ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಥೈಲ್ಯಾಂಡ್‌ನಲ್ಲಿ ಪ್ರವಾಸಿಗರ ಹುಚ್ಚಾಟ! ಇದೆಂಥಾ ನಡವಳಿಕೆಯೆಂದ ನೆಟ್ಟಿಗರು?

ಥೈಲ್ಯಾಂಡ್‌ನಲ್ಲಿ ಭಾರತೀಯ ಪ್ರವಾಸಿಗರ ಗುಂಪೊಂದು ನೃತ್ಯ ಮಾಡುತ್ತಿರುವ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ. ವಿಡಿಯೊದಲ್ಲಿ ಬ್ಯಾಂಕಾಕ್‌ನಲ್ಲಿರುವ ಸಫಾರಿ ವರ್ಲ್ಡ್ ಮೃಗಾಲಯದಲ್ಲಿ ಪ್ರವಾಸಿಗರ ಈ ಗುಂಪು ಖುಷಿಯಿಂದ ಕುಣಿದು ಕುಪ್ಪಳಿಸಿದ್ದಾರೆ. ಇದಕ್ಕೆ ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಬ್ಯಾಂಕಾಕ್‌: ಥೈಲ್ಯಾಂಡ್‌ನ ಜನಪ್ರಿಯ ಪ್ರವಾಸಿ ಸ್ಥಳವೊಂದರಲ್ಲಿ ಭಾರತೀಯ ಪ್ರವಾಸಿಗರ ಗುಂಪೊಂದು ನೃತ್ಯ(Dance) ಮಾಡುತ್ತಿರುವ ವಿಡಿಯೊವೊಂದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್(Viral Video) ಆಗಿದೆ. ಅವರ ಕೃತ್ಯವನ್ನು ಕಂಡು ನೆಟ್ಟಿಗರು ನಾಗರಿಕ ಪ್ರಜ್ಞೆ ಇಲ್ಲ ಎಂದು ಟೀಕಿಸಿದ್ದಾರೆ. ಇದರಲ್ಲಿ ಕೆಲವರು ನೂರಾರು ಜನರ ಮುಂದೆ ಪಂಜಾಬಿ ಹಾಡುಗಳಿಗೆ ನೃತ್ಯ ಮಾಡುವುದನ್ನು ತೋರಿಸಲಾಗಿದೆ.

ಈ ಪೋಸ್ಟ್ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿದ್ದು, ಈ ವಿಡಿಯೊವನ್ನು ಬ್ಯಾಂಕಾಕ್‌ನ ಸಫಾರಿ ವರ್ಲ್ಡ್‌ನಲ್ಲಿ ಚಿತ್ರೀಕರಿಸಲಾಗಿದೆ ಎನ್ನಲಾಗಿದೆ. ಈ ವಿಡಿಯೊ ಈಗಾಗಲೇ 549,000 ಕ್ಕೂ ಹೆಚ್ಚು ವ್ಯೂವ್ಸ್ ಗಳಿಸಿದೆ. ಇದು ಸೋಶಿಯಲ್ ಮೀಡಿಯಾದಲ್ಲಿ ಮಿಶ್ರ ಪ್ರತಿಕ್ರಿಯೆಗಳನ್ನು ಹುಟ್ಟುಹಾಕಿದ್ದು, ಅನೇಕರು ಭಾರತೀಯ ನೃತ್ಯ ಪ್ರವಾಸಿಗರನ್ನು ಬೆಂಬಲಿಸಿದರೆ, ಕೆಲವರು ಅವರ ಬಗ್ಗೆ ಟೀಕೆಗಳನ್ನು ವ್ಯಕ್ತಪಡಿಸಿದ್ದಾರೆ.

ವಿಡಿಯೊ ಇಲ್ಲಿದೆ ನೋಡಿ...



"ನಮ್ಮ ಈ ನಡವಳಿಕೆಯನ್ನು ಕಂಡರೆ ಬೇರೆ ದೇಶಗಳು ಸಹ ಇನ್ನು ಮುಂದೆ ವೀಸಾ ನೀಡುವುದನ್ನು ನಿಲ್ಲಿಸುತ್ತದೆ" ಎಂದು ಒಬ್ಬರು ಹೇಳಿದ್ದಾರೆ. ಇನ್ನೊಬ್ಬರು, "ಇದು ನೃತ್ಯವಲ್ಲ. ನನಗೆ ದೊಡ್ಡ ಹೊಟ್ಟೆಗಳು ಕಾಣುತ್ತಿವೆ" ಎಂದು ತಮಾಷೆ ಮಾಡಿದ್ದಾರೆ.

ಈ ಸುದ್ದಿಯನ್ನೂ ಓದಿ:Viral Video: ಇದೆಂಥಾ ಹುಚ್ಚಾಟ! ಮಗುವಿನ ಮೇಲೆ ಹಲ್ಲಿ ಬಿದ್ರೂ ರೀಲ್ಸ್‌ ಮಾಡ್ತಾ ನಿಂತ ಅಪ್ಪ-ಅಮ್ಮ; ವಿಡಿಯೊ ನೋಡಿ

ಈ ವಾರದ ಶುರುವಿನಲ್ಲಿ , ಬುರ್ಜ್ ಖಲೀಫಾದ ಮೇಲಿನ ಮಹಡಿಯಲ್ಲಿ ಭಾರತೀಯ ಪ್ರವಾಸಿಗರು ನೃತ್ಯ ಮಾಡುತ್ತಿರುವ ಇದೇ ರೀತಿಯ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.