ಲಖನೌ, ಅ. 9: ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರೆಯುತ್ತಿಲ್ಲ ಎನ್ನುವ ದೂರು ಆಗಾಗ ಕೇಳಿ ಬರುತ್ತಿದೆ. ಕೆಲವರು ಸರ್ಕಾರದ ಸಂಬಳ ಪಡೆದು ಮಕ್ಕಳಿಗೆ ಪಾಠ ಮಾಡದೆ ಕಾಲಹರಣ ಮಾಡುತ್ತಿರುತ್ತಾರೆ. ಇದೀಗ ಉತ್ತರ ಪ್ರದೇಶದ ಇಟಾವಾ ಜಿಲ್ಲೆಯ ಸರ್ಕಾರಿ ಪ್ರಾಥಮಿಕ ಶಾಲೆಯೊಂದರ ಶಿಕ್ಷಕ ವಿದ್ಯಾರ್ಥಿಯ ಬೋಳು ತಲೆಯ ಮೇಲೆ ತಬಲ ಬಾರಿಸಿದ್ದಾನೆ. ಈ ಘಟನೆಯ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ (Viral News) ಆಗುತ್ತಿದ್ದಂತೆ ಮಕ್ಕಳ ಕಲಿಕೆ, ಮುಂದಿನ ಭವಿಷ್ಯದ ಬಗ್ಗೆ ನೆಟ್ಟಿಗರು ಆತಂಕವನ್ನು ವ್ಯಕ್ತ ಪಡಿಸಿದ್ದಾರೆ.
ವಿದ್ಯಾರ್ಥಿಯ ಬೋಳು ತಲೆಯ ಮೇಲೆ 'ತಬಲ' ಬಾರಿಸಿ ಶಿಕ್ಷಕ ಗಹಗಹಿಸಿ ನಗುತ್ತಿರುವ ವಿಚಿತ್ರ ಘಟನೆ ಬೆಳಕಿಗೆ ಬರುತ್ತಿದ್ದಂತೆ ಈ ವಿಡಿಯೊವನ್ನು ಗಮನಿಸಿದ ಶಿಕ್ಷಣ ಅಧಿಕಾರಿ ಡಾ. ರಾಜೇಶ್ ಕುಮಾರ್ ತಕ್ಷಣ ಕ್ರಮ ಕೈಗೊಂಡು ಅಮಾನತುಗೊಳಿಸುವಂತೆ ಆದೇಶ ಹೊರಡಿಸಿದ್ದಾರೆ. ಶಿಕ್ಷಣ ಇಲಾಖೆಯು ಈ ವಿಷಯದ ಬಗ್ಗೆ ತನಿಖೆ ನಡೆಸುತ್ತಿದೆ.
ವಿಡಿಯೊ ನೋಡಿ:
ಉತ್ತರ ಪ್ರದೇಶದ ಎಟಾವಾ ಜಿಲ್ಲೆಯ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕನೊಬ್ಬ, ವಿದ್ಯಾರ್ಥಿಯ ತಲೆಯನ್ನು ತಬಲ ಬಾರಿಸಲು ಬಳಸಿದ್ದಾನೆ. ತರಗತಿ ನಡೆಯುವ ಸಮಯದಲ್ಲಿಯೇ ಶಿಕ್ಷಕ ಈ ರೀತಿಯ ವರ್ತಿಸಿದ್ದಾನೆ. ಅಮಾನತುಗೊಂಡ ಶಿಕ್ಷಕನನ್ನು ದಿನೇಶ್ ಕುಮಾರ್ ಮಾಥುರ್ ಎನ್ನಲಾಗಿದೆ
ರೈಲ್ವೆ ಗೇಟ್‌ನಲ್ಲೇ ಟ್ರೈನ್ ನಿಲ್ಲಿಸಿ ಹತ್ತಿದ ಕುಟುಂಬ; ಇದೇನು ನಿಮ್ಮ ಮನೆಯ ಆಸ್ತಿಯೇ? ನೆಟ್ಟಿಗರ ಪ್ರಶ್ನೆ
ವೈರಲ್ ಆದ ವಿಡಿಯೊದಲ್ಲಿ ಶಿಕ್ಷಕ ತರಗತಿಯೊಳಗೆ ಕುರ್ಚಿಯ ಮೇಲೆ ಕುಳಿತಿದ್ದರೆ, ವಿದ್ಯಾರ್ಥಿಯೊಬ್ಬ ಅವರ ಮುಂದೆ ನೆಲದ ಮೇಲೆ ಕುಳಿತಿರುವುದು ಕಂಡುಬರುತ್ತದೆ. ಮಾಥುರ್ ತಬಲ ಬಾರಿಸುವಂತೆ ಮಗುವಿನ ತಲೆಯ ಮೇಲೆ ತಟ್ಟುತ್ತಿರುವುದನ್ನು ಕಾಣಬಹುದು. ಈ ಘಟನೆ ಶಾಲೆಯಲ್ಲಿ ವಿದ್ಯಾರ್ಥಿಗಳ ಜತೆ ಶಿಕ್ಷಕರು ನಡೆದುಕೊಳ್ಳುವ ರೀತಿಯ ಬಗ್ಗೆ ಕಳವಳ ಹುಟ್ಟುಹಾಕಿದೆ.
ಶಿಕ್ಷಕ ಆ ಮಗುವಿನ ಬೋಳು ತಲೆಯನ್ನೇ ತಬಲದಂತೆ ಬಾರಿಸುತ್ತಾ ವಿಕೃತವಾಗಿ ನಕ್ಕಿದ್ದಾನೆ. ಈ ಇಡೀ ದೃಶ್ಯವನ್ನು ಶಿಕ್ಷಕನೇ ಸ್ವತಃ ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿ ಹಂಚಿಕೊಂಡಿದ್ದ. ಈ ವಿಡಿಯೊ ಶಿಕ್ಷಣ ಇಲಾಖೆಯ ಗಮನಕ್ಕೆ ಬಂದಿದ್ದು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಲಾಗಿದೆ.