Viral Video: ಇದೆಂಥಾ ಹುಚ್ಚಾಟ! ಮಗುವಿನ ಮೇಲೆ ಹಲ್ಲಿ ಬಿದ್ರೂ ರೀಲ್ಸ್ ಮಾಡ್ತಾ ನಿಂತ ಅಪ್ಪ-ಅಮ್ಮ; ವಿಡಿಯೊ ನೋಡಿ
ಸ್ಟ್ರಾಲರ್‌ನಲ್ಲಿ ಮಗುವನ್ನು ಮಲಗಿಸಿದ ಪೋಷಕರು ಸ್ಟ್ರಾಲರ್‌ನಲ್ಲಿ ಹಲ್ಲಿ ಇದ್ದರೂ ಅದನ್ನು ಲೆಕ್ಕಿಸದೇ ರೀಲ್ಸ್ ಮಾಡುವುದರಲ್ಲಿಯೇ ಬ್ಯುಸಿಯಾಗಿದ್ದಾರೆ. ಈ ವಿಡಿಯೊ ಸೋಶಿಯಲ್ ಮಿಡಿಯಾಗಳಲ್ಲಿ ವೈರಲ್(Viral Video) ಆಗಿ ನೆಟ್ಟಿಗರು ಕಿಡಿಕಾರಿದ್ದಾರೆ. ಇದೆಂಥಾ ರೀಲ್ಸ್ ಕ್ರೇಜ್ ಇವರದ್ದು ಎಂದು ತರಾಟೆ ತೆಗೆದುಕೊಂಡಿದ್ದಾರೆ.


ನವದೆಹಲಿ: ಇತ್ತೀಚೆಗೆ ತಂದೆಯೊಬ್ಬ ತನ್ನ ಎರಡು ವರ್ಷದ ಮಗುವನ್ನು ಹಿಡಿದುಕೊಂಡು ಬಂಗೀ ಜಂಪ್ ಮಾಡಿದ ವಿಡಿಯೊವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ನೆಟ್ಟಿಗರು ಇದನ್ನು ನೋಡಿ ಆಕ್ರೋಶ ವ್ಯಕ್ತಪಡಿಸಿದ್ದರು. ಇದೀಗ ಸ್ಟ್ರಾಲರ್‌ನಲ್ಲಿ ಮಗುವನ್ನು ಮಲಗಿಸಿದ ಪೋಷಕರು ಸ್ಟ್ರಾಲರ್‌ನಲ್ಲಿ ಹಲ್ಲಿ ಇದ್ದರೂ ಅದನ್ನು ಲೆಕ್ಕಿಸದೇ ರೀಲ್ಸ್ ಮಾಡುವುದರಲ್ಲಿಯೇ ಬ್ಯುಸಿಯಾಗಿದ್ದಾರೆ. ಈ ವಿಡಿಯೊ ಸೋಶಿಯಲ್ ಮಿಡಿಯಾಗಳಲ್ಲಿ ವೈರಲ್(Viral Video) ಆಗಿ ನೆಟ್ಟಿಗರು ಕಿಡಿಕಾರಿದ್ದಾರೆ. ಇದೆಂಥ ರೀಲ್ಸ್ ಕ್ರೇಜ್ ಇವರದ್ದು ಎಂದು ತರಾಟೆ ತೆಗೆದುಕೊಂಡಿದ್ದಾರೆ.
ವೈರಲ್ ಆದ ವಿಡಿಯೊದಲ್ಲಿ, ಸ್ಟ್ರಾಲರ್‌ನಲ್ಲಿ ಮಗು ಮಲಗಿದ್ದಾಗ ಮಗುವಿನ ಸುತ್ತಲೂ ದೊಡ್ಡ ಹಲ್ಲಿಯೊಂದು ಹರಿದಾಡಿದ್ದು ಸೆರೆಯಾಗಿದೆ. ಸ್ಟ್ರಾಲರ್‌ನಲ್ಲಿ ಸಿಕ್ಕಿಹಾಕಿಕೊಂಡ ಹಲ್ಲಿ ಹೊರಬರಲು ದಾರಿ ಕಾಣದೆ ಒದ್ದಾಡುತ್ತಿತ್ತು. ಆದರೆ ಪೋಷಕರು ಮಾತ್ರ ಮಗುವನ್ನು ಅಲ್ಲಿಂದ ಎತ್ತಿಕೊಳ್ಳದೇ ಹಲ್ಲಿಯನ್ನು ಹಿಡಿಯಲು ಪ್ರಯತ್ನಿಸಿದ್ದಾರೆ. ಪೋಷಕರು ತಮ್ಮ ಸೋಶಿಯಲ್ ಮಿಡಿಯಾ ವ್ಯೂವ್ಸ್‌ಗಾಗಿ ಹೆತ್ತ ಮಗುವನ್ನು ಅಪಾಯಕ್ಕೆ ಸಿಲುಕಿಸಿದ್ದಾರೆ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
A viral Instagram video shows parents laughing and filming as a large lizard crawls around their toddler in a stroller, sparking outrage over their carelessness.#Instagram #Lizards #Toddlers https://t.co/TtrP1Yyzhj
— News18 (@CNNnews18) June 21, 2025
ಈ ಸುದ್ದಿಯನ್ನೂ ಓದಿ:Viral Video: ರೈಲಿನಲ್ಲಿ ಜುಟ್ಟು ಜುಟ್ಟು ಹಿಡಿದುಕೊಂಡು ಹೊಡೆದಾಡಿದ ಮಹಿಳೆಯರು; ಕೊನೆಗೆ ಆಗಿದ್ದೇನು? ವಿಡಿಯೊ ನೋಡಿ!
"ತುಂಬಾ ಬೇಜಾವ್ದಾರಿ ಪೋಷಕರು" ಎಂದು ನೆಟ್ಟಿಗರು ಬರೆದಿದ್ದಾರೆ. "ದಯವಿಟ್ಟು ಮಗುವನ್ನು ಸ್ಟ್ರಾಲರ್‌ನಿಂದ ಎತ್ತಿಕೊಳ್ಳಿ, ಅದು ಮಗುವನ್ನು ಕಚ್ಚಬಹುದು" ಎಂದು ಒಬ್ಬ ವ್ಯಕ್ತಿ ಬರೆದಿದ್ದಾರೆ. "ಇವರಿಗೆ ಅದು ಮಗುವನ್ನು ಕಚ್ಚಿದರೂ ವಿಡಿಯೊ ಮಾಡುವುದೇ ಹೆಚ್ಚು ಮುಖ್ಯ" ಎಂದು ಒಬ್ಬ ವ್ಯಕ್ತಿ ಬರೆದಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಾಗಿನಿಂದ ಈ ವಿಡಿಯೊ 7 ಲಕ್ಷಕ್ಕೂ ಹೆಚ್ಚು ವ್ಯೂವ್ಸ್ ಗಳಿಸಿದೆ.