ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಹಗಲು ಬಿಡಿ ರಾತ್ರಿ 2 ಗಂಟೆಗೂ ರಸ್ತೆಯಲ್ಲಿ ವಾಹನಗಳ ಸಾಲು: ಮತ್ತೆ ಸದ್ದು ಮಾಡುತ್ತಿದೆ ಬೆಂಗಳೂರು ಟ್ರಾಫಿಕ್‌

Bengaluru Traffic: ಬೆಂಗಳೂರಿನಲ್ಲಿ ತಡರಾತ್ರಿ 2 ಗಂಟೆಯಲ್ಲೂ ಟ್ರಾಫಿಕ್ ಸಮಸ್ಯೆ ಉಂಟಾಗುತ್ತಿರುವ ಬಗ್ಗೆ ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಮಧ್ಯರಾತ್ರಿ 2 ಗಂಟೆಯಾದರೂ ರಸ್ತೆಯಲ್ಲಿ ವಾಹನಗಳು ಸಾಲುಗಟ್ಟಿ ನಿಲ್ಲುತ್ತಿವೆ. ತಡರಾತ್ರಿಯಲ್ಲೂ ವಾಹನ ದಟ್ಟಣೆ ಏಕೆ ಉಂಟಾಗುತ್ತಿದೆ ಎಂಬುದರ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ನಡೆಯುತ್ತಿದೆ.

ಬೆಂಗಳೂರಿನಲ್ಲಿ ತಡರಾತ್ರಿ ಟ್ರಾಫಿಕ್ ಜಾಮ್

ಬೆಂಗಳೂರು, ಜೂ. 8: ಸಿಲಿಕಾನ್ ಸಿಟಿ ಬೆಂಗಳೂರು ಆಧುನಿಕ ಜೀವನ ಶೈಲಿಗೆ ಜನಪ್ರಿಯವಾಗಿದ್ದರೂ ಇಲ್ಲಿನ ಟ್ರಾಫಿಕ್ ಸಮಸ್ಯೆಗೆ ಜನರು ಬೇಸತ್ತು ಹೋಗಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ಬೆಂಗಳೂರಿನಲ್ಲಿ ತಡರಾತ್ರಿ 2 ಗಂಟೆಯಲ್ಲೂ ಟ್ರಾಫಿಕ್ ಸಮಸ್ಯೆ ಕಂಡುಬರುತ್ತಿದ್ದು, ಈ ಬಗ್ಗೆ ನೆಟ್ಟಿಗರು ಅಚ್ಚರಿ ವ್ಯಕ್ತ ಪಡಿಸಿದ್ದಾರೆ. ಮಧ್ಯರಾತ್ರಿ 2 ಗಂಟೆಯಾದರೂ ರಸ್ತೆಯಲ್ಲಿ ವಾಹನಗಳು ಸಾಲುಗಟ್ಟಿ ನಿಂತಿರುತ್ತವೆ. ತಡರಾತ್ರಿಯಲ್ಲೂ ವಾಹನ ದಟ್ಟಣೆ ಏಕೆ ಕಂಡುಬರುತ್ತಿದೆ ಎಂಬ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ (Viral News) ಚರ್ಚೆ ನಡೆಯುತ್ತಿದೆ.

ಸಿದ್ಧಾಂತ್ ಎಂಬವರು ಎಕ್ಸ್‌ನಲ್ಲಿ ಟ್ರಾಫಿಕ್‌ ಜಾಮ್‌ನ ಈ ದೃಶ್ಯ ಹಂಚಿಕೊಂಡಿದ್ದು ವಾಹನ ದಟ್ಟಣೆ ಮೀತಿ ಮೀರಿ ಹೋಗಿದೆ ಎಂದಿದ್ದಾರೆ. ʼʼಮಧ್ಯ ರಾತ್ರಿಯಲ್ಲೂ ರಸ್ತೆ ಸಂಪೂರ್ಣವಾಗಿ ಬ್ಲಾಕ್ ಆಗಿದೆ. ಯಾಕೆ ಬೆಂಗಳೂರು ಈ ರೀತಿ ಆಗಿದೆ? ರಾತ್ರಿ 2 ಗಂಟೆಗೂ ಇಷ್ಟು ಟ್ರಾಫಿಕಾ?" ಎಂದು ಅವರು ಪ್ರಶ್ನಿಸಿದ್ದಾರೆ. ಇದು ಇಲ್ಲಿನ ಆಡಳಿತ ವೈಖರಿ ಹಾಗೂ ನಗರದ ಕಳಪೆ ಮೂಲಸೌಕರ್ಯ ಬಗ್ಗೆ ಪ್ರಶ್ನೆಯನ್ನು ಹುಟ್ಟುಹಾಕಿದೆ.

ವೈರಲ್‌ ಪೋಸ್ಟ್‌ ಇಲ್ಲಿದೆ:



ಈ ಬಗ್ಗೆ ಚರ್ಚೆ ನಡೆಸುತ್ತಿರುವ ನೆಟ್ಟಿಗರು, ವಿಮಾನ ನಿಲ್ದಾಣಕ್ಕೆ ಹೋಗಲು ಸಾವಿರಾರು ಪ್ರಯಾಣಿಕರು ಟ್ಯಾಕ್ಸಿಗಳು ಮತ್ತು ಖಾಸಗಿ ವಾಹನಗಳನ್ನು ಅವಲಂಬಿಸಿದ್ದಾರೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಅದೇ ರೀತಿ ಹಗಲು ಸಾರ್ವಜನಿಕರಿಗೆ ತೊಂದರೆಯಾಗಬಾರದೆಂದು ಬಹುತೇಕ ಮೆಟ್ರೋ ಪಿಲ್ಲರ್ ಕೆಲಸಗಳನ್ನು ರಾತ್ರಿ ಮಾಡಲಾಗುತ್ತದೆ. ಇದಕ್ಕಾಗಿ ಮಾರ್ಗ ಬದಲಾವಣೆ ಮಾಡುವುದರಿಂದ ತಡರಾತ್ರಿ ಸಂಚರಿಸುವ ವಾಹನಗಳು ಗಂಟೆಗಟ್ಟಲೆ ಸಿಲುಕಿಕೊಳ್ಳುತ್ತಿದೆ ಎಂದೂ ಕೆಲವರು ನೈಜ ಕಾರಣ ವಿವರಿಸಿದ್ದಾರೆ.

ಜಸ್ಟ್‌ 20 ನಿಮಿಷಕ್ಕೆ ಮುರಿದು ಬಿತ್ತು ಮದುವೆ! ಗಂಡನ ಮನೆ ಸೇರುತ್ತಿದ್ದಂತೆ ದಾಂಪತ್ಯ ಜೀವನ ನಿರಾಕರಿಸಿದ್ದೇಕೆ ನವ ವಧು?

ಕೆಲವು ಪ್ರಮುಖ ಜಂಕ್ಷನ್‌ಗಳಲ್ಲಿ ತಡರಾತ್ರಿ ನಡೆಯುವ ಡ್ರಂಕ್ ಆ್ಯಂಡ್‌ ಡ್ರೈವ್ ತಪಾಸಣೆ ಕೂಡ ವಾಹನಗಳ ಕ್ಯೂಗೆ ಕಾರಣವಾಗುತ್ತಿಎ ಎನ್ನಲಾಗಿದೆ. ಒಟ್ಟಿನಲ್ಲಿ ಬೆಂಗಳೂರಿನ ಟ್ರಾಫಿಕ್ ಸಮಸ್ಯೆ 24 ಗಂಟೆಗೆ ವಿಸ್ತರಿಸಿದೆ.