ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಕ್ಲಾಸ್‌ ನಡೆಯುತ್ತಿರುವಾಗಲೇ ಕುಸಿದು ಬಿತ್ತು ಶಾಲೆಯ ಛಾವಣಿ- ಶಾಕಿಂಗ್‌ ವಿಡಿಯೊ ಇಲ್ಲಿದೆ

ಶಾಲೆಯ ಸೀಲಿಂಗ್ ಕುಸಿದು (Ceiling Collapses) ಇಬ್ಬರು ವಿದ್ಯಾರ್ಥಿಗಳು ಗಾಯಗೊಂಡ ಘಟನೆ ಮಧ್ಯಪ್ರದೇಶದ (Madhyapradesh) ಭೋಪಾಲ್‌ನಲ್ಲಿ (Bhopal) ನಡೆದಿದೆ. ಬರ್ಖೇಡಾ ಪಠಾಣಿಯಲ್ಲಿರುವ ( Barkheda Pathani) ಪಿಎಂ ಶ್ರೀ ಶಾಲೆಯಲ್ಲಿ (PM Shri School) ಶಿಕ್ಷಕಿಯೊಬ್ಬರು ತರಗತಿ ನಡೆಸುತ್ತಿದ್ದಾಗಲೇ ಈ ಘಟನೆ ನಡೆದಿದೆ.

ಭೋಪಾಲ್: ಶಾಲೆಯ ಸೀಲಿಂಗ್ ಕುಸಿದು (Ceiling Collapses) ಇಬ್ಬರು ವಿದ್ಯಾರ್ಥಿಗಳು ಗಾಯಗೊಂಡ ಘಟನೆ ಮಧ್ಯಪ್ರದೇಶದ (Madhyapradesh) ಭೋಪಾಲ್‌ನಲ್ಲಿ (Bhopal) ನಡೆದಿದೆ. ಬರ್ಖೇಡಾ ಪಠಾಣಿಯಲ್ಲಿರುವ ( Barkheda Pathani) ಪಿಎಂ ಶ್ರೀ ಶಾಲೆಯಲ್ಲಿ (PM Shri School) ಶಿಕ್ಷಕಿಯೊಬ್ಬರು ತರಗತಿ ನಡೆಸುತ್ತಿದ್ದಾಗಲೇ ಈ ಘಟನೆ ನಡೆದಿದೆ. ಅದೃಷ್ಟವಶಾತ್ ವಿದ್ಯಾರ್ಥಿಗಳಿಗೆ ಹೆಚ್ಚಿನ ಗಾಯಗಳಾಗಿಲ್ಲ. ತರಗತಿಯ ಸಿಸಿಟಿವಿಯಲ್ಲಿ ಈ ಭೀಕರ ದೃಶ್ಯಗಳು ಸೆರೆಯಾಗಿದೆ. ಇದರ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅನೇಕ ನೆಟ್ಟಿಗರು ಇದಕ್ಕೆ ಕಾಮೆಂಟ್ ಮಾಡಿದ್ದಾರೆ. ಸರ್ಕಾರಿ ಶಾಲೆಗಳ ಕಳಪೆ ಮೂಲಸೌಕರ್ಯಗಳಿಗೆ ಖಂಡನೆ ವ್ಯಕ್ತಪಡಿಸಿದ್ದಾರೆ.

ಮಧ್ಯಪ್ರದೇಶದ ಭೋಪಾಲ್‌ನ ಬರ್ಖೇಡಾ ಪಠಾಣಿಯಲ್ಲಿರುವ ಪಿಎಂ ಶ್ರೀ ಸರ್ಕಾರಿ ಶಾಲೆಯಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ. ತರಗತಿ ನಡೆಯುತ್ತಿದ್ದಾಗ ಸೀಲಿಂಗ್‌ನ ಒಂದು ಭಾಗ ಕುಸಿದಿದೆ. ಅದೃಷ್ಟವಶಾತ್ ಯಾವುದೇ ವಿದ್ಯಾರ್ಥಿಗೆ ಹೆಚ್ಚಿನ ಗಾಯವಾಗಿಲ್ಲ ಎನ್ನಲಾಗಿದೆ. ತರಗತಿಯ ಸಿಸಿಟಿವಿ ದೃಶ್ಯಾವಳಿಗಳಲ್ಲಿ ಸೀಲಿಂಗ್ ನ ಒಂದು ಭಾಗ ವಿದ್ಯಾರ್ಥಿಗಳು ಕುಳಿತಿದ್ದ ಸ್ಥಳದಲ್ಲಿಯೇ ಬಿದ್ದಿರುವುದನ್ನು ಕಾಣಬಹುದು.ಕೂಡಲೇ ಹೆದರಿದ ವಿದ್ಯಾರ್ಥಿಗಳು ಶಿಕ್ಷಕಿಯ ಬಳಿ ಓಡಿದರು. ಅವರೆಲ್ಲರನ್ನು ಶಿಕ್ಷಕಿ ತರಗತಿಯಿಂದ ಹೊರಗೆ ಕಳುಹಿಸಿದ್ದಾರೆ.



ಇದರ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ. ಈ ಕುರಿತು ಅನೇಕ ಸಾಮಾಜಿಕ ಮಾಧ್ಯಮ ಬಳಕೆದಾರರು ಕಾಮೆಂಟ್ ಮಾಡಿ, ಸರ್ಕಾರಿ ಶಾಲೆಗಳ ಕಳಪೆ ಮೂಲಸೌಕರ್ಯಗಳ ಬಗ್ಗೆ ಖಂಡನೆ ವ್ಯಕ್ತಪಡಿಸಿದ್ದಾರೆ. ಶಾಲೆಯ ಶಿಥಿಲ ಸ್ಥಿತಿಯ ಬಗ್ಗೆ ಆಡಳಿತ ಮಂಡಳಿಗೆ ಈಗಾಗಲೇ ಶಾಲೆಯ ಪ್ರಾಂಶುಪಾಲರು ದೂರು ನೀಡಿದ್ದಾರೆ. ತರಗತಿಯ ಛಾವಣಿಗಳ ಬಗ್ಗೆ ಜಿಲ್ಲಾ ಶಿಕ್ಷಣ ಅಧಿಕಾರಿ (ಡಿಇಒ) ಗೆ ಪತ್ರ ಬರೆಯಲಾಗಿದೆ. ಪತ್ರದ ಪ್ರಕಾರ ನೀರು ನಿಲ್ಲುವಿಕೆ ಮತ್ತು ನಿರಂತರ ಮಳೆಯಿಂದಾಗಿ ಪ್ಲಾಸ್ಟರ್ ದುರ್ಬಲವಾಗಿದೆ ಎಂದು ತಿಳಿಸಲಾಗಿದೆ.

ವಿದ್ಯಾ ಇರ್ವತ್ತೂರು

View all posts by this author