ನು ತಿಂದು ಬದುಕಿದ್ದನಂತೆ. ಅವನ ಕಥೆ ಅದೆಷ್ಟೋ ಜನರ ಗಮನಸೆಳೆದಿದೆ. ಆತನ ಶೌರ್ಯ ಮತ್ತು ಧೈರ್ಯಕ್ಕೆ ಸಲಾಂ ಎಂದಿದ್ದರು.