Donald Trump: ಜಾಹೀರಾತು ಮೂಲಕ ಟ್ರಂಪ್ ಟೀಕೆ-ಕೆನಡಾ ವಿರುದ್ಧ ಸಮರಕ್ಕಿಳಿದ ಅಮೆರಿಕ
America v/s Canada: ರಷ್ಯಾದ ಮೇಲೆ ಕಿಡಿಕಾರುತ್ತಿದ್ದ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇದೀಗ ತನ್ನ ವಕ್ರ ದೃಷ್ಟಿಯನ್ನು ಕೆನಡಾದತ್ತ ಬೀರಿದ್ದು, ಕೆನಡಾದೊಂದಿಗಿನ ಎಲ್ಲಾ ವ್ಯಾಪಾರ ಮಾತುಕತೆಗಳನ್ನು ಕೊನೆಗೊಳಿಸುವುದಾಗಿ ಘೋಷಿಸಿದೆ. ಅಷ್ಟಕ್ಕೂ ಟ್ರಂಪ್ ಕೆನಡಾದ ಮೇಲೆ ಕೋಪಗೊಳ್ಳಲು ಕಾರಣವೇನು ಗೊತ್ತಾ..?
ಕೆನಡಾದ ಪ್ರಧಾನಿ ಮಾರ್ಕ್ ಕಾರ್ನಿ - ಡೊನಾಲ್ಡ್ ಟ್ರಂಪ್ -
ವಾಷಿಂಗ್ಟನ್: ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump) ಕೆನಡಾ(Canada) ವಿರುದ್ಧ ಮತ್ತೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರಾಜಧಾನಿ ಒಟ್ಟುವಾ(Ottawa), ಅಮೇರಿಕಾ ಮಾಜಿ ಅಧ್ಯಕ್ಷ ರೋನಾಲ್ಡ್ ರೀಗನ್(Ronald Reagan) ಅವರನ್ನೊಳಗೊಂಡ “ಮೋಸಪೂರಿತ ಜಾಹೀರಾತು” ಬಿಡುಗಡೆ ಮಾಡುವ ಮೂಲಕ ಅಮೇರಿಕಾದ ಸುಪ್ರೀಂ ಕೋರ್ಟ್ ಮೇಲೆ ಅಕ್ರಮವಾಗಿ ಪ್ರಭಾವ ಬೀರಲು ಪ್ರಯತ್ನಿಸಿದೆ ಎಂದು ಟ್ರಂಪ್ ಆರೋಪಿಸಿದ್ದಾರೆ. ಈ ಕುರಿತು ಟ್ರಂಪ್ ಶುಕ್ರವಾರ ತಮ್ಮ 'ಟ್ರುತ್(Truth)' ಸೋಶಿಯಲ್ ಖಾತೆಯಲ್ಲಿ ಆಕ್ರೋಶ ಹೊರಹಾಕಿದ್ದಾರೆ.
“ಕೆನಡಾ ಮೋಸ ಮಾಡಿ ಸಿಕ್ಕಿಬಿದ್ದಿದೆ!!! ಅದು ದೊಡ್ಡ ಜಾಹೀರಾತು ಹಾಕಿ ರೋನಾಲ್ಡ್ ರೀಗನ್ ಅವರಿಗೆ ಸುಂಕಗಳು ಇಷ್ಟವಿರಲಿಲ್ಲ ಎಂದು ಸುಳ್ಳು ಹೇಳಿದೆ. ಆದರೆ, ವಾಸ್ತವವಾಗಿ ಸುಂಕಗಳು ದೇಶದ ಭದ್ರತೆಗೆ ಅಗತ್ಯ ಎಂದು ರೋನಾಲ್ಡ್ ರೀಗನ್ ನಂಬಿದ್ದರು,” ಎಂದು ಟ್ರಂಪ್ ಹೇಳಿದ್ದಾರೆ.
ಈ ಸುದ್ದಿಯನ್ನು ಓದಿ:Viral News: ಕಾರ್ ಪಾರ್ಕಿಂಗ್ ವಿಚಾರಕ್ಕೆ ನಡೀತು ಮಾರಾಮಾರಿ; ಓರ್ವನ ಸ್ಥಿತಿ ಗಂಭೀರ
ಸುಪ್ರೀಂ ಕೋರ್ಟ್ ವಿಚಾರಣೆಗೆ ಸಂಬಂಧಿಸಿದ ಆರೋಪ
“ಜಾಗತಿಕ ಸುಂಕ ನೀತಿಗಳ ಕಾನೂನುಬದ್ಧತೆಗೆ ಸಂಬಂಧಿಸಿದಂತೆ ನವೆಂಬರ್ 5ರಂದು ನ್ಯಾಯಾಲಯವು ವಿಚಾರಣೆ ನಡೆಸಲಿರುವುದನ್ನು ಉಲ್ಲೇಖಿಸಿರುವ ಟ್ರಂಪ್, "ಕೆನಡಾ ನಮ್ಮ ದೇಶದ ಇತಿಹಾಸದಲ್ಲೇ ಅತ್ಯಂತ ಪ್ರಮುಖ ತೀರ್ಪೊಂದರ ಕುರಿತು ಅಮೇರಿಕಾದ ಸುಪ್ರೀಂ ಕೋರ್ಟ್ ಮೇಲೆ ಅಕ್ರಮವಾಗಿ ಪ್ರಭಾವ ಬೀರಲು ಪ್ರಯತ್ನ ಮಾಡುತ್ತಿದೆ,” ಎಂದು ಆರೋಪಿಸಿದ್ದಾರೆ.
ವಿವಾದದ ಮೂಲ
ಈ ವಿವಾದಕ್ಕೆ ಕಾರಣವಾದದ್ದು ಕೆನಡಾದ ಒಟ್ಟಾವಾ ಪ್ರಾಂತ್ಯ ಬಿಡುಗಡೆ ಮಾಡಿದ ರಾಜಕೀಯ ಜಾಹೀರಾತು ರೋನಾಲ್ಡ್ ರೀಗನ್ ಅವರ ರೇಡಿಯೋ ಭಾಷಣದ ಸಂಪಾದಿತ ಅವೃತ್ತಿ ಬಳಸಿಕೊಂಡಿರುವುದು. 1987ರಲ್ಲಿ ರೋನಾಲ್ಡ್ ರೀಗನ್ ನೀಡಿದ ರೇಡಿಯೋ ಭಾಷಣದಲ್ಲಿ “ಯಾರಾದರೂ ‘ವಿದೇಶಿ ಆಮದುಗಳ ಮೇಲೆ ತೆರಿಗೆ ವಿಧಿಸೋಣ’ ಎಂದಾಗ ಅದು ದೇಶಪ್ರೇಮದ ಕೆಲಸವೆಂದು ತೋರುತ್ತದೆ... ಆದರೆ ಅದು ಕೇವಲ ಅಲ್ಪಾವಧಿಗೆ ಮಾತ್ರ ಪ್ರಯೋಜನಕಾರಿಯಾಗಿರುತ್ತದೆ. ದೀರ್ಘಾವಧಿಯಲ್ಲಿ ಈ ರೀತಿಯ ವ್ಯಾಪಾರ ಅಡೆತಡೆಗಳು ಪ್ರತಿಯೊಬ್ಬ ಅಮೇರಿಕಾದ ಕಾರ್ಮಿಕ ಮತ್ತು ಗ್ರಾಹಕರಿಗೆ ಹಾನಿ ಉಂಟುಮಾಡುತ್ತವೆ.” ಎಂದು ಹೇಳಿದ್ದರು. ಟ್ರಂಪ್ ಈ ಜಾಹೀರಾತನ್ನು “ಮೋಸಪೂರಿತ” ಎಂದು ಕರೆದಿದ್ದು, ಕೆನಡಾ ರೀಗನ್‌ರ ಮಾತುಗಳನ್ನು ತಿರುಚಿದೆ ಎಂದು ಆರೋಪಿಸಿದ್ದಾರೆ.
ರೀಗನ್ ಫೌಂಡೇಶನ್‌ನ ಪ್ರತಿಕ್ರಿಯೆ
ಕೆನಡಾದ ಈ ಜಾಹಿರಾತಿಗೆ ವಿರೋಧ ವ್ಯಕ್ತಪಡಿಸಿರುವ ರೋನಾಲ್ಡ್ ರೀಗನ್ ಪ್ರೆಸಿಡೆನ್ಷಿಯಲ್ ಫೌಂಡೇಶನ್, "ಈ ಜಾಹೀರಾತಿನಲ್ಲಿ ಆಯ್ದ ಆಡಿಯೋ ಮತ್ತು ವಿಡಿಯೋ ಬಳಸಿ ರೀಗನ್‌ರ ನಿಜವಾದ ಸಂದೇಶವನ್ನು ತಪ್ಪಾಗಿ ಉಲ್ಲೇಖಿಸಲಾಗಿದೆ ಹಾಗೂ ಇದನ್ನು ಬಳಸಿಕೊಳ್ಳಲು ಒಂಟಾರಿಯೋ ಸರ್ಕಾರ ಯಾವುದೇ ಅನುಮತಿ ಪಡೆದಿಲ್ಲ," ಎಂದು ಹೇಳಿದೆ.
ಅಮೆರಿಕ–ಕೆನಡಾ ವ್ಯಾಪಾರ ಬಿಕ್ಕಟ್ಟು
ವಾಷಿಂಗ್ಟನ್ ಮತ್ತು ಓಟವಾ ನಡುವಿನ ವ್ಯಾಪಾರ ಬಿಕ್ಕಟ್ಟಿನ ನಡುವೆ ಟ್ರಂಪ್ ಅವರ ಈ ಟೀಕೆಗಳು ಬಂದಿವೆ. ಈ ವರ್ಷದ ಜನವರಿಯಲ್ಲಿ ವೈಟ್‌ಹೌಸ್‌ಗೆ ಮರಳಿದ ಬಳಿಕ ಟ್ರಂಪ್ ಕೆನಡಾದ ಉಕ್ಕು, ಅಲ್ಯುಮಿನಿಯಂ ಮತ್ತು ಕಾರುಗಳ ಮೇಲೆ ಭಾರೀ ತೆರಿಗೆ ವಿಧಿಸಿದ್ದರು. ಇದಕ್ಕೆ ಪ್ರತಿಯಾಗಿ ಕೆನಡಾ ಕೂಡ ತನ್ನ ತೆರಿಗೆ ಕ್ರಮಗಳು ಕೈಗೊಂಡಿತ್ತು.