ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಮಾತನಾಡುವಾಗ ವೇದಿಕೆಯಲ್ಲೇ ಉದುರಿದ ಬಿದ್ದ ಹಲ್ಲು; ಆತ್ಮವಿಶ್ವಾಸದಿಂದ ಎಲ್ಲರ ಮನ ಗೆದ್ದ ಬ್ಯೂಟಿ ಕ್ವೀನ್! ವಿಡಿಯೋ ನೋಡಿ

Viral News: ಮಿಸ್ ಗ್ರ್ಯಾಂಡ್ ಥೈಲ್ಯಾಂಡ್ ಸ್ಪರ್ಧಿಯ ಕೃತಕ ಹಲ್ಲುಗಳು ವೇದಿಕೆಯಲ್ಲೆ ಬಿದ್ದ ಘಟನೆ ನಡೆದಿದೆ. ಆಕೆ ಮಾತನಾಡುತ್ತಿದ್ದಾಗ ಅನಿರೀಕ್ಷಿತವಾಗಿ ಹಲ್ಲಿನ ಸೆಟ್ ಕೆಳಗೆ ಬಿದ್ದಿವೆ. ಇದರ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಥೈಲ್ಯಾಂಡ್ ಸ್ಪರ್ಧಿ ಕಮೋಲ್ವಾನ್ ಚಾನಾಗೋ

ನವದೆಹಲಿ,ಮಾ. 27: ಸೌಂದರ್ಯ ಸ್ಪರ್ಧೆ ಎಂದಾಗ ಅಲ್ಲಿ ಚಂದವಷ್ಟೇ ಮುಖ್ಯ ಅಲ್ಲ..ಅವರ ಆತ್ಮವಿಶ್ವಾಸ, ಧೈರ್ಯ ಎಲ್ಲವೂ ಪ್ರಮುಖವಾಗುತ್ತದೆ. ಇದಕ್ಕೆ ಸಾಕ್ಷಿಯಾಗಿ ಮಿಸ್ ಗ್ರ್ಯಾಂಡ್ ಥೈಲ್ಯಾಂಡ್ ಸ್ಪರ್ಧಿಯ ಕೃತಕ ಹಲ್ಲುಗಳು ವೇದಿಕೆಯಲ್ಲೆ ಬಿದ್ದ ಘಟನೆ ನಡೆದಿದೆ. ಆಕೆ (Viral News) ಮಾತ ನಾಡುತ್ತಿದ್ದಾಗ ಅನಿರೀಕ್ಷಿತ ವಾಗಿ ಹಲ್ಲಿನ ಸೆಟ್ ಕೆಳಗೆ ಬಿದ್ದಿವೆ. ಇದರ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಮಿಸ್ ಗ್ರ್ಯಾಂಡ್ ಥೈಲ್ಯಾಂಡ್ ಸ್ಪರ್ಧಿ ಕಮೋಲ್ವಾನ್ ಚಾನಾಗೋ ತನ್ನ ಪರಿಚಯವನ್ನು ನೀಡುತ್ತಿದ್ದರು. ಆಕೆ ಸುಂದರವಾದ ಗೌನ್ ಧರಿಸಿ ನ್ಯಾಯಧೀಶರು ಕೇಳುತ್ರಿದ್ದ ಪ್ರಶ್ನೆಗೆ ಪ್ರತಿಕ್ರಿಯೆ ನೀಡುತ್ತಿದ್ದರು. ಆದರೆ ಅವರು ಮಾತಾನಾಡುವಾಗ ಅನೀರಿಕ್ಷಿತವಾಗಿ ಹಲ್ಲಿನ ವೆನಿಯರ್ಸ್ ಬಾಯಿಯಿಂದ ಬಿದ್ದಿವೆ. ಆದರೆ ಈ ಸಂದರ್ಭದಲ್ಲಿ ಆಕೆ ತೋರಿದ ಸಮಯಪ್ರಜ್ಞೆ ಮಾತ್ರ ಎಲ್ಲರೂ ಮೆಚ್ಚುವಂತೆ ಆಗಿದೆ.

ವಿಡಿಯೋ ನೋಡಿ:



ವೇದಿಕೆಯ ಕೆಳ ಭಾಗದಲ್ಲಿ ನೂರಾರು ಪ್ರೇಕ್ಷಕರು ಮತ್ತು ಲೈವ್ ಕ್ಯಾಮರಾಗಳು ಇದ್ದವು. ಆದರೆ ಕಮೋಲ್ವಾನ್ ಅವರು ಇದಕ್ಕೆ ಎದೆಗುಂದದೆ ಇದ್ದರು. ಆದಾಗ್ಯೂ, ಭಯ ಭೀತರಾಗಲಿಲ್ಲ. ಅವರು ಶಾಂತವಾಗಿದ್ದರು. ಕೆಲವು ಸೆಕೆಂಡುಗಳ ಕಾಲ ದೂರ ಸರಿದು ತ್ವರಿತವಾಗಿ ತಮ್ಮ ಹಲ್ಲುಗಳನ್ನು ಸರಿಪಡಿಸಿದರು.

Viral Video: ಛೇ ಎಂತಾ ಅಮಾನವೀಯ ಕೃತ್ಯ: ಭಾರಿ ತೂಕದ ಪಾರ್ಸೆಲ್ ಹೊತ್ತು ಹೈರಾಣಾದ ಡೆಲಿವರಿ ಬಾಯ್!

ಏನೂ ಆಗದವರಂತೆ ಮತ್ತೆ ಪ್ರೇಕ್ಷಕರತ್ತ ತಿರುಗಿ, ತಮ್ಮ ಅದ್ಭುತ ನಗುವಿನ ಮೂಲಕ ಎಲ್ಲರನ್ನು ಗೆದ್ದರು. ಅವರ ಶಾಂತ ಮತ್ತು ಆತ್ಮವಿಶ್ವಾಸದ ಪ್ರತಿಕ್ರಿಯೆಯು ತಕ್ಷಣವೇ ಜನಸಮೂಹವನ್ನು ಗೆದ್ದಿತು. ಅವರು ತಮ್ಮ ಮಾತನ್ನು ಮುಂದು ವರಿಸುತ್ತಿದ್ದಂತೆ ಎಲ್ಲರೂ ಚಪ್ಪಾಳೆ ತಟ್ಟಿದ್ದಾರೆ.ಆ ಕ್ಷಣದ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ವೀಕ್ಷಕರು ಅವರ ವೃತ್ತಿಪರತೆ ಮತ್ತು ಸೌಜನ್ಯವನ್ನು ಶ್ಲಾಘಿಸಿದರು

ಈ ಬಗ್ಗೆ ನೆಟ್ಟಿಗರು ಕೂಡ ನಾನಾ ಬಗೆಯ ಪ್ರತಿಕ್ರಿಯೆ ನೀಡಿದ್ದಾರೆ. ಬಳಕೆದಾರರೊಬ್ಬರು ಸೌಂದರ್ಯಕ್ಕಿಂತ ಇಂತಹ ಆತ್ಮವಿಶ್ವಾಸ ಮುಖ್ಯ ಎಂದು ಬರೆದಿದ್ದಾರೆ. ಮತ್ತೊಬ್ಬರು ಇವರ ಆತ್ಮವಿಶ್ವಾಸಕ್ಕೆ ನಾನು ಫಿದಾ ಆದೆ ಎಂದು ಬರೆದಿದ್ದಾರೆ.