ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral News: ರೈತನ ದಾರಿಗೆ ಅಡ್ಡ ಬಂದ ಹುಲಿ; ಕೊನೆಗೆ ಆಗಿದ್ದೇನು?

ಭಾರತೀಯ ಅರಣ್ಯ ಸೇವೆ (ಐಎಫ್ಎಸ್) ಅಧಿಕಾರಿ ಪರ್ವೀನ್ ಕಸ್ವಾನ್ ಉತ್ತರ ಪ್ರದೇಶದ ಪಿಲಿಭಿತ್‍ನಲ್ಲಿ ಹುಲಿಯೊಂದಿಗೆ ರೈತನೊಬ್ಬ ಮುಖಾಮುಖಿ ಭೇಟಿಯಾದ ವಿಡಿಯೊವನ್ನು ಹಂಚಿಕೊಂಡಿದ್ದಾರೆ. ಇದು ಈಗ ವೈರಲ್ ಆಗಿದೆ. ಈ ವಿಡಿಯೊದಲ್ಲಿ ಹುಲಿ ರೈತನ ಮೇಲೆ ದಾಳಿ ಮಾಡದೇ ಸುಮ್ಮನೇ ಮಲಗಿರುವುದು ಕಂಡು ಬಂದಿದೆ.

ರೈತ-ಹುಲಿಯ ಮುಖಾಮುಖಿ; ಮುಂದೇನಾಯ್ತು ತಿಳಿಯಲು ವಿಡಿಯೊ ನೋಡಿ

tiger viral video

Profile pavithra Feb 6, 2025 6:49 PM

ಲಖನೌ: ಇತ್ತೀಚೆಗೆ ಉತ್ತರ ಪ್ರದೇಶದ ಹೊಲದಲ್ಲಿ ಹುಲಿಯೊಂದು ಕಂಡು ಬಂದಿದ್ದು, ಭಾರತೀಯ ಅರಣ್ಯ ಸೇವೆ (IFS) ಅಧಿಕಾರಿಯೊಬ್ಬರು ಈ ವಿಡಿಯೊವನ್ನು ಹಂಚಿಕೊಂಡಿದ್ದಾರೆ. ಉತ್ತರ ಪ್ರದೇಶದ ಪಿಲಿಭಿತ್‍ನಲ್ಲಿ ಹುಲಿಯೊಂದಿಗೆ ರೈತರೊಬ್ಬರ ಮುಖಾಮುಖಿಯ ಈ ದೃಶ್ಯ ಇದೀಗ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್ (Viral Video) ಆಗಿದೆ. ಐಎಫ್ಎಸ್ ಅಧಿಕಾರಿ ಪರ್ವೀನ್ ಕಸ್ವಾನ್ ಅವರು 42 ಸೆಕೆಂಡುಗಳ ಈ ವಿಡಿಯೊವನ್ನು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದು, "ರೈತ ಮತ್ತು ಹುಲಿಯ ಮುಖಾಮುಖಿ" ಎಂದು ಬರೆದಿದ್ದಾರೆ.

ಈ ವಿಡಿಯೊದಲ್ಲಿ ರೈತರೊಬ್ಬರು ಸ್ನೇಹಿತನ ಜತೆ ಬೈಕ್‌ನಲ್ಲಿ ಬರುವಾಗ ದಾರಿಯಲ್ಲಿ ಹುಲಿಯೊಂದು ಅವರಿಗೆ ಎದುರಾಗಿತ್ತು. ಹುಲಿಯನ್ನು ನೋಡಿ ಹೆದರಿದ ರೈತ ಬೈಕ್‌ ಅನ್ನು ಬಂದ ದಾರಿಗೆ ಸುಂಕವಿಲ್ಲ ಎನ್ನುವ ಹಾಗೇ ವಾಪಸ್‌ ತಿರುಗಿಸಿದ್ದಾರೆ. ಹುಲಿ ಇವರನ್ನು ನೋಡಿದರೂ ಏನೂ ಮಾಡದೇ ದಾರಿ ಮೇಲೆಯೇ ಮಲಗಿದೆ.



ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿ, "ಪ್ರತಿ ಬಾರಿಯೂ ಹಾಗೆ ಆಗುವುದಿಲ್ಲ” ಎಂದಿದ್ದಾರೆ. ಇನ್ನೊಬ್ಬರು , "ಇಲ್ಲಿಯವರೆಗೆ ಹುಲಿಗೆ ರೈತರೊಂದಿಗೆ ಪರಿಚಿತವಾಗಿದೆ ಎಂದು ತೋರುತ್ತದೆ. ಇಲ್ಲದಿದ್ದರೆ ಹುಲಿಯಿಂದ ಚಾರ್ಜ್ ಖಂಡಿತವಾಗಿಯೂ ಇರುತ್ತಿತ್ತು” ಎಂದು ತಮಾಷೆ ಮಾಡಿದ್ದಾರೆ.

ಈ ಸುದ್ದಿಯನ್ನೂ ಓದಿ:Viral News: ಹುಲಿ.. ಸಿಂಹಗಳೇ ತುಂಬಿರುವ ಕಾಡಿನಲ್ಲಿ ಕಳೆದುಹೋದ 8 ವರ್ಷದ ಬಾಲಕ- ಈತ ಬದುಳಿದ ಕಥೆಯೇ ರಣರೋಚಕ!

ಇತ್ತೀಚೆಗೆ ಉತ್ತರ ಜಿಂಬಾಬ್ವೆಯಲ್ಲಿ 8 ವರ್ಷದ ಬಾಲಕನೊಬ್ಬ ಸಿಂಹಗಳು, ಆನೆಗಳು ಮತ್ತು ಇತರ ಅಪಾಯಕಾರಿ ವನ್ಯಜೀವಿಗಳೇ ತುಂಬಿರುವ ದಟ್ಟ ಅರಣ್ಯದಲ್ಲಿ ಕಳೆದು ಹೋಗಿ ಪವಾಡ ಸದೃಶ ರೀತಿಯಲ್ಲಿ ಬದುಕಿಬಂದಿರುವ ಘಟನೆ ವರದಿಯಾಗಿತ್ತು. ಮಾಟುಸಡೋನಾ ರಾಷ್ಟ್ರೀಯ ಉದ್ಯಾನವನದ ಅಪಾಯಕಾರಿ ಅರಣ್ಯದಲ್ಲಿ ಬಾಲಕ ಕಳೆದುಹೋಗಿದ್ದು, 5 ದಿನಗಳ ನಂತರ ಜೀವಂತವಾಗಿ ಪತ್ತೆಯಾಗಿದ್ದ.

ಬದುಕುಳಿದ ಬಾಲಕ ಕಾಡಿನಲ್ಲಿ ಜೀವಂತವಾಗಿರಲು ತನ್ನ ಬರಪೀಡಿತ ಪ್ರದೇಶದಲ್ಲಿ ಹೇಗಿರಬೇಕು ಎಂದು ಕಲಿತಿದ್ದ ಕೌಶಲ್ಯಗಳನ್ನು ಬಳಸಿದ್ದಾನೆ ಎನ್ನಲಾಗಿದೆ. ಅವನು ನದಿಯ ದಡದಲ್ಲಿ ಕೋಲುಗಳನ್ನು ಬಳಸಿ ನೀರಿಗಾಗಿ ಮಣ್ಣನ್ನು ಅಗೆದಿದ್ದಾನೆ. ಮತ್ತು ತ್ಸ್ವಾಂಜ್ವಾ ಎಂಬ ಕಾಡು ಹಣ್ಣನ್ನು ತಿಂದು ಬದುಕಿದ್ದನಂತೆ. ಅವನ ಕಥೆ ಅದೆಷ್ಟೋ ಜನರ ಗಮನಸೆಳೆದಿದೆ. ಆತನ ಶೌರ್ಯ ಮತ್ತು ಧೈರ್ಯಕ್ಕೆ ಸಲಾಂ ಎಂದಿದ್ದಾರೆ.