ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ರೈಲ್ವೆ ಹಳಿಯಲ್ಲಿ ನೋಡ ನೋಡ್ತಿದ್ದಂತೆ ಘನಘೋರ ಘಟನೆ! ಭಯಾನಕ ವಿಡಿಯೊ ವೈರಲ್

Train Colliding with Stranded Truck: ರೈಲು ಹಳಿಗಳ ಮೇಲೆ ಸಿಲುಕಿದ್ದ ಟ್ರಕ್‌ಗೆ ರೈಲು ಡಿಕ್ಕಿ ಹೊಡೆದ ಭಯಾನಕ ಘಟನೆಯ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಇಂಡೋನೇಷ್ಯಾದ ಸೆಮರಾಂಗ್‌ನಲ್ಲಿ ಈ ಘಟನೆ ನಡೆದಿದೆ. ಹೆಚ್ಚಿನ ವೇಗದಲ್ಲಿ ಬಂದ ರೈಲು ನಿಂತ ಟ್ರಕ್‍ಗೆ ಡಿಕ್ಕಿ ಹೊಡೆದು ಎಳೆದೊಯ್ದಿದೆ.

ರೈಲ್ವೆ ಹಳಿಯಲ್ಲಿ ಸಿಲುಕಿದ ಟ್ರಕ್‌; ನಡೀತು ಘನಘೋರ ಘಟನೆ!

-

Priyanka P Priyanka P Oct 24, 2025 7:54 PM

ಸೆಮರಾಂಗ್: ರೈಲು ಹಳಿಗಳ ಮೇಲೆ ಸಿಲುಕಿದ್ದ ಟ್ರಕ್‌ಗೆ ರೈಲು ಡಿಕ್ಕಿ ಹೊಡೆದ ಭಯಾನಕ ಕ್ಷಣ ಕ್ಯಾಮರಾದಲ್ಲಿ ಸೆರೆಯಾಗಿದೆ. ಇಂಡೋನೇಷ್ಯಾದ (Indonesia) ಸೆಮರಾಂಗ್‌ನಲ್ಲಿ ಈ ಘಟನೆ ನಡೆದಿದ್ದು, ಇದರ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ (Viral Video) ಆಗಿದೆ. ಅಕ್ಟೋಬರ್ 21 ರಂದು ಸ್ಥಳೀಯ ಸಮಯ ರಾತ್ರಿ 10 ಗಂಟೆ ಸುಮಾರಿಗೆ ಈ ಭಯಾನಕ ಘಟನೆ ನಡೆದಿದೆ.

ಭಯಾನಕ ವಿಡಿಯೊದಲ್ಲಿ ಲೊಕೊಮೊಟಿವ್ ನಿಂತ ವಾಹನದ ಕಡೆಗೆ ವೇಗವಾಗಿ ಧಾವಿಸುತ್ತಿರುವುದನ್ನು ತೋರಿಸುತ್ತದೆ. ಹೆಚ್ಚಿನ ವೇಗದಲ್ಲಿ ಬಂದ ರೈಲು ನಿಂತ ಟ್ರಕ್‍ಗೆ ಡಿಕ್ಕಿ ಹೊಡೆದು ಎಳೆದೊಯ್ದಿದೆ. ಟ್ರಕ್ ಅನ್ನು ಹಳಿಗಳ ಕೆಳಗೆ ಹಲವಾರು ಮೀಟರ್‌ಗಳಷ್ಟು ಎಳೆದುಕೊಂಡು ಹೋಗಿವೆ. ಈ ವೇಳೆ ಸ್ಥಳದಲ್ಲಿದ್ದ ಜನರು ಆಘಾತದಿಂದ ಏನಾಯಿತು ಎಂದು ನೋಡಲು ಧಾವಿಸಿದ್ದಾರೆ.

ಸ್ಥಳೀಯ ಮಾಧ್ಯಮ ವರದಿಗಳ ಪ್ರಕಾರ, ಹಳಿಗಳನ್ನು ದಾಟಲು ಪ್ರಯತ್ನಿಸುವಾಗ ಟ್ರಕ್ ಸ್ಥಗಿತಗೊಂಡಿದೆ. ಇನ್ನೇನು ರೈಲು ಸಮೀಪಿಸುತ್ತಿದೆ ಎಂದಾದಾಗ ಅಂದರೆ ಡಿಕ್ಕಿ ಹೊಡೆಯುವ ಕೆಲವೇ ಕ್ಷಣಗಳ ಮೊದಲು ಚಾಲಕ ಸುರಕ್ಷಿತವಾಗಿ ಓಡಿಹೋದ. ಅದೃಷ್ಟವಶಾತ್, ಯಾವುದೇ ಸಾವುನೋವುಗಳು ವರದಿಯಾಗಿಲ್ಲ. ಚಾಲಕ ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾನೆ ಎಂದು ಹೇಳಲಾಗಿದೆ. ಘಟನೆಯ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ವಿಡಿಯೊ ವೀಕ್ಷಿಸಿ:



ಸೆಮರಾಂಗ್‍ನಿಂದ ಸುರಬಯಾಗೆ ತೆರಳುತ್ತಿದ್ದ ರೈಲು ಡಿಕ್ಕಿಯ ನಂತರ ಹಠಾತ್ ನಿಂತಿತು. ಅದೃಷ್ಟವಶಾತ್, ಯಾವುದೇ ಗಾಯಗಳಾಗಿಲ್ಲ. ಆದರೆ ರೈಲು ಮತ್ತು ಟ್ರಕ್ ಎರಡೂ ಹಾನಿಗೊಳಗಾಗಿವೆ. ಸ್ಥಳೀಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಅವಶೇಷಗಳನ್ನು ತೆಗೆದುಹಾಕಿ ಆ ಪ್ರದೇಶದಲ್ಲಿ ಸಂಚಾರವನ್ನು ಪುನಃಸ್ಥಾಪಿಸಿದರು.

ಇದನ್ನೂ ಓದಿ: Viral Video: ಕ್ಯಾಬ್ ಚಾಲಕನ ಮೇಲೆ ಪೊಲೀಸಪ್ಪನ ದರ್ಪ! ನಡುರಸ್ತೆಯಲ್ಲೇ ಕಪಾಳಕ್ಕೆ ಬಾರಿಸಿ ಅಟ್ಟಹಾಸ

ರೀಲ್ಸ್ ಮಾಡಲು ಹೋಗಿ ಬಾಲಕನ ದುರಂತ ಅಂತ್ಯ

ಇತ್ತೀಚೆಗೆ ರೀಲ್ಸ್ ಹುಚ್ಚಾಟ ಮಿತಿಮೀರಿ ಬಿಟ್ಟಿದೆ. ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಎಲ್ಲೆಲ್ಲೋ ನಿಂತು ಅಪಾಯಕಾರಿ ಸ್ಟಂಟ್ಸ್ ಮಾಡುತ್ತಾರೆ. ಹೀಗೆ ಮಾಡುವ ವೇಳೆ ಸಾಕಷ್ಟು ಜನರು ಪ್ರಾಣ ಕಳೆದುಕೊಂಡ ನಿದರ್ಶನಗಳೂ ಉಂಟು. ಇಂತಹದ್ದೇ ಒಂದು ಘಟನೆ ಒಡಿಶಾದ ಪುರಿ ಜಿಲ್ಲೆಯಲ್ಲಿ ನಡೆದಿದೆ. ಹಳಿಯ ಮೇಲೆ ರೀಲ್ಸ್ ಮಾಡುತ್ತಿದ್ದ 15 ವರ್ಷದ ಬಾಲಕ ರೈಲು ಡಿಕ್ಕಿಯಾಗಿ ಸಾವನ್ನಪ್ಪಿದ್ದಾನೆ. ಮೃತ ಬಾಲಕನನ್ನು ಮಂಗಲಘಾಟ್‌ ನಿವಾಸಿ ವಿಶ್ವಜೀತ್ ಸಾಹು ಎಂದು ಗುರುತಿಸಲಾಗಿದೆ. ತನ್ನ ತಾಯಿಯೊಂದಿಗೆ ದಕ್ಷಿಣ ಕಾಳಿ ದೇವಾಲಯಕ್ಕೆ ಭೇಟಿ ನೀಡಿದ್ದ ವೇಳೆ ಈ ದುರ್ಘಟನೆ ನಡೆದಿದೆ.

ದಕ್ಷಿಣ ಕಾಳಿ ದೇವಾಲಯಕ್ಕೆ ತಾಯಿಯೊಂದಿಗೆ ಭೇಟಿ ನೀಡಿ ವಾಪಸಾಗುವಾಗ ಜನಕದೇವಪುರ ರೈಲ್ವೆ ನಿಲ್ದಾಣದ ಬಳಿ ಸೋಷಿಯಲ್ ಮೀಡಿಯಾಕ್ಕಾಗಿ ರೀಲ್ಸ್ ಮಾಡಲು ವಿಶ್ವಜೀತ್ ನಿಂತಿದ್ದಾನೆ. ರೀಲ್ಸ್ ಮಾಡಲು ಕಬ್ಬಿಣದ ರೈಲ್ವೆ ಬ್ರಿಡ್ಜ್ ಹತ್ತಿದ್ದ ಬಾಲಕ, ಹಳಿಯ ಬದಿಯಲ್ಲಿ ನಿಂತು ರೈಲು ಬರುತ್ತಿದ್ದಂತೆ ಸೆಲ್ಫಿ ವಿಡಿಯೊ ಮಾಡಲು ಆರಂಭಿಸಿದ್ದಾನೆ. ಬಳಿಕ ಹಿಂಬದಿಯಿಂದ ಬಂದ ರೈಲು ವಿಶ್ವಜೀತ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ವಿಶ್ವಜೀತ್ ಹಾರಿಬಿದ್ದು ಸಾವನ್ನಪ್ಪಿದ್ದಾನೆ ಎನ್ನಲಾಗಿದೆ.